ಜಿಲ್ಲೆಗಳು

ಶಾಸಕರಿಂದ ಕ್ವಾರಿ ಖರೀದಿ; ಬಾಕಿ ಹಣ ನೀಡದೆ ವಂಚನೆ

 ಕ್ವಾರಿ ಮಾಲೀಕ ಕಮಲೇಶ್ ಕುಮಾರ್ ಆರೋಪ

ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನನಗೆ ಸೇರಿದ ಕಪ್ಪುಕಲ್ಲು ಕ್ವಾರಿ ಖರೀದಿಸಿ ಬಾಕಿ ಹಣ ೯ ಕೋಟಿ ರೂ.ನೀಡದೆ ವಂಚಿಸಲು ಮುಂದಾಗಿದ್ದಾರೆ ಎಂದು ಗುಜರಾತ್ ಮೂಲದ ಡಾ.ಕಮಲೇಶ್‌ಕುಮಾರ್ ಆರೋಪಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಸರ್ವೆ ನಂ. ೩೩೫/೧, ೩೩೬/೪, ೩೩೬/೬ ಹಾಗೂ ೩೩೯/೧ರಲ್ಲಿ ೪ ಎಕರೆ ೩೩ ಗುಂಟೆಯಲ್ಲಿ ನಡೆಯುತ್ತಿದ್ದ ಕಪ್ಪುಕಲ್ಲು ಕ್ವಾರಿಯನ್ನು ಹಿತೇಂದ್ರಜೋಶಿ ಎಂಬುವರಿಂದ ನಾನು ಖರೀದಿಸಿದ್ದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕ್ವಾರಿಗೆ ಹೊಂದಿಕೊಂಡಂತಿದ್ದ ಸರ್ವೆ ೩೩೭ರಲ್ಲಿ ೪ ಎಕರೆ ೧ ಗುಂಟೆ ಭೂಮಿಯನ್ನು ಖರೀದಿಸಿದ್ದೇನೆ. ಈ ಭೂಮಿಯಲ್ಲಿ ನಾನು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ೨೦೨೧ ನವೆಂಬರ್‌ವರಗೆ ಗಣಿಗಾರಿಕೆ ನಡೆಸಿದ್ದೇನೆ ಎಂದು ತಿಳಿಸಿದರು.
೨೦೨೧ ಅಕ್ಟೋಬರ್‌ನಲ್ಲಿ ಸ್ಥಳೀಯರು ಕಿರಿಕಿರಿ ಮಾಡಿದರು. ಇದನ್ನು ಸರಿಪಡಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದ್ದೆ. ನೀವು ಹೊರ ರಾಜ್ಯದವರು ಹಾಗಾಗಿ ಸ್ಥಳೀಯರು ಗಣಿಗಾರಿಕೆ ನಡೆಸಲು ಬಿಡುವುದಿಲ್ಲ. ಆ ಕ್ವಾರೆಯನ್ನು ನನಗೆ ಮಾರಾಟ ಮಾಡುವಂತೆ ಶಾಸಕರು ಸೂಚಿಸಿದರು ಎಂದು ಆರೋಪಿಸಿದರು.
ನಾನು ಒಪ್ಪಿಕೊಂಡು ೧೪ ಕೋಟಿ ರೂ.ಗೆ ಕ್ರಯ ಒಪ್ಪಂದ ಮಾಡಿಕೊಂಡು ಮುಂಗಡವಾಗಿ ಶಾಸಕರಿಂದ ೧ ಲಕ್ಷ ರೂ. ಪಡೆದಿದ್ದೇನೆ. ನಂತರ ಕ್ವಾರಿ ಕ್ರಯ ಮಾಡಿಕೊಡುವಂತೆ ನನ್ನನು ಕರೆದರು. ಆ ದಿನ ನನ್ನನ್ನು ಹೆದರಿಸಿ ೧೪ ಕೋಟಿ ರೂ. ನೀಡಲು ಸಾಧ್ಯವಿಲ್ಲವೆಂದು ಧಮಕಿ ಹಾಕಿದರು ಎಂದು ಆಪಾದಿಸಿದರು.
ಬಳಿಕ ಕ್ವಾರಿಯನ್ನು ೧೨.೫೦ ಕೋಟಿ ರೂ.ಗೆ ಕ್ರಯದ ಅಗ್ರಿಮೆಂಟ್ ಮಾಡಿದಾಗ ಶಾಸಕರ ವೈಯುಕ್ತಿಕ ಬ್ಯಾಂಕ್ ಖಾತೆಯಿಂದ ನನಗೆ ೧ ಕೋಟಿ ರೂ. ಬಂದಿದೆ. ನಂತರದ ಪ್ರಕ್ರಿಯೆಯನ್ನು ಮಾಡದೆ ಕ್ವಾರಿ ಆರಂಭಿಸಿದರು. ಇದನ್ನು ಪ್ರಶ್ನಿಸಿದ ನನಗೆ ಕೊಲೆ ಬೆದರಿಕೆ ಹಾಕಿಸಿದ್ದಾರೆ. ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕ್ವಾರಿ ನಿಲ್ಲಿಸಿದ್ದಾರೆ ಎಂದು ದೂರಿದರು.
೧ ಕೋಟಿ ಜೊತೆಗೆ ೨.೫೪ ಲಕ್ಷ ರೂ. ೨೦೨೨ರ ಮಾರ್ಚ್ನಲ್ಲಿ ನನಗೆ ಸಂದಾಯವಾಗಿದೆ. ಶಾಸಕರು ಬಾಕಿ ೯ ಕೋಟಿ ರೂ. ವಂಚಿಸಲು ಯತ್ನಿಸಿದ್ದಾರೆ. ಅವರ ಅಳಿಯ ಬೆದರಿಕೆ ಹಾಕಿರುವ ೫೭೧ ಕರೆಗಳ ಧ್ವನಿಮುದ್ರಿಕೆ ನನ್ನ ಬಳಿಯಿದೆ. ಶಾಸಕರ ವಿರುದ್ದ ಪ್ರಧಾನಿ, ಗೃಹ ಸಚಿವರು ಹಾಗೂ ಸಂಬಂಧಪಟ್ಟ ಎಲ್ಲರಿಗೂ ದೂರು ಸಲ್ಲಿಸುತ್ತೇನೆ ಎಂದರು

andolanait

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

13 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

13 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

14 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

16 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

16 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

20 hours ago