ಜಿಲ್ಲೆಗಳು

ಸಾಲ ಕೊಡಿಸುವ ಆಮಿಷವೊಡ್ಡಿ ಹಣ ವಸೂಲಿ

ಸಾರ್ವಜನಿಕರಿಂದ ದೂರು, ಇಬ್ಬರು ಮಹಿಳೆುಂರ ಬಂಧನ!
-ಕೆ.ಬಿ.ಶಂಶುದ್ಧೀನ್

ಕುಶಾಲನಗರ: ದಿನನಿತ್ಯ ವಂಚನೆ ಪ್ರಕರಣಗಳನ್ನು ನಡೆಯುತ್ತಲೇ ಇವೆ. ಆದರೂ ಕೂಡಾ ಹಣದ ಆಸೆಗೆ ವಾರುಹೋಗುವ ಸಾರ್ವಜನಿಕರು, ಮೋಸಗಾರರ ಬಲೆಗೆ ಬೀಳುತ್ತಿದ್ದಾರೆ. ಬಡ್ಡಿರಹಿತ ಲೋನ್‌ಗೆ ಆಸೆಪಟ್ಟು, ಸಾರ್ವಜನಿಕರು ಹಣ ಕಳೆದುಕೊಂಡು ಮೋಸಹೋದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಸರ್ಕಾರದಿಂದ ಬಡ್ಡಿರಹಿತ ಸಾಲ ಕೊಡಿಸುವುದಾಗಿ ಸಾರ್ವಜನಿಕರಿಂದ ಹಣ ವಸೂಲಿ ವಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಾರ್ವಜನಿಕರ ದೂರಿನ ಹಿನ್ನಲೆ ಬಂಧಿಸಿದ್ದಾರೆ. ಗೋಣಿಕೊಪ್ಪದ ಕುಸುವಾವತಿ ಹಾಗೂ ಕೂಡ್ಲೂರಿನ ಜಮುನಾ ಬಂಧಿತ ಮಹಿಳೆಯರು. ಇವರು ಸರ್ಕಾರದಿಂದ ಬಡ್ಡಿರಹಿತ ಸಾಲ ಕೊಡಿಸುತ್ತೇವೆ ಎಂದು ಕೊಡಗಿನಾದ್ಯಂತ ಸಾರ್ವಜನಿಕರಿಂದ ತಲಾ ಸಾವಿರ ರೂಗಳನ್ನು ವಸೂಲಿ ವಾಡುತ್ತಾ ಬಂದಿದ್ದಾರೆ. ಒಂದೊಂದು ಗ್ರಾಮದಲ್ಲಿ ೩೦ ಮಹಿಳೆಯರ ಗುಂಪು ವಾಡಿ, ಹಣವನ್ನು ವಸೂಲಿ ವಾಡಿದ್ದಾರೆ.
ಅಲ್ಪಸಂಖ್ಯಾತರಿಗೆ ಅಲ್ಪಸಂಖ್ಯಾತರ ಘಟಕದಿಂದ ಸಾಲ ಕೊಡಿಸುವುದಾಗಿುೂಂ, ಹಿಂದುಳಿದ ವರ್ಗದವರಿಗೆ ಹಾಗೂ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಸಂಬಂಧಪಟ್ಟ ಇಲಾಖೆಯಿಂದ ಬಡ್ಡಿರಹಿತ ಸಾಲ ಕೊಡಿಸುತ್ತೇವೆ ಎಂದು ಆಮಿಷವೊಡ್ಡಿ ಹಣ ಸಂಗ್ರಹಿಸಲಾಗಿದೆ. ಸಾರ್ವಜನಿಕರಿಂದ ಪಡೆದ ಒಂದು ಸಾವಿರ ನಗದನ್ನು ಕುಶಾಲನಗರದ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ಜವಾ ವಾಡಲಾಗುವುದು ಎಂದು ಹೇಳಿ, ಹಣ ವಸೂಲಾತಿ ವಾಡಲಾಗಿದೆ. ಕುಸುವಾವತಿ ಎಂಬ ಮಹಿಳೆಯ ಎಲ್ಲ ಗ್ರಾಮಗಳಲ್ಲಿ ಮಹಿಳೆಯರಿಂದ ಹಣ ವಸೂಲಿ ವಾಡಿದ್ದಾರೆ. ಇವರ ಏಜೆಂಟ್ ಆಗಿ ಜಮುನಾ ಎಂಬವರು ಕಾರ್ಯನಿರ್ವಹಿಸಿದ್ದಾರೆ. ಮಂಗಳೂರಿನ ನಾಗರಾಜ್ ಶೆಟ್ಟಿ ಎಂಬವರು ಇದರ ಕಿಂಗ್ ಆಗಿದ್ದು, ಈ ವ್ಯಕ್ತಿ ಜಿಲ್ಲಾಧಿಕಾರಿಗಳ ಮೂಲಕ ಲೋನ್ ಕೊಡಿಸುವುದಾಗಿ ಕುಸುವಾವತಿಯವರು ಮಹಿಳೆಯರು  ಹೇಳಿಕೊಂಡಿದ್ದಾರೆ.

ಸಬ್ಸಿಡಿ ಲೋನ್: ಆರ್ಯ ಜನಾಂಗದವರಿಗೆ ಸಂಬಂಧಿಸಿದ ಇಲಾಖೆಯಿಂದ ಸಬ್ಸಿಡಿ ಲೋನ್ ಕೊಡಿಸುವುದಾಗಿ ಕುಸುವಾವತಿ ಎಂದು ಆಮಿಷವೊಡ್ಡಲಾಗಿದೆ. ಹಿಂದುಳಿಗೆ ವರ್ಗದವರಿಗೆ ಒಂದು ಲಕ್ಷ ರೂ. ಸಬ್ಸಿಡಿ, ಅಲ್ಪಸಂಖ್ಯಾತರಿಗೆ ಹಾಗೂ ಪ.ಪಂ. ಜಾತಿ ಹಾಗೂ ಪ.ಪಂಗಡದವರಿಗೆ ಒಂದೂವರೆ ಲಕ್ಷ ರೂ. ಸಬ್ಸಿಡಿ ದೊರಕುತ್ತದೆ. ಒಟ್ಟು ಎಲ್ಲರಿಗೂ ತಲಾ ಮೂರು ಲಕ್ಷ ರೂ. ಲೋನ್ ಸಿಗುತ್ತದೆ. ನಾಲ್ಕು ವರ್ಷಗಳಲ್ಲಿ ಕಂತುಕಂತಾಗಿ ಸಾಲ ತೀರಿಸಬಹುದಾಗಿದೆ ಎನ್ನಲಾಗಿದೆ.
ವಾದಾಮಟ್ಟಣದಲ್ಲಿ ಸಿಕ್ಕಿಬಿದ್ದ ಮಹಿಳೆ: ಕುಶಾಲನಗರದ ಕೂಡಿಗೆ, ಕೂಡುಮಂಗಳೂರು, ಬೈಚನಹಳ್ಳಿ, ಗೊಂದಿಬಸವನಹಳ್ಳಿ, ಕೊಡಗರ ಹಳ್ಳಿ ಹಾಗೂ ಹಲವೆಡೆ ಮಹಿಳೆಯರಿಂದ ಹಣ ಪಡೆಯಲಾಗಿದ್ದು, ಮಂಗಳವಾರ ವಾದಾಪಟ್ಟಣದಲ್ಲಿ ಮಹಿಳೆಯನ್ನು ಸಾರ್ವಜನಿಕರು ದಿಗ್ಬಂಧನ್ನಕೊಳಪಡಿಸಿದ್ದಾರೆ. ವಾದಾಪಟ್ಟಣದಲ್ಲಿ ೮೭ ಸಾವಿರ ರೂ. ಸಂಗ್ರಹಿಸಲಾಗಿದೆ. ಗೊಂದಿಬಸವನಹಳ್ಳಿಯಲ್ಲಿ ಒಂದು ಲಕ್ಷ ರೂ. ಸಂಗ್ರಹಿಸಲಾಗಿದ್ದು, ಕೊಡಗರಹಳ್ಳಿಯಲ್ಲಿ ೬೯ ಸಾವಿರ ಹಣ ಸಂಗ್ರಹಿಸಲಾಗಿದೆ ಎಂದು ಆಯ ಭಾಗದ ಮಹಿಳೆಯವರು ವಾಹಿತಿ ನೀಡಿದ್ದಾರೆ. ಮಹಿಳೆ ಕೊಡಗಿನಾದ್ಯಂತ ಹಣ ಸಂಗ್ರಹಿಸಿದ್ದು, ಕುಶಾಲನಗರದಲ್ಲಿ ಸುವಾರು ೧೨ ಲಕ್ಷ ರೂ. ಸಂಗ್ರಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಕರಣ ದಾಖಲು: ಈ ಘಟನೆ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸರು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಸಿಕೊಂಡಿದ್ದು, ಮಹಿಳೆುಂರನ್ನು ಬಂಧಿಸಿ ತನಿಖೆ ಪ್ರಾರಂಭಿಸಿದ್ದಾರೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಜನರ ಹಣವನ್ನು ಹಾಗೂ ಪಡೆಯಲಾಗಿರುವ ದಾಖಲಾತಿಗಳನ್ನು ಹಿಂದಿಗಿಸಬೇಕು ಎಂದು ಕುಶಾಲನಗರದ ಎಸ್.ಡಿ.ಪಿ.ಐ. ಘಟಕದ ಅಧ್ಯಕ್ಷ ಜಕ್ರಿಯಾ ಒತ್ತಾಯಿಸಿದ್ದಾರೆ.

ನಾನು ಪೊಲೀಸ್ ಎಂದಿದ್ದ ಮಹಿಳೆ!
ಪೊಲೀಸರ ವಶದಲ್ಲಿರುವ ಕುಸುವಾವತಿ ಎಂಬ ಮಹಿಳೆಯರು ಬೇರೆ ಬೇರೆ ಕಡೆಗಳಲ್ಲಿ ನಾನಾ ಹೆಸರನ್ನು ಹೇಳಿಕೊಂಡಿದ್ದಾರೆ. ಈಕೆ ಪೊಲೀಸ್ ಹುದ್ದೆ ನಿರ್ವಹಿಸುವುದಾಗಿಯೂ, ರಾತ್ರಿ ಪಾಳಿ ವಾಡುವುದಾಗಿ ಹೇಳಿಕೊಂಡಿದ್ದಾರೆ. ಪೊಲೀಸ್ ಹುದ್ದೆಯಲ್ಲಿರುವುದರಿಂದ ವಂಚಿಸುವುದಿಲ್ಲ ಎಂದು ಸಾರ್ವಜನಿಕರು ನಂಬಿಕೆಯಿಂದ ಹಣ ನೀಡಿದ್ದಾರೆ.

andolanait

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

1 hour ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

1 hour ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

1 hour ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

1 hour ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

1 hour ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

2 hours ago