ಜಿಲ್ಲೆಗಳು

ಸಂಗೀತದ ಸುರಿಮಳೆ ಸುರಿಸಿದ ಸೋನು ನಿಗಮ್

ಮೈಸೂರು: ಹೊರಗಿನ ವಾತಾವರಣ ಮೊಡ ಕವಿದ ವಾತಾವರಣವಿದ್ದರೂ ಧಾರಾಕಾರವಾಗಿ ಸುರಿದಿದ್ದು ಮಾತ್ರ ಗಾಯಕ ಸೋನು ನಿಗಮ್ ಹಾಗೂ ಡಾ.ಶಮಿತ ಮಲ್ನಾಡ್ ಅವರ ಕಂಠಸಿರಿಯಿಂದ ಬಂದ ಸಂಗೀತದ ಸುರಿಮಳೆ ಹಾಗೂ ಕನ್ನಡ ಚಿತ್ರರಂಗದ ನಟರಾದ ಧ್ರುವ ಸರ್ಜಾರ ಆಗಮನದಿಂದ ಬಂದ ಶಿಳ್ಳೆ, ಚಪ್ಪಾಳೆಗಳಿಂದ.

ನಗರದ ಮಹಾರಾಜ ಮೈದಾನದಲ್ಲಿ 5ನೇ ದಿನದ ಯುವ ದಸರಾದಲ್ಲಿ ಕಂಡುಬಂದ ದೃಶ್ಯ. ಧೃವ ಸರ್ಜಾ ಅವರು ವೇದಿಕೆಯ ಮೇಲೆ ಹೆಜ್ಜೆ ಹಾಕಿ ಬರುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳಿಗಾಗಿ ತಮ್ಮದೆ ಚಿತ್ರದ ಡೈಲಾಗ್ ಹೊಡೆದು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಮೈಸೂರಿನ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರ ತಂಡವು ಕರ್ನಾಟಕದ ಚರಿತ್ರೆಯನ್ನು ಸಾರುವ ಹಾಗೂ ಕರ್ನಾಟಕವನ್ನು ಆಳಿದ ರಾಜ ಮಹಾರಾಜರ ಸಾಹಸಗಾಥೆಗಳನ್ನು ಆಯ್ದ ಚಿತ್ರೆಗೀತೆಗಳ ಮೂಲಕ ಅದ್ಭುತವಾಗಿ ನೃತ್ಯದ ಮೂಲಕ ಪ್ರದರ್ಶಿಸಿ ದಸರಾಗೆ ಆಗಮಿಸುತ್ತಿದ್ದ ಸಭಿಕರನ್ನು ಸ್ವಾಗತಿಸಿದರು.

ನಂತರ ಸೋನು ನಿಗಮ್ ಅವರು ಬರುತ್ತಿದ್ದಂತೆ ಪ್ರತಿಯೊಬ್ಬರೂ ಎದ್ದು ನಿಂತು ಸ್ವಾಗತಿಸಿದರೆ ಸೋನು ನಿಗಮ್ ಅವರು ಹಾಡಿನ ಮೂಲಕವೇ ತಮ್ಮದೆ ಆದ ಸಂಗೀತ ಲೋಕಕ್ಕೆ ಎಲ್ಲರನ್ನು ಕರೆದೊಯ್ದು ರಂಜಿಸಿದರು.

 

ಕನ್ನಡಿಗರು ಕೇವಲ ನನ್ನ ಅಭಿಮಾನಿಗಳಲ್ಲ. ನನ್ನ ಮನೆಯವರಿದ್ದಂತೆ. ನನಗೂ ಕನ್ನಡಕ್ಕೂ ಹಾಗೂ ಕನ್ನಡಿಗರಿಗೂ ಅವಿನಾಭಾವ ಸಂಬಂದವಿದೆ ಎಂದು ಹೇಳಿ ತಮ್ಮ ಪ್ರೀತಿಯನ್ನು ಎಲ್ಲರ ಮುಂದೆ ವ್ಯಕ್ತಪಡಿಸಿದರು.

ಗೆಳೆಯ ಚಿತ್ರದ ಈ ಸಂಜೆ ಯಾಕಾಗಿದೆ, ಗಣೇಶ್ ಚಿತ್ರದ ನೀ ಸನಿಹಕೆ ಬಂದರೆ ಹೃದಯದ ಗತಿ ಏನು ಹೇಳು ನೀನು, ಅನಿಸುತಿದೆ ಯಾಕೋ ಇಂದು ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ, ಪುನೀತ್ ರಾಜ್‍ಕುಮಾರ್ ಅಭಿನಯದ ಪರಮಾತ್ಮ ಚಿತ್ರದ ಪರವಶನಾದೆನು ಅರಿಯುವ ಮುನ್ನವೆ, ಸುದೀಪ್ ಚಿತ್ರದ ಏನಾಗಲಿ ಮುಂದೆ ಸಾಗು ನೀ ಬಯಸಿದ್ದೆಲ್ಲ ಸಿಗದು ಬಾಳಲಿ ಸೇರಿದಂತೆ ಅನೇಕ ಹಾಡುಗಳನ್ನು ಹಾಡಿ ರಸದೌತಣವನ್ನು ಉಣ ಬಡಿಸಿದರು.

ಬೆಳ್ಳಿ ಕಾಲುಂಗುರ ಚಿತ್ರದ ಕೇಳಿಸದೆ ಕಲ್ಲು ಕಲ್ಲಿನಲ್ಲಿ, ಮಹದೇಶ್ವರ ಕುರಿತ ಜಾ‌ಪದ ಗೀತೆಯಾದ ಚೆಲ್ಲಿದರೂ ಮಲ್ಲಿಗೆಯಾ ಹಾಡಿಗೆ ಹಾಗೂ ಜೋಗಿ ಚಿತ್ರದ ಏಳು ಮಲೆ ಏರಿ ಕುಂತಾವ್ನೆ ಮಾದೇವ ಹಾಡಿಗೆ, ರಂಗಿತರಂಗ ಚಿತ್ರದ ಹಾಡಿಗೆ ಮತ್ತು ಕೊಡವ ನೃತ್ಯ ಸೇರಿದಂತೆ ಕರ್ನಾಟಕದ ಹಲವಾರು ಸ್ಥಳೀಯ ನೃತ್ಯಗಳನ್ನು ಅಮೋಘವಾಗಿ ಪ್ರದರ್ಶಿಸಿದ ಮೈಸೂರಿನ ಶ್ರೀ ವಾಣಿ ವಿಲಾಸ ಅರಸು ಪ್ರಥಮ ದರ್ಜೆ ಕಾಲೇಜಿನ ತಂಡದವರು ನೆರೆದಿದ್ದ ಜನರನ್ನು ರಂಜಿಸಿದರು.

ಜೀ ಕನ್ನಡ ಖ್ಯಾತಿಯ ಪುರುಷೋತಮ್ ಅವರ ತಂಡದ ಪ್ರೀಯ ಅವರು ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ನಿನ್ನ ನೋಡಿ ಸುಮ್ನೆ ಹೆಂಗಿರಲಿ, ಪುರುಷೋತ್ತಮ್ ಅವರು ಹಾಗೂ ಪ್ರೀಯಾ ಕಿಚ್ಚ ಸುದೀಪ್ ಚಿತ್ರದ ರಾರಾ ರಕ್ಕಮ್ಮ, ಶರಣ್ ಚಿತ್ರದ ಯಕ್ಕ ನಿನ್ ಮಗ್ಳು ನಂಗೆ ಚಿಕ್ಕವಳಬಲ್ವ ಮತ್ತು ಏಕ್ ಲವ್ಯ ಚಿತ್ರದ ಅನಿತಾ ಓ ಅನಿತಾ ಹಾಡನ್ನು ಹಾಡುವುದರ ಜೊತೆಗೆ ಮನಮೋಹಕವಾಗಿ ನರ್ತಿಸಿದರು.

ಜೋಗಿ ಸುನೀತ ಅವರು ಜೋಗಿ ಚಿತ್ರದ ಎಲ್ಲೋ ಜೋಗಪ್ಪ ನಿನ್ ಅರಮನೆ ಹಾಡನ್ನು ಹಾಡಿದರೆ, ಗಣೇಶ್ ಕಾರಂತ್ ಅವರು ರವಿಚಂದ್ರನ್ ಅವರ ಯಾರೇ ನೀನು ರೋಜಾ ಹೂವೆ ಹಾಡನ್ನು ಹಾಡಿದರು. ಬಿಗ್ ಬಾಸ್ ಸ್ಪರ್ಧಿ ಕಿಶನ್ ಅವರು ಕೆ.ಜಿ.ಎಫ್2 ಹಾಗೂ ವಿಕ್ರಾಂತ್ ರೋಣ ಮತ್ತು ಟಗರು ಚಿತ್ರದ ಹಾಡಿಗೆ ಕುಣಿದು ನೋಡುಗರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.

ರತ್ನನ್ ಪ್ರಪಂಚ ಚಿತ್ರದ ನಟರಾದ ಉಡಾಳ್ ಬಾಬು ಎಂದೆ ಖ್ಯಾತಿ ಪಡೆದ ಪ್ರಮೋದ್ ಅವರು ಮಾತನಾಡಿ, ಮೈಸೂರು ಜನರಿಗೆ ತುಂಬಾ ಎನರ್ಜಿಯಿದ್ದು, ಎಲ್ಲವನ್ನು ಮರೆತು ಒಂದಾಗಿ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಾರೆ ಎಂದು ಹೇಳಿ ರತ್ನನ್ ಪ್ರಪಂಚ ಚಿತ್ರದ ಡೈಲಾಗ್ ಹೊಡೆದು ತಮ್ಮ ಚಿತ್ರದ ಬಗ್ಗೆ ಮಾತನಾಡಿದರು.

ಸಚಿವರು, ಶಾಸಕರು, ಯುವ ದಸರಾದ ಉಪಸಮಿತಿಯ ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷ ಬದ್ರೀಶ್, ಡಾ.ನಿಂಗರಾಜು ಸೇರಿದಂತೆ ಇತರರು ಹಾಜರಿದ್ದರು.

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

11 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

11 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

12 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

13 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

18 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

18 hours ago