ಎಡಿಟೋರಿಯಲ್

ಹಾಲು ಕುಡಿದು ಆಸ್ಪತ್ರೆಗೆ ಸೇರಿದ ಮಕ್ಕಳು

ಮಾರನೇ ದಿನ ಬೆಳಿಗ್ಗೆ ನಡೆಸಿದ ಮಹಜರಿನಲ್ಲಿ ಅಮೆರಿಕದಿಂದ ಕಳುಹಿಸಿದ್ದ ಹಾಲಿನ ಡಬ್ಬಗಳನ್ನು ಪರಿಶೀಲಿಸಿದೆ. ಅನೇಕ ಡಬ್ಬಗಳ ಸೀಲ್ ಒಡೆದಿರಲಿಲ್ಲ. ಸೀಲ್ ಒಡೆದಿದ್ದ ಐದು ಕೆ.ಜಿ. ಡಬ್ಬಾದಿಂದ ಹಾಲಿನ ಪುಡಿ ತೆಗೆದು ಹಾಲು ಮಾಡಿ ಕೊಟ್ಟಿದ್ದರು. ಮೂರ್ನಾಲ್ಕು ದಿನಗಳಿಂದ ಮಕ್ಕಳು ಅದೇ ಡಬ್ಬಾದ ಹಾಲನ್ನೇ ಕುಡಿದಿದ್ದಾರೆ. ಯಾರಿಗೂ ಏನೂ ಆಗಿಲ್ಲ! ಅಂದರೆ ನಿನ್ನೆ ಕುಡಿದ ಹಾಲಿಗೆ ಯಾರಾದರೂ ವಿಷವಸ್ತು ಬೆರೆಸಿದ್ದರೇ?

ಇಡೀ ಶಾಲೆಯನ್ನು ಶೋಧಿಸಿದೆವು. ಹಾಲಿನ ಪುಡಿಯ ಸ್ಯಾಂಪಲ್‌ಗಳನ್ನು ತಜ್ಞರ ಪರಿಶೀಲನೆಗೆ ಕಳುಹಿಸಿ ಕೊಡಲು, ಪ್ರತ್ಯೇಕವಾಗಿ ಸೀಲ್ ಮಾಡಿ ತೆಗೆದಿಟ್ಟೆವು.

ಸ್ಥಳಕ್ಕೆ ಬಂದಿದ್ದ ಶಿಕ್ಷಣಾಧಿಕಾರಿಗಳು ತಮ್ಮ ಜೊತೆಗೆ ಡ್ರಗ್ಸ್ ಕಂಟ್ರೋಲರ್ ಅವರನ್ನೂ ಕರೆತಂದಿದ್ದರು. ಎರಡು ಒಡೆದ ಡಬ್ಬಗಳಲ್ಲಿದ್ದ ಹಾಲಿನ ಪುಡಿಯನ್ನು ನೋಡಿದ ತಕ್ಷಣ ಆ ಡ್ರಗ್ಸ್ ಕಂಟ್ರೋಲರ್, ‘ಇದು ಕೆಟ್ಟು ಹೋಗಿದೆ. food poisonಆಗಲು ಇದೇ ಕಾರಣ’ ಅಂದರು.

‘ನೋಡಿ ಹಾಲಿನ ಪುಡಿ ಗಡ್ಡೆ ಕಟ್ಟಿಕೊಂಡಿದೆ. ಮುಚ್ಚಳವನ್ನು ತೆಗೆದ ಮೇಲೆ ಸರಿಯಾಗಿ ಮುಚ್ಚದೆ ತೇವಾಂಶದಲ್ಲಿ ಇಟ್ಟಿದ್ದಾರೆ. ಬೂಷ್ಟು ಕೂಡ ಬಂದಿರಬಹುದು. ರಾಸಾಯನಿಕ ಪರೀಕ್ಷೆಯಲ್ಲಿ ಅದು ಗೊತ್ತಾಗುತ್ತದೆ’ ಎಂದವರೇ ಹಾಲಿನ ಡಬ್ಬವನ್ನು ಪರಿಶೀಲಿಸಿ, ‘ಇಲ್ನೋಡಿ’ ಎಂದರು.

ಇಷ್ಟು ದಿನದೊಳಗೆ ಬಳಸಿದರೆ ಉತ್ತಮ ಎಂಬ ಒಕ್ಕಣೆ ಅದರಲ್ಲಿತ್ತು. ಎಕ್ಸ್ ಪೈರಿ ದಿನಾಂಕ ನೋಡಿದ ನಮ್ಮ ದಿಗ್ಭ್ರಮೆಗೆ ಪಾರವೇ ಇರಲಿಲ್ಲ. ಕೊನೆಯ ದಿನಾಂಕ ಮುಗಿದು ಕೇವಲ ನಾಲ್ಕು ದಿನಗಳಾಗಿತ್ತು!

‘ನಾಲ್ಕೇ ದಿನಕ್ಕೆpoisonous ಆಗಿಬಿಡುತ್ತಾ ಸರ್?’ ಕೇಳಿದೆ.

‘ಸಾಮಾನ್ಯವಾಗಿ expiry date ಮುಗಿದ ನಂತರವೂ ಒಂದೆರಡು ತಿಂಗಳು ಗಟ್ಟಿ ಮಾತ್ರೆಗಳನ್ನು ತಿನ್ನಬಹುದು. ಅದರ ಪ್ಯಾಕಿಂಗ್ ಸರಿಯಾಗಿರಬೇಕು. ಆದರೆ ದ್ರವ ಪದಾರ್ಥಗಳು, ಈ ಬಗೆಯ ಹಾಲಿನ ಪುಡಿ, ಕಣ್ಣಿನ ಔಷಧ ಇತ್ಯಾದಿಗಳು ಬಹು ಬೇಗ ಕೆಟ್ಟುಹೋಗುತ್ತವೆ. ಮುಚ್ಚಳವನ್ನು ಬಿಗಿಯಾಗಿ ಹಾಕದಿದ್ದರೂ ಅದರ ಕ್ಷಮತೆ ಕಡಿಮೆಯಾಗುತ್ತದೆ. ಕೆಟ್ಟು ಕೆರ ಹಿಡಿದು ಬಿಡುತ್ತವೆ. ಇವುಗಳ ವಿಚಾರದಲ್ಲಿ ತುಂಬ ಮುಂಜಾಗ್ರತೆ ಇರಬೇಕಾಗುತ್ತದೆ. ಸರಿಯಾಗಿ ಭದ್ರಪಡಿಸದಿದ್ದರೆ expiry date ತುಂಬ ದೂರದಲ್ಲಿದ್ದರೂ ಕೆಟ್ಟು ಹೋಗಿಬಿಡುತ್ತವೆ. ನೋಡಿ, ಈ ಹಾಲಿನ ಪುಡಿಯ expiry date ಮುಗಿದು ಕೇವಲ ನಾಲ್ಕು ದಿನಗಳಾಗಿವೆ. ಮುಚ್ಚಳ ತೆಗೆದ ಮೇಲೆ ಅವರು ಸರಿಯಾಗಿ ಭದ್ರಪಡಿಸಿಲ್ಲ. ಹಾಗೇ ಗಾಳಿಗೆ ನಾಲ್ಕಾರು ಬಾರಿ ಲೂಸಾಗಿ ತೆರೆದಿಟ್ಟಿದ್ದಾರೆ. ತೇವಾಂಶ ಇರುವ ಜಾಗದಲ್ಲಿ ತೆರೆದಿಟ್ಟಿದ್ದಾರೆ. ಹಾಲಿನ ಪುಡಿ ಉಂಡೆಗಟ್ಟಿ ಬೂಷ್ಟು ಬಂದು ಕೆಟ್ಟು ಹೋಗಿದೆ’

‘ಹಾಗಿದ್ರೆ ನೀವೇ ಒಂದು ಸರ್ಟಿಫಿಕೇಟ್ ಕೊಡಬಹುದಲ್ಲವೇ?’

‘ಇಲ್ಲ, ಮೇಲ್ಮೆ ಲಕ್ಷಣ ನೋಡಿ ನಾನು ಹೇಳಿದ್ದಷ್ಟೇ. ನಾನಿರೋದು ಬೆಂಗಳೂರಿನಲ್ಲಿ. ರಜೆ ಮೇಲೆ ಮೈಸೂರಿಗೆ ಬಂದಿದ್ದೆ. ಶಿಕ್ಷಣಾಽಕಾರಿಗಳು ನನ್ನ ಬಾಲ್ಯ ಸ್ನೇಹಿತರು. ನನ್ನನ್ನೂ ಜೊತೆಯಲ್ಲಿ ಕರೆತಂದರು. ಡ್ರಗ್ಸ್ ಬಗ್ಗೆ ಒಂದು ಐಡಿಯಾ ಇದೆ. ಆದರೆ ನಾನೇನು ತಜ್ಞನಲ್ಲ. ಇದನ್ನು ರೆಗ್ಯುಲರ್ ರಾಸಾಯನಿಕ ಪರೀಕ್ಷೆಯಿಂದಲೇ ತಿಳಿಯಬೇಕು’ ಎಂದರವರು.

ನಾನೆಂದೆ, ‘ಒಂದು ಗೊಂದಲ ಸಾರ್. ಕೆಲವು ಆಹಾರ ಪದಾರ್ಥಗಳು, ಮಾತ್ರೆಗಳು ಇವುಗಳ ಮೇಲೆ ಇರುವ expiry date ಸರಿಯಾಗಿ ಗೊತ್ತಾ ಗುವುದಿಲ್ಲ. ಇದು ಸೇವನೆಗೆ ಯೋಗ್ಯ ಎಂದು ತಿಳಿಯುವ ಬಗೆ ಹೇಗೆ?’

‘ಆಗ್ಲೇ ಹೇಳಿದಂತೆ ನಾನು ತಜ್ಞನಲ್ಲ. ಆದರೆ ಅನುಭವದ ಮೇಲೆ ಹೇಳುವುದಾದರೆ ಪ್ಯಾಕೆಟ್ ಅಥವಾ ಡಬ್ಬಾದಲ್ಲಿರುವ ಆಹಾರ ಪದಾರ್ಥಗಳು, ಸ್ನೋ ಕ್ರೀಂ ಇತ್ಯಾದಿ ಸೌಂದರ್ಯ ವರ್ಧಕಗಳನ್ನು ಹೊರ ನೋಟದಲ್ಲೇ ಅಂದಾಜು ಮಾಡಬಹುದು. ಕ್ರೀಂಗಳು ಒಡಕು ಹಾಲಿನಂತೆ ಹಳಿಗಟ್ಟಿದೆ ಎಂದರೆ ಕೆಟ್ಟು ಹೋಗಿದೆ ಎಂದೇ ತಿಳಿಯಬೇಕು. ಒಂಥರಾ ಅಹಿತಕರ ವಾಸನೆ ಇರುತ್ತೆ. ಅವುಗಳನ್ನು ಸೇವಿಸುವುದಾಗಲೀ, ಚರ್ಮಕ್ಕೆ ಲೇಪಿಸುವುದಾಗಲೀ ಮಾಡಕೂಡದು. ಒಟ್ಟಾರೆ expiry date ಕಾಣುತ್ತೋ ಬಿಡುತ್ತೋ, ನಮ್ಮ ಕಣ್ಣು ಮತ್ತು ಮೂಗು ಎರಡೇ ಬಲಿಷ್ಠ ಟೆಸ್ಟಿಂಗ್ ಸಾಧನಗಳು! ದುಡ್ಡುಕೊಟ್ಟು ಕಾಯಿಲೆ ಕೊಳ್ಳುವುದಕ್ಕೆ ಆಗೋದಿಲ್ಲ ನೋಡಿ. ಆಮೇಲೆ ಇನ್ನೊಂದು ವಿಷಯ. ಮಾಂಸ ಮಡ್ಡಿಗಳನ್ನು ವಾರಗಟ್ಟಲೇ ಫ್ರೀಜರ್‌ನಲ್ಲಿಟ್ಟಿರುತ್ತಾರೆ. ಸರಿಯಾಗಿ ಭದ್ರಪಡಿಸಿ ಇಡದಿದ್ದರೆ ನೀರು ಬಿಟ್ಟುಕೊಂಡು ಕೆಟ್ಟು ಹೋಗಿಬಿಡುತ್ತವೆ. ಅದರ ಹುಳಿವಾಸನೆಯಲ್ಲೇ ಹೇಳಿಬಿಡಬಹುದು. ಕೊಯ್ದ ಎಂಟ್ಹತ್ತು ಗಂಟೆಗಳ ನಂತರ ಮಾಂಸ ಒಳಿತಲ್ಲ’ ಹೀಗೇ ನಾನಾ ವಿಷಯ ಹೇಳುತ್ತಾ ಹೋದರು.

‘ಅದರೂ ಒಂದು ಪ್ರಶ್ನೆ ಸಾರ್. ಕೆಲವು ಪದಾರ್ಥಗಳ ಮೇಲೆ ಇಷ್ಟು ತಿಂಗಳೊಳಗೆ ಬಳಸಿದರೆ ಉತ್ತಮ ಅಂತಿರುತ್ತೆ. expiry date ಇರೋದಿಲ್ಲ. ಅದರಾಚೆ ಬಳಸಿದರೆ ವಿಷಕಾರಿ ಅಂತೇನೂ ಇರೋದಿಲ್ಲ. ಅಂಥವನ್ನು ಬಳಸಿದರೆ ಅನಾಹುತವೇನೂ ಆಗೋದಿಲ್ಲ ಅಂತ ಕೆಲವರು ಹೇಳ್ತಾರಲ್ಲಾ?’

‘ನಮ್ಮ ದೇಹದೊಳಕ್ಕೆ ಸೇವಿಸುವ ಅಥವಾ ಚರ್ಮಕ್ಕೆ ಹಚ್ಚುವ ಯಾವುದೇ ವಸ್ತುವಿನ ಬಗ್ಗೆ ಹುಷಾರಾಗಿರಲೇ ಬೇಕು. ಏಕದಂ ಯಾರೂ ಸಾಯೋದಿಲ್ಲ ನಿಜ. ಕ್ಯಾನ್ಸರ್, ಸ್ಟ್ರೋಕ್, ಲಿವರ್, ಕಿಡ್ನಿ ಹೀಗೆ ಏನು ಬೇಕಾದರೂ ಮುಂದೆ ತೊಂದರೆ ಆಗಬಹುದು. ಕರೆಂಟ್ ಬೇಲಿ ಹಾಕಿದ ಮೇಲೆ ಮುಟ್ಟಲು ಹೋಗಬಾರದು. ಕೂಡದು ಅಂದ್ರೆ ಕೂಡದು ಅಷ್ಟೇ’ ಮಾತು ಮುಗಿಸಿದರು.

ತಜ್ಞರ ವರದಿ ಬಂತು. ಆ ಹಾಲಿನ ಪುಡಿ ಮನುಷ್ಯ ಸೇವನೆಗೆ ಹಾನಿಕರ ಎಂದಿದ್ದರಿಂದ ದೋಷಾರೋಪಣೆ ಪತ್ರ ಸಲ್ಲಿಸಿದೆ.

lokesh

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

46 mins ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

48 mins ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

50 mins ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

53 mins ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

58 mins ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

1 hour ago