ಕಂಚಮಲ್ಲಿ ಗೇಟ್ ಸ್ವಾಗತ ಕಮಾನು ಸಮೀಪ ತಡರಾತ್ರಿ ಚಿರತೆ ಪತ್ತೆ
ಮೈಸೂರು: ಜಿಲ್ಲೆಯಾದ್ಯಂತ ಮೂಲೆ ಮೂಲೆಯಲ್ಲೂ ಚಿರತೆ ಪ್ರತ್ಯೇಕ್ಷವಾಗುತ್ತಿದ್ದು, ಇದೀಗ ಮೈಸೂರು ಮಾನಂದವಾಡಿ ರಸ್ತೆಯ ಕಂಚಮಳ್ಳಿ ಗೇಟ್ ಸಮೀಪ ಇರುವ ಸ್ವಾಗತ ಕಮಾನು ಬಳಿ ಚಿರತೆ ಕಾಣಿಸಿಕೊಂಡಿದ್ದು ಅಲ್ಲಿನ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಶನಿವಾರ ರಾತ್ರಿ 1ಗಂಟೆ 15 ನಿಮಿಷಕ್ಕೆ ಚಿರತೆ ಕಾಣಿಸಿಕೊಂಡಿದೆ. ಹಂಪಾಪುರದ ಗ್ರಾಮಸ್ಥರೊಬ್ಬರು ರಾತ್ರಿ ತಮ್ಮ ಕೆಲಸ ಮುಗಿಸಿ ಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ಚಿರತೆಯೊಂದು ಹೋಗುತ್ತಿದ್ದನ್ನು ನೋಡಿದ್ದಾರೆ. ನಾಯಿಯೊಂದು ರಸ್ತೆ ದಾಟುತ್ತಿದೆ ಎಂದು ಸಮೀಪ ಹೋಗುತ್ತಿದ್ದಾಗ ಹಾಗೆ ಚಿರತೆ ಬೈಕ್ ಹಾರನ್ ಶಬ್ಧಕ್ಕೆ ಓಡಿಹೋಯಿತು ಎಂದು ಹೇಳಿದ್ದಾರೆ.
ಈ ಹಿಂದೆಯು ಹಂಪಾಪುರ ಗ್ರಾಮದಲ್ಲಿ ಮನೆ ಹಿಂಭಾಗ ಚಿರತೆ ಬಂದು ಹೋಗಿದ್ದ ಗುರುತು ಸಿಕ್ಕಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಚಿರತೆ ಭಯದಿಂದ ಸ್ಥಳೀಯ ನಿವಾಸಿಗಳು, ಬಹುತೇಕ ರೈತರು ತಮ್ಮ ಜಮೀನಿನಲ್ಲಿ ಉಳಿದುಕೊಳ್ಳಲು ಹಾಗೂ ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ.
ಇಲಾಖೆಯವರು ಚಿರತೆಯನ್ನು ಹಿಡಿದು ಅರಣ್ಯಕ್ಕೆ ಸ್ಥಳಾಂತರಿಸಬೇಕು ಎಂಬುದು ಆಗ್ರಹಿಸಿದ್ದಾರೆ.
ಬೆಂಗಳೂರು : ಹಾಲಿನ ದರ ಏರಿಕೆ ಕುರಿತು ರಾಜ್ಯದಲ್ಲಿ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ…
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆ ಮತ್ತಷ್ಟು ವಿಸ್ತರಿಸಿದ್ದು, ಪ್ರಶ್ನೆಪತ್ರಿಕೆ…
ಡಾ.ಪ್ರಮೀಳಾದೇವಿ ಬಿ.ಕೆ ಗಾಂಧೀಜಿಯ ನೆರಳಿ ನಂತಿದೂ ಅವರ ಚಿಂತನೆಗಳ, ಪ್ರಯೋಗ ಗಳನ್ನು ತಿದ್ದಿ ತೀಡಿದ ಪತ್ನಿ ಕಸ್ತೂರ ಬಾ. ಬಾಲ್ಯ…
ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ…
ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.…
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…