ಮನರಂಜನೆ

‘ಖದೀಮ’ನ ಲವ್‍ ಸ್ಟೋರಿ; ಜಿಮ್‍ ತರಬೇತುದಾರ ಹೀರೋ ಆದಾಗ

ಕಳೆದ ವರ್ಷ ‘ಅಪ್ಪಾ ಐ ಲವ್‍ ಯು’ ಚಿತ್ರದಲ್ಲಿ ಸಂಜಯ್‍ ಎಂಬ ಜಿಮ್‍ ಟ್ರೈನರ್‍, ನಾಯಕನಾಗಿ ಅಭಿನಯಿಸಿದ್ದರು. ಈ ಶುಕ್ರವಾರ (ಏಪ್ರಿಲ್‍ 18) ಬಿಡುಗಡೆಯಾಗುತ್ತಿರುವ ‘ಖದೀಮ’ ಎಂಬ ಹೊಸ ಚಿತ್ರದಲ್ಲೂ ಚಂದನ್‍ ಎಂಬ ಜಿಮ್‍ ಟ್ರೈನರ್‍ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

‘ಖದೀಮ’ ಚಿತ್ರವನ್ನು ಶಿವೇಶು ಪ್ರೊಡಕ್ಷನ್ ಅಡಿಯಲ್ಲಿ ಅನಿವಾಸಿ ಭಾರತೀಯ ಟಿ. ಸಿವಕುಮಾರನ್ ನಿರ್ಮಿಸುತ್ತಿದ್ದು, ಯಶಸ್ವಿನಿ ಆರ್ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಯಿ ಪ್ರದೀಪ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಚಂದನ್, ನಾಯಕಿಯಾಗಿ ಅನುಷಾ ಕೃಷ್ಣ ಅಭಿನಯಸಿದ್ದಾರೆ.

ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸಾಯಿ ಪ್ರದೀಪ್‍, ‘ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡಿದ್ದ ಯುವಕನೊಬ್ಬ ಪ್ರೀತಿಯಲ್ಲಿ ಬಿದ್ದಾಗ, ಆತನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಮುಂದೆ ಅವನ ಜೀವನದಲ್ಲಿ ಏನೆಲ್ಲಾ ಆಗುತ್ತದೆ, ಅವನಿಂದ ಸಮಾಜಕ್ಕೆ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ. ಬೆಂಗಳೂರು ಸಿಟಿ ಮಾರ್ಕೆಟ್‌ನಲ್ಲಿ ಇಲ್ಲಿಯವರೆಗೂ ಮಚ್ಚು, ಲಾಂಗ್‌ಗಳ ಸದ್ದು ಪರದೆ ಮೇಲೆ ಆರ್ಭಟಿಸಿತ್ತು. ನಮ್ಮ ಸಿನಿಮಾದಲ್ಲಿ ಇದೆಲ್ಲಾವನ್ನು ಪಕ್ಕಕ್ಕೆ ಇಟ್ಟು, ಪ್ರೀತಿಯ ಅಂಶವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದೇ ಪ್ರದೇಶದಲ್ಲಿ ಚಿತ್ರದ ಶೇ. 60ರಷ್ಟು ಚಿತ್ರೀಕರಣ ಮಾಡಿದ್ದೇವೆ. ಅದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು’ ಎಂದರು.

ಜಿಮ್ ತರಭೇತಿದಾರನಾಗಿದ್ದ ಚಂದನ್‍ಗೆ ಗೆಳೆಯರು ಹೀರೋ ಆಗು ಅಂತ ಹುರಿದುಂಬಿಸಿದರಂತೆ. ‘ಆಗ ಮೊದಲು ನಿರ್ಮಾಪಕರನ್ನು ಹಿಡಿದೆ. ಅದೇ ಮೊದಲ ಸಾಧನೆ ಎನ್ನಬಹುದು. ನಟನೆಯ ಅನುಭವ ಇಲ್ಲದಿದ್ದರೂ, ದೇವರ ದಯೆಯಿಂದ ಸೆಟ್‌ನಲ್ಲಿ ನಿರ್ದೇಶಕರು ಹೇಳಿಕೊಟ್ಟಂತೆ ಮಾಡುತ್ತಿದ್ದೆ. ಒಂದು ರೀತಿಯಲ್ಲಿ ಅವರೇ ನನಗೆ ಗುರುಗಳು’ ಎಂದರು.

ನಿಜ ಜೀವನದಲ್ಲಿ ರಂಗಕರ್ಮಿಯಾಗಿರುವ ನಾಯಕಿ ಅನುಷಾ ಕೃಷ್ಣ ಚಿತ್ರದಲ್ಲೂ ಅದೇ ಪಾತ್ರವನ್ನು ಮಾಡಿದ್ದಾರಂತೆ. ಚಿತ್ರದಲ್ಲಿ ಚಂದನ್‍ ಮತ್ತು ಅನುಷಾ ಜೊತೆಗೆ ಶೋಭರಾಜ್, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ವಿ. ಮನೋಹರ್, ಯಶ್‌ ಶೆಟ್ಟಿ, ಮಿಮಿಕ್ರಿ ದಯಾನಂದ್, ಶಿವಕುಮಾರ್‌ ಆರಾಧ್ಯ ಮುಂತಾದವರು ನಟಿಸಿದ್ದಾರೆ.

‘ಖದೀಮ’ ಚಿತ್ರಕ್ಕೆ ನಾಗಾರ್ಜುನ ಅವರ ಛಾಯಾಗ್ರಣ, ಶಶಾಂಕ್‍ ಶೇಷಗಿರಿ ಸಂಗೀತವಿದೆ. ಸಂಗೀತದ ಜೊತೆಗೆ ಶಶಾಂಕ್‍ ಒಂದು ಹಾಡನ್ನು ಹಾಡುವುದರ ಜೊತೆಗೆ, ಚಿತ್ರದಲ್ಲೊಂದು ಚಿಕ್ಕ ಪಾತ್ರವನ್ನೂ ಮಾಡಿದ್ದಾರಂತೆ.

ಆಂದೋಲನ ಡೆಸ್ಕ್

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

12 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

12 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

13 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

14 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

19 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

19 hours ago