ಚಾಮರಾಜನಗರ

20 ವರ್ಷಗಳಿಂದ ಮುಚ್ಚಳಕ್ಕಾಗಿ ಕಾಯುತ್ತಿದೆ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಟ್ಯಾಂಕ್!

ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏರಿಕಾಡು ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಕುಡಿಯುವ ನೀರಿನ ಟ್ಯಾಂಕ್‌ಗೆ ಮುಚ್ಚಳವೇ ಇಲ್ಲದೆ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಹನೂರು ತಾಲೂಕು ಅಧ್ಯಕ್ಷ ಲೂರ್ದುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ಏರಿಕಾಡು ಗ್ರಾಮದ ಅರ್ಧದಷ್ಟು ಜನರು ಇದೇ ಟ್ಯಾಂಕ್‌ನ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಆದರೆ ಟ್ಯಾಂಕ್‌ಗೆ ಮುಚ್ಚಳವಿಲ್ಲದ ಕಾರಣ ಕೋತಿಗಳು ಅದರೊಳಗೆ ಇಳಿದು ಸ್ನಾನ ಮಾಡುತ್ತಿವೆ. ಟ್ಯಾಂಕ್‌ನ ಸುತ್ತಮುತ್ತ ಗಲೀಜು ತುಂಬಿಕೊಂಡಿದ್ದು, ನೀರು ಸಂಪೂರ್ಣ ಕಲುಷಿತಗೊಂಡಿದೆ.

ಟ್ಯಾಂಕ್ ತುಂಬಿ ಹರಿದು ಸಾವಿರಾರು ಲೀಟರ್ ನೀರು ಪ್ರತಿದಿನ ವ್ಯರ್ಥವಾಗುತ್ತಿದೆ. ನೀರನ್ನು ನಿಲ್ಲಿಸುವ ಬಗ್ಗೆಯೂ, ಟ್ಯಾಂಕ್ ಸ್ವಚ್ಛಗೊಳಿಸುವ ಬಗ್ಗೆಯೂ ಯಾರೂ ಗಮನ ಹರಿಸುತ್ತಿಲ್ಲ” ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಕಾಡಾನೆಗಳ ದಾಳಿ: ಜೋಳ, ತೆಂಗು ಸೇರಿದಂತೆ ಅನೇಕ ಬೆಳೆ ನಾಶ, ರೈತರಲ್ಲಿ ಆತಂಕ

ಹನೂರು: ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಲಾದರ್ ದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ…

32 seconds ago

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಜಾರಿಯಾಗಲಿ

ಬೆಂಗಳೂರಿನಿಂದ ಸುಮಾರು ೯೦ ಕಿ.ಮೀ. ದೂರದಲ್ಲಿರುವ ಕಾವೇರಿ ಮತ್ತು ಅರ್ಕಾವತಿ ಸಂಗಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೯,೦೦೦ ಕೋಟಿ ರೂ. ವೆಚ್ಚದ…

2 hours ago

ಓದುಗರ ಪತ್ರ: ಗ್ರಂಥಾಲಯ ಸಪ್ತಾಹ ಜ್ಞಾನದ ಹಬ್ಬವಾಗಲಿ

ಪುಸ್ತಕವೆಂದರೆ ಕೇವಲ ಕಾಗದದ ಮೇಲಿನ ಅಕ್ಷರಗಳಲ್ಲ; ಅದು ಬದುಕಿಗೆ ಬೆಳಕು ನೀಡುವ eನದ ಜ್ಯೋತಿ. ಇಂತಹ ಪುಸ್ತಕಗಳ ಭಂಡಾರವಾಗಿರುವ ಗ್ರಂಥಾಲಯಗಳು…

2 hours ago

ಓದುಗರ ಪತ್ರ: ಅಧಿಕಾರಿಗಳಿಗೆ ತಪಾಸಣಾ ಸ್ವಾತಂತ್ರ್ಯ ಇಲ್ಲವೇ?!

ಆಹಾರ ಮತ್ತು ಕಾನೂನು ಮಾಪನ ಶಾಸ ಇಲಾಖೆ ಅಧಿಕಾರಿಗಳು ರಾಜ್ಯದ ೯ ಎಪಿಎಂಸಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸಚಿವ…

2 hours ago

ಒಳಿತನ್ನು ಸಂಭ್ರಮಿಸುವುದು ಹೇಳಿಕೊಟ್ಟೀರಿ ನೀವು…

ಪ್ರಸನ್ನ ಹೆಗ್ಗೋಡು, ರಂಗಕರ್ಮಿ ಇತ್ತೀಚೆಗೆ ನಿಧನರಾದ ಹಿರಿಯ ಲೇಖಕ, ಪ್ರಗತಿಪರ ಚಿಂತಕ ಕೆ.ವಿ.ನಾರಾಯಣ ಕುರಿತು ರಂಗಕರ್ಮಿ ಪ್ರಸನ್ನ ಅವರು ತಮ್ಮ…

2 hours ago

ಆತ್ಮಹತ್ಯೆಗೆ ಮುಂದಾದ ವ್ಯಕ್ತಿಯ ಬಾಳು ಬೆಳಕಾದ ಪರಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಜಗತ್ತಿನ ಅತ್ಯಂತ ತಣ್ಣಗಿನ ಮ್ಯಾರಥಾನ್‌ನಲ್ಲಿ ಈವರೆಗೆ ಭಾಗವಹಿಸಿದ ಏಕೈಕ ಭಾರತೀಯ ರಾಮ್ ಗೋಪಾಲ್ ಕೊಟಾರಿ…

2 hours ago