ಕನ್ನಡದ ಹಲವು ನಟ-ನಟಿಯರಿಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಈ ಸಾಲಿಗೆ ಇದೀಗ ನಟಿ ಮೇಘನಾ ಗಾಂವ್ಕರ್ ಸಹ ಸೇರಿದ್ದಾರೆ. ಮೇಘನಾ ಗಾಂವ್ಕರ್ ಇದೀಗ ಡಾ.ಮೇಘನಾ ಗಾಂವ್ಕರ್ ಆಗಿದ್ದಾರೆ. ಹಾಗಂತ ಅವರಿಗೆ ಯಾವುದೇ ವಿಶ್ವವಿದ್ಯಾಲಯವೂ ಗೌರವ ಡಾಕ್ಟರೇಟ್ ನೀಡಿಲ್ಲ. ಮೇಘನಾ, ಥೀಸಿಸ್ ಸಲ್ಲಿಸಿ ಡಾಕ್ಟರೇಟ್ ಪಡೆದಿದ್ದಾರೆ.
ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಮೇಘನಾ, ತಮ್ಮ ಆರು ವರ್ಷಗಳ ಸತತ ಪರಿಶ್ರಮ ಫಲ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, ‘ಸಿನಿಮಾ ಮತ್ತು ಸಾಹಿತ್ಯ’ ಎಂಬ ವಿಷಯದ ಬಗ್ಗೆ ಮೇಘನಾ ಪಿಎಚ್‍ಡಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಿಮ್ಮೆಲ್ಲರ ಜೊತೆಗೆ ಒಂದು ಸಿಹಿ ಸುದ್ದಿಯನ್ನು ಹಂಚಿಕೊಳ್ಳಬೇಕು. ನಾನು ಮದುವೆಯಾಗುತ್ತಿಲ್ಲ. ಕಳೆದ ಆರು ವರ್ಷಗಳಿಂದ ಪಿಎಚ್‍ಡಿಗೆ ತಯಾರಿ ನಡೆಸಿದ್ದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನನ್ನ ಥೀಸಿಸ್ ಕಳಿಸಿದೆ. ಕಳೆದ ವಾರ ನನ್ನ ವೈವಾ ಸಹ ಮುಗಿಯಿತು. ಈಗ ನನಗೆ ಡಾಕ್ಟರೇಟ್ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ. ಇದು ನನಗೆ ಬಹಳ ವಿಶೇಷವಾಗಿದ್ದು. ಏಕೆಂದರೆ, ಈ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ನಾನು ಮೊದಲು ಪಿಎಚ್‍ಡಿ ಮಾಡಬೇಕೆಂದು ತೀರ್ಮಾನಿಸಿದಾಗಿನಿಂದ, ಬಹಳಷ್ಟು ಜನ ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಎಲ್ಲರಿಗೂ ನನ್ನ ಹೃದಯಪೂರ್ವಕವಾದ ಧನ್ಯವಾದಗಳು’ ಎಂದು ಹೇಳಿಕೊಂಡಿದ್ದಾರೆ.
‘ಸಿನಿಮಾ ಮತ್ತು ಸಾಹಿತ್ಯ’ ವಿಷಯ ಆಯ್ಕೆ ಮಾಡಿಕೊಂಡಿರುವ ಕುರಿತು ಮಾತನಾಡಿರುವ ಮೇಘನಾ, ‘ಇದು ನನ್ನ ಹೃದಯಕ್ಕೆ ಹತ್ತಿರವಾದ ವಿಷಯ.’ ಎಂದು ತಿಳಿಸಿದ್ದಾರೆ.
ಇನ್ನು, ಈ ಪಿಎಚ್‍ಡಿ ಪದವಿಯರನ್ನು ತಂದೆಗೆ ಅರ್ಪಿಸಿರುವ ಮೇಘನಾ, ‘ಈ ಪಿಎಚ್‍ಡಿ ಪದವಿಯನ್ನು ನನ್ನ ತಂದೆಗೆ ಅರ್ಪಿಸುತ್ತೇನೆ. ಇದು ಅವರ ಕನಸು. ನಾನು ಪಿಎಚ್‍ಡಿ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಆ ಆಸೆ ಈಗ ಪೂರೈಸಿದೆ’ ಎಂದಿದ್ದಾರೆ.
ವೀಡಿಯೋ ಜೊತೆಗೆ ಪಿಎಚ್‌ಡಿ ಪ್ರಮಾಣ ಪತ್ರದೊಂದಿಗಿನ ಫೋಟೋವನ್ನು ಮೇಘನಾ ಗಾಂವ್ಕರ್ ಹಂಚಿಕೊಂಡಿದ್ದಾರೆ.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…