ಮೈಸೂರು ಭಾಗದ ನಾಲ್ಕು ಒಕ್ಕೂಟಗಳಿಂದ ಮಾಹಿತಿ ರವಾನೆ:ಸರ್ಕಾರದಿಂದಲೇ ೧೦೦ ಕೋಟಿ. ರೂ.ವರೆಗೂ ಬಾಕಿ
ಮೈಸೂರು: ರಾಜ್ಯದಲ್ಲಿ ಹಾಲು ಮಾರಾಟದ ದರ ಏರಿಕೆಯಾಗಿ ರೈತರ ಪಾಲು ಹೆಚ್ಚಳದ ಖುಷಿ ಒಂದು ಕಡೆಯಾದರೂ ರೈತರಿಗೆ ಬರಬೇಕಾಗಿರುವ ೫ ರೂ. ಪ್ರೋತ್ಸಾಹಧನದ ಹಾಲಿನ ಬಾಕಿ ಇನ್ನೂ ಬಿಡುಗಡೆಯಾಗಬೇಕಿದೆ. ಏಕೆಂದರೆ ರೈತರಿಗೆ ಸೆಪ್ಟಂಬರ್ ತಿಂಗಳಿನಿಂದಲೇ ಸರ್ಕಾರದ ಪಾಲು ಬಿಡುಗಡೆಯಾಗದೇ ಇರುವುದರಿಂದ ಅತ್ತ ಕಡೆಯೇ ಒಕ್ಕೂಟಗಳು ಮುಖ ಮಾಡಿ ಕುಳಿತಿವೆ.
ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಹಾಲು ಉತ್ಪಾದಕರಿಗೆ ಮೈಮುಲ್‌ನಿಂದ ಕೊಡುತ್ತಿರುವ ೩೨ ರೂ. ಸಾಕಾಗದಿರುವ ಕಾರಣ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡುವ ೫ ರೂ. ಪ್ರೋತ್ಸಾಹಧನಕ್ಕಾಗಿ ಕಾದು ಕುಳಿತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಯ ನಂತರ ಅತೀ ಹೆಚ್ಚು ಹೈನುಗಾರಿಕೆಯನ್ನೇ ನಂಬಿರುವ ಹಾಲು ಉತ್ಪಾದಕರು ಬ್ಯಾಂಕ್, ಕೈ ಸಾಲ-ಸೋಲ ಮಾಡಿ ಹಸುಗಳನ್ನು ಖರೀದಿಸಿ ಸಾಕುವ ಮೂಲಕ ಡೇರಿಗಳಿಗೆ ಹಾಲು ಹಾಕುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದಿಷ್ಟು ಆರ್ಥಿಕ ಚೇತರಿಕೆ ಕಂಡು ನೆಮ್ಮದಿಯಿಂದ ಕುಟುಂಬದ ನಿರ್ವಹಣೆ ನಡೆಯುತ್ತಿದೆ. ಹೀಗಿದ್ದರೂ, ಸರ್ಕಾರ ಪ್ರೋತ್ಸಾಹಧನವನ್ನು ಸಕಾಲಕ್ಕೆ ಬಿಡುಗಡೆ ಮಾಡದಿರುವುದರಿಂದ ಹೈನುಗಾರರಿಗೆ ದೊಡ್ಡ ಹೊಡೆತ ಬಿದ್ದಿದೆ.
ಕರ್ನಾಟಕದಲ್ಲಿ ೧೬ ಹಾಲು ಒಕ್ಕೂಟಗಳಿದ್ದು, ೨೫ ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ನಿತ್ಯ ೮೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದಿನದ ಹಾಲಿನ ವಹಿವಾಟಿನ ಪ್ರಮಾಣವೇ ೩೦ ಕೋಟಿ ರೂ.ವರೆಗೂ ಆಗುತ್ತದೆ. ಇದರಲ್ಲಿ ರೈತರಿಗೆ ಪ್ರತಿ ಲೀಟರ್‌ಗೆ ೫ ರೂ. ನೀಡುತ್ತಾ ಬರುತ್ತಿದೆ. ಇದು ಆರೇಳು ವರ್ಷದಿಂದ ಏರಿಕೆಯಾಗಿಲ್ಲ. ಈಗಾಗಲೇ ಸೆಪ್ಟಂಬರ್ ಹಾಗೂ ಅಕ್ಟೋಬರ್ ಮಾಹಿತಿ ಸರ್ಕಾರಕ್ಕೆ ಹೋಗಿದ್ದು, ನವೆಂಬರ್ ಮಾಹಿತಿಯನ್ನೂ ಕಳುಹಿಸಲಾಗುತ್ತಿದೆ. ಈ ಮೂರು ತಿಂಗಳ ಬಾಕಿ ಬಿಡುಗಡೆಯಾಗಬೇಕಾಗಿದೆ.
ಮೈಸೂರು ಭಾಗದಲ್ಲಿಯೇ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಒಳಗೊಂಡಂತೆ ಹಾಸನ ಹಾಲು ಒಕ್ಕೂಟಗಳೂ ಹಾಲು ಸಂಗ್ರಹದಲ್ಲಿ ಅತ್ಯುತ್ತಮ ಸಾಧನೆ ಮಾಡಿವೆ. ಕೋವಿಡ್ ನಂತರ ಹಾಲು ಉತ್ಪಾದನೆ ಪ್ರಮಾಣ ಸಹಜ ಸ್ಥಿತಿ ಬಂದಿದೆ. ಆದರೆ ಪ್ರೋತ್ಸಾಹ ಧನ ವಿತರಣೆಯಲ್ಲಿ ಮಾತ್ರ ಸರ್ಕಾರವನ್ನೇ ಕಾಯಬೇಕಾಗಿರುವುದರಿಂದ ಕನಿಷ್ಠ ಮೂರು ತಿಂಗಳಾದರೂ ವಿಳಂಬವಾಗುತ್ತಿದೆ. ಮೈಸೂರು ಭಾಗದಲ್ಲಿಯೇ ಅಂದಾಜು ೯೦ರಿಂದ ೧೦೦ ಕೋಟಿ ರೂ.ಗಳಷ್ಟು ಎನ್ನುವುದು ಒಕ್ಕೂಟಗಳ ವಿವರಣೆ.
ಮೈಸೂರು
ಸಂಘಗಳು- ೧೧೫೬
ನಿತ್ಯ ಹಾಲು ಪ್ರಮಾಣ- ೬.೫೦ ಲಕ್ಷ ಲೀ
ಸದಸ್ಯರು- ೯೬ ಸಾವಿರ
ದರ- ೩೨ ರೂ.
ಬಾಕಿ- ೩೦ ಕೋಟಿ ರೂ.
ಮಂಡ್ಯ
ಸಂಘಗಳು-೧೨೭೪
ಹಾಲು ಪ್ರಮಾಣ- ೯ ಲಕ್ಷ ಲೀ
ಸದಸ್ಯರು- ೧,೦೨,೦೦೦
ದರ- ೩೨ ರೂ.
ಬಾಕಿ- ೩೫ ಕೋಟಿ ರೂ.
ಚಾಮರಾಜನಗರ
ಸಂಘಗಳು-೪೬೫
ಹಾಲು ಪ್ರಮಾಣ- ೨.೧೦ ಲಕ್ಷ ಲೀ.
ಸದಸ್ಯರು-೩೨ ಸಾವಿರ
ದರ- ೩೨ ರೂ.
ಬಾಕಿ- ೨.೮ ಕೋಟಿ ರೂ.
ಕೊಡಗು
ಸಂಘಗಳು- ೩೮
ಹಾಲು ಪ್ರಮಾಣ-
ಸದಸ್ಯರು-೨೭೦೦
ದರ- ೩೨ ರೂ.
ಬಾಕಿ-
ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…
ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…
ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…
ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…
ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…