ಎಡಿಟೋರಿಯಲ್

ಸಿಮಿ, ಎಲ್‌ಟಿಟಿಇ , ಜೆಕೆಎಲ್‌ಎಫ್ ಪಟ್ಟಿಗೆ ಸೇರಿದ ಪಿಎಫ್‌ಐ

-ರವೀಂದ್ರ

ದೇಶದಲ್ಲಿ ಕಳೆದ ಎರಡು ವಾರಗಳಿಂದ ಪಿಎಫ್‌ಐ ಸಂಘಟನೆಯ ಮುಖಂಡರು ಹಾಗೂ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಪ್ರಮುಖರನ್ನು ಬಂಧಿಸಿ, ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಐದು ವರ್ಷಗಳ ಕಾಲ ನಿಷೇಧ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ಕೂಗನ್ನು ಕೇಂದ್ರ ಸರ್ಕಾರ ಆಲಿಸಿದಂತಾಗಿದೆ. ಸಂಘಟನೆಗಳಿಗೆ ನಿಷೇಧ ಹೇರುವಿಕೆ ಹೊಸದೇನೂ ಅಲ್ಲ. ಕಾಲದಿಂದ ಕಾಲಕ್ಕೆ ಸಮಾಜದ ಸ್ವಾಸ್ಥ್ಯ ಹಾಳುಮಾಡುವಂತಹ ಸಂಘಟನೆಗಳನ್ನು ನಿಷೇಧಿಸಲಾಗುತ್ತಿದೆ. ಈಗ ೩೯ ಸಂಘಟನೆಗಳಿಗೆ ನಿಷೇಧ ಹೇರಲಾಗಿದೆ. ನಿಷೇಧಕ್ಕೊಳಪಟ್ಟ ಪ್ರಮುಖ ಸಂಘಟನೆಗಳ ಮಾಹಿತಿ ಇಲ್ಲಿದೆ.

ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ)

ಈಗಲೂ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರಣ ಕೇಂದ್ರ ಸರಕಾರ ಸಿಮಿಯನ್ನು ನಿಷೇಧಿಸಿದೆ. ಸಿಮಿ ಸಂಘಟನೆ ದೇಶಾದ್ಯಂತ ಅನೇಕ ಉಗ್ರ ಕೃತ್ಯಗಳಲ್ಲಿ ಶಾಮೀಲಾಗಿದ್ದುದು ಬಹಿರಂಗವಾಗಿತ್ತು.ಸಿಮಿ ನಡೆಸುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ಕೂಡಲೇ ನಿಯಂತ್ರಿಸುವುದು ಅಗತ್ಯವಾಗಿದೆ. ತಲೆಮರೆಸಿಕೊಂಡಿರುವ ಅದರ ಸದಸ್ಯರು ಮತ್ತೆ ಸಂಘಟಿತರಾಗುವುದನ್ನು ತಡೆಯಬೇಕಾಗಿದೆ; ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಿಮಿ ಸಂಘಟನೆ ದೇಶದ ಮತ ನಿರಪೇಕ್ಷ ಸ್ವರೂಪವನ್ನು ಹಾಳು ಗೆಡಹುವ ಮತ್ತು ಜನರಲ್ಲಿ ಕೋಮು ದ್ವೇಷವನ್ನು ಹಬ್ಬಿಸುವಲ್ಲಿ ನಿರತವಾಗಿರುವುದರಿಂದ ಅದನ್ನು ನಿಷೇಧಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಮುಸ್ಲಿಂ ಸಹೋದರರ ಸಮಾಜ

ಆರಂಭದಲ್ಲಿ, ಪ್ಯಾನ್-ಇಸ್ಲಾಮಿಕ್ , ಧಾರ್ಮಿಕ ಮತ್ತು ಸಾಮಾಜಿಕ ಚಳುವಳಿಯಾಗಿ, ಇದು ಈಜಿಪ್ಟ್‌ನಲ್ಲಿ ಇಸ್ಲಾಂ ಧರ್ಮವನ್ನು ಬೋಧಿಸಿತು, ಅನಕ್ಷರಸ್ಥರಿಗೆ ಕಲಿಸಿತು ಮತ್ತು ಆಸ್ಪತ್ರೆಗಳು ಮತ್ತು ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸಿತು. ಈಜಿಪ್ಟ್‌ನ ಬ್ರಿಟಿಷ್ ವಸಾಹತುಶಾಹಿ ನಿಯಂತ್ರಣವನ್ನು ಕೊನೆಗೊಳಿಸುವ ಗುರಿೊಂಂದಿಗೆ ಇದು ನಂತರ ರಾಜಕೀಯ ಕ್ಷೇತ್ರಕ್ಕೆ ಮುನ್ನಡೆಯಿತು. ಆಂದೋಲನದ ಸ್ವಯಂ-ಘೋಷಿತ ಗುರಿಯು ಷರಿಯಾ ಕಾನೂನಿನಿಂದ ಆಳಲ್ಪಡುವ ರಾಜ್ಯವನ್ನು ಸ್ಥಾಪಿಸುವುದು – ಪ್ರಪಂಚದಾದ್ಯಂತ ಅದರ ಅತ್ಯಂತ ಪ್ರಸಿದ್ಧ ಘೋಷಣೆಯಾಗಿತ್ತು. ಕೆಲವು ನಿಷೇಧಿತಸಂಘಟನೆಗಳ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ನಿಷೇಧ ಹೇರಲಾಗಿದೆ.

ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್)

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸೀನ್ ಮಲಿಕ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್‌ಎಫ್) ಹಾಗೂ ಜಮ್ಮು ಮತ್ತು ಕಾಶ್ಮೀರದ ಜಮಾತ್-ಇ-ಇಸ್ಲಾಮಿ ಸಂಘಟನೆಗಳ ಮೇಲೆ ನಿಷೇಧ ಹೇರಲಾಗಿದೆ.

ಕೇಂದ್ರ ಸರ್ಕಾರ ಭೋಂತ್ಪಾದನೆ ನಿಗ್ರಹ ಕಾ್ಂದೆು ಅಡಿ ಈ ಎರಡೂ ಸಂಘಟನೆಗಳನ್ನು ನಿಷೇಧಿಸಿತ್ತು. ಇದೀಗ ಆ ಸಂಘಟನೆಗಳ ಮೇಲಿನ ನಿಷೇಧ ಪರಿಶೀಲಿಸಲು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಚಂದ್ರಶೇಖರ್ ನೇತೃತ್ವದಲ್ಲಿ ನ್ಯಾಯಾಧೀಕರಣ ರಚಿಸಿದ್ದು, ಜಮಾತ್-ಇ-ಇಸ್ಲಾಮಿ, ಜೆಕೆಎಲ್‌ಎಫ್ ನಿಷೇಧಕ್ಕೆ ಸಕಾರಣವಿದೆೆುೀಂ ಎಂಬ ಕುರಿತು ನಿರ್ಧರಿಸಲಿದೆ.

ಉಗ್ರ ಸಂಘಟನೆಗಳೊಂದಿಗೆ ಜೆಕೆಎಲ್‌ಎಫ್ ನಿಕಟ ಸಂಪರ್ಕ ಹೊಂದಿದ್ದು, ಕಾಶ್ಮೀರ ಹಾಗೂ ಇತರೆ ಕಡೆ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಮಾರ್ಚ್ ೨೨ರಂದು ಯಾಸೀನ್ ಮಲಿಕ್ ಸಂಘಟನೆಯನ್ನು ಐದು ವರ್ಷ ನಿಷೇಧಿಸಿದೆ.

ಖಲಿಸ್ತಾನ್ ಚಳವಳಿ (ದಮ್‌ದಮಿ ತಕ್ಸಾಲ್)

ಭಾರತ-ಪಾಕಿಸ್ತಾನ ವಿಭಜನೆ(೧೯೪೭) ಸಂದರ್ಭದಲ್ಲಿ ಪಂಜಾಬ್ ಪ್ರಾಂತ್ಯ ಎರಡೂ ರಾಷ್ಟ್ರಗಳಲ್ಲಿ ಹಂಚಿ ಹೋಯಿತು. ಈ ಸಮಯದಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಪಂಜಾಬ್ ಅತ್ಯಂತ ಘಾಸಿಗೊಂಡಿತು. ಸ್ವಾತಂತ್ರ್ಯದ ಬಳಿಕ ಸಿಖ್ ಸಮುದಾಯಕ್ಕೆ ಪ್ರತ್ಯೇಕ ರಾಷ್ಟ್ರಬೇಕೆಂಬ ಸಿದ್ಧಾಂತ ಮೊಳಕೆೊಂಡೆಯಿತು.

ಇದೇ ಮುಂದೆ ಭೋಂತ್ಪಾದಕ ಸ್ವರೂಪ ಪಡೆದುಕೊಂಡು ಖಲಿಸ್ತಾನ್ ಹಿಂಸಾತ್ಮಕ ಚಳವಳಿಗೆ ನಾಂದಿ ಹಾಡಿತು. ಜನರಲ್ ಸಿಂಗ್ ಬಿಂದ್ರಾನ್‌ವಾಲೆ ಎಂಬ ಖಲಿಸ್ತಾನಿ ನಾಯಕ ಈ ಸಂಘಟನೆಗೆ ಭೋಂತ್ಪಾದನೆಯ ಸ್ವರೂಪ ನೀಡಿದ. ಅಲ್ಲಿಯವರೆಗೂ ಶಾಂತವಾಗಿೆುೀಂ ಇದ್ದ ಪ್ರತ್ಯೇಕತಾವಾದಿ ಚಳವಳಿ ೧೯೮೦ ರ ದಶಕದಲ್ಲಿ ಹಿಂಸಾತ್ಮಕ ರೂಪ ಪಡೆಯಿತು. ಪಂಜಾಬ್ ರಾಜ್ಯದಾದ್ಯಂತ ಹಿಂಸಾಚಾರ ಭುಗಿಲೆದ್ದಿತು.

೧೯೮೨-೮೪ರ ಎರಡು ವರ್ಷಗಳ ಅವಧಿಯಲ್ಲಿ ಪಂಜಾಬ್‌ನಲ್ಲಿ ಒಟ್ಟು ೧,೨೦೦ ಹಿಂಸಾತ್ಮಕ ಘಟನೆಗಳು ವರದಿಯಾಗಿದ್ದು, ಹಿಂಸಾಚಾರದಲ್ಲಿ ೪೧೦ ಜನ ಅಸುನೀಗಿ ೧,೧೮೦ ಜನ ಗಂಭೀರವಾಗಿ ಗಾಯಗೊಂಡರು. ಈ ಹೋರಾಟವನ್ನು ಬಳಸಿಕೊಂಡ ಪಾಕಿಸ್ತಾನ, ಖಲಿಸ್ತಾನಿಗಳಿಗೆ ಆರ್ಥಿಕ ಹಾಗೂ ಮಿಲಿಟರಿ ಸಹಾಯ ಮಾಡುತ್ತಾ ಭಾರತದಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆಯುವಂತೆ ನೋಡಿಕೊಂಡಿದ್ದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ.ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತದ ಅಮೃತ್‌ಸರದ ಸ್ವರ್ಣ ಮಂದಿರವನ್ನೇ ತನ್ನ ಕಾರ್ಯಚಟುವಟಿಕೆಯ ತಾಣವನ್ನಾಗಿ ಮಾಡಿಕೊಂಡ ಬಿಂಧ್ರಾನ್‌ವಾಲೆ, ಅಖಾಲ್ ತಕ್ತ್‌ನ್ನು ವಶಪಡಿಸಿಕೊಂಡಿದ್ದ.ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಬಿಂದ್ರಾನ್‌ವಾಲೆಯೂ ಸೇರಿದಂತೆ ಈತನ ಎಲ್ಲಾ ಸಹಚರರನ್ನು ಹತ್ಯೆ ಮಾಡಲಾಯಿತು. ಅಮೃತ್‌ಸರ್ ಸ್ವರ್ಣ ಮಂದಿರದ ಮೇಲೆ ನಡೆದ ಸೇನಾ ಕಾರ್ಯಾಚರಣೆಯಿಂದ ಸಿಖ್ ಸಮುದಾಯದಲ್ಲಿ ಇಂದಿರಾ ಗಾಂಧಿ ವಿರುದ್ಧ ಆಕ್ರೋಶ ಮಡುಗಟ್ಟಿತ್ತು. ಇದೇ ಕಾರಣಕ್ಕೆ ೧೯೮೪ರಲ್ಲೇ ಇಂದಿರಾ ಗಾಂಧಿ ಭದ್ರತಾ ಸಿಬ್ಬಂದಿಯಿಂದಲೇ ಹತ್ಯೆಗೀಡಾದರು.

ಎಲ್‌ಟಿಟಿಇ

ಇಂದಿರಾ ಗಾಂಧಿ ಹತ್ಯೆಯಾದ ಐದೇ ವರ್ಷಗಳಲ್ಲಿ ರಾಜೀವ್ ಗಾಂಧಿಯವರನ್ನ್ನೂ ಎಲ್‌ಟಿಟಿಇ ಉಗ್ರರು ಕೊಂದು ಹಾಕಿದರು. ೧೯೯೧ರ ಮೇ ೨೧ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಮಾನವ ಬಾಂಬ್ ಸ್ಛೋಟಿಸಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಯ್ತು. ಭೀಕರ ಮಾನವ ಬಾಂಬ್ ಸ್ಛೋಟಕ್ಕೆ ರಾಜೀವ್ ಗಾಂಧಿ ದೇಹ ಛಿದ್ರ ಛಿದ್ರವಾಗಿತ್ತು. ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಅಂತರ್ಯುದ್ಧ ತಡೆಯಲು ಮತ್ತು ಎಲ್‌ಟಿಟಿಇ ಮಟ್ಟ ಹಾಕಲು ಅಲ್ಲಿಗೆ ಸೇನೆ ಕಳಿಸಿಕೊಟ್ಟಿದ್ದಕ್ಕೆ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಯ್ತು. ಹೀಗಾಗಿ ಭಾರತದಲ್ಲಿ ಈ ಸಂಘಟನೆಗೆ ಸಂಪೂರ್ಣವಾಗಿ ನಿಷೇಧ ಹೇರಲಾಯಿತು

ಇದೀಗ ಪಿಎಫ್‌ಐ

ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ವನ್ನು ಕೇಂದ್ರ ಸರ್ಕಾರ ಐದು ವರ್ಷಗಳವರೆಗೆ ನಿಷೇಧಿಸಿದೆ. ಪಿಎಫ್‌ಐ ಅನೇಕ ಭೋಂತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದ್ದರೂ, ಜಾರ್ಖಂಡ್ ಹೊರತುಪಡಿಸಿ ದೇಶದ ಇತರ ಯಾವ ರಾಜ್ಯದಲ್ಲೂ ಈ ಸಂಘಟನೆಯನ್ನು ನಿಷೇಧಿಸಲಾಗಿರಲಿಲ್ಲ. ಈ ಹಿಂದೆ ಇಂತಹ ಸೂಕ್ಷ್ಮ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾದ ದೇಶದಾದ್ಯಂತ ಇರುವ ಅಧಿಕಾರಿಗಳ ತಂಡವನ್ನು ಕೇಂದ್ರ ಸರ್ಕಾರ ರಚಿಸಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಎಲ್ಲಾ ಭಾಗಗಳಲ್ಲಿ ಪಿಎಫ್‌ಐ ವಿರುದ್ಧ ಮೂರು ರಂಗಗಳಲ್ಲಿ ಈ ತಂಡ ಕೆಲಸ ಮಾಡುತ್ತಿದೆ. ಈ ತಂಡದ ಪ್ರಮುಖ ಕೆಲಸ, ಪಿಎಫ್‌ಐ ವಿರುದ್ಧ ಅಂತಹ ಗಟ್ಟಿಮುಟ್ಟಾದ ದಾಖಲೆಗಳನ್ನು ಸಂಗ್ರಹಿಸುವುದು, ಇದು ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅದರ ಕೆಟ್ಟ ವಿನ್ಯಾಸಗಳ ವಿರುದ್ಧ ಪುರಾವೆಗಳನ್ನು ಸಂಗ್ರಹಿಸುವುದಾಗಿದೆ. ಹಾಗೇನಾದರೂ, ಪಿಎಫ್‌ಐ ನಿಷೇಧದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದಲ್ಲಿ ಕೋರ್ಟ್‌ಗೆ ಸಲ್ಲಿಕೆ ಮಾಡುವ ದಾಖಲೆಗಳು ಯಾವ ಕಾರಣಕ್ಕೂ ತಿರಸ್ಕೃತವಾಗಬಾರದು ಅಂಥದ್ದೊಂದು ಗಟ್ಟಿಮುಟ್ಟಾದ ದಾಖಲೆಗಳ ಸಂಗ್ರಹಿಸಲಾಗಿದೆ.

ಜಾರ್ಖಂಡ್‌ನಲ್ಲಿ ನಿಷೇಧಿಸಿರುವುದರ ವಿರುದ್ಧ ಪಿಎಫ್‌ಐ ಕೂಡ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ.

 ಸಾಕ್ಷ್ಯಾಧಾರಗಳಿದ್ದರೆ ನಿಷೇಧ ತಪ್ಪಲ್ಲ

ಯಾವುದೇ ಒಂದು ಸಂಘಟನೆ ದೇಶ ವಿರೋಧಿ ಚಟುವಟಿಕೆ ಇಲ್ಲವೇ ಭೋಂತ್ಪಾದನಾ ಸಂಘಟನೆ ಹಾಗೂ ಸಮಾಜಘಾತುಕ ಶಕ್ತಿಗಳ ಜೊತೆ ಕೈ ಜೋಡಿಸಿರುವುದು ಸಾಕ್ಷ್ಯಾಧಾರಗಳಲ್ಲಿ ಸಾಬೀತಾದರೆ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಆರೋಗ್ಯಕರ ಸಮಾಜದ ದೃಷ್ಟಿಯಿಂದ ಉತ್ತಮ. ಒಂದು ಸಂಘಟನೆಯನ್ನು ರಾಜಕೀಯ ಕಾರಣಕ್ಕಾಗಿ ಇಲ್ಲವೇ ದುರುದ್ದೇಶಪೂರ್ವಕವಾಗಿ ಗುರಿ ಮಾಡಿಕೊಂಡು ನಿಯಂತ್ರಣ ಮಾಡುವುದು ಇಲ್ಲವೇ ದಾಳಿ ನಡೆಸುವುದನ್ನು ಕಾನೂನು ಸಮ್ಮತಿಸುವುದಿಲ್ಲ .ಪ್ರಸ್ತುತ ದೇಶದಾದ್ಯಂತ ಕೆಲವು ಸಂಘಟನೆಗಳ ಮೇಲೆ ಕೇಂದ್ರದ ಎನ್‌ಐಎ ಹಾಗೂ ಇಡಿ ಜಂಟಿಯಾಗಿ ದಾಳಿ ನಡೆಸಿದೆ. ಆ ಸಂಘಟನೆ ಹಾಗೂ ಅದರ ಮುಖಂಡರು ಯಾವುದಾದರೂ ಭೋಂತ್ಪಾದಕ ಸಂಘಟನೆಗಳ ಜೊತೆ ಕೈ ಜೋಡಿಸಿ ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡಿರುವುದು, ಇಲ್ಲವೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿರುವುದು ಕಂಡು ಬಂದರೆ ಅಂತಹ ಸಂಘಟನೆಗಳ ಮೇಲೆ ದಾಳಿ ಹಾಗೂ ಕಾನೂನು ಕ್ರಮ ತೆಗೆದುಕೊಳ್ಳುವುದು ತಪ್ಪಲ್ಲ .

ಕೆ.ಬಿ.ಕೆ.ಸ್ವಾಮಿ, ಕಾನೂನು ತಜ್ಞ .

 

andolana

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

2 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

3 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

3 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

13 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

14 hours ago