ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್
ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈಗ ಸವಾಲಾಗಿರುವುದು ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್) ಪ್ರಶ್ನೆಪತ್ರಿಕೆಗಳು ಸೋರಿಕೆ ಆದ ಘಟನೆಯ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿ. ವೈದ್ಯಕೀಯ ಪದವಿ ಶಿಕ್ಷಣ ಪ್ರವೇಶಕ್ಕೆ ನಡೆಯುವ ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ದೇಶದಾದ್ಯಂತ ಮುಖ್ಯವಾಗಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಈಗ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದೆ. ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕುವ ಯತ್ನದಿಂದ ಪಾರಾಗುವ ಹತ್ತಾರು ಹಾದಿ ಹುಡುಕಾಟದಲ್ಲಿ ಅದೀಗ ಮಗ್ನವಾದಂತಿದೆ.
ವೈದ್ಯಕೀಯ ಶಿಕ್ಷಣದ ಆಸೆಯಿಂದ ಪ್ರವೇಶ ಪರೀಕ್ಷೆಗಾಗಿ ಹಗಲು ರಾತ್ರಿ ಓದಿ ಪರೀಕ್ಷೆಗೆ ಸಿದ್ಧರಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದ ಈ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಸುಮಾರು ಇಪ್ಪತ್ತು ಮಂದಿ ವಿದ್ಯಾರ್ಥಿಗಳು ಈಗಾಗಲೇ ಆತ್ಮಹತ್ಯೆಗೆ ಶರಣಾಗಿzರೆ. ಆ ನಂತರ ದೇಶದ ಹಲವೆಡೆ ಭುಗಿಲೆದ್ದ ವಿರೋಧದ ನಂತರ ಮೇ ತಿಂಗಳ ೧೩ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದುಪಡಿಸಿ ಮತ್ತೆ ಪ್ರವೇಶ ಪರೀಕ್ಷೆ ನಡೆಸಿದ್ದರಿಂದ ಸಮಸ್ಯೆ ಬಗೆಹರಿಯಿತು ಎಂದು ಕೇಂದ್ರ ಸರ್ಕಾರ ನಂಬಿತ್ತು. ಆದರೆ ಈ ಘಟನೆಯನ್ನು ಸರ್ಕಾರ ಲಘುವಾಗಿ ಪರಿಗಣಿಸಿದ್ದರಿಂದ ದೇಶದಾದ್ಯಂತ ವಿದ್ಯಾರ್ಥಿ ಹೋರಾಟ ಸಂಘಟಿತವಾಗಿ ಭುಗಿಲೇಳುತ್ತಿರುವುದು ಆಳುವವರ ನಿದ್ದೆಗೆಡಿಸಿದೆ.
ಈಗಾಗಲೇ ಶ್ರೀಲಂಕಾ, ಬಾಂಗ್ಲಾ ಮತ್ತು ನೇಪಾಳದಲ್ಲಿ ಭ್ರಷ್ಟ ಆಡಳಿತ ವ್ಯವಸ್ಥೆಯ ಬದಲಾವಣೆಗಾಗಿ ಬಿಸಿರಕ್ತದ ಯುವಕರು ಜೆನ್ ಝೀ ( ೧೯೯೦ರ ನಂತರ ಹುಟ್ಟಿದ ಯುವ ಪೀಳಿಗೆ) ನಡೆಸಿದ ಹೋರಾಟದ ಕಿಡಿ ಭಾರತದಲ್ಲೂ ಕಾಣಿಸಿಕೊಳ್ಳುತ್ತಿದೆಯೇ ಎನ್ನುವ ಆತಂಕದಿಂದ ಈಗ ಸರ್ಕಾರದ ಮೈಯೆಲ್ಲ ಕಣ್ಣಾಗಿದೆ. ಯುವಕರು ಮತ್ತು ವಿದ್ಯಾರ್ಥಿಗಳ ಹೋರಾಟ ಎಂದರೆ ಸರ್ಕಾರ ಬೆಚ್ಚಿಬೀಳುತ್ತಿದೆ.
ದೆಹಲಿಯಲ್ಲಿ ಈ ತಿಂಗಳ ೨೩ರಂದು ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕಲು ವಿದ್ಯಾರ್ಥಿಗಳ ಮೇಲೆ ನಡೆದ ಅಮಾನುಷ ಪೊಲೀಸ್ ದೌರ್ಜನ್ಯವನ್ನು ನೋಡಿದರೆ ದೇಶದಲ್ಲಿ ಪ್ರಜಸತ್ತಾತ್ಮಕವಾಗಿ ನಡೆಯುವ ನಾಗರಿಕ ಸರ್ಕಾರ ಇದೆಯೇ ಎನ್ನುವ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ವಿದ್ಯಾರ್ಥಿನಿಯರ ಮೇಲೆ ನಡೆದ ಪೊಲೀಸ್ ದರ್ಪ, ಲಾಠಿ ಚಾರ್ಜ್, ವಿದ್ಯಾರ್ಥಿಗಳನ್ನು ಚದುರಿಸಲು ಬಳಸಿದ ಅಸಗಳು ಸರ್ಕಾರದ ಆತ್ಮವನ್ನು ಚುಚ್ಚಿದಂತೆ ಕಾಣುತ್ತಿಲ್ಲ. ಸರ್ಕಾರದ ಸ್ಪಷ್ಟ ಸೂಚನೆ ಇಲ್ಲದೆ ಪೊಲೀಸರು ಮೃಗಗಳಂತೆ ವರ್ತಿಸಿರಲಾರರು. ಪೊಲೀಸರ ಈ ದೌರ್ಜನ್ಯದಿಂದ ನ್ಯಾಯಕ್ಕಾಗಿ ಬೀದಿಗಿಳಿದ ವಿದ್ಯಾರ್ಥಿಗಳು ಎದೆಗುಂದದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದು ತಮ್ಮ ಬದ್ಧತೆಯನ್ನು ತೋರಿರುವುದು ಅವರ ಹೋರಾಟದ ಪ್ರಾಮಾಣಿಕತೆ ಸ್ಪಷ್ಟವಾಗಿ ಅನಾವರಣಗೊಂಡಿದೆ.
ಪೊಲೀಸರು ನಡೆಸಿದ ಈ ದೌರ್ಜನ್ಯವನ್ನು ಕೆಲವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದಾಗ ಈ ಪ್ರಕರಣವನ್ನು ನ್ಯಾಯಾಲಯ ತಕ್ಷಣ ವಿಚಾರಣೆಗೆ ಎತ್ತಿಕೊಳ್ಳಲಿಲ್ಲ. ಮೂರು ದಿನಗಳ ಹಿಂದೆ ವಿದ್ಯಾರ್ಥಿಗಳ ಪರವಾಗಿನ್ಯಾಯವಾದಿಗಳು ಈ ಪ್ರಕರಣವನ್ನು ನ್ಯಾಯಾಲಯದ ಮುಂದೆ ಮಂಡಿಸಿದಾಗ ಮುಖ್ಯ ನ್ಯಾಯಮೂರ್ತಿಗಳು ನಮ್ಮ ಸಮಯವನ್ನು ಹಾಳು ಮಾಡಬೇಡಿ. ಪೊಲೀಸರು ನಡೆಸಿದರೆನ್ನಲಾದ ದೌರ್ಜನ್ಯದ ವಿಡಿಯೋಗಳನ್ನು ನೋಡಲು ನಮಗೆ ಸಮಯವಿಲ್ಲ ಎಂದು ಈ ಮನವಿಯನ್ನು ತಿರಸ್ಕರಿಸಿದಾಗ ಬಿಜೆಪಿ ಸರ್ಕಾರ, ಬಿಜೆಪಿ ಮತ್ತು ಪೊಲೀಸ್ ವ್ಯವಸ್ಥೆ ಖುಷಿ ಪಟ್ಟಿರಬಹುದು. ಆದರೆ ನ್ಯಾಯಾಲಯದಿಂದ ನ್ಯಾಯ ಬಯಸಿದ ಕೋಟ್ಯಂತರ ಮಂದಿಯಎದೆ ದಸಕ್ಕೆಂದು ಕುಸಿದು ಬೀಳುವಂತಾಗಿರುವ ಸಾಧ್ಯತೆಯೇ ಹೆಚ್ಚು .ದೇಶದ ಸರ್ವೋಚ್ಚ ನ್ಯಾಯಾಲಯದ ಈ ಪ್ರತಿಕ್ರಿಯೆಯಿಂದ ಸಹಜವಾಗಿ ನಮಗೆ ಇನ್ನೆಲ್ಲಿಯ ನ್ಯಾಯ ಎಂದು ಕೋಟ್ಯಂತರ ಮಂದಿಗೆ ನಿರಾಸೆ ಆಗಿರುವುದು ನಿಜ.
ಆದರೂ ಮರುದಿನವೇ ದೆಹಲಿಯ ಹೈಕೋರ್ಟ್ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡದ್ದು ಮತ್ತು ಶುಕ್ರವಾರ ಸುಪ್ರೀಂ ಕೋರ್ಟಿನ ಕೆಲವು ಮಂದಿ ನ್ಯಾಯವಾದಿಗಳು ನ್ಯಾಯಾಲಯದ ಆವರಣದಲ್ಲಿಯೇ ಪೊಲೀಸ್ದೌರ್ಜನ್ಯವನ್ನು ಖಂಡಿಸಿ, ಸಂವಿಧಾನದ ಪೀಠಿಕೆಯನ್ನು ಪಠಿಸುವ ಮೂಲಕ ದೇಶದ ಪ್ರಜಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಸಂಕಲ್ಪ ಮಾಡಿದ್ದು ಮತ್ತೆ ನ್ಯಾಯ ಸಿಗುವ ಭರವಸೆ ಹುಟ್ಟಿಸಿದ್ದು ನಮ್ಮ ಪುಣ್ಯ ಎನ್ನಬಹುದೇ? ಕಾಕತಾಳೀಯ ಎನ್ನುವಂತೆ ಮತ್ತು ವಕೀಲರ ಮನಃಸ್ಥಿತಿಯನ್ನು ಗಮನಿಸಿದ ಸುಪ್ರೀಂ ಕೋರ್ಟಿನ ಅದೇ ಮುಖ್ಯನ್ಯಾಯಮೂರ್ತಿಗಳು ಪ್ರಕರಣದಗಂಭೀರತೆಯನ್ನು ಅರಿತು ಈ ಘಟನೆಯ ವಿಚಾರಣೆಯನ್ನು ಕೈತ್ತಿಕೊಳ್ಳುವುದಾಗಿ ಹೇಳಿರುವ ಭರವಸೆ ಸಮಾಧಾನ ತಂದಿದೆ.
ದೇಶದ ರಾಜಧಾನಿಯಲ್ಲಿ ನ್ಯಾಯ ಕೇಳಲು ಮುಂದಾದ ವಿದ್ಯಾರ್ಥಿ ಸಮೂಹದ ಮೇಲೆ ಪೊಲೀಸರ ಅಮಾನುಷ ದೌರ್ಜನ್ಯ, ಜನಸಾಮಾನ್ಯರ ಹಕ್ಕುಗಳ ಸಂರಕ್ಷಣೆಗಾಗಿಯೇ ಇರುವ ಮಾನವ ಹಕ್ಕುಗಳ ಆಯೋಗದ ಎದೆ ತಟ್ಟಲಿಲ್ಲ. ಇಂತಹ ಅಮಾನುಷ ಘಟನೆ ಆಯೋಗದ ಅಧ್ಯಕ್ಷರ ಮನಸ್ಸಿಗೆ ನಾಟಿದಂತೆ ಕಂಡು ಬಂದಿಲ್ಲದಿರುವುದು ಜನರ ರಕ್ಷಣೆಗೆಂದು ಇರುವ ಇಂತಹನ್ಯಾಯಿಕ ಸಂಸ್ಥೆಗಳ ಮುಖ್ಯಸ್ಥರ ನಡೆಯೂ ಅಕ್ಷಮ್ಯ. ಇತ್ತ ವಿದ್ಯಾರ್ಥಿಗಳ ಹೋರಾಟಕ್ಕೆ ದನಿಯಾಗಿ ೨೩ದಿನಗಳ ಕಾಲ ಜಂತರ್ಮಂತರ್ ಪ್ರದೇಶದ ಹೋರಾಟದ ವೇದಿಕೆಯಲ್ಲಿ ನಿರಶನ ಮಾಡಿದ ಲಡಾಕ್ನ ಸೋನಮ್ ವಾಂಗ್ಚುಕ್ ಕೇಂದ್ರ ಸರ್ಕಾರದ ಭರವಸೆ ಮೇಲೆ ನಂಬಿಕೆ ಇಟ್ಟು ತಮ್ಮ ಉಪವಾಸ ಸತ್ಯಗ್ರಹವನ್ನು ನಿಲ್ಲಿಸಿzರೆ. ಕುಲಗೆಟ್ಟು ಹೋಗಿರುವ ಶಿಕ್ಷಣವ್ಯವಸ್ಥೆ ಮತ್ತು ನೀಟ್ ಪರೀಕ್ಷೆಯ ಪಾವಿತ್ರ್ಯವನ್ನು ಕಾಪಾಡುವಲ್ಲಿ ಸೋತಿರುವ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ತಮ್ಮ ಚಳವಳಿಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ ಪಟ್ಟು ಹಿಡಿದು ತಮ್ಮ ಚಳವಳಿಯನ್ನು ಮುಂದುವರಿಸಿರುವುದು ಈ ವಿದ್ಯಾರ್ಥಿಗಳ ಹೋರಾಟದ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕಾಕ್ರೋಚ್ ಪಾರ್ಟಿಯ ವಿದ್ಯಾರ್ಥಿಗಳನ್ನು ಹಳಿಯುತ್ತಲೇ ಅವರ ಹೋರಾಟಕ್ಕೆ ತಲೆಬಾಗಿರುವ ಕೇಂದ್ರ ಸರ್ಕಾರ ಕೊನೆಗೂ ಪ್ರಶ್ನೆ ಪತ್ರಿಕೆ ಸೋರಿಕೆಗೆ ನಿಜವಾಗಿಯೂ ಉತ್ತರದಾಯಿತ್ವವಾಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಡೆದಿದೆ. ಇದು ವಿದ್ಯಾರ್ಥಿಗಳ ದಿಟ್ಟ ಹೋರಾಟಕ್ಕೆ ಸಂದ ಜಯ. ಇದರ ಜೊತೆಗೆ ನೀಟ್ ವ್ಯವಸ್ಥೆಯನ್ನು ಶುಚಿಗೊಳಿಸಲು ಕಠಿಣವಾದ ಆಡಳಿತಾತ್ಮಕ ಕ್ರಮಗಳನ್ನುಕೈಗೊಂಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಲು ಬಿಗಿಯಾದ ಕ್ರಮಗಳ ತಿದ್ದುಪಡಿ ಕಾಯ್ದೆಯನ್ನೂ ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ. ಈ ಸಮಸ್ಯೆ ಬಿಗಡಾಯಿಸುವ ಮುನ್ನವೇ ಸಚಿವಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದಿದ್ದರೆ ಇದುವರೆಗೆ ನಡೆದಿರುವ ಘಟನೆಗಳು ಸಂಭವಿಸುತ್ತಲೇ ಇರಲಿಲ್ಲ ಎನ್ನುವ ಸಾಮಾನ್ಯ ತಿಳಿವಳಿಕೆ ಪ್ರತಿಯೊಬ್ಬ ನಾಗರಿಕರಲ್ಲಿಯೂ ಇದೆ. ಆದರೆ ಆರ್ ಎಸ್ ಎಸ್ ನಿಂದಬೆಳೆದಿರುವ ಈ ಧರ್ಮೇಂದ್ರ ಪ್ರಧಾನ್ ಅವರನ್ನು ಯಾರು ಯಾಕಾಗಿ ರಕ್ಷಿಸುತ್ತಿದ್ದರು ಎನ್ನುವುದು ರಹಸ್ಯವಾಗಿಯೇನು ಉಳಿದಿಲ್ಲ. ಜಟ್ಟಿ ಬಿದ್ದರೂಮೀಸೆ ಮಣ್ಣಾಗಲಿಲ್ಲ ಎನ್ನುವ ಮಾತಿನಂತೆ ಇದು ಸರ್ಕಾರದ ಮೊಂಡುತನ. ಈ ಮೊಂಡುತನಕ್ಕೆ ಸಂಘದ ಮತ್ತು ಪ್ರಧಾನಿಯವರ ಪ್ರತಿಷ್ಠೆಯ ಪ್ರಶ್ನೆಯಾಗಿರಲೂಬಹುದು.
ವಿದ್ಯಾರ್ಥಿಗಳು ಜನತಾಂತ್ರಿಕವಾಗಿ ಆರಂಭಿಸಿದ ಈ ಚಳವಳಿಗೆ ಸರ್ಕಾರ ಸೂಕ್ಷ್ಮವಾಗಿ ಸ್ಪಂದಿಸುವ ಬದಲಿಗೆ ಹೋರಾಟವನ್ನು ಹತ್ತಿಕ್ಕುವ ಎಲ್ಲ ಕೆಲಸಕ್ಕೂ ಕೈ ಹಾಕಿದೆ. ಜಂತರ್ ಮಂತರ್ ಪ್ರದೇಶದಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸುವುದು, ಸುತ್ತಮುತ್ತಲಿನ ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡುವುದನ್ನು ನಡೆಸಿರುವುದನ್ನು ಗಮನಿಸಿದರೆ ಈ ಸರ್ಕಾರ ಕಣ್ಣು ಕಿವಿ ಮತ್ತು ಹೃದಯದ ಅಂತರಾತ್ಮವನ್ನು ಕಳೆದುಕೊಂಡಿದೆ. ಜನತಂತ್ರ ವ್ಯವಸ್ಥೆಯಲ್ಲಿ ತಮಗೆ ಅನ್ಯಾಯವಾದಾಗ ನ್ಯಾಯಕ್ಕಾಗಿ ಹೋರಾಡುವುದು ಜನರ ಸಂವಿಧಾನಬದ್ಧ ಹಕ್ಕು. ಹೋರಾಟ ಮತ್ತು ಚಳವಳಿಗಳಿಗೆ ಆಳುವ ವ್ಯವಸ್ಥೆ ಜನರ ಅಭಿಪ್ರಾಯಕ್ಕೆ ಮುಕ್ತ ಅವಕಾಶ ನೀಡುವುದು ಸಂವಿಧಾನಬದ್ಧ ಸರ್ಕಾರವೊಂದರ ಕರ್ತವ್ಯವಾಗಬೇಕು.
ಆದರೆ ಸರ್ಕಾರ ಈ ಮೌಲ್ಯಗಳನ್ನು ಮಣ್ಣು ಪಾಲು ಮಾಡಿ ಈ ಹೋರಾಟದ ಹಿಂದಿರುವವರು ಯಾರು? ಈ ಹೋರಾಟದ ಹಿಂದೆ ವಿದೇಶಿ ಕೈವಾಡವಿದೆಯೇ? ಈ ಹೋರಾಟಕ್ಕೆ ಹಣ ಮತ್ತು ಅನ್ನ ನೀರು ನೀಡುತ್ತಿರುವವರು ಯಾರು ಎನ್ನುವ ಗೂಢಚರ್ಯವನ್ನು ಗಂಭೀರವಾಗಿಕೈಗೆತ್ತಿಕೊಂಡಿದೆ. ಇಂತಹದ್ದೊಂದು ಚಳವಳಿ ಧುತ್ತನೆ ಎzಗ ಇದರ ಹಿಂದಿರುವ ಷಡ್ಯಂತರ ಮತ್ತು ಅದರ ಹಿನ್ನೋಟ ಮುನ್ನೋಟವನ್ನು ಆಳಕ್ಕಿಳಿದು ಕೆದಕಿ ತಿಳಿಯುವುದು ಸರ್ಕಾರದ ಕೆಲಸ ಎನ್ನುವುದರಲ್ಲಿ ತಪ್ಪೇನಿಲ್ಲ. ಈ ರಹಸ್ಯ ಕಾರ್ಯಾಚರಣೆಯನ್ನು ಪೊಲೀಸ್ ವ್ಯವಸ್ಥೆ ಮಾಡುವುದು ಸಹಜ. ಆದರೆ ಅದೇ ದೊಡ್ಡದಾಗಿ ಅಮಾಯಕ ವಿದ್ಯಾರ್ಥಿಗಳ ನ್ಯಾಯವಾದ ಹೋರಾಟವನ್ನು ಶಂಕಿಸಿ ಅದನ್ನು ಮುಗಿಸುವ ಕೃತ್ಯ ತಪ್ಪು ಎನ್ನದೆ ವಿಽಯಿಲ್ಲ.ದೇಶದ ಆಂತರಿಕ ಆಡಳಿತವನ್ನು ಬುಡಮೇಲು ಮಾಡುವ ಕೃತ್ಯವಿದು ಎಂದು ಈ ಚಳವಳಿಗೆ ಹಣೆಪಟ್ಟಿ ಕಟ್ಟಿ ಈ ವಿದ್ಯಾರ್ಥಿಗಳನ್ನು ಜೈಲಿಗಟ್ಟಿ ಅವರ ಭವಿಷ್ಯವನ್ನು ಹಾಳು ಮಾಡುವ ಕುತಂತ್ರವಿದು ಎನ್ನುವ ಮಾತುಗಳೂ ಈಗಾಗಲೇ ಅಲ್ಲಲ್ಲಿ ಕೇಳಿ ಬರುತ್ತಿವೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೊಂದೇ ಸಮಸ್ಯೆಗೆ ಪರಿಹಾರವಲ್ಲ. ಇಡೀ ದೇಶ ಒಪ್ಪುವಂತೆ ಶಿಕ್ಷಣ ಇಲಾಖೆಯನ್ನು ಶುದ್ಧಗೊಳಿಸುವ ಜೊತೆಗೆ ಅದರ ಮುನ್ನೋಟ ಮಕ್ಕಳ ಭವಿಷ್ಯವನ್ನು ಹಸನು ಮಾಡುವಂತಿರಬೇಕು. ಇದು ಸರ್ಕಾರದ ಆದ್ಯತೆಯಾಗಬೇಕು. ನೀಟ್ ವ್ಯವಸ್ಥೆಯನ್ನು ರದ್ದುಗೊಳಿಸಿ ಆಯಾ ರಾಜ್ಯಗಳೇ ವ್ಯದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಅಧಿಕಾರ ವಿಕೇಂದ್ರೀಕರಣದ ಕಡೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ.
” ದೇಶ ಒಪ್ಪುವಂತೆ ಶಿಕ್ಷಣ ಇಲಾಖೆಯನ್ನು ಶುದ್ಧಗೊಳಿಸುವ ಜೊತೆಗೆ ಅದರ ಮುನ್ನೋಟ ಮಕ್ಕಳ ಭವಿಷ್ಯವನ್ನು ಹಸನು ಮಾಡುವಂತಿರಬೇಕು. ಇದು ಸರ್ಕಾರದ ಆದ್ಯತೆಯಾಗಬೇಕು. ನೀಟ್ ವ್ಯವಸ್ಥೆಯನ್ನು ರದ್ದುಗೊಳಿಸಿ ಆಯಾ ರಾಜ್ಯಗಳೇ ವ್ಯದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಅಧಿಕಾರ ವಿಕೇಂದೀಕರಣದ ಕಡೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ.”
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…
ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…
ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…
ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…
ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…
ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…