ಮಡಿಕೇರಿ: ಜಿಲ್ಲಾಸ್ಪತ್ರೆಗೆ ನುಗ್ಗಿ ಕಲಿಕಾ ವೈದ್ಯ ವಿದ್ಯಾರ್ಥಿಗಳ ಬ್ಯಾಗ್, ಬ್ಯಾಗ್‌ನಲ್ಲಿದ್ದ ಹಣ ಹಾಗೂ ಹೊರಾವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದ ಚೋರನನ್ನು ಸೆರೆ ಹಿಡಿಯುವಲ್ಲಿ ಮಡಿಕೇರಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಮೂರ್ನಾಡು ಹೋಬಳಿಯ ಹೊದ್ದೂರು ಬಳಿಯ ಕಬಡಕೇರಿ ನಿವಾಸಿ ಎಂ.ಕೆ. ಹರೀಶ್ ಕುಮಾರ ಎಂಬವರ ಪುತ್ರ ಟಿಂಬರ್ ಕೆಲಸ ಮಾಡಿಕೊಂಡಿರುವ ಎಂ.ಹೆಚ್. ಶಿವಕುಮಾರ್ ಬಂಧಿತ ಆರೋಪಿ.
ನ.೨೭ ರಂದು ಸಂಜೆ ಆಸತ್ರೆಯ ಸಿಬ್ಬಂದಿಯಂತೆ ಒಳನುಗ್ಗಿದ್ದ ಚೋರನೊಬ್ಬ ಆಸ್ಪತ್ರೆಯಿಡೀ ಸುಳಿದಾಡಿ ಕರ್ತವ್ಯನಿರತ ವೈದ್ಯರ ಕೊಠಡಿಯೊಳಗೆ ನುಗ್ಗಿ ಕಲಿಕಾ ವೈದ್ಯ ವಿದ್ಯಾರ್ಥಿಗಳು, ಇರಿಸಿದ್ದ ಬ್ಯಾಗ್‌ಗಳನ್ನು ಜಾಲಾಡಿ ಅದರೊಳಗಡೆ ಇದ್ದ ಹಣವನ್ನು ದೋಚಿದ್ದ. ಜೊತೆಗೆ ಒಂದು ಬ್ಯಾಗ್‌ನೊಳಗಡೆ ದೊರೆತ ದ್ವಿಚಕ್ರ ವಾಹನದ ಕೀಯನ್ನು ಕಸಿದು ಆಸ್ಪತ್ರೆಯ ಹೊರಾವರಣದಲ್ಲಿ ನಿಲ್ಲಿಸಿದ್ದ ವಾಹನವನ್ನು ಕದ್ದೊಯ್ದು ಪರಾರಿಯಾಗಿದ್ದನು.
ಈ ಸಂಬಂಧ ಮೈಸೂರಿನ ವೈದ್ಯ ವಿದ್ಯಾರ್ಥಿನಿ ತರಿಕೆರೆಯ ಸೃಷ್ಟಿ ಎಂಬವರು ನೀಡಿದ್ದ ದೂರಿನ ಆಧಾರದಲ್ಲಿ ನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಕಳ್ಳನ ಸೆರೆಗೆ ಬಲೆ ಬೀಸಿದ್ದರು. ಈ ಬಗ್ಗೆ ತನಿಖೆ ಮುಂದುವರಿಸಿದ ಠಾಣಾಧಿಕಾರಿ ಶ್ರೀನಿವಾಸ್ ನೇತೃತ್ವದ ಪೊಲೀಸರ ತಂಡ ಕಳ್ಳನ ಜಾಡು ಹಿಡಿದು ವಿರಾಜಪೇಟೆಯಲ್ಲಿ ಸೆರೆ ಹಿಡಿಯುವಲ್ಲಿಯಶಸ್ವಿಯಾಗಿದ್ದಾರೆ.
ಬಂಧಿತನಿಂದ ದ್ವಿಚಕ್ರ ವಾಹನ ಹಾಗೂ ಬ್ಯಾಗ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಳಪಡಿಸಲಾಗಿದೆ. ಕಳವು ಮಾಡಿದ್ದ ವಾಹನಕ್ಕೆ ಪೂಜೆ ಮಾಡಿಸಿದ್ದ ಆರೋಪಿ, ಹೂವು ಹಾಗೂ ರಿಬ್ಬನ್ ಅಂಟಿಸಿ ಸಿಂಗಾರ ಮಾಡಿ ತಾನೇ ಖರೀದಿಸಿದ ವಾಹನವೆಂದು ಜನರೆದುರು ಹೇಳಿಕೊಂಡು ಓಡಾಡುತ್ತಿದ್ದ. ಆದರೆ ಪೊಲೀಸರ ಚಾಣಾಕ್ಷತನದಿಂದಾಗಿ ೧೫ ದಿನಗಳ ಒಳಗಡೆ ಆರೋಪಿ ಸೆರೆಮನೆ ಸೇರುವಂತಾಗಿದೆ.
ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…
ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…
ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…
ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…
ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…