Andolana originals

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್

ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ 

ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ ಭಾಗದ ಕೆರೆಗಳಿಗೆ ನೀರು ತುಂಬುವ ಮೊದಲ ಹಂತದ ೪೫ ಕೋಟಿ ರೂ. ವೆಚ್ಚದ ಯೋಜನೆ ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಈ ಬಾರಿ ದಸರಾ ಹಬ್ಬದ ವೇಳೆಗೆ ನೀರು ಹರಿಸಲು ಸಿದ್ಧತೆ ಭರದಿಂದ ಸಾಗಿದೆ.

೨೦೧೬ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೇ ಅಂದಿನ ನಂಜನಗೂಡಿನ ಶಾಸಕರೂ, ಕಂದಾಯ ಸಚಿವರೂ ಆಗಿದ್ದ ಸಚಿವ ವಿ.ಶ್ರೀನಿವಾಸ ಪ್ರಸಾದ್ ತಾಲ್ಲೂಕಿನ ೨೬ ಕೆರೆಗಳಿಗೆ ಕಪಿಲಾ ನದಿಯಿಂದ ನೀರು ಹರಿಸುವ ೪೫ ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಆಡಳಿತಾತ್ಮಕ ಅನು ಮೋದನೆ ಪಡೆದಿದ್ದರು.

ನಂತರ ಬದಲಾದ ಸನ್ನಿವೇಶದಲ್ಲಿ ಕಳಲೆ ಕೇಶವಮೂರ್ತಿ ಶಾಸಕರಾಗಿ, ಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ೨೦೧೭ರಲ್ಲಿ ಈ ಯೋಜನೆಯ ಟೆಂಡರ್ ನಡೆದು ಹೈದರಾಬಾದ್ ಮೂಲದ ಕಂಪೆನಿಗೆ ೪೫.೧೯ ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಹದಿನೆಂಟೇ ತಿಂಗಳಲ್ಲಿ ಪೂರ್ಣ ಗೊಳಿಸಬೇಕು ಎಂಬ ಷರತ್ತಿನೊಂದಿಗೆ ಗುತ್ತಿಗೆಗೆ ನೀಡಲಾಗಿತ್ತು.

ಅದರಂತೆ ಭರದಿಂದ ಆರಂಭವಾದ ಕಾಮಗಾರಿ ನಂತರ ಬಂದ ಕೋವಿಡ್ ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ಸ್ಥಗಿತವಾಗಿತ್ತು. ೨೦೨೦ರಲ್ಲಿ ಈ ಕಾಮಗಾರಿಯ ಗುತ್ತಿಗೆಯೇ ರದ್ದಾಗಿ ಯೋಜನೆಯೇ ಮುಂದುವರಿಯುತ್ತದೆಯೋ ಇಲ್ಲವೋ ಎಂಬಂತಾಗಿತ್ತು. ೨೦೨೧ರಲ್ಲಿ ಶಾಸಕರಾಗಿದ್ದ ಬಿ.ಹರ್ಷವರ್ಧನ್ ಮುತುವರ್ಜಿ ವಹಿಸಿ ಮತ್ತೆ ಕಾಮಗಾರಿ ಮುಂದುವರಿಸಲು ಅದೇ ಗುತ್ತಿಗೆದಾರರಿಗೆ ಮತ್ತೊಂದು ಅವಕಾಶ ನೀಡಲು ಕ್ರಮ ವಹಿಸಿದ್ದರಿಂದ ಕಾಮಗಾರಿ ಪುನರಾರಂಭಿಸಲು ಹಸಿರು ನಿಶಾನೆ ತೋರಲಾಗಿತ್ತಾದರೂ ಪ್ರಗತಿ ಕಾಣದ ಕಾರಣ ಮತ್ತೊಮ್ಮೆ ೨೦೨೨ರಲ್ಲಿ ಗುತ್ತಿಗೆಯನ್ನು ರದ್ದು ಮಾಡಲಾಗಿತ್ತು. ೨೦೨೩ರ ಮೇ ತಿಂಗಳಲ್ಲಿ ನಂಜನಗೂಡು ಶಾಸಕರಾಗಿ ಆಯ್ಕೆಯಾದ ದರ್ಶನ್ ಧ್ರುವನಾರಾಯಣ ಅವರು, ರದ್ದಾದ ಈ ಯೋಜನೆಯತ್ತ ಆಸಕ್ತಿ ವಹಿಸಿ ಹುರಾ ಭಾಗದ ಕೆರೆಗಳಿಗೆ ನೀರು ತುಂಬಲೇಬೇಕು ಎನ್ನುವ ಛಲದಿಂದ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರನ್ನು ಕರೆಸಿ ನೀರಾವರಿ ಇಲಾಖೆಯ ಅಧಿಕಾರಿಗಳು, ಸಚಿವರೊಂದಿಗೆ ಮಾತನಾಡಿದ ಫಲವಾಗಿ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಹೈದರಾಬಾದ್ ಮೂಲದ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಲು ಆಗಿರುವ ತೊಂದರೆಗಳನ್ನು ವಿವರಿಸಿದರು.

ತಮ್ಮ ಕ್ಷೇತ್ರದ ಈ ೨೬ ಕೆರೆಗಳಿಗೆ ನೀರು ತುಂಬಿದರೆ ಆಗಬಹುದಾದ ಅನುಕೂಲತೆಗಳನ್ನು ಮನಗಂಡ ದರ್ಶನ್, ಕಾರ್ಯಪ್ರವೃತ್ತರಾಗಿ ಗುತ್ತಿಗೆದಾರರು ಹಾಗೂ ಸರ್ಕಾರವನ್ನು ಮನವೊಲಿಸಿದರು. ನೀರಾವರಿ ಇಲಾಖೆ ಹಾಗೂ ಸರ್ಕಾರ ಕಾಮಗಾರಿ ಮುಂದುವರಿಸಲು ತಮಗೆ ಅನುಮತಿ ನೀಡಿದರೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಶಾಸಕರಿಗೆ ಭರವಸೆ ನೀಡಿದರು.

ಕಾಮಗಾರಿ ಪೂರ್ಣಗೊಳಿಸಿಕೊಡುವ ಗುತ್ತಿಗೆದಾರರ ಮನವಿಯನ್ನು ಸರ್ಕಾರದ ಮುಂದೆ ಕೊಂಡೊಯ್ದು, ಕೆರೆಗಳಿಗೆ ನೀರು ತುಂಬಲೇಬೇಕಾದ ಅನಿವಾರ್ಯತೆಯನ್ನು ಆಡಳಿತಗಾರರಿಗೆ ಮನದಟ್ಟು ಮಾಡಿದ ದರ್ಶನ್, ಕಾಮಗಾರಿ ಪುನರಾರಂಭಿಸಲು ಸರ್ಕಾರದಿಂದ ಅನುಮತಿ ಕೊಡಿಸುವುದರ ಜೊತೆ ಹಣವನ್ನೂ ಬಿಡುಗಡೆ ಮಾಡಿಸಿದ್ದರಿಂದ ಕಾಮಗಾರಿ ೮-೧೧-೨೦೨೩ ರಂದು ಪ್ರಾರಂಭವಾಗಿ ನಾನಾ ಕಾರಣಗಳಿಂದ ಮತ್ತೆ ವಿಳಂಬಗೊಂಡಿದ್ದು, ಆ ನಂತರ ಪುನಾರಂಭವಾಗಿ ಇದೀಗ ಪೂರ್ಣವಾಗುವ ಹಂತ ತಲುಪಿದೆ. ದಸರಾ ಹಬ್ಬದ ವೇಳೆಗೆ ಈ ಭಾಗದ ಕೆರೆಗಳಿಗೆ ನೀರು ಪೂರೈಸುವ ಮಹತ್ವಾಕಾಂಕ್ಷೆ ಶಾಸಕ ದರ್ಶನ್ ಧ್ರುವನಾರಾಯಣ ಅವರದ್ದಾಗಿದೆ.

ಯೋಜನೆ ಸಾಗಿ ಬಂದ ಹಾದಿ…: 

* ೧೫-೧೧-೨೦೧೬: ೪೫ ಕೋಟಿ ರೂ.ಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ

* ೧೩-೯-೨೦೧೭: ೪೫.೧೯ ಕೋಟಿ ರೂ.ಗೆ ಟೆಂಡರ್

* ೪-೬-೨೦೨೦: ಗುತ್ತಿಗೆ ರದ್ದು

* ೨೮-೧೨-೨೦೨೦: ಕೋವಿಡ್‌ನಿಂದಾಗಿ ಯೋಜನೆಗಳ ಕೊಳವೆಗಳು ಎಲೆಕ್ಟ್ರೋ ಮೆಕಾನಿಕ್ ಯಂತ್ರಗಳ ಉತ್ಪಾದನೆ ಸ್ಥಗಿತವಾಗಿ ಯೋಜನೆ ಸ್ಥಗಿತ

* ೨೮-೭-೨೦೨೧: ಕಾಮಗಾರಿ ಮುಂದುವರಿ ಸಲು ಅನುಮತಿಗಾಗಿ ಗುತ್ತಿಗೆದಾರರಿಂದ ಮನವಿ ಇಲಾಖೆಯಿಂದ ನಿರ್ದಿಷ್ಟ ಅವಧಿ ಯಲ್ಲಿ ಪೂರ್ಣಗೊಳಿಸಲು ಷರತ್ತಿನ ಅನುಮೋದನೆ

* ೫-೧೧-೨೦೨೨: ಪ್ರಗತಿ ಕಾಣದೆ ಕಾಮಗಾರಿ ಮತ್ತೆ ರದ್ದು

* ೨೦-೭-೨೦೨೩: ಗುತ್ತಿಗೆದಾರರಿಂದ ಕೊನೆಯ ಅವಕಾಶಕ್ಕೆ ಮನವಿ

* ೮-೧೧ ೨೦೨೩: ಶಾಸಕ ದರ್ಶನ್ ಅವರ ಮಧ್ಯ ಪ್ರವೇಶದಿಂದ ೨೦೨೫ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಷರತ್ತಿನೊಂದಿಗೆ ಕಾಮಗಾರಿ ಪುನರಾರಂಭ

* ಯೋಜನೆಯ ವಿವರ

* ಪಂಪ್‌ಹೌಸ್ ಇನ್ಟೆಕ್ ಫೋರ‍್ಬೇ ಕಾಮಗಾರಿ ಪೂರ್ಣ

* ಮೊದಲ ಹಂತದ ೧೧.೧೪ ಕಿ.ಮೀ. ಪೈಕಿ ೯.೪ ಕಿ.ಮೀ. ರೈಸಿಂಗ್ ಪೈಪ್‌ಲೈನ್ ಪೂರ್ಣ

* ೧೪,೫೬ ಕಿ.ಮೀ. ಪೈಕಿ ೭.೧೦ ಕಿ.ಮೀ.ಡಿಐ ಪೈಪ್ ಲೈನ್ ಕಾಮಗಾರಿ ಪೂರ್ಣ

* ಡೆಲವರಿ ಚೇಂಬರ್‌ನ ಕಾಮಗಾರಿ ಶೇ.೯೦ರಷ್ಟು ಪ್ರಗತಿ

* ಡೆಲವರಿ ಚೇಂಬರ್ ಕಾಮಗಾರಿ ಆರಂಭ

* ಸೆಸ್ಕ್‌ನವರಿಂದ ವಿದ್ಯುತ್ ಪೂರೈಕೆ ಆಗಬೇಕು ೨೬.೨೧ ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣವಾಗಿದ್ದು ಉಳಿದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ

” ಸ್ಥಗಿತವಾಗಿಯೇ ಹೋಗಿದ್ದ ಕೆರೆಗಳನ್ನು ತುಂಬಿಸುವ ಯೋಜನೆಯು ಜನೋಪಯೋಗಿಯಾಗಿರುವುದನ್ನು ಕಂಡು ಅದಕ್ಕೆ ಕಾಯಕಲ್ಪ ಕೊಡುವ ಸಂಕಲ್ಪ ಮಾಡಿ, ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ, ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಮೂಲಕ ಯೋಜನೆಗೆ ಮರುಜೀವ ನೀಡಿದ್ದು, ಪೈಪ್‌ಲೈನ್ ಸೇರಿದಂತೆ ಎಲ್ಲ ಕಾಮಗಾರಿಗಳು ಈಗ ಮುಕ್ತಾಯದ ಹಂತಕ್ಕೆ ಬಂದಿದ್ದು, ವಿದ್ಯುತ್ ಕೆಲಸ ಮಾತ್ರ ಬಾಕಿ ಇದೆ.”

-ದರ್ಶನ್ ಧ್ರುವನಾರಾಯಣ, ಶಾಸಕ

ಆಂದೋಲನ ಡೆಸ್ಕ್

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

3 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

3 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

3 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

13 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

15 hours ago