ಜಿಲ್ಲೆಗಳು

ಕನ್ನಡದ ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರ ಮನೆಯಿನ್ನು ‘ಬೆಳ್ಳಿಮೋಡ’

ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ನಿವಾಸವನ್ನು ವಸ್ತುಸಂಗ್ರಹಾಲಯವಾಗಿಸಲು ಯೋಜನೆ ರೂಪಿಸಿದ ಪುತ್ರಿ

ಗಿರೀಶ್ ಹುಣಸೂರು

ಮೈಸೂರು: ಜನರ ಮನಸ್ಸಿನಲ್ಲಿ ಬೇರೂರಿದ್ದ ಕಂದಾಚಾರ ಹಾಗೂ ಸಾಂಪ್ರದಾಯಿಕ ವಿಚಾರಗಳ ಬೇಲಿಯನ್ನು ಮುರಿದು ಮಹಿಳಾ ಸಬಲೀಕರಣ, ಪ್ರತಿಬಂಧಗಳ ನಿಷೇಧಗಳ ವಿರೋಧ, ಜನರ ಮನಸ್ಸಿನಲ್ಲಿ ನಿಗ್ರಹಿಸಲ್ಪಟ್ಟ ಬಯಕೆಗಳ ಅನಾವರಣ ಮಾಡುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಬಹಳ ಬೇಗನೇ ಜನಪ್ರಿಯತೆಗಳಿಸಿದ ಕನ್ನಡದ ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರ ಮನೆಯನ್ನು ಜೀರ್ಣೋದ್ಧಾರಗೊಳಿಸಿ ವಸ್ತುಸಂಗ್ರಹಾಲಯವನ್ನಾಗಿಸಲು ಯೋಜನೆ ರೂಪಿಸಲಾಗುತ್ತಿದ್ದು, ಜೀರ್ಣೋದ್ಧಾರಗೊಂಡ ಮನೆಗೆ ತ್ರಿವೇಣಿಯವರ ಕಾದಂಬರಿ ಆಧರಿಸಿದ ಜನಪ್ರಿಯ ಸಿನಿಮಾ ‘ಬೆಳ್ಳಿಮೋಡ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ.

ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ತ್ರಿವೇಣಿಯವರ ಮನೆಯನ್ನು ಅವರ ಪುತ್ರಿ ಮೀರಾ ಕುಮಾರ್ ಅವರು ತಮ್ಮ ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನದ ಮೂಲಕ ವಸ್ತುಸಂಗ್ರಹಾಲಯ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ತ್ರಿವೇಣಿಯವರ ಹಳೆ ಮನೆಯ ಜೀರ್ಣೋದ್ಧಾರ ಕಾರ್ಯವನ್ನು ಹಳೆಯ ಕಟ್ಟಡಗಳ ಶಿಲ್ಪಶಾಸ್ತ್ರಜ್ಞರಾದ ಪಂಕಜ್ ಮೋದಿ, ರಘುನಾಥ್ ಹಾಗೂ ಅವರ ತಂಡದವರಿಗೆ ವಹಿಸಲಾಗಿದೆ.

ತ್ರಿವೇಣಿಯವರು ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಧ್ವನಿಗೆ ಪೂರ್ಣರೂಪದ ಪ್ರತಿಧ್ವನಿಯಾಗಿದ್ದವರು. ಅವರ ಬಹುತೇಕ ಕೃತಿಗಳಲ್ಲಿನ ಪಾತ್ರಗಳು ಪುರುಷ ಪ್ರಧಾನ ವ್ಯವಸ್ಥೆಯ ರೂಢಿಗತ ಕಟ್ಟುಪಾಡುಗಳ ವಿರುದ್ಧ ದೃಢವಾದ ಧ್ವನಿ ಎತ್ತುತ್ತವೆ. ಮಹಿಳೆಯರ ಬಗ್ಗೆ ನಡೆಯುವ ಸಾಮಾಜಿಕ ಅನ್ಯಾಯಗಳು, ಶೋಷಣೆಗಳ ಬಗ್ಗೆ ತ್ರಿವೇಣಿಯವರಿಗೆ ಇದ್ದ ಸಾಮಾಜಿಕ ಬದ್ಧತೆ, ಆಳವಾದ ಕಳಕಳಿ, ಅವರ ಕೃತಿಗಳ ಬಗ್ಗೆ ಈಗಲೂ ಮುಂದುವರಿಯುತ್ತಿರುವ ಜನರ ಆಸಕ್ತಿಯೇ ಸಾಕ್ಷಿಯಾಗಿದೆ. ಇಂದಿಗೂ ಸಹ ಅವರ ಕಾದಂಬರಿಗಳು, ಸಣ್ಣಕತೆಗಳನ್ನು ಓದುವ ಬಳಗ ದೊಡ್ಡದಿದೆ. ಜೊತೆಗೆ ಅವರ ಅನೇಕ ಕೃತಿಗಳು ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಗಿವೆ.

ಸಾಂಸಾರಿಕ ಹಾಗೂ ದಾಂಪತ್ಯ ಜೀವನ, ಪ್ರೇಮ-ಪ್ರಣಯ, ಬಾಲ್ಯ ವಿವಾಹ, ಮನೋ ವೈಜ್ಞಾನಿಕ, ವಿಧವಾ ವಿವಾಹ, ಸರಸ-ಸಲ್ಲಾಪಗಳ ಚಿತ್ರಣಗಳ ಕುರಿತು, ಸ್ತ್ರೀಯರ ಪರವಾಗಿ ಅನ್ಯಾಯಗಳನ್ನು ಪ್ರತಿಭಟಿಸುವ ಹಾಗೂ ತೀವ್ರವಾಗಿ ಖಂಡಿಸುವ ಬರಹಗಳು, ಮನೋರೋಗಳ ಬಗ್ಗೆ ಅರಿವು ಮೂಡಿಸುವ ಬರಹಗಳನ್ನು ಅವರ ಕೃತಿಗಳಲ್ಲಿ ಕಾಣಸಿಗುತ್ತವೆ. ತ್ರಿವೇಣಿಯವರ ಕೃತಿಗಳಲ್ಲಿ ಬಿಂಬಿಸಿರುವ ಸ್ತ್ರೀಯರ ಮನಸ್ಸಿನ ಸೂಕ್ಷ್ಮತೆ ಹಾಗೂ ಅನೇಕ ಅಂದಿನ ಸಮಸ್ಯೆಗಳು ಇಂದಿನ ಕಾಲಕ್ಕೂ ಅನ್ವಯಿಸುತ್ತವೆ. ಇದೇ ಕಾರಣದಿಂದ ಅವರ ಕೃತಿಗಳು ಇಂದಿಗೂ ಜನಪ್ರಿಯವಾಗಿ ಸಹಸ್ರಾರು ಮರು ಪ್ರತಿಗಳು ಪ್ರಕಟವಾಗಿ ಓದುಗರಿಂದ ಸ್ವೀಕರಿಸಲ್ಪಟುತ್ತಿವೆ. ತ್ರಿವೇಣಿಯವರ ಹೆಸರು ಶಾಶ್ವತ ಮಿನುಗುತಾರೆಯಾಗಿ ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಂತೆ ಮಿನುಗುತ್ತಿದೆ.

೧೯೫೦ ರಿಂದ ೧೯೬೩ರವರೆಗೆ ೧೩ ವರ್ಷಗಳ ಅವಧಿಯಲ್ಲಿ ೨೧ ಕಾದಂಬರಿಗಳು, ೪೧ ಸಣ್ಣ ಕತೆಗಳನ್ನು ಬರೆಯುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಬಹಳ ಬೇಗ ಉತ್ತುಂಗಕ್ಕೇರಿದ್ದರು. ಪುರುಷ ಲೇಖಕರೇ ಕೆಲವು ವಸ್ತು ವಿಷಯಗಳನ್ನು ಬರೆಯಲು ಹಿಂಜರಿಯುತ್ತಿದ್ದ ಕಾಲಘಟ್ಟದಲ್ಲಿ ಸಮಾಜದ ಕಟ್ಟುಪಾಡುಗಳನ್ನು ಪ್ರತಿಭಟಿಸಿ ನಿಲ್ಲುವ ವಸ್ತು ವಿಷಯಗಳನ್ನು ಇಟ್ಟುಕೊಂಡು ಬರೆದ ಅವರ ಬರಹಗಳು ಜನರ ಗಮನ ಸೆಲೆಯುವಲ್ಲಿ ಯಶಸ್ವಿಯಾಗಿದ್ದವು. ಇಷ್ಟು ಮಾತ್ರವಲ್ಲ. ಅವರ ಕೃತಿಗಳನ್ನು ಆಧರಿಸಿ ಕನ್ನಡ ಚಿತ್ರರಂಗದವರು ಶರಪಂಜರ, ಬೆಳ್ಳಿಮೋಡ, ಹೂವು-ಹಣ್ಣು , ಹಣ್ಣೆಲೆ ಚಿಗುರಿದಾಗ, ಕಂಕಣ ಎಂಬ ಜನಪ್ರಿಯ ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರ ರಸಿಕರಿಗೆ ಉಣಬಡಿಸಿದ್ದಾರೆ.


ತ್ರಿವೇಣಿಯವರು ಬಾಳಿ ಬದುಕಿದ್ದ ಹಳೇ ಮನೆಯನ್ನು ಜೀರ್ಣೋದ್ಧಾರಗೊಳಿಸಿ, ಆ ಮನೆಯನ್ನು ವಸ್ತು ಸಂಗ್ರಹಾಲಯ ಮಾಡಿ, ಸಾಹಿತ್ಯಿಕ ಚಟುವಟಿಕೆಗಳಿಗೆ ವೇದಿಕೆ ಒದಗಿಸಲು ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನದಿಂದ ಯೋಜನೆ ರೂಪಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ವಾಸ್ತುಶಿಲ್ಪಿಗಳು ಸ್ಥಳಕ್ಕೆ ಭೇಟಿ ನೀಡಿ ವಿನ್ಯಾಸ ರೂಪುಗೊಳಿಸಲಿದ್ದಾರೆ.

-ಮೀರಾ ಕುಮಾರ್, ತ್ರಿವೇಣಿಯವರ ಮಗಳು

andolanait

Recent Posts

ಓದುಗರ ಪತ್ರ: ಭ್ರಷ್ಟಾಚಾರ ಬಗ್ಗು ಬಡಿಯಲು ಸಿಎಂ ಮುಂದಾಗುವರೇ?

ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಾಯುಕ್ತರು ಆಗಾಗ್ಗೆ ದಾಳಿ ನಡೆಸುವುದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈಗಿನ ಪತ್ರಿಕಾ ವರದಿಗಳ ಪ್ರಕಾರ, ಮೂರೂವರೆ ವರ್ಷಗಳಲ್ಲಿ…

2 hours ago

ಓದುಗರ ಪತ್ರ: ಸದ್ದು ಮಾಡದ ತುಪ್ಪ, ಬೆಣ್ಣೆ ಬೆಲೆ ಏರಿಕೆ!

ನಂದಿನಿ ಉತ್ಪನ್ನಗಳಾದ, ತುಪ್ಪ ಕೆ.ಜಿಗೆ ರೂ.೧೫ ಮತ್ತು ಬೆಣ್ಣೆ ಕೆ.ಜಿಗೆ ರೂ.೫೦ ಅನ್ನು ಇದೇ ತಿಂಗಳ ೨೪ ರಿಂದಲೇ ಗ್ರಾಹಕರಿಗೆ…

2 hours ago

ಓದುಗರ ಪತ್ರ: ಬರ…ಅಬ್ಬರ !

ಬರ...ಅಬ್ಬರ ! ಬರ ಬರ ಬರ್ಬರ ಮಳೆ ಇಲ್ಲ; ಬೆಳೆ ಇಲ್ಲ ಬರಡಾಯಿತಲ್ಲ ಬದುಕೆಲ್ಲ ಜನ-ಜನುವಾರುಗಳ ಬದುಕೀಗ ಅಕ್ಷರಶಃ ಬರ್ಬರ…

2 hours ago

ಓದುಗರ ಪತ್ರ: ಪರೀಕ್ಷಾ ವ್ಯವಸ್ಥೆ ಸಮಗ್ರ ಸುಧಾರಣೆ ಅತ್ಯಗತ್ಯ

ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಉನ್ನತ ಅಧಿಕಾರ ಕಾರ್ಯಪಡೆ ರಚಿಸಿರುವುದು ಅತ್ಯಂತ ಸಮಯೋಚಿತ ಕ್ರಮವಾಗಿದೆ. ಪ್ರತಿವರ್ಷ…

2 hours ago

ಆರ್‌ಟಿಇ; ಮಕ್ಕಳು ಅವಕಾಶ ವಂಚಿತರಾಗಬಾರದು

ಶಾಂತರಾಜು ಬಸ್ತೀಪುರ ಬಜೆಟ್ ಘೋಷಣೆಯಂತೆ ಪ್ರೌಢಶಾಲೆಗೂ ವಿಸ್ತರಣೆಯಾಗಲಿ ಬಡತನ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ…

2 hours ago

ಕೋವಿಡ್: ಕೊಡಗು ಜಿಲ್ಲೆಯಲ್ಲಿಯೂ ಅಗತ್ಯ ಕಟ್ಟೆಚ್ಚರ

ನವೀನ್ ಡಿಸೋಜ ಮಡಿಕೇರಿ: ಕೋವಿಡ್-೧೯ ಸೋಂಕಿನ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಅಗತ್ಯ…

2 hours ago