ಎಚ್.ಡಿ.ಕೋಟೆ ಠಾಣೆ ಅಭಿವೃದ್ಧಿಗೆ ನೆರವಾದ ಬಸವರಾಜು, ಸಿಬ್ಬಂದಿಗೆ ಸಾರ್ವಜನಿಕರ ಮೆಚ್ಚುಗೆ
ಮಂಜು ಕೋಟೆ
ಹೆಚ್.ಡಿ.ಕೋಟೆ: ಯಾವುದೇ ಒಬ್ಬ ಅಧಿಕಾರಿ ಇಲಾಖೆಗೆ ಮತ್ತು ತಾಲ್ಲೂಕಿಗೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಛಲ ಇದ್ದರೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಡೆಯುತ್ತವೆ ಎಂಬುದಕ್ಕೆ ಪಟ್ಟಣದ ಇಲ್ಲೊಂದು ಪೊಲೀಸ್ ಠಾಣೆ ಉದಾಹರಣೆಯಾಗಿದೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಪಟ್ಟಣದ ಪೊಲೀಸ್ ಠಾಣೆ ದುಸ್ಥಿತಿಯಿಂದ ಕೂಡಿತ್ತಲ್ಲದೆ, ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಇದನ್ನು ಮನಗಂಡ ತಾಲ್ಲೂಕಿನವರೇ ಆದ ಎಚ್.ಮಟಕೆರೆ ನಿವಾಸಿ ಬಸವರಾಜ್ ಅವರು ತಾಲ್ಲೂಕು ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಒಂದು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡು, ತಮ್ಮ ವ್ಯಾಪ್ತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಉತ್ತಮ ಸೇವೆ ಮಾಡುವುದರ ಜೊತೆಗೆ ತಮ್ಮ ಹಣ ಮತ್ತು ಕೆಲವರ ಸಹಾಯವನ್ನು ಪಡೆದುಕೊಂಡು ಪೊಲೀಸ್ ಠಾಣೆ ಹಾಗೂ ಆವರಣವನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮೂಲಕ ಠಾಣೆಯ ಅಂದವನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೂ ಪಾತ್ರರಾಗಿದ್ದಾರೆ.
ಸಾರ್ವಜನಿಕರು ದೂರುಗಳಿಗೆ ಬಂದ ಸಂದರ್ಭದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಪಾರ್ಕಿಂಗ್, ಸುಂದರವಾದ ಗಾರ್ಡನ್ ಜೊತೆಗೆ ಹಳೆಯ ಪೊಲೀಸ್ ಠಾಣೆ ಕಟ್ಟಡದ ನವೀಕರಣ, ಸುಣ್ಣಬಣ್ಣ , ಠಾಣೆ ಎದುರು ಫ್ಲಾಟ್ ಫಾರಂ ಹೀಗೆ ಹಲವಾರು ಅಬಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಸುವ್ಯವಸ್ಥಿತ ಪೊಲೀಸ್ ಠಾಣೆಯಾಗಿ ನಿರ್ಮಾಣಗೊಂಡಿದೆ.
ಪೊಲೀಸ್ ಠಾಣೆ ಎಂದರೆ ಪೊಲೀಸರು ಮತ್ತು ಸಿಬ್ಬಂದಿ ವರ್ಗದವರು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ಜನರ ಅಭಿಪ್ರಾಯಗಳೇ ಹೆಚ್ಚಾಗಿರುವ ಇಂತಹ ಸಂದರ್ಭದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಉತ್ತಮವಾದ ಕೆಲಸ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಪೊಲೀಸ್ ಠಾಣೆಯ ಅಭಿವೃದ್ಧಿ ಕೆಲಸಗಳಿಗೆ ಸಿಬ್ಬಂದಿ ಮತ್ತು ನೌಕರರು ಸಹ ಸಾಥ್ ನೀಡಿರುವುದರಿಂದ ಇನ್ನೂ ಹಲವಾರು ವರ್ಷಗಳ ಕಾಲ ಈ ಠಾಣೆಯ ಕಟ್ಟಡವು ಜನರಿಗೆ ಸೇವೆ ನೀಡಬಹುದಾಗಿದೆ. ಸಾರ್ವಜನಿಕರು ಮತ್ತು ನೊಂದವರು ತಮ್ಮ ಕೆಲಸ ಕಾರ್ಯಕ್ಕೆ ಬಂದವರಿಗೆ ಪೊಲೀಸ್ ಇಲಾಖೆಯವರು ಉತ್ತಮ ಸೇವೆ ನೀಡಿದರೆ ಜನಪರ ಪೊಲೀಸ್ ಠಾಣೆಯಾಗುವುದರಲ್ಲಿ ಎರಡು ಮಾತಿಲ್ಲ. ಇದು ಇತರೆ ತಾಲ್ಲೂಕು ಠಾಣೆಗಳಿಗೂ ಸ್ಫೂರ್ತಿಗಲಿದೆ.
ಪೊಲೀಸ್ ಠಾಣೆಯ ವಾತಾವರಣ ಉತ್ತಮವಾಗಿದ್ದರೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ಸ್ಫೂರ್ತಿ ಸಿಗಲಿದೆ. ಅದಕ್ಕಾಗಿಯೇ ಕಚೇರಿಯ ಸುತ್ತಮುತ್ತ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಮಾಡಿಕೊಂಡಿದ್ದಾರೆ. ಇದು ಉತ್ತಮವಾದ ಬೆಳವಣಿಗೆ.
-ಚೇತನ್, ಪೊಲೀಸ್ ವರಿಷ್ಠಾಧಿಕಾರಿ
ಪೊಲೀಸ್ ಠಾಣೆ ಕಟ್ಟಡ ತುಂಬಾ ಹಳೆಯದಾಗಿದ್ದರಿಂದ ಮಳೆ ಬಂದರೆ ನೀರು ಶೇಖರಣೆಯಾಗಿ ಕೆರೆಯಂತಾಗುತ್ತಿತ್ತು. ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಅನೇಕರ ಸಹಕಾರದಿಂದ ಪೊಲೀಸ್ ಠಾಣೆಯನ್ನು ನವೀಕರಿಸುವುದರ ಜೊತೆಗೆ ಹೊಸ ವಾತಾವರಣ ನಿರ್ಮಿಸಲಾಗಿದೆ.
-ಬಸವರಾಜು, ಸರ್ಕಲ್ ಇನ್‌ಸ್ಪೆಕ್ಟರ್
ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…
ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…
ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…
ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…