ಮೈಸೂರು: ನಗರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೊಡುವ ಗುಮಾನಿ ಇರುವುದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಕೂಬಿಂಗ್ ಅಪರೇಷನ್ ಮಾಡಬೇಕಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್ ಸಿಂಹ ಹೇಳಿದರು.
ಕುಕ್ಕರ್‌ಬ್ಲಾಸ್ ಆಗಿದೆ ಅಂತ ಪೊಲೀಸರು ಸುಮ್ಮನಿರದೆ ಅನುಮಾನಪಟ್ಟು ತನಿಖೆಗೆ ಇಳಿದ ಮೇಲೆ ಬಾಂಬ್ ಸ್ಫೋಟಿಸುವ ಸಂಚು ನಡೆದಿತ್ತು ಎನ್ನುವ ಮಾಹಿತಿ ಕೇಳಿಬಂದಿತ್ತು. ಹಾಗಾಗಿ, ನಗರದಲ್ಲಿ ಅಶಾಂತಿ ಹುಟ್ಟಿಸುವ ಕೆಲಸಕ್ಕೆ ಕೈ ಹಾಕಿರುವ ಶಕ್ತಿಗಳನ್ನು ಮಟ್ಟ ಹಾಕಬೇಕಾಗಿದೆ ಎಂದು ತಿಳಿಸಿದರು.
೨೦೧೧ರಲ್ಲಿ ಹುಣಸೂರಿನ ವಿದ್ಯಾರ್ಥಿಗಳಿಬ್ಬರನ್ನು ಅಪಹರಣ ಮಾಡಿ ಒತ್ತೆಯಾಳಾಗಿ ಇಟ್ಟುಕೊಂಡು ಹಣ ಕೊಡದಿದ್ದಮೇಲೆ ಹತ್ಯೆ ಮಾಡಲಾಯಿತು. ೨೦೧೫ರಲ್ಲಿ ಕ್ಯಾತಮಾರನಹಳ್ಳಿ ರಾಜು ಹತ್ಯೆ, ಶಾಸಕ ತನ್ವೀರ್‌ಸೇಠ್ ಕೊಲೆಯತ್ನ,ಕೊಡಗಿನ ಕುಟ್ಟಪ್ಪ ಹತ್ಯೆ,ಮಂಗಳೂರಿನ ಪ್ರವೀಣ್‌ಪೂಜಾರಿ ಹತ್ಯೆ ಪ್ರಕರಣಗಳಲ್ಲಿ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಕೈವಾಡವಿರುವುದು ಸಾಬೀತಾಗಿದೆ ಎಂದು ಆರೋಪಿಸಿದರು.
ದಕ್ಷಿಣಕನ್ನಡ ಭಾಗದಲ್ಲಿ ನಡೆಯುತ್ತಿದ್ದ ಹತ್ಯೆಗಳನ್ನು ಮೈಸೂರಿಗೂ ವಿಸ್ತರಿಸುವ ಸಂಚು ನಡೆದಿದೆ.ಈಗ ಮಾನವ ಬಾಂಬ್ ಸ್ಫೋಟಿಸುವ ಕೃತ್ಯದಲ್ಲಿ ತೊಡಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಾಂತಿನಗರ, ಗೌಸಿಯಾನಗರ, ಕಲ್ಯಾಣಗಿರಿ,ರಾಜೀವ್‌ನಗರ ಭಾಗಗಳಲ್ಲಿಕೂಬಿಂಗ್ ಅಪರೇಷನ್ ಮಾಡಿ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು ಎಂದು ಒತ್ತಾಯಿಸಿದರು.
ವಿಐಪಿಗಳು ಬಂದಾಗ ಇಲ್ಲವೆ, ದೊಡ್ಡ ಸಮಾರಂಭಗಳು ಇಲ್ಲವೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಬಿಗಿ ಬಂದೋಬಸ್ತ್ ಪದ ಬಳಕೆಯ ಪರಿಚಯ…
ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದು, ರಾಜ್ಯದ ರಾಜ್ಯಪಾಲರಾಗಿ…
ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ ಮದರ್ ಥೆರೇಸಾ ಈಗ ನಮ್ಮ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು ಪಿಎಸ್ಐ…
ನವೀನ್ ಡಿಸೋಜ ಒಂದೇ ದಿನದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ; ವಯಸ್ಕರಿಗೆ ೪೦೦, ಮಕ್ಕಳಿಗೆ ೩೦೦ ರೂ.ದರ ಮಡಿಕೇರಿ:…