ಮೈಸೂರು

ಹುಲಿ ಉಪಟಳ; ಗ್ರಾಮಸ್ಥರ ತಳಮಳ

ಬಳ್ಳೂರಹುಂಡಿ ಗ್ರಾಮಸ್ಥರಿಗೆ ಪರಿಹಾರ ಮರೀಚಿಕೆ

ಶ್ರೀನಿವಾಸ ಟಿ.ಎಲ್.

ಮೈಸೂರು: ಹುಲಿ ದಾಳಿಯಿಂದ ತೀವ್ರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಂಜನಗೂಡು ತಾಲ್ಲೂಕಿನ ಬಳ್ಳೂರು ಹುಂಡಿಯ ದನಗಾಹಿ ಸ್ವಾಮಿ ದಾಸಯ್ಯ (೫೪) ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸ್ವಾಮಿ ಮೇಲಿನ ದಾಳಿ ಬಳಿಕ ಅವರ ಹಸುವಿನ ಮೇಲೆ ದಾಳಿ ಮಾಡಿರುವ ಹುಲಿ ಅದನ್ನು ಕೊಂದು ಮಾಂಸವನ್ನು ಭಕ್ಷಿಸಿದೆ.

ಹಾಡಹಗಲೇ ನಡೆದ ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬಳ್ಳೂರು ಹುಂಡಿಗೆ ಮಂಗಳವಾರ ಭೇಟಿ ನೀಡಿದ ” ಆಂದೋಲನʼ ತಂಡದೊಂದಿಗೆ ಮಾತನಾಡಿದ ಗ್ರಾಮಸ್ಥರು “” ಅರಣ್ಯ ಇಲಾಖೆ ನಮಗೆ ಬೇರೆ ಕಡೆ ಜಾಗ ನೀಡಲಿ. ನಾವು ಅಲ್ಲಿಗೆ ಹೋಗಿ ಬದುಕುತ್ತೇವೆ. ಇಲ್ಲಿ ನಮ್ಮ ಜೀವಕ್ಕೆ ರಕ್ಷಣೆಯಿಲ್ಲʼʼ ಎಂದು ಅಳಲು ತೋಡಿಕೊಂಡರು. ಹುಲಿಯು ಹಸು “ಪೂಜಾʼಳ ಕಾಲು ಮತ್ತು ತಲೆ ಭಾಗ ಬಿಟ್ಟು ಪೂರ್ಣವಾಗಿ ಕಬಳಿಸಿದ್ದು ಕಂಡುಬಂತು. ಅದರ ಎರಡು ತಿಂಗಳ ಗಂಡು ಕರು ಅನಾಥವಾಗಿದೆ.

ಹುಲಿ ದಾಳಿಗೆ ತುತ್ತಾಗಿರುವ ಸ್ವಾಮಿ ದಾಸಯ್ಯ ಖಾಸಗಿ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಇನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ” ಆಂದೋಲನ ಡಿಜಿಟಲ್‌ ʼ ಗೆ ದೃಢಪಡಿಸಿವೆ.

“” ತಿಂಗಳಿಗೆ ಮೂರ್ನಾಲ್ಕು ರಾಸುಗಳನ್ನು ಹುಲಿ ಕಬಳಿಸುತ್ತಾ ಬಂದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ನೀಡಿಲ್ಲ. ರೈತರು ಆನೆ, ಕಡವೆ,ಜಿಂಕೆ, ಚಿರತೆ,ಕಾಡುಹಂದಿ,ಮುಳ್ಳುಹಂದಿ,ನವಿಲುಗಳೂ ಹೊಲಕ್ಕೆ ಬಂದು ನಾವು ಬೆಳೆದ ಕೃಷಿಯನ್ನು ನಾಶಪಡಿಸುತ್ತಿವೆ. ಲಕ್ಷಗಟ್ಟಲೆ ಬೆಳೆನಾಶವಾದರೂ ಅರಣ್ಯ ಇಲಾಖೆ ಕೇವಲ ಎರಡು, ಮೂರು ಸಾವಿರ ರೂಪಾಯಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ನಮಗೆ ಪರಿಹಾರಕ್ಕಿಂತಲೂ ವನ್ಯಪ್ರಾಣಿ ಜನವಸತಿಯತ್ತ ಬರದಂತೆ ತಡೆಗಟ್ಟಲಿʼʼ ಎಂದು ಕೃಷಿಕರು ಅಳಲು ತೋಡಿಕೊಂಡರು.

“” ಗ್ರಾಮಸ್ಥರು ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡುತ್ತಿರುವುದು ಹುಲಿದಾಳಿಗೆ ಕಾರಣವಾಗುತ್ತಿದೆ. ಕೆಲವು ರೈತರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದು ದಾಖಲೆ ಇಲ್ಲದ ಜಾಗದಲ್ಲಿ ಫಸಲು ನಷ್ಟವಾದರೆ ಪರಿಹಾರ ಅಸಾಧ್ಯ. ಈವರೆಗೆ ಸಾಧ್ಯವಾದಷ್ಟೂ ಶೀಘ್ರ ಪರಿಹಾರ ನೀಡಲಾಗಿದೆ. ಕೆಲವರಿಗೆ ಪರಿಹಾರ ವಿತರಣೆ ಪ್ರಗತಿಯಲ್ಲಿದೆ. ಸ್ವಾಮಿ ದಾಸಯ್ಯ ಕುಟುಂಬಕ್ಕೆ ಶೀಘ್ರವೇ ಪರಿಹಾರ ವಿತರಿಸಲಾಗುವುದು. ಅವರ ಆಸ್ಪತ್ರೆ ಖರ್ಚನ್ನು ಅರಣ್ಯ ಇಲಾಖೆ ಭರಿಸಲಿದೆ.ʼʼ ಎಂದು ಆರ್‌ ಎಫ್‌ ಒ ಕೆ.ಆರ್.ನಾರಾಯಣ ಆಂದೋಲನ ಡಿಜಿಟಲ್‌ ಗೆ ಮಾಹಿತಿ ನೀಡಿದ್ದಾರೆ.

10 ಮಂದಿ ಅರಣ್ಯ ಸಿಬ್ಬಂದಿಯ ತಂಡ ಮಂಗಳವಾರದಿಂದಲೇ ಹುಲಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆ. ಬುಧವಾರದಿಂದ ಹುಲಿಯ ಚಲನ ವಲನ ವೀಕ್ಷಣೆಗೆ ಡ್ರೋಣ್ ಬಳಸಿಕೊಳ್ಳಲಾಗುವುದು. ಹುಲಿಯನ್ನು ಸೆರೆ ಹಿಡಿಯಲು ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅನುಮತಿ ಪಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

andolanait

Recent Posts

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

1 hour ago

ಓದುಗರ ಪತ್ರ: ನಿಜವಾದ ಭಾವೈಕ್ಯತೆಯ ಸಂಗಮ

ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…

1 hour ago

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…

1 hour ago

ಓದುಗರ ಪತ್ರ: ಪ್ರೀತಿಯ ಅಣ್ಣ ಪ್ರತಾಪ್ ಸಿಂಹ…

ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…

1 hour ago

ದಸರಾ ಬರುತ್ತಿದೆ, ಮೈಸೂರು ಸಿದ್ಧವಾಗುತ್ತಿದೆಯೇ?

ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ  ಮೈಸೂರು ದಸರಾ ಎಂದರೆ ಕೇವಲ ಹತ್ತು…

1 hour ago

ಫಾಲ್ಕೆ ಪ್ರಶಸ್ತಿ ಕಲಾಸೇವೆಗೆ ಸಂದ ಗೌರವ: ಅನಂತ್ ನಾಗ್‌

ಸಂದರ್ಶನ: ಬಾನಾಸು  ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…

1 hour ago