ಹಾಸನ: ಮೂರು ದಿನಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ! ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದೆ.
ನಾಗೇನಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 57 ವರ್ಷದ ಹಫೀಜುರ್ ರೆಹಮಾನ್ ಅವರನ್ನು ಕಾಡಾನೆ ತುಳಿದು ಸಾಯಿಸಿದೆ. ಶನಿವಾರವಷ್ಟೇ ಚೌಡನಹಳ್ಳಿಯ ಜಯಮ್ಮ ಕಾಡಾನೆ ದಾಳಿಗೆ ಬಲಿಯಾಗಿದ್ದರು.
ಮತ್ತೊಂದು ಸಾವಿನ ಬೆನ್ನಲ್ಲೇ ಬೇಲೂರು ತಾಲೂಕು ಆಸ್ಪತ್ರೆ ಎದುರು ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಅಂಬುಲೆನ್ಸ್ ತಡೆದು, ಮೃತದೇಹವನ್ನು ಘಟನಾ ಸ್ಥಳಕ್ಕೆ ಕೊಂಡೊಯ್ಯುವಂತೆ ಪಟ್ಟು ಹಿಡಿದಿದ್ದಾರೆ.
ನಾಗೇನಹಳ್ಳಿಯಲ್ಲೂ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವಿನ ತಳ್ಳಾಟದಲ್ಲಿ ಅರೇಹಳ್ಳಿ ಪಿಎಸ್‌ಐ ಯೋಗಭರಂ ಅವರ ಕೈಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಬೇಲೂರು ಭಾಗದ ಕಾಡಾನೆಗಳನ್ನು ಭದ್ರ ಅರಣ್ಯಕ್ಕೆ ಓಡಿಸಲು ಆದೇಶಿಸಲಾಗಿದ್ದು, ಮಂಗಳವಾರದಿಂದ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆದಿತ್ತು. ಈ ಮಧ್ಯೆಯೇ ಮತ್ತೊಂದು ಜೀವ ಬಲಿಯಾಗಿದ್ದು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೊಡಗು: ಗುಜರಾತ್ ಮೂಲದ ದಂಪತಿಯನ್ನು ಬಲಿ ಪಡೆದ ಸ್ಪೀಡ್ ಬೋಟ್ ದುರಂತದ ಬೆನ್ನಲ್ಲೇ, ಕೊಡಗಿನ ಹಾರಂಗಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳನ್ನು…
ಮಂಡ್ಯ: ಜಿಲ್ಲೆಯ ಪ್ರಸಿದ್ಧ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನವೆಂಬರ್ 17ರ ರಾತ್ರಿ 7 ಗಂಟೆಗೆ ಅದ್ಧೂರಿ ರಾಜಮುಡಿ ಕಿರೀಟಧಾರಣಾ ಮಹೋತ್ಸವ ನಡೆಯಲಿದೆ.…
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊನ್ನೆ ಮೈಸೂರಿಗೆ ಆಗಮಿಸಿದ್ದಾಗ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ ಮತ್ತೆ ಸುದ್ದಿಯಾಯಿತು. ಪ್ರಧಾನಮಂತ್ರಿಗಳ ಸಮ್ಮುಖದ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಅಂದು ಒಬ್ಬ ಪ್ರತಿಭಾವಂತ ಕಲಾವಿದೆ, ಇಂದು... ಸಣ್ಣ ಸದ್ದಿನೊಂದಿಗೆ ಬಾಗಿಲು ತೆರೆದುಕೊಂಡಾಗ ಕುರ್ಚಿಯಲ್ಲಿ ಕುಳಿತು…
ಲಕ್ಷ್ಮಿಕಾಂತ್ ಕೋಮಾರಪ್ಪ ೩.೫೦ ಕೋಟಿ ರೂ. ವೆಚ್ಚದಲ್ಲಿ ಜಲಪಾತ ಅಭಿವೃದ್ಧಿಪಡಿಸಿದ್ದರೂ ಗ್ರಾಮಕ್ಕಿಲ್ಲ ರಸ್ತೆ ಸೋಮವಾರಪೇಟೆ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ…
ಚಾವಣಿ ಕುಸಿದು ಶಿಥಿಲಾವಸ್ಥೆ ತಲುಪಿದ ಕಟ್ಟಡ: ಆರು ತಿಂಗಳಿಂದ ಕಟ್ಟಡಕ್ಕೆ ಬೀಗ; ದುರಸ್ತಿ ಕಾರ್ಯ ಯಾವಾಗ? ಮೈಸೂರು: ತತ್ವಜ್ಞಾನಿ, ಮಾಜಿ…