ಜಿಲ್ಲೆಗಳು

ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಭಗತ್‌ಸಿಂಗ್‌ ಇಂದಿಗೂ ಸ್ಪೂರ್ತಿದಾಯಕ : ಕವೀಶ್ ಗೌಡ

ಮೈಸೂರು : ನಾಡು ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ 115 ನೇ ಜಯಂತಿಯ ಅಂಗವಾಗಿ ಸಮಾನಮನಸ್ಕ ಬಳಗದ ವತಿಯಿಂದ ನಗರದ ಗಾಂಧಿವೃತ್ತದಲ್ಲಿ ಭಗತ್ ಸಿಂಗ್ ಒಂದು ನೆನಪು ಕಾರ್ಯಕ್ರಮ ಆಯೋಜಿಸಲಾಗಿತ್ತು,

ಭಗತ್‌ ಸಿಂಗ್‌ ಅರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿದ್ಯಾವಿಕಾಸ ಸಂಸ್ಥೆಯ ಕವೀಶ್ ಗೌಡ ರವರು ಮಾತನಾಡಿ ಸಿಂಗ್ ರವರ ಹೆಸರು ಪ್ರತಿಯೊಬ್ಬ ದೇಶಭಕ್ತನ ಮನದಲ್ಲಿ ಸದಾ ಕಾಲ ಉಳಿಯುವಂತದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್‌‌ ಸಿಂಗ್‌‌ ರವರ ಹೆಸರನ್ನು ನಾಮಕರಣ ಮಾಡಿರುವುದು ನಮ್ಮೆರಿಗೂ ಸಂತವನ್ನುಂಟು ಮಾಡಿದೆ ಎಂದರು.

ಬಳಿಕ ಮಾತನಾಡಿದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಪಡುವಾರಹಳ್ಳಿಯ ಎಂ ರಾಮಕೃಷ್ಣ ರವರು 23 ವರ್ಷದ ಕ್ರಾಂತಿಕಾರಿ ಯುವ ಶಕ್ತಿ ಭಗತ್ ಸಿಂಗ್ ರವರು ಇನ್ ಕಿಲಾಬ್ ಜಿಂದಾಬಾದ್ ಘೋಷಣೆ ಮೂಲಕ ದೇಶಾದ್ಯಂತ ಬ್ರಿಟಿಶರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಅಪ್ರತಿಮ ದೇಶಭಕ್ತ 1924 ರಲ್ಲಿ ಅಸೆಂಬ್ಲಿ ನಡೆಯುತ್ತಿದ್ದಾಗ ಭಗತ್‌‌ ಸಿಂಗ್‌‌ ಬಿ.ಕೆ ದತ್ ರವರು ಬಾಂಬ್ ಎಸೆದು ಇನ್ ಕಿಲಾಬ್ ಜಿಂದಾಬಾದ್ ಬ್ರಿಟಿಷ್ ಸಾಮ್ರಾಜ್ಯ ಶಾಹಿಗೆ ದಿಕ್ಕಾರ ಎಂದು ಕ್ರಾಂತಿಕಾರಿ ಘೋಷಣೆ ಕೂಗಿ ಭರತಖಂಡದಲ್ಲಿ ಯುವಕರನ್ನು ಬ್ರಿಟಿಷರ ವಿರುದ್ಧ ಹೋರಾಡಲು ಸಜ್ಜುಗೊಳಿಸಿದರು. ದೇಶಕ್ಕಾಗಿ ಹೋರಾಡಲು ಕರೆನೀಡಿ ವೈಯಕ್ತಿಕ ಜೀವನ ತೊರೆಯಲು ಕರೆ ನೀಡಿದರು, ಇದು ದೇಶಾದ್ಯಂತ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಅವರ ಜೀವನದ ಸ್ವಾತಂತ್ರ್ಯ ಕಿಚ್ಚು ನಮಗೆಲ್ಲ ಇಂದಿಗೂ ಸ್ಪೂರ್ತಿದಾಯಕ ಅವರ ಜಯಂತಿಯನ್ನು ಮೈಸೂರಿನಲ್ಲಿ ಆಚರಣೆ ಮಾಡಿ ಗೌರವಿಸುತ್ತಿದ್ದೇವೆ ಎಂದರು,

ನಂತರ ಯುವ ಮುಖಂಡ ಅಜಯ್ ಶಾಸ್ತ್ರಿ ಮಾತನಾಡಿ ಜಿಲಿಯಾನ್ ವಾಲಾಬಾಗ್‌ ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಭಾರತೀಯರು ನೂರಾರು ಸಂಖ್ಯೆಯಲ್ಲಿ ಮಡಿದರು, ಅಲ್ಲಿದ 12ವರ್ಷದ ಬಾಲಕ ಭಾರತೀಯರ ರಕ್ತವನ್ನ ಬಾಟಲಿನಲ್ಲಿ ತುಂಬಿ ಬ್ರೀಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಶಪಥ ಮಾಡಿದ ಬಾಲಕನೇ ಅಪ್ರತಿಮ ಹೋರಾಟಗಾರ ಭಗತ್ ಸಿಂಗ್, ಅವರ ಚಿಕ್ಕಪ್ಪ ಅಜಿತ್ ಸಿಂಗ್ ರವರಿಂದ ಪ್ರೇರೆಪಿತರಾಗಿ ಸ್ವಾತಂತ್ರ್ಯ ಹೋರಾಟದ ಆಂದೋಲನ ಕೈಗೊಂಡು ಲಕ್ಷಾಂತರ ಯುವಕರನ್ನ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಸಂಘಟಿಸಿದರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭಗತ್ ಸಿಂಗ್ ರವರ ಅಧ್ಯಯನ ಪೀಠ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಅರಿವು, ಮತ್ತು ದೇಶಪ್ರೇಮ ಜಾಗೃತಿ ಮೂಡಿಸಬೇಕಿದೆ ಎಂದರು,

ಕಾರ್ಯಕ್ರಮದಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅದ್ಯಕ್ಷರಾದ ಕೆ ಉಮಾಶಂಕರ್, ನಿರ್ದೇಶಕ ಎಸ್.ಅರವಿಂದ್,ಚಾಮರಾಜ ಬಿಜೆಪಿ ಅದ್ಯಕ್ಷರಾದ ಸೋಮಶೇಖರ್ ರಾಜು, ನಗರಪಾಲಿಕೆ ಸದಸ್ಯರಾದ ಎಂ. ಚಿಕ್ಕವೆಂಕಟು,
ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಎಸ್.ಕೃಷ್ಣಕುಮರ್,ಬಿ.ಕುಮಾರ್, ಸಿ.ಸಂತೋಷ್, ಯುವ ಮುಖಂಡರಾದ ಅಜಯ್ ಶಾಸ್ತಿ,ವಿಕ್ರಂ ಅಯ್ಯಂಗಾರ್, ಕೇಬಲ್ ಕಿಟ್ಟಿ, ಸುರೇಂದ್ರ, ಅನುಜ್,ಛಲಪತಿ, ರವಿ ,ವೀರನಗೆರೆಯ ನಕ್ಷತ್ರ ಗ್ರೂಪ್ ವಿಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

andolanait

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

39 mins ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

45 mins ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

49 mins ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

11 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

13 hours ago