ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 29 ಗುರುವಾರ 2022

ಕಾಮಾಧಿಪತಿಗಳು
ಮಠಾಧಿಪತಿಗಳಿಗೂ ಸುಖ ಅನುಭವಿಸುವ ಆಸೆ, ಕುಲಾಧಿಪತಿಗಳಿಗೂ ಕಾಮದಾಟದ ಬಯಕೆ. ಸಾಮಾಜಿಕ ಬದಲಾವಣೆಯ ಧರ್ಮಾಧಿಕಾರಿಗಳು ಒಬ್ಬರಾದರೆ, ಮಕ್ಕಳ ಭವಿಷ್ಯವನ್ನು ಬರೆಯುವ ವಿದ್ಯಾಸಂಪನ್ನರು ಮತ್ತೊಬ್ಬರು. ಆಧ್ಯಾತ್ಮಿಕ ಸಿದ್ಧಾಂತಗಳ ಆಲಯವಿದು ಅರಿಷಡ್ವರ್ಗಗಳನ್ನು ತ್ಯೆಜಿಸಿ ಬನ್ನಿ, ಜ್ಞಾನ ದೇಗುಲವಿದು ಕೈಮುಗಿದು ಬನ್ನಿ ಎಂಬ ಘೋಷ ವಾಕ್ಯಗಳು ರಾರಾಜಿಸುವ ಪವಿತ್ರ ಸ್ಥಳಗಳಲ್ಲಿ ಎಂಥ ಅನೈತಿಕ ಕೆಲಸಗಳು? ವಿಕೃತರಿಂದ ನೀಚ ಕೃತ್ಯವನ್ನು ನಿಯಂತ್ರಿಸುವ ಬಗೆಯಾದರೂ ಹೇಗೆ?
ಮಿರ್ಲೆ ಚಂದ್ರಶೇಖರ, ಲೇಖಕರು, ಮೈಸೂರು.


ಕನ್ನಡಕ್ಕೆ ಅಗೌರವ
ಕಾನೂನು ಕೇವಲ ಮಾತಿಗಷ್ಟೇ ಎಂದು ಮತ್ತೊಮ್ಮೆ ರಾಜಕಾರಣಿಗಳು ಸಾರಿ ಹೇಳಿದಂತೆ ಇದೆ ಈ ಘಟನೆ. ಮೊದಲು ನಾವು ಪ್ರಣಾಳಿಕೆಗಳನ್ನು ಅಷ್ಟೇ ಕೇವಲ ರಾಜಕೀಯದ ಸಾಲುಗಳೆಂದು ಓದಿ ಸುಮ್ಮನೇ ಆಗುತ್ತಿದ್ದವು. ಆದರೆ ಈಗ ಮಸೂದೆಗಳನ್ನು ಗಾಳಿಗೆ ತೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೊನ್ನೆಯ ಅಧಿವೇಶನದಲ್ಲಿ ನಮ್ಮ ಮುಖ್ಯಮಂತ್ರಿ ಕನ್ನಡಕ್ಕೆ ಕೊಟ್ಟ ಪ್ರಾಮುಖ್ಯತೆ ಹಾಗೂ ಗೌರವವನ್ನು ನೋಡಿ, ಕನ್ನಡದ ಬಗ್ಗೆ ಅವರಿಗೆ ಇರುವ ಅಭಿಮಾನದ ಮಾತುಗಳನ್ನು ಕೇಳಿ ನಮಗೆ ಹೆಮ್ಮೆ ಅನ್ನಿಸಿತ್ತು. ಆದರೆ ನಮ್ಮ ನಾಡ ಹಬ್ಬವಾದ ದಸರಾದಲ್ಲೇ ಅದಕ್ಕೆ ಕಿಮ್ಮತ್ತು ನೀಡದೆ ಗಾಳಿಗೆ ತೂರಿದಂತೆ ರಾಷ್ಟ್ರಪತಿಗಳ ವೇದಿಕೆ ಮೇಲೆ ಕನ್ನಡವೇ ಮಾಯವಾಗಿ ಆಂಗ್ಲ ಭಾಷೆಯಲ್ಲಿ ನಾಡ ಹಬ್ಬ ದಸರಾ ಹಬ್ಬವನ್ನು ಬಿಂಬಿಸಿದ್ದಾರೆ. ರಾಷ್ಟ್ರಪತಿಗಳೆ ನಾಲ್ಕು ಅಕ್ಷರ ಕನ್ನಡದಲ್ಲಿ ಮಾತನಾಡಿ ಕನ್ನಡದ ಶೋಭೆ ಹೆಚ್ಚಿಸಿರುವರು. ಆದರೆ ನಮಗೆ ನಮ್ಮ ಮಾತೃ ಭಾಷೆ ಬಳಸಲು ಮುಜುಗರ. ನಮ್ಮ ನಾಡ ಹಬ್ಬದಲ್ಲೇ ನಮ್ಮ ನಾಡ ಭಾಷೆಗೆ ಗೌರವ ನೀಡದೆ ಹೋದರೆ ಇನ್ನೂ ಅದಕ್ಕೆ ಮಸೂದೆ ಎಂಬ ಹೆಸರಿನಿಂದ ಸದನದಲ್ಲಿ ಸಮಯ ವ್ಯರ್ಥ ಮಾಡುವುದೇಕೆೆ? ನಮ್ಮ ಭಾಷೆಗೆ ನೀಡುವ ಗೌರವ ಇದೇನಾ?
-ದರ್ಶನ್ ಮಾದೇಗೌಡ, ಸುಭಾಷ್ ನಗರ, ಕೆ.ಆರ್.ನಗರ.


ಧ್ವನಿವರ್ಧಕದ ಹಾವಳಿ ತಪ್ಪಿಸಿ
ಮೈಸೂರು-ಹುಣಸೂರು ಮುಖ್ಯರಸ್ತೆಯ ಪಡುವಾರಹಳ್ಳಿ ಬಳಿಯಿರುವ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಂಬಂಧ ಆಗಾಗ್ಗೆ ಒಂದಲ್ಲ ಒಂದು ಕಾರ್ಯಕ್ರಮದ ಅಭ್ಯಾಸವನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಮಾಡಿಸುತ್ತಿರುತ್ತಾರೆ. ಈಗ ಶಾಲೆಗೆ ರಜೆ ಇರುವುದರಿಂದ ಕಳೆದ ಮೂರು ದಿನಗಳಿಂದ ಕಾರ್ಯಕ್ರಮದ ಅಭ್ಯಾಸ ನಡೆಯುತ್ತಿದೆ. ಹೀಗೆ ಅಭ್ಯಾಸದಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಧ್ವನಿವರ್ಧಕದ ಮೂಲಕ ಜೋರಾದ ಶಬ್ದದೊಂದಿಗೆ ಆಂಗ್ಲಭಾಷೆಯಲ್ಲಿ ಮಾತ್ರ ಹೇಳಿಕೊಡುತ್ತಾರೆ. ಅದು ಎಷ್ಟರ ಮಟ್ಟಿಗೆ ಅಂದರೆ, ಸುತ್ತಮುತ್ತಲಿನ ಸುಮಾರು ಒಂದು ಕಿಲೋಮೀಟರ್ ದೂರಕ್ಕೂ ಅದು ಕೇಳಿಸುವ ಹಾಗೆ! ಇದರಿಂದ, ಅಕ್ಕಪಕ್ಕದಲ್ಲೇ ಇರುವ ವಿದ್ಯಾಶ್ರಮ, ಕರ್ನಾಟಕ ರಾಜ್ಯ ಮುಕ್ತ ವಿವಿ ಹಾಗೂ ಮೈಸೂರು ವಿವಿಯಲ್ಲಿನ ವಿದ್ಯಾರ್ಥಿಗಳು ಹಾಗೂ ನೌಕರರಿಗೆ ಬಹಳ ಕಿರಿಕಿರಿಯಾಗುತ್ತಿದೆ. ಹೀಗಾಗಿ, ಸಂಬಂಧಪಟ್ಟವರು ಧ್ವನಿವರ್ಧಕದ ಶಬ್ದ ಸಂಸ್ಥೆಯ ಆವರಣಕ್ಕೆ ಮಾತ್ರ ಸೀಮಿತವಾಗುವಂತೆ ಸೂಕ್ತ ತಿಳಿವಳಿಕೆ ನೀಡಿ ಜೋರಾದ ಕರ್ಕಶ ಶಬ್ದದಿಂದ ಮುಕ್ತಿ ನೀಡಬೇಕಿದೆ.
ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು.


ಇತಿಹಾಸ ಪಾಠದ ಅವಶ್ಯಕತೆ ಇದೆ
ಜೂನ್ ೪ ರಂದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಎಂದಿನಂತೆ ಜಿಲ್ಲಾಡಳಿತ ಆಚರಿಸಬೇಕಾಗಿತ್ತು. ಜಯಂತಿ ಆಚರಣೆಯನ್ನು ಅದ್ಧೂರಿಯಾಗಿ ಮಾಡುವ ಬದಲು ದಸರಾದಲ್ಲಿ ಒಂದು ತಾಸು ಆಚರಿಸಲು ಜಿಲ್ಲಾಡಳಿತ ದಾರಿ ತಪ್ಪಸಿದ್ದು ಮೈಸೂರು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್. ಇಡೀ ದೇಶ ಕಂಡ ಅತ್ಯಂತ ಜನಪರ ಕಾಳಜಿಯುಳ್ಳ ನಾಲ್ವಡಿ ಅವರನ್ನು ಮಹಾತ್ಮ ಗಾಂಧೀಜಿ ಅವರು ರಾಜರ್ಷಿ ಎಂದು ಹೇಳಿದ್ದಾರೆ. ಆದರೆ ಜಿಲ್ಲಾಡಳಿತಕ್ಕೆ ಸರಿಯಾದ ಮಾಹಿತಿ ನೀಡದೆ ಹೀಗೆ ಮಾಡಿರುವ ಸಹಾಯಕ ನಿರ್ದೇಶಕರ ನಡೆ ನಿಜಕ್ಕೂ ನಾಲ್ವಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೆ ಇವರು ನಾಡಿನ ಜನತೆಯ ಕ್ಷಮೆ ಕೇಳಿ ತಕ್ಷಣ ಎಂದಿನಂತೆ ಪೂರ್ವ ಭಾವಿ ಸಭೆಯಲ್ಲಿ ನಿರ್ಧಾರವಾದಂತೆ ನಿಯಮಾವಳಿಗಳ ಪ್ರಕಾರವೇ ನಾಲ್ವಡಿ ಜಯಂತಿ ಅದ್ಧೂರಿಯಾಗಿ ಮಾಡಬೇಕೆಂದು ಈ ಮೂಲಕ ಒತ್ತಾಯ ಮಾಡುತ್ತೇನೆ.
-ಅರವಿಂದ್ ಶರ್ಮ, ಮೈಸೂರು.


ಹಾ..ಆಹ್ವಾನ !
ಮೃತ ಕವಿಯನ್ನೂ
ಆಹ್ವಾನಿಸಲಾಗಿದೆಯಂತೆ
ಮೈಸೂರು ದಸರಾ ಕವಿಗೋಷ್ಠಿಗೆ!
ಸದ್ಯ,ಈಗ ಆಗದಿದ್ದರೆ
ಮುಂದಿನ ಜನ್ಮದಲ್ಲಾದರೂ
ಸಿಗಬಹುದಲ್ಲ ಒಂದು
ಅಪರೂಪದ ಅವಕಾಶ ನನಗೆ !!
-ಮ ಗು ಬಸವಣ್ಣ, ಸುತ್ತೂರು.

andolanait

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

8 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

8 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

8 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

8 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

8 hours ago