Andolana originals

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ ವಿರುದ್ಧ ಟೀಕೆಗಳೆದ್ದವು. ಆಗ ಶಿವರಾಮ ಕಾರಂತರು ಆಡಿದ ಮಾತುಗಳು ಮತ್ತೆ ನೆನಪಾಗುತ್ತವೆ. – ‘ಬರ ಬಂದಿದೆ ಅಂತ ಜನ ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದಾರಾ?’ ವಿಶ್ವವಿಖ್ಯಾತ ನಾಡಹಬ್ಬ ಆಚರಣೆಯ ವೇಳೆ ದಸರಾ ಚಿತ್ರೋತ್ಸವವನ್ನು ಈ ಬಾರಿ ರದ್ದು ಮಾಡಲು ನೀಡಲಾಗುತ್ತಿರುವ ಕಾರಣ ಕೇಳಿದಾಗ ಇದು ನೆನಪಾಯಿತು.

ಪ್ರೇಕ್ಷಕರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಇಲ್ಲದ ಕಾರಣ ದಸರಾ ಚಲನಚಿತ್ರೋತ್ಸವವನ್ನು ನಡೆಸದಿರಲು ನಿರ್ಧರಿಸಲಾಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಐವರೂ ಚಿತ್ರಗಳನ್ನು ನೋಡಿಲ್ಲ. ಅದೂ ಅಲ್ಲದೆ ೪೦-೪೫ ಲಕ್ಷ ರೂ. ಇದಕ್ಕೆ ವೆಚ್ಚವಾಗುತ್ತದೆ. ಇದು ಜಿಲ್ಲಾಧಿಕಾರಿಗಳಿಂದ ಬಂದ, ಅಧಿಕೃತ ಎಂದು ಹೇಳಲಾದ ಮಾಹಿತಿ.

ಯಾವುದೇ ಚಲನಚಿತ್ರೋತ್ಸವದ ಉದ್ದೇಶ, ಸಾಮಾನ್ಯವಾಗಿ ವಾಣಿಜ್ಯ ವಿತರಣಾ ವ್ಯವಸ್ಥೆಯಲ್ಲಿ ಸಿಗದ, ವಿಶೇಷವಾಗಿ ಸ್ವತಂತ್ರ, ಪ್ರಯೋಗ ಶೀಲ, ಕಲಾತ್ಮಕ ಮತ್ತು ವಿವಿಧ ದೇಶ-ಭಾಷೆಗಳ ಸಿನಿಮಾಗಳನ್ನು ಪ್ರದರ್ಶಿಸುವುದು. ಬೇರೆ ದೇಶಗಳು, ಭಾಷೆಗಳು ಮತ್ತು ಸಮಾಜಗಳ ಬದುಕು, ಸಂಸ್ಕ ತಿ, ಚಿಂತನೆಗಳನ್ನು ಸಿನಿಮಾದ ಮೂಲಕ ಪರಿ ಚಯಿಸುವುದು. ಹೊಸ ನಿರ್ದೇಶಕರು, ನಟರು, ತಂತ್ರಜ್ಞರು ಮತ್ತು ಬರಹಗಾರರಿಗೆ ತಮ್ಮ ಕೃತಿಗಳನ್ನು ಜಗತ್ತಿನ ಮುಂದೆ ತರುವ ಅವಕಾಶ ಕಲ್ಪಿಸುವುದು. ಸಿನಿಮಾ ನೋಡುವುದರ ಜೊತೆಗೆ ಅದರ ಬಗ್ಗೆ ಚರ್ಚಿಸುವ, ವಿಶ್ಲೇಷಿಸುವ, ಪ್ರಶ್ನಿಸುವ ಸಂಸ್ಕ ತಿಯನ್ನು ಬೆಳೆಸುವುದು. ಇದಕ್ಕಾಗಿ ವಿಚಾರಸಂಕಿರಣ, ಸಂವಾದ, ತಜ್ಞರ ಉಪನ್ಯಾಸ, ಕಾರ್ಯಾಗಾರಗಳು ನಡೆಯುತ್ತವೆ. ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಸಂಸ್ಕಾರ ಮತ್ತು ಮಾಧ್ಯಮ ಸಾಕ್ಷರತೆಯನ್ನು ಬೆಳೆಸುವುದು. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಸಿನಿಮಾ ಒಂದು ಕಲೆಯಾಗಿ, ಇತಿಹಾಸವಾಗಿ ಮತ್ತು ತಂತ್ರಜ್ಞಾನವಾಗಿ ಪರಿಚಯಿಸುವುದು. ಇವೇ ಮೊದಲಾದವು.

ಚಿತ್ರೋತ್ಸವಕ್ಕೆ ಪ್ರೇಕ್ಷಕರ ಕೊರತೆಗೆ ಕಾರಣ ಕಳಪೆ ಚಿತ್ರಗಳ ಆಯ್ಕೆ ಎನ್ನುವ ಮಾತು ಕೇಳಿಬರುತ್ತಿದೆ. ಚಿತ್ರೋತ್ಸವಗಳಲ್ಲಿ ಆಯ್ಕೆ ಮಾಡುವ ಚಿತ್ರಗಳಲ್ಲಿ ಕೆಲವು ಸಿನಿಮಾದ ಮೂಲಭೂತ ಅಂಶಗಳೂ ಇಲ್ಲದ, ಬಾಲಿಶ ಚಿತ್ರಗಳಾಗಿದ್ದವು ಎನ್ನುವ ಆರೋಪ ಕಳೆದ ವರ್ಷ ಕೇಳಿಬಂದಿತ್ತು. ಸಮರ್ಥ ಸಿನಿಮಾ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ರಾಜ್ಯ, ದೇಶ, ವಿದೇಶಗಳ ಚಿತ್ರಗಳನ್ನು ಆಯ್ಕೆ ಮಾಡಿ ಪ್ರದರ್ಶಿಸಿದರೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುವುದರಲ್ಲಿ ಅನುಮಾನವಿಲ್ಲ.

ಮೈಸೂರು ದಸರಾ ಚಿತ್ರೋತ್ಸವವನ್ನು ರದ್ದುಪಡಿಸುವುದು ಸರಿಯಾದ ನಿರ್ಧಾರವಲ್ಲ. ದಸರಾ ಕೇವಲ ಆಚರಣೆಯಲ್ಲ; ಅದು ಕರ್ನಾಟಕದ ಸಾಂಸ್ಕ ತಿಕ ಪರಂಪರೆಯ ಪ್ರತೀಕ. ಅದರ ಅಂಗವಾಗಿ ನಡೆಯುವ ಚಿತ್ರೋತ್ಸವವೂ ಕೇವಲ ಸಿನಿಮಾಗಳ ಪ್ರದರ್ಶನವಲ್ಲ- ಮೈಸೂರಿನ ಪ್ರೇಕ್ಷಕರಿಗೆ ಮತ್ತು ದಸರಾ ನೋಡಲು ಬರುವ ಮಂದಿಗೆ, ವಿಶ್ವವನ್ನು ನೋಡುವ, ವಿಭಿನ್ನ ಬದುಕುಗಳನ್ನು ಅರಿಯುವ ಸಾಂಸ್ಕೃತಿಕ ಕಿಟಕಿ. ಚಲನಚಿತ್ರೋತ್ಸವದ ವೆಚ್ಚದ ಮಾತು. ಇದು ಅತಿ ಏನೂ ಅಲ್ಲ. ಒಂದು ವೇಳೆ ವೆಚ್ಚ ಕಡಿಮೆ ಮಾಡಬೇಕಾದರೆ ಕಾರ್ಯಕ್ರಮದ ಸ್ವರೂಪವನ್ನು ಬದಲಿಸಬಹುದು; ಆದರೆ ಇಂತಹ ಸಾಂಸ್ಕೃತಿಕ ಕಿಟಕಿಯನ್ನೇ ಮುಚ್ಚಬಾರದು. ಇದು ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತವಾಗಿರುವ ಮೈಸೂರಿನಲ್ಲಿ ನಾಡಹಬ್ಬ ದಸರಾ ಆಚರಣೆಯ ಜವಾಬ್ದಾರಿಯನ್ನು ಹೊತ್ತಿರುವ ಜಿಲ್ಲಾಡಳಿತದ ಸಾಂಸ್ಕ ತಿಕ ಹೊಣೆಗಾರಿಕೆ ಕೂಡ.

” ಮೈಸೂರು ದಸರಾ ಚಿತ್ರೋತ್ಸವವನ್ನು ರದ್ದುಪಡಿಸುವುದು ಸರಿಯಾದ ನಿರ್ಧಾರವಲ್ಲ. ದಸರಾ ಕೇವಲ ಆಚರಣೆಯಲ್ಲ; ಅದು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಅದರ ಅಂಗವಾಗಿ ನಡೆಯುವ ಚಿತ್ರೋತ್ಸವವೂ ಕೇವಲ ಸಿನಿಮಾಗಳ ಪ್ರದರ್ಶನವಲ್ಲ- ಮೈಸೂರಿನ ಪ್ರೇಕ್ಷಕರಿಗೆ ಮತ್ತುದಸರಾ ನೋಡಲು ಬರುವ ಮಂದಿಗೆ, ವಿಶ್ವವನ್ನು ನೋಡುವ, ವಿಭಿನ್ನ ಬದುಕುಗಳನ್ನು ಅರಿಯುವ ಸಾಂಸ್ಕೃತಿಕ ಕಿಟಕಿ.”

 

 

 

ಆಂದೋಲನ ಡೆಸ್ಕ್

Recent Posts

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

10 mins ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

14 mins ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

11 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

12 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

13 hours ago