ಅಂಕಣಗಳು

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ 

೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ೧೯೯೯ರ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದರು. ಗೌರವ್ ಶುಕ್ಲಾರಿಗೂ ತಂದೆಯಂತೆಯೇ ಭಾರತೀಯ ಸೇನೆ ಸೇರಿ, ಹೆಮ್ಮೆಯಿಂದ ಸೇನಾ ಸಮವಸ್ತ್ರ ಧರಿಸಬೇಕೆಂಬ ಅಭಿಲಾಷೆ ಇತ್ತು. ಆದರೆ, ಹಲವು ಬಾರಿ ಪ್ರಯತ್ನಿಸಿದರೂ, ಆಯ್ಕೆ ಹಂತವನ್ನು ದಾಟಿ ಮುಂದಕ್ಕೆ ಹೋಗಲಾಗಲಿಲ್ಲ. ನಂತರ ಅವರು ಟಿವಿ ಕಾರ್ಯಕ್ರಮ ನಿರ್ಮಾಣದಲ್ಲಿ ಮಾಸ್ಟರ‍್ಸ್ ಪದವಿ ಪಡೆದು, ಮುಂಬೈಯಲ್ಲಿ ಟಿವಿ ಸರಣಿಗಳ ತಯಾರಿಕೆ ಉದ್ಯೋಗದಲ್ಲಿ ತಮ್ಮ ಬದುಕಿನ ದಾರಿಯನ್ನು ಕಂಡುಕೊಂಡರು. ಆದರೆ, ಸೈನ್ಯ ಸೇರಲಾಗದ ನಿರಾಶೆ ಅವರನ್ನು ಕಾಡುತ್ತಿತ್ತು.

೨೦೧೫ರಲ್ಲಿ ಗೌರವ್ ಶುಕ್ಲಾ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜಸ್ತಾನ,ಹರ‍್ಯಾಣ, ಹಿಮಾಚಲ ಪ್ರದೇಶ, ಉತ್ತರಕಾಂಡ ಹಾಗೂ ನೈಋತ್ಯ ರಾಜ್ಯಗಳ ಮಾಜಿ ಸೈನಿಕರು ನಡೆಸಿದ ‘ಒಂದು ರ‍್ಯಾಂಕ್ ಒಂದು ನಿವೃತ್ತಿ ವೇತನ’ಚಳವಳಿಯ ವರದಿ ಮಾಡಲು ಹೋಗಿದ್ದರು. ಆ ಚಳವಳಿ ಅವರಿಗೆ ಮಾಜಿ ಸೈನಿಕರ ನಿವೃತ್ತಿ ಬದುಕು ಎಷ್ಟು ದುಸ್ತರವಾದುದು ಎಂಬುದನ್ನು ತೋರಿಸಿಕೊಟ್ಟಿತು. ಅಲ್ಲಿ ಅವರು ೧೯೬೨, ೧೯೬೫ ಮತ್ತು ೧೯೭೧ರ ಯುದ್ಧಗಳಲ್ಲಿ ಭಾಗಿಯಾಗಿದ್ದ ಹರ‍್ಯಾಣದ ಒಂದು ಹಳ್ಳಿಯ ಮೂವರು ನಿವೃತ್ತ ಯೋಧರ ಒಂದು ವೀಡಿಯೊ ಮಾಡಿದರು. ಕರ್ನಲ್ ಒಬ್ಬರ ಹೆಂಡತಿ ಆ ವೀಡಿಯೊವನ್ನು ಹಂಚಿಕೊಂಡರು. ಆ ವೀಡಿಯೊವನ್ನು ನೋಡಿದ ಜೈಪುರದ ಉದ್ಯಮಿಯೊಬ್ಬರು ೫೦೦೦ ರೂಪಾಯಿಗಳನ್ನು ಅವರಲ್ಲಿನ ಒಬ್ಬ ಯೋಧರಿಗೆ ಕೃತಜ್ಞತೆಯ ದ್ಯೋತಕವಾಗಿ ಕಳಿಸಿಕೊಟ್ಟರು. ಹೀಗೆಯೇ, ಗೌರವ್ ಶುಕ್ಲಾ ಹಲವು ನಿವೃತ್ತ ಯೋಧರುಗಳ ದುಸ್ತರದ ಬದುಕಿನ ಬಗ್ಗೆ ವೀಡಿಯೋಗಳನ್ನು ಮಾಡಿ ಹಂಚಿಕೊಂಡರು. ಹಲವು ದಾನಿಗಳು ಸ್ಪಂದಿಸಿ, ಆ ಯೋಧರಿಗೆ ಹಣಕಾಸಿನ ನೆರವನ್ನು ಕಳಿಸಿಕೊಟ್ಟರು.

೨೦೧೯ರಲ್ಲಿ ದೆಹಲಿಯ ಕನ್ನಾಟ್ ಪ್ಲೇಸ್ ಹತ್ತಿರದ ಫುಟ್‌ಪಾತಲ್ಲಿ ತಗಡಿನ ಜೋಪಡಿಯಲ್ಲಿ ವಾಸಿಸುತ್ತಿದ್ದ ೭೫ ವರ್ಷ ಪ್ರಾಯದ ಒಬ್ಬ ವ್ಯಕ್ತಿಯ -ಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ಫೋಟೋದಲ್ಲಿ ಆತ ಹರಿದು ಚಿಂದಿಯಾದ ಬಟ್ಟೆ ಧರಿಸಿದ್ದು, ತಲೆಗೂದಲು ಕೆದರಿದ್ದು, ಊರುಗೋಲು ಹಿಡಿದು ಕುಳಿತು ಕೊಂಡಿದ್ದನು. ಹೆಚ್ಚಿನವರು ಅವನೊಬ್ಬ ಕುಡುಕ, ಸಮಾಜಕ್ಕೆ ಹೊರೆಯಾದ ಬೇಜವಾಬ್ದಾರಿ ಮನುಷ್ಯ ಎಂದೆಲ್ಲ ಕಮೆಂಟ್‌ಗಳನ್ನು ಬರೆದಿದ್ದರು.

ಆದರೆ, ನಂತರ ಗೊತ್ತಾಯಿತು ಆತ ಕೇರಳಂ ಮೂಲದ ಒಬ್ಬ ನಿವೃತ್ತ ಯೋಧ ಎಂದು. ಆತನ ಹೆಸರು ಪೀತಾಂಭರಮ್. ಭಾರತೀಯ ಸೈನ್ಯದ ‘ಸಿಗ್ನಲ್ ಕಾರ್ಪ್ಸ್’ ವಿಭಾಗದಲ್ಲಿ ಕೆಲಸ ಮಾಡುತ್ತ, ೧೯೬೫ ಮತ್ತು ೧೯೭೧ರ ಯುದ್ಧಗಳಲ್ಲಿ ಭಾಗವಹಿಸಿದ್ದನು. ನಂತರದ ವರ್ಷಗಳಲ್ಲಿ ಆತ, ಅನಾರೋಗ್ಯ ಪೀಡಿತಳಾಗಿ ಹಾಸಿಗೆ ಹಿಡಿದ ತನ್ನ ತಾಯಿಯ ಸೇವೆ ಮಾಡುವ ಸಲುವಾಗಿ ಸೈನ್ಯವನ್ನು ಬಿಟ್ಟನು. ಅದರಿಂದಾಗಿ ಆತ ಕಡ್ಡಾಯ ೧೫ ವರ್ಷಗಳ ಸೇವೆ ಪೂರ್ತಿ ಮಾಡಲು ಸಾಧ್ಯವಾಗದೆ, ಸೇನಾ ನಿವೃತ್ತಿ ಪಡೆಯಲು ಅನರ್ಹನಾದನು. ತಾಯಿಯ ಮರಣ ನಂತರ ಪೀತಾಂಭರಮ್ ದೆಹಲಿಗೆ ಬಂದು, ದಿನಗೂಲಿ ಮಾಡುತ್ತ ನಾಲ್ಕು ದಶಕಗಳನ್ನು ಕಳೆದನು. ಹೀಗೇ ಒಮ್ಮೆ ಕಟ್ಟಡದವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಆ ಕಟ್ಟಡ ಕುಸಿದು ಬಿದ್ದು, ಸೊಂಟದ ಮೂಳೆ ಮುರಿದು, ಶಸ್ತ್ರಚಿಕಿತ್ಸೆ ನಡೆದು, ಸ್ಟೀಲ್ ರಾಡನ್ನು ಅಳವಡಿಸಬೇಕಾಯಿತು. ಅಂದಿನಿಂದ ಅವನು ಊರುಗೊಲಿನ ಆಧಾರದಲ್ಲಿ ನಡೆಯುವುದು ಅನೀವಾರ್ಯವಾಯಿತು.

ಪೀತಾಂಭರಮ್ ಮುಂದೆ ಖಿನ್ನತೆಗೆ ಒಳಗಾಗಿ, ಮೂರು ಬಾರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರೂ ವಿ-ಲನಾದನು. ಕುಡಿದು ಸಾಯುವ ಆಲೋಚನೆ ಮಾಡಿ ಕುಡಿಯುವ ಅಭ್ಯಾಸ ಬೆಳೆಸಿಕೊಂಡನು. ಇದೆಲ್ಲ ತಿಳಿದದ್ದು ಗೌರವ್ ಶುಕ್ಲಾ ಆ ಫೋಟೋ ನೋಡಿ, ಒಂದು ವಾರ ಕಾಲ ಕಷ್ಟಪಟ್ಟು ಪೀತಾಂಭರಮ್‌ರನ್ನು ಪತ್ತೆ ಹಚ್ಚಿದ ಮೇಲೆ. ಗೌರವ್ ಶುಕ್ಲಾ ಮೊತ್ತ ಮೊದಲಿಗೆ ಪೀತಾಂಭರ್‌ರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಅವರ ಆರೋಗ್ಯದ ತಪಾಸಣೆ ನಡೆಸಿ ಉಚಿತವಾಗಿ ಸೂಕ್ತ ಔಷಧಿ ಸಿಗುವ ವ್ಯವಸ್ಥೆ ಮಾಡಿದರು. ನಂತರ, ಅವರ ದಿನನಿತ್ಯದ ಆಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಟ್ಟರು. ಇಷ್ಟೆಲ್ಲ ವ್ಯವಸ್ಥೆಗಳ ನಂತರ ಪೀತಾಂಭರ್‌ಮ್‌ರವರ ಜೀವನ ಕ್ರಮ ಬಹಳಷ್ಟು ಸುಧಾರಿಸಿತು. ಕುಡಿಯುವುದನ್ನು ಸಂಪೂರ್ಣವಾಗಿ ಬಿಟ್ಟರು. ಬೆಳಿಗಿನ ಹೊತ್ತು ಸಾಧ್ಯವಾದಷ್ಟು ನಡೆಯುತ್ತಾರೆ. ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದುತ್ತ, ಇದ್ದುದರಲ್ಲೇ ನಿಶ್ಚಿಂತವಾದ ಗೌರವಯುತವಾದ ಬದುಕನ್ನು ನಡೆಸುತ್ತಿದ್ದಾರೆ.

ಗೌರವ್ ಶುಕ್ಲಾ ತನ್ನ ಈ ಸೇವಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ‘ಸಪೋರ‍್ಟ್ ಅವರ್ ಹೀರೋಸ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಆಗ ಅವರಿಗೆ ೨೬ ವರ್ಷ ಪ್ರಾಯವಾಗಿತ್ತು. ಈಗ ಅವರಿಗೆ ೩೬ ವರ್ಷ ಪ್ರಾಯ. ಈ ಅವಧಿಯಲ್ಲಿ ಅವರು ೨೨ ರಾಜ್ಯಗಳ ಸುಮಾರು ೧೪೦ ಜನ ನಿವೃತ್ತ ಯೋಧರು ಮತ್ತು ಅವರ ಕುಟುಂಬಗಳಿಗೆ ಗೌರವಯುತವಾದ ಬದುಕನ್ನು ನಡೆಸಲು ನೆರವಾಗಿದ್ದಾರೆ. ಹೀಗೆ ಈ ನಿವೃತ್ತ ಯೋಧರಿಗೆ ಬದುಕು ಕಟ್ಟಿ ಕೊಡುವ ಮೂಲಕ ತನಗೆ ಸೇನೆಗೆ ಸೇರಲಾಗದ ಕೊರತೆಯನ್ನು ನೀಗಿಸಿಕೊಳ್ಳುತ್ತಿದ್ದಾರೆ. ಮತ್ತು, ತನ್ನನ್ನು ತಾನು ‘ಸಮವಸ್ತ್ರವಿಲ್ಲದ ಒಬ್ಬ ಸೈನಿಕ’ ಎಂದು ಕರೆದುಕೊಳ್ಳುತ್ತಾರೆ.

” ೨೨ ರಾಜ್ಯಗಳ ಸುಮಾರು ೧೪೦ ಜನ ನಿವೃತ್ತ ಯೋಧರು ಮತ್ತು ಅವರ ಕುಟುಂಬಗಳಿಗೆ ಗೌರವಯುತವಾದ ಬದುಕನ್ನು ನಡೆಸಲು ಗೌರವ್ ಶುಕ್ಲಾ ನೆರವಾಗಿದ್ದಾರೆ. ಹೀಗೆ ಈ ನಿವೃತ್ತಯೋಧರಿಗೆ ಬದುಕು ಕಟ್ಟಿ ಕೊಡುವ ಮೂಲಕ ತನಗೆ ಸೇನೆಗೆ ಸೇರಲಾಗದ ಕೊರತೆಯನ್ನು ಅವರು ನೀಗಿಸಿಕೊಳ್ಳುತ್ತಿದ್ದಾರೆ.”

 

 

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

4 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

8 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

8 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

8 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

8 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

8 hours ago