ಮೈಸೂರು: ಮುಡಾ ಪ್ರಕರಣ ಕುರಿತು ನನ್ನ ಹೋರಾಟವನ್ನು ಆರಂಭದಿಂದಲೂ ಹತ್ತಿಕ್ಕುವ ಕೆಲಸ ನಡೆಯುತ್ತ ಇದೆ. ಕೆಲವರು ನನಗೆ ಕರೆ ಮಾಡಿ ಪ್ರತಿಭಟನೆಗೆ ಸಜ್ಜುಗೊಳ್ಳುವಂತೆ ಹೇಳುತ್ತಿದ್ದಾರೆ. ನಾನು ಪ್ರತಿಭಟನೆಗೆ ಒಂದು ಕರೆ ನೀಡಿದರೆ ಸಾಕು ರಾಜ್ಯಾದ್ಯಂತ ಹೋರಾಟ ಆರಂಭವಾಗುತ್ತದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ನೀಡಿದ್ದ ದೂರಿನನ್ವಯ ಇಂದು ದೇವರಾಜ ಪೊಲೀಸ್ ಠಾಣೆಯ ವಿಚಾರಣೆಗೆ ಸ್ನೇಹಮಯಿ ಕೃಷ್ಣ ಹಾಜರಾಗಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಂ.ಲಕ್ಷ್ಮಣ್ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ಕಂಡರೆ ಎಂ.ಲಕ್ಷ್ಮಣ್‌ಗೆ ಕೋಪ. ಲೋಕಸಭೆ ಚುನಾವಣೆಯಲ್ಲಿ ಸೋತ ಕಾರಣ ಆ ಸೇಡನ್ನು ತೀರಿಸಿಕೊಳ್ಳಲು ಲಕ್ಷ್ಮಣ್ ದೂರು ನೀಡಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತರುತ್ತಿದ್ದಾರೆ. ಚುನಾವಣೆಯಲ್ಲಿ ತನನ್ನು ಹರಿಕೆಯ ಕುರಿ ಮಾಡಿದರು ಅಂತ ಸಿಎಂ ವಿರುದ್ದ ಕುಪಿತಗೊಂಡಿರಬಹುದು. ಆಗಾಗಿ ಸಿದ್ದರಾಮಯ್ಯಗೆ ಸಂಕಷ್ಟು ತರುತ್ತಿದ್ದಾರೆ ಎಂದು ದೂರಿದರು.
ಪೊಲೀಸರ ವಿಚಾರಣೆಗೆ ಉತ್ತರ ನೀಡಿದ್ದೇನೆ. ಈ ಪ್ರಕರಣದಲ್ಲಿ ಲಕ್ಷ್ಮಣ್ ವಿರುದ್ಧವೇ ಕೇಸ್ ಬೀಳಲಿದೆ. ತಮ್ಮ ಹೋರಾಟವನ್ನು ಮೊದಲಿನಿಂದಲೂ ಹತ್ತಿಕ್ಕುವ ಕೆಲಸ ಆಗ್ತಿದೆ. ಜಾಲತಾಣದಲ್ಲಿ ನನ್ನ ಪರ ಅಭಿಮಾನ ಆರಂಭವಾಗಿದೆ. ಕೆಲವರು ಕರೆ ಮಾಡಿ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ರು. ಒಂದೇ ಒಂದು ಕರೆ ನೀಡದರೆ ರಾಜ್ಯದ್ಯಂತ ಹೋರಾಟ ಆರಂಭವಾಗಲಿದೆ. ನಾನೇ ಯಾವುದು ಬೇಡ ಅಂತ ಸುಮ್ಮನಿದ್ದೇನೆ ಎಂದರು.
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…
ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…
ಸರಗೂರು : ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿ ಆತಂಕದಲ್ಲಿದ್ದರೂ ನಿಯಂ ತ್ರಣ…