ಎಡಿಟೋರಿಯಲ್

ಒಳಮೀಸಲಾತಿ: ಕರ್ನಾಟಕ ಮಾಡೆಲ್

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯ ಸೂತ್ರವನ್ನು ಹೆಣೆಯುವಲ್ಲಿ ಕರ್ನಾಟಕ ಸರ್ಕಾರ ಕೊನೆಗೂ ಯಶಸ್ವಿಯಾಗಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಬಲಗೈ, ಎಡಗೈಗೆ ತಲಾ ಶೇ.೫.೨೫ ಹಾಗೂ ಸ್ಪೃಶ್ಯ ಸಮುದಾಯಗಳಿಗೆ ಶೇ.೪.೫೦ ಮೀಸಲು ನಿಗದಿಪಡಿಸಿ ಸರ್ಕಾರ ನಿರ್ಧಾರ ಪ್ರಕಟಿಸಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಈ ಒಳಮೀಸಲಾತಿ ಜಾರಿಗೆ ಬರಲಿದೆ. ಒಳಮೀಸ ಲಾತಿಯ ವಿಚಾರದಲ್ಲಿ ಇದೊಂದು ಸಮಾಧಾನಕರ ಸೂತ್ರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇದೊಂದು ಐತಿಹಾಸಿಕ ನಿರ್ಣಯ ಎಂಬ ಬಣ್ಣನೆ.

ಪರಿಶಿಷ್ಟ ಜಾತಿಯಲ್ಲೇ ಒಳ ಮೀಸಲಾತಿ ಹೋರಾಟಕ್ಕೆ ಸುಮಾರು ೪೦ ವರ್ಷಗಳ ಇತಿಹಾಸವಿದೆ. ಒಳಮೀಸಲಾತಿ ನೀಡಲೇಬೇಕೆಂದು ಹೋರಾಟ ನಡೆಸಿಕೊಂಡು ಬಂದವರು ಪರಿಶಿಷ್ಟ ಜಾತಿಯಲ್ಲೇ ಎಡಗೈ ಸಮುದಾಯದವರು. ಅಂದರೆ ಮಾದಿಗ ಸಮುದಾಯದವರು. ಪರಿಶಿಷ್ಟ ಜಾತಿಯಲ್ಲಿ ಬಲಗೈ, ಎಡಗೈ ಸಮುದಾಯಗಳು, ಸ್ಪೃಶ್ಯ ಜಾತಿಗಳು, ಅಲೆಮಾರಿಗಳು ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಒಳಮೀಸಲಾತಿ ಜಾರಿ ಕುರಿತು ಕಾಂಗ್ರೆಸ್ ವಾಗ್ದಾನ ನೀಡಿತ್ತು.

ಒಳಮೀಸಲಾತಿ ಸಂಬಂಧ ಮೊದಲು ನ್ಯಾ.ಎ.ಜೆ.ಸದಾಶಿವ ಆಯೋಗ ತನ್ನವರದಿ ನೀಡಿತು. ಈ ವರದಿ ಜಾರಿಗೆ ಬರಲಿಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರ ವಿದ್ದಾಗ ಅಂದಿನ ಸಚಿವ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರ ಎಸ್‌ಸಿ ಮೀಸಲು ಪ್ರಮಾಣವನ್ನು ಶೇ.೧೫ ರಿಂದ ೧೭ಕ್ಕೆ, ಎಸ್‌ಟಿ ಮೀಸಲನ್ನು ಶೇ.೩ರಿಂದ ೭ಕ್ಕೆ ಹೆಚ್ಚಿಸುವ ಮಹತ್ವದ ತೀರ್ಮಾನ ಕೈಗೊಂಡಿತ್ತು. ಇದು ಪರಿಶಿಷ್ಟ ಜಾತಿ, ಪಂಗಡದವರ ಒಟ್ಟಾರೆ ಮೀಸಲು ಪ್ರಮಾಣವನ್ನು ಶೇ.೧೮ರಿಂದ ೨೪ಕ್ಕೆ ಹೆಚ್ಚಿಸಿತ್ತು. ಎಸ್‌ಸಿಯಲ್ಲಿ ಬಲಗೈಗೆ ಶೇ.೫.೫, ಎಡಗೈಗೆ ಶೇ.೬, ಸ್ಪೃಶ್ಯ ಜಾತಿಗಳಿಗೆ ಶೇ.೪.೫, ಇತರರಿಗೆ ಶೇ.೧ರಷ್ಟನ್ನು ಮೀಸಲುಗೊಳಿಸಿತ್ತು. ಇದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ನಿರ್ಧಾರವಾಗಿತ್ತು. ನಂತರ ಸಿದ್ದರಾಮಯ್ಯ ಸರ್ಕಾರ ನ್ಯಾ.ನಾಗಮೋಹನ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ವರದಿ ಪಡೆಯಿತು. ಆದರೆ, ವರದಿ ಜಾರಿಯಾಗ ಲಿಲ್ಲ. ಈಗ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಶೇ.೧೫ರ ಅಡಿ ಒಳಮೀಸಲಾತಿಯನ್ನು ಹಂಚಿದೆ. ಒಳ ಮೀಸಲಾತಿಯಂತಹ ಮಹತ್ವದ ನಿರ್ಧಾರ ವನ್ನು ಸರ್ಕಾರ ಕೈಗೊಳ್ಳುವುದರ ಹಿಂದೆ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಒಳಮೀಸಲಾತಿಯ ಈ ನಿರ್ಧಾರಕ್ಕೆ ವಿರೋಧ ಇಲ್ಲವೆಂದೇನೂ ಇಲ್ಲ. ನ್ಯಾ.ಎ.ಜೆ. ಸದಾಶಿವ ಹಾಗೂ ನ್ಯಾ.ನಾಗಮೋಹನದಾಸ್ ಆಯೋಗಗಳ ವರದಿಗಳಿಗೆ ಒಂದು ಆಧಾರ ಇತ್ತು. ಆದರೆ, ಈಗ ಒಳಮೀಸಲಾತಿ ಹಂಚಿಕೆಗೆ ಆಧಾರ ಏನು ಎಂಬ ಪ್ರಶ್ನೆಯೂ ಇದೆ. ನ್ಯಾ.ಸದಾಶಿವ ಆಯೋಗ, ನ್ಯಾ.ನಾಗಮೋಹನದಾಸ್ ಆಯೋಗ ಹಾಗೂ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಅಲೆಮಾರಿ ಸಮುದಾಯಕ್ಕೆ ಶೇ.೧ ಮೀಸಲಾತಿಯನ್ನು ಶಿಫಾರಸ್ಸು ಮಾಡಿತ್ತು. ಆದರೆ, ಈಗಿನ ಹಂಚಿಕೆಯಲ್ಲಿ ಈ ಪ್ರಸ್ತಾಪವೇ ಇಲ್ಲ. ಈಗ ಸ್ಪೃಶ್ಯ ಸಮುದಾಯಗಳಿಗೆ ಮೀಸಲಾದ ಶೇ.೪.೫೦ ವರ್ಗದಲ್ಲೇ ಅಲೆ ಮಾರಿಗಳು ಮೀಸಲು ಪಡೆಯಬೇಕಾಗಿದೆ.

ಇದು ಅಲೆಮಾರಿಗಳಿಗೆ ಅನ್ಯಾಯ ಮಾಡಿದಂತೆ ಎಂಬ ಕೂಗು ಮುಂದು ವರಿದಿದೆ. ಅಲೆಮಾರಿಗಳಿಗೆ ಶೇ.೧ ಮೀಸಲಾತಿ ಕೊಡಲು ಸಾಧ್ಯವಾಗುತ್ತಿಲ್ಲ ಏಕೆ? ಅಲೆ ಮಾರಿಗಳು ಅಸಂಘಟಿತರು, ಅಸಹಾಯಕರು ಎಂಬ ನಿರ್ಲಕ್ಷ್ಯವೇ? ಸಿ ಶ್ರೇಣಿಯ ಹುದ್ದೆಗಳಲ್ಲಿ ಶೇ.೨೦ರಷ್ಟು ಹುದ್ದೆಗಳನ್ನು ಸಿ ವರ್ಗದ ಪಟ್ಟಿಯಲ್ಲಿರುವ ೫೯ ಅಲೆಮಾರಿ ಜಾತಿಗಳಿಗೆ ಮೀಸಲಾಗಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದು ಸಮಾಧಾನದ ಸಂಗತಿ.

ಈ ಒಳಮೀಸಲಾತಿ ಕರ್ನಾಟಕದ ಮಾಡೆಲ್ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಒಳ ಮೀಸಲು ಜಾರಿ ಐತಿಹಾಸಿಕ ಹೆಜ್ಜೆ ಎಂದು ಸಚಿವ ಸತೀಶ್ ಜಾರಕಿಹೊಳಿ ಬಣ್ಣಿಸಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸಿದೆ. ಹೋರಾಟದ ಎಚ್ಚರಿಕೆಯನ್ನು ನೀಡಿದೆ. ರಾಜ್ಯದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಒಳಮೀಸಲಾತಿ ಹಂಚಿಕೆ ಅಂತ್ಯವಲ್ಲ, ಇದು ಆರಂಭ. ಸಮಾನತೆ, ಗೌರವ, ಹಕ್ಕುಗಳಿಗಾಗಿ ಹೋರಾಟ ಮಂದುವರಿಯಲಿದೆ ಎಂದು ಹೇಳಿರುವ ಮಾತು ಅರ್ಥಗರ್ಭಿತ. ಒಳಮೀಸಲಾತಿ ವಿಚಾರ ತೀರ್ಮಾನ ವಾಗಿರುವುದರಿಂದ ರಾಜ್ಯ ಸರ್ಕಾರ ಉದ್ಯೋಗ ನೇಮಕವನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಈಗಾಗಲೇ ಉದ್ಯೋಗಕ್ಕಾಗಿ ಯುವಜನರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಇದು ಮತ್ತಷ್ಟು ತೀವ್ರವಾಗದಂತೆ ಎಚ್ಚರಿಕೆ ವಹಿಸಿ ನೇಮಕಾತಿ ನಡೆಯಬೇಕಿದೆ.

” ಸಿದ್ದರಾಮಯ್ಯ ಸರ್ಕಾರದ ಒಳ ಮೀಸಲಾತಿಯ ಈ ನಿರ್ಧಾರಕ್ಕೆ ವಿರೋಧ ಇಲ್ಲವೆಂದೇನೂ ಇಲ್ಲ. ನ್ಯಾ.ಎ.ಜೆ.ಸದಾಶಿವ ಹಾಗೂ ನ್ಯಾ.ನಾಗಮೋಹನದಾಸ್ ಆಯೋಗಗಳ ವರದಿಗಳಿಗೆ ಒಂದು ಆಧಾರ ಇತ್ತು. ಆದರೆ, ಈಗ ಒಳ ಮೀಸಲಾತಿ ಹಂಚಿಕೆಗೆ ಆಧಾರ ಏನು ಎಂಬ ಪ್ರಶ್ನೆಯೂ ಇದೆ. ನ್ಯಾ.ಸದಾಶಿವ ಆಯೋಗ, ನ್ಯಾ.ನಾಗಮೋಹನದಾಸ್ ಆಯೋಗ ಹಾಗೂ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಅಲೆಮಾರಿ ಸಮುದಾಯಕ್ಕೆ ಶೇ.೧ ಮೀಸಲಾತಿಯನ್ನು ಶಿಫಾರಸ್ಸು ಮಾಡಿತ್ತು. ಆದರೆ, ಈಗಿನ ಹಂಚಿಕೆಯಲ್ಲಿ ಈ ಪ್ರಸ್ತಾಪವೇ ಇಲ್ಲ. ಈಗ ಸ್ಪೃಶ್ಯ ಸಮುದಾಯಗಳಿಗೆ ಮೀಸಲಾದ ಶೇ.೪.೫೦ ವರ್ಗದಲ್ಲೇ ಅಲೆಮಾರಿಗಳು ಮೀಸಲು ಪಡೆಯಬೇಕಾಗಿದೆ. ಇದು ಅಲೆಮಾರಿಗಳಿಗೆ ಅನ್ಯಾಯ ಮಾಡಿದಂತೆ ಎಂಬ ಕೂಗು ಮುಂದುವರಿದಿದೆ”

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

22 mins ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

4 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

4 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

4 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

4 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

5 hours ago