ಮೈಸೂರು

ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೈಸೂರು:   ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) / ಮೊರಾರ್ಜಿ ದೇಸಾಯಿ (ನೂತನ) ವಸತಿ ಶಾಲೆ ಹಾಗೂ ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು, ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪಿರಿಯಾಪಟ್ಟಣದ ಹಲಗನಹಳ್ಳಿಯ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ಹಿಂದಿ ಮತ್ತು ಗಣಿತ ವಿಷಯಕ್ಕೆ ಬಿಎ, ಬಿ.ಇಡಿ, ಬಿಎಸ್ಸಿ, ವಿದ್ಯಾರ್ಹತೆ, ಮೈಸೂರಿನ ಭರತನಗರದ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ಕನ್ನಡ ಮತ್ತು ವಿಜ್ಞಾನ ವಿಷಯಕ್ಕೆ ಬಿಎ, ಬಿ.ಇಡಿ, ಬಿಎಸ್ಸಿ ವಿದ್ಯಾರ್ಹತೆ, ಲಷ್ಕರ್ ಮೊಹಲ್ಲಾದ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ದೈಹಿಕ ಶಿಕ್ಷಕ ವಿಷಯಕ್ಕೆ ಬಿ.ಪಿ.ಇಡಿ ವಿದ್ಯಾರ್ಹತೆ, ರಾಜೇಂದ್ರ ನಗರದ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ಇಂಗ್ಲೀಷ್ ಮತ್ತು ಹಿಂದಿ ವಿಷಯಕ್ಕೆ ಬಿಎ ಅಥವಾ ಬಿಎಸ್ಸಿ, ಬಿ.ಇಡಿ, ವಿದ್ಯಾರ್ಹತೆ, ಹುಣಸೂರು ಟೌನ್‌ನ ಮೌಲಾನ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಶಾಲೆಗೆ ಹಿಂದಿ ಮತ್ತು ದೈಹಿಕ ಶಿಕ್ಷಣ ವಿಷಯಕ್ಕೆ ಬಿಎ, ಬಿ.ಇಡಿ, ಬಿ.ಪಿ.ಇಡಿ ವಿದ್ಯಾರ್ಹತೆ, ತಿ.ನರಸೀಪುರದ ಅಲ್ಪಸಂಖ್ಯಾತರ ಮಾರಾರ್ಜಿ ದೇಸಾಯಿ ವಸತಿ ಶಾಲೆಯ(ನೂತನ) ಎಲ್ಲಾ ವಿಷಯಕ್ಕೆ, ಬಿಎ ಅಥವಾ ಬಿಎಸ್ಸಿ ಬಿ.ಇಡಿ ವಿದ್ಯಾರ್ಹತೆ, ಪಿರಿಯಾಪಟ್ಟಣ ತಾಲ್ಲೂಕಿನ ಅಲ್ಪಸಂಖ್ಯಾತರ ಮಾರಾರ್ಜಿ ದೇಸಾಯಿ ವಸತಿ ಶಾಲೆ/ ಕಾಲೇಜಿಗೆ ಇಂಗ್ಲೀಷ್ ವಿಷಯಕ್ಕೆ ಬಿಎ ಅಥವಾ ಬಿಎಸ್ಸಿ ಬಿ.ಇಡಿ ವಿದ್ಯಾರ್ಹತೆ ಹಾಗೂ ಮೈಸೂರಿನ ದೊಡ್ಡಕಾನ್ಯದ ಅಲ್ಪಸಂಖ್ಯಾತರ ಡಾ||ಎ.ಪಿ.ಜೆ ಅಬ್ದುಲ್ ಕಲಾಂ, ವಸತಿ ಕಾಲೇಜಿಗೆ ಜೀವಶಾಸ್ತ್ರ ವಿಷಯಕ್ಕೆ ಎಂಎ ಎಂ.ಎಸ್ಸಿ ಬಿ.ಇಡಿ ವಿದ್ಯಾರ್ಹತೆಯನ್ನು ಹೊಂದಿರುವ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ 30 ಅಂತಿಮ ದಿನಾಂಕವಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಕಡೆಯ ದಿನಾಂಕದೊಳಗೆ ಜಿಲ್ಲಾ ಕಛೇರಿಗೆ ಅಥವಾ ಸಂಬoಧಪಟ್ಟ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಛೇರಿ, ಬೆಂಗಳೂರು-ಮೈಸೂರು ರಸ್ತೆಯ ಶೋಭ ಗಾರ್ಡನ್ ಪಕ್ಕದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನ ಆಜಾದ್ ಭವನವನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0821-2422088/8951087207/8762864253, ಮೊರಾರ್ಜಿ ನೂತನ ವಸತಿ ಶಾಲೆ ತಿ.ನರಸೀಪುರ ಮಾಹಿತಿ ಕೇಂದ್ರದ ದೂ.ಸಂ: 8277775750, ಹುಣಸೂರು ಮಾಹಿತಿ ಕೇಂದ್ರದ ದೂ.ಸಂ: 9620750935 ಹಾಗೂ ಪಿರಿಯಾಪಟ್ಟಣ ಮಾಹಿತಿ ಕೇಂದ್ರದ ದೂ.ಸಂ: 6362661474 ನ್ನು ಸಂಪರ್ಕಿಸಬಹುದು ಎಂದು ಮೈಸೂರಿನ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

5 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

9 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

9 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

9 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

9 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

9 hours ago