ಮೈಸೂರು

ಮೈಸೂರು ಎಚ್. ಡಿ.ಕೋಟೆ : ದುಸ್ಥಿತಿಯಲ್ಲಿರುವ ತಡೆರಹಿತ ಬಸ್ : ಪ್ರಯಾಣಿಕರಿಗೆ ಆತಂಕ

ಮೈಸೂರು ; ಕೇಂದ್ರಿಯ  ಬಸ್ ನಿಲ್ದಾಣ ಹಾಗೂ ಎಚ್ ಡಿ ಕೋಟೆ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಈಗ ದುಸ್ಥಿತಿಯಲ್ಲಿರುವ ತಡೆ-ರಹಿತ ನಾಮಫಲಕವಿರುವ   ಬಸ್ ಗಳದ್ದೇ ಸದ್ದು..!  ಎಲ್ಲಿ ನೋಡಿದರೂ ನಿಲ್ದಾಣದಲ್ಲಿ ಕೆಲವೊಂದು ತಡೆರಹಿತ ಬಸ್ ಗಳೇ ಕಾಣಸಿಗುತ್ತವೆ. ಗಾಜು ಒಡೆದ ಬಾಗಿಲು, ಮುರಿದ ಮತ್ತು ತುಕ್ಕು ಹಿಡಿದ ಕಂಬಿಗಳು, ತಡೆ-ರಹಿತ ನಾಮಫಲಕದ ಡಕೋಟಾ ಬಸ್ ಗಳಲ್ಲಿ ಸಂಚರಿಸಲು ಜನ ಭಯ ಪಡುತ್ತಿದ್ದಾರೆ. ತಡೆ-ರಹಿತ ನಾಮಫಲಕದ ಹದಗೆಟ್ಟಿರುವ ಬಸ್ ಗಳನ್ನು ಹತ್ತಿದರೆ ತಮ್ಮ ಸ್ಥಳಗಳಿಗೆ ತಲುಪುವ ಗ್ಯಾರಂಟಿ ಇಲ್ಲಾ. ಎಲ್ಲೆಂದರಲ್ಲಿ ಕೆಟ್ಟು ನಿಂತು ಬೇರೆ ಬಸ್ ಗಳಿಗಾಗಿ ಕಾಯುವ ಪರಿಸ್ಥಿತಿ ಪ್ರಯಾಣಿಕರಿಗೆ ಸರ್ವೆ ಸಾಮಾನ್ಯವಾಗಿದೆ.

ಮೈಸೂರಿನಿಂದ ಎಚ್ ಡಿ ಕೋಟೆ ಗೆ ತೆರಳುವ ಬಸ್ ಗಳು ನಿಧಾನವಾಗಿ ಬರುತ್ತವೆ. ಕಾರಣವೆಂದರೆ ಬಸ್ ಗಳ ಸಲಕರಣೆ ಸಮಸ್ಯೆಯೋ..!  ಅಥವಾ ಡಿಪೋದಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಕೆಲವು ಮೆಕ್ಯಾನಿಕ್ ಗಳ ಸಮಸ್ಯೆಯೋ..! ಅಥವಾ ಬಸ್ ಸಮಸ್ಯೆ ಆದಾಗ ಸರಿಪಡಿಸುವುದಕ್ಕೆ ಬೇಕಾದಂತಹ ಸಲಕರಣೆಗಳು ಇಲ್ಲದೇ ಕೆಲಸ ನಿರ್ವಹಿಸಲು ಅಸಾದ್ಯವೋ..! ಇದಿಷ್ಟು ಕಾರಣಗಳಲ್ಲಿ ಯಾವುದು ಎಂಬುದು ಪ್ರಯಾಣಿಕ ವಲಯದಲ್ಲಿ ಸಾಕಷ್ಟು ಗೊಂದಲಕ್ಕೀಡಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಈ ಬಸ್ ಗಳೆಲ್ಲಾ ಓಡಾಟಕ್ಕೆ ಅರ್ಹವಾಗಿದ್ದರಿಂದ ಓಡಿಸಲಾಗುತ್ತದೆ. ಎಚ್ ಡಿ ಕೋಟೆ ವ್ಯಾಪ್ತಿಗೆ ಸುಸಜ್ಜಿತವಾದ ಬಸ್ ಗಳನ್ನು ಸದ್ಯದಲ್ಲೇ ನೀಡಲಾಗುತ್ತದೆ.. ಆದರೆ ಕಳೆದ ತಿಂಗಳು ಸುರಿದ ಮಳೆಯಿಂದ ರಸ್ತೆಗಳು ಸಾಕಷ್ಟು ಹಾಳಾಗಿದ್ದರಿಂದ ಬಸ್ ಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಹೊಸ ಬಸ್ ತರಲಾಗಿಲ್ಲ ಎನ್ನುತ್ತಾರೆ.ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಸ್ತುತ ವರ್ಷದ ಮಳೆಯಿಂದ ರಸ್ತೆಗಳು ಬಹಳಷ್ಟು ಹಾಳಾಗಿವೆ. ಮಳೆಯಿಂದ ಕೆಟ್ಟಿರುವ ರಸ್ತೆಗಳ ದುರಸ್ತಿ ಮಾಡಿದರೆ ಸರಿಯಾದ ಸಮಯಕ್ಕೆ ಸುರಕ್ಷಿತವಾಗಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬಹುದು.ಎನ್ನುತ್ತಾರೆ ಅಧಿಕಾರಿಗಳು

ಹಾಗಾಗಿ ಇನ್ನು ಮುಂದೆ ಆದರು ಸಂಬಂಧಪಟ್ಟ ಅಧಿಕಾರಿಗಳು ಸುಸಜ್ಜಿತವಾದ ಬಸ್ ಗೆ ತಡೆರಹಿತ ನಾಮಫಲಕ ಹಾಕಿ ಬಸ್ ಸಂಚರಿಸಲು ವ್ಯವಸ್ಥೆ ಮಾಡುತ್ತಾರೋ  ಅಥವಾ ಸಮಸ್ಯೆ ಅರಿತು ಕಣ್ಮುಚ್ಚಿ ಮೌನವಹಿಸುತ್ತಾರೋ ಕಾದು ನೋಡಬೇಕಿದೆ.

ವಿಶ್ವಾಸ್ ,ಪ್ರಯಾಣಿಕ
ಎಚ್ ಡಿ ಕೋಟೆಯಿಂದ ಮೈಸೂರಿಗೆ ಕೆಲಸದ ನಿಮಿತ್ತ ಸರಿಯಾದ ಸಮಯಕ್ಕೆ ತಲುಪುತ್ತೇವೆಂಬ ಭರವಸೆಯಿಂದ ತಡೆತಹಿತ ಬಸ್ ಹತ್ತಿದರು ಬಸ್ ನ ಅವ್ಯವಸ್ಥೆಯಿಂದ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ವಿಷಯ ಕುರಿತು ಸಂಬಂದಪಟ್ಟ ಅಧಿಕಾರಿಗಳು ಸಮಸ್ಯೆ ತಿಳಿದು ತಿಳಿದೇಯೋ ಮೌನ ವಹಿಸಿರುವುದು ಸಾಕಷ್ಟು ಗೊಂದಲವಾಗಿದೆ. ಇತ್ತೀಚೆಗೆ ಬಂದಂತಹ ಮೈಸೂರು ವಿಭಾಗೀಯ ನಿಯಂತ್ರಣಧಿಕಾರಿ ಅಶೋಕ್ ಅವರ ಕಾರ್ಯ ಪ್ರವೃತ್ತಿ ಸಾಕಷ್ಟು ಮೆಚ್ಚುಗೆ ಪಡುವಂತದ್ದು ಆದರೆ ನಮ್ಮ ಭಾಗದಲ್ಲಿ ತಡೆ ರಹಿತ ಬಸ್ ಸಮಸ್ಯೆ ಬಗ್ಗೆ ಮೌನ ವಹಿಸಿರುವುದು ಮನಸ್ಸಿಗೆ ನೋವುಂಟಾಗಿದೆ, ಹಾಗಾಗಿ ಸಂಬಂಧಪಟ್ಟ ನಿಯಂತ್ರಣಧಿಕಾರಿ ಗಮನಹರಿಸಿ ಸಮಸ್ಯೆಗೆ ಪರಿಹಾರ ನೀಡುತ್ತಾರೆಂಬ ನಂಬಿಕೆ ಇಟ್ಟಿದ್ದೇವೆ.

ಹೆಸರೇಳಲಿಚ್ಛಿಸದ ಚಾಲಕ
ನಾವು ಸಾರ್ವಜನಿಕರಿಗೆ ಉತ್ತಮವಾದ ಸರ್ವೀಸ್ ನೀಡುತ್ತಿದ್ದೆವೆ ಜೊತೆಗೆ ನಮಗೆ ನಮ್ಮ ಅಧಿಕಾರಿಗಳ ಸಹಕಾರ ತುಂಬ ಇದೆ.ಆದರೆ ಬಸ್ಸಿನ ಸಮಸ್ಯೆ ಕುರಿತು ಹೇಳಿದ್ದು ಸರಿಮಾಡೋಣ ಅದನ್ನೇ ಓಡಿಸಿ ಅಂತ ಹೇಳುತ್ತಾರೆ. ಅಧಿಕಾರಿಗಳಿಗೆ ನಾವು ಕೇಳಿದರೆ ಡಿಪೋ ಬದಲಾವಣೆ ಮಾಡುತ್ತಾರೆಂಬ ಭಯದಿಂದ ಇರುವ ಬಸ್ ಗಳನ್ನೇ ಓಡಿಸುತ್ತಿದ್ದೇವೆ. ಡಿಪೋದಿಂದ ಕೊಟ್ಟಿರುವ ಬಸ್ ಗಳು ಸಂಚರಿಸಲು ಸರಿಯಾಗಿಯೇ ಇದೆ ಆದರೆ ಬಸ್ ಒಳಗಡೆ ಇರುವ ಸಲಕರಣೆಗಳು ತೀರಾ ಹದಗೆಟ್ಟಿದ್ದು ಅದರ ಶಬ್ಧಕ್ಕೆ ಬಸ್ ನಲ್ಲಿರುವ ಪ್ರಯಾಣಿಕರು ಮನಬಂದಂತೆ ಗೊಣಗುತ್ತಿದ್ದರೆ, ಇನ್ನು ಕೆಲವರು ನಮ್ಮ ಮೇಲೆ ಗಲಾಟೆ ಕೂಡ ಮಾಡಿದ್ದಾರೆ

andolana

Recent Posts

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

1 hour ago

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

1 hour ago

ರಾಜ್ಯದಲ್ಲಿ ೧೯೮೩ರ ಇತಿಹಾಸ ಮರುಕಳಿಸುತ್ತದೆಯೇ?

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…

1 hour ago

ಕೆಎಚ್‌ಬಿ ಕಾಲೋನಿ ನಿವಾಸಿಗಳ ಜೀವನ ಹೈರಾಣ

ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…

1 hour ago

ಗಣೇಶೋತ್ಸವಕ್ಕೆ ಡಿಜೆ ನಿಷೇಧ: ಮಿಶ್ರ ಪ್ರತಿಕ್ರಿಯೆ

ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…

2 hours ago

50 ವರ್ಷಗಳ ನಂತರ ಮೊದಲ ಬಾರಿ ಬರಿದಾದ ಕಾರಿಗನಹಳ್ಳಿ ಅಣೆಕಟ್ಟೆ

ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ  ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…

2 hours ago