ಮೈಸೂರು: ಹಣದಾಸೆಗೆ ಪರಿಚಿತ ಸ್ನೇಹಿತಯನ್ನೇ ಹತ್ಯೆಗೈದ ಘಟನೆ ಮೈಸೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ವೃದ್ಧೆಯ ಬಳಿಯಿರುವ ಹಣಕ್ಕೆ ಮತ್ತು ಚಿನ್ನಕ್ಕೆ ಆಸೆ ಪಟ್ಟು ವೃದ್ದೇಯನ್ನು ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ.
ಈ ಘಟನೆ ಮೈಸೂರಿನ ಕೆ.ಸಿ. ಬಡಾವಣೆಯಲ್ಲಿ ನಡೆದಿದ್ದು, 62 ವರ್ಷದ ಸುಲೋಚನ ಮೃತ ವೃದ್ದೆಯಾಗಿದ್ದಾರೆ. ಜೆಸಿ ನಗರದ ನಿವಾಸಿಯಾಗಿರುವ 45 ವರ್ಷದ ಶಕುಂತಲ ಹತ್ಯೆ ಮಾಡಿರುವ ಆರೋಪಿಯಾಗಿದ್ದಾಳೆ. ಮಾರ್ಚ್.5 ರಂದು, ಸುಮಾರಿಗೆ ಸಂಜೆ 7 ಗಂಟೆಗೆ ಶಕುಂತಲಾ ಎಂಬಾಕೆ ಸುಲೋಚನಾಗೆ ಕರೆ ಮಾಡಿ, ತನ್ನ ಮನೆಗೆ ಭೇಟಿ ನೀಡುವಂತೆ ವಿನಂತಿಸಿದಳು. ಬಳಿಕ ಸುಲೋಚನಾ ಅವರು ಮನೆಗೆ ಬರುತ್ತಿದ್ದಂತೆ ಹಾಸಿಗೆಯ ಮೇಲೆ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಚಿನ್ನದ ಸರ ತೆಗೆದು ಸುಮಾರು ರಾತ್ರಿ 9.30 ಗಂಟೆಗೆ ಟೆರೇಷಿಯನ್ ಕಾಲೇಜು ವೃತ್ತದ ಬಳಿ ಇರುವ ದುರ್ಗಾ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟು 1.50 ಲಕ್ಷ ರೂ. ಪಡೆದಿದ್ದಾರೆ.
ನಂತರ ತನ್ನ ಬಾಡಿಗೆ ಮನೆ ಮಾಲೀಕನ ಮನೆಗೆ ತೆರಳಿ ಬಾಡಿಗೆ ಬಾಕಿರುವ 36,000 ರೂ.ಗಳನ್ನು ಹಿಂದಿರುಗಿಸಿದ್ದಾರೆ. ಅಲ್ಲದೇ ಸುಲೋಚನಾಳ ಶವವನ್ನೂ ತನ್ನ ಮನೆಯಲ್ಲಿಯೇ ಇಟ್ಟು, ಆಕೆಯ ಮಗ ರವಿಚಂದ್ರನಿಗೆ ಕರೆ ಮಾಡಿ, ತಮ್ಮ ತಾಯಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಜೊತೆಗೆ ಅವರೊಂದಿಗೆ ಮಾತನಾಡುವಾಗ ಅವರು ಬೆವರುತ್ತಿದ್ದರು ಎಂದಿದ್ದಾರೆ.
ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮೃತರ ಮಗ ರವಿಚಂದ್ರ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ವೇಳೆ ಖಾಸಗಿ ಆಸ್ಪತ್ರೆಯ ವೈದ್ಯರು ಇದು ಸಹಜ ಸಾವಲ್ಲ ಎಂಬುದನ್ನು ದೃಢ ಪಡಿಸಿದ್ದಾರೆ. ಈ ವಿಚಾರ ತಿಳಿದ ಮಗ ರವಿಚಂದ್ರ ನಗರದ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ವಿಚಾರಣೆ ಮಾಡಿದಾಗ ಶಕುಂತಲಾನೇ ತಾನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಬೆಂಗಳೂರು: ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…
ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…
ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…
ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…
ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್ಗಳ ವಿಚಾರ…