ಸಾಲಿಗ್ರಾಮ : ಪಟ್ಟಣದ ಹೊರವಲಯದಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವಿಗೀಡಾಗಿ, ಮೂವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಪಟ್ಟಣದಿಂದ ಕೇರಳಾಪುರಕ್ಕೆ ಹೋಗುವ ಮಾರ್ಗದಲ್ಲಿ ದಡದಹಳ್ಳಿ ಗೇಟ್ ಸಮೀಪ ಇರುವ ಅಶ್ವಿನಿ ಡೈರಿ ಫಾರಂ ಬಳಿ ಮಂಗಳವಾರ ಈ ದುರ್ಘಟನೆ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಅಬ್ಬನಕುಪ್ಪೆ ಗ್ರಾಮದ ಗೋವರ್ಧನ್ ಅಲಿಯಾಸ್ ಗಣೇಶ್ (36) ಮತ್ತು ಅರಕಲಗೂಡು ತಾಲೂಕಿನ ಕಟ್ಟೆಪುರ ಗ್ರಾಮದ ನವೀನ್ ಕುಮಾರ್ (29) ಎಂಬುವವರೇ ಮೃತಪಟ್ಟವರಾಗಿದ್ದಾರೆ.
ಸಂತೋಷ್, ಮನು ಮತ್ತು ಪೃಥ್ವಿರಾಜ್ ಅವರುಗಳಿಗೆ ಗಾಯಗಳಾಗಿದ್ದು ಇವರೆಲ್ಲರೂ ಅರಕಲಗೂಡು ತಾಲೂಕಿನ ಕಟ್ಟೆಪುರ ಗ್ರಾಮದವರಾಗಿದ್ದಾರೆ.
ಘಟನೆಯ ವಿವರ
ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಗೆ ಸೇರಿದ ಕಟ್ಟೆಪುರ ಗ್ರಾಮದ ನವೀನ್ ಕುಮಾರ್ ಎಂಬುವರು ಮದುವೆಯ ಫೋಟೋ ಮತ್ತು ವಿಡಿಯೋ ತೆಗೆಯುವ ಆರ್ಡರ್ ಇದ್ದ ಕಾರಣ ಕನಕಪುರಕ್ಕೆ ತೆರಳಲು ಕಟ್ಟೆಪುರ ಗ್ರಾಮದ ಸಂತೋಷ, ಪೃಥ್ವಿರಾಜ್ ಹಾಗೂ ಮನು ಅವರುಗಳೊಂದಿಗೆ ನವೀನ್ ಕುಮಾರ್ ಕಾರಿನಲ್ಲಿ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ತಾಲೂಕಿನ ದಡದಹಳ್ಳಿ ಗೇಟ್ ಸಮೀಪವಿರುವ ಅಶ್ವಿನಿ ಡೈರಿ ಫಾರಂ ಬಳಿ ಎದುರಿನಿಂದ ಪಿರಿಯಾಪಟ್ಟಣ ತಾಲೂಕಿನ ಅಬ್ಬನಕುಪ್ಪೆ ಗ್ರಾಮದ ಗೋವರ್ಧನ್ ಅಲಿಯಾಸ್ ಗಣೇಶ್ ಎಂಬುವರು ಸಾಲಿಗ್ರಾಮ ತಾಲೂಕಿನ ಹೆಬ್ಸೂರು ಗ್ರಾಮದಲ್ಲಿದ್ದ ತನ್ನ ತಂಗಿಯ ಮನೆಯಿಂದ ಸಾಲಿಗ್ರಾಮಕ್ಕೆ ಹೋಗಿ ಒಬ್ಬರೇ ಮರಳಿ ಹೆಬ್ಸೂರು ಗ್ರಾಮಕ್ಕೆ ಕಾರಿನಲ್ಲಿ ಬರುವಾಗ ಏಕಾಏಕಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮವಾಗಿ ಈ ಅವಘಡ ನಡೆದಿದೆ.
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…
ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…