ಆಹಾರ ಮತ್ತು ಕಾನೂನು ಮಾಪನ ಶಾಸ ಇಲಾಖೆ ಅಧಿಕಾರಿಗಳು ರಾಜ್ಯದ ೯ ಎಪಿಎಂಸಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಸಚಿವ ರಿಜ್ವಾನ್ ಅರ್ಷದ್ ಸ್ವತಃ ಮೈಸೂರು ಎಪಿಎಂಸಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ‘ಬಿಸಿ’ ಮುಟ್ಟಿಸಿದ್ದಾರೆ.
ಅಕ್ಕಿ ಅಕ್ರಮ ದಾಸ್ತಾನು ಮಾಡದಂತೆ ಎಚ್ಚರಿಸಿದ್ದಾರೆ. ಆದರೆ ಜನರು ಹೆಚ್ಚಾಗಿ ಬಳಸುವ ಊಟದ ಅಕ್ಕಿ, ಅದರಲ್ಲೂ ಸೋನಾ ಮಸೂರಿನಲ್ಲಿ ಅಕ್ಕಿ ಬೆಲೆ ಕೆ.ಜಿ.ಗೆ ೧೨೬ ರೂ ಆಗಿದೆ. ಸಚಿವರು ಬೆಲೆ ಏರಿಕೆ ಬಗ್ಗೆ ಗಮನ ಹರಿಸಬೇಕು.ಇತ್ತೀಚೆಗೆ ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ಬಗ್ಗೆಯೂ ಪರೀಕ್ಷೆ ಮಾಡಿಸಿ ಸಚಿವರು ವರದಿ ಮಾಡಿದ್ದರು. ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಔಷಧ ಸಗಟು ಮಾರಾಟ ಮಳಿಗೆ ಗಳಿಗೆ ಭೇಟಿ ನೀಡಿ ಔಷಧಿ ತಯಾರಿಕ ದರಕ್ಕೂ, ಮಾರಾಟ ದರಕ್ಕೂ ಅಜ -ಗಜ ವ್ಯತ್ಯಾಸವಿರುವುದನ್ನು ಪತ್ತೆ ಹಚ್ಚಿ, ಕೇಂದ್ರ ಸರ್ಕಾರಕ್ಕೆ ವರದಿ ಮಾಡಿದ ನಂತರ ಲಾಭವನ್ನು ಶೇ.೩೦ ಕ್ಕೆ ನಿಗದಿ ಪಡಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಸಚಿವರು, ಹೋಟೆಲ, ಬೇಕರಿಗಳಿಗೆ ಭೇಟಿ ನೀಡಿ ಅಲ್ಲಿನ ಶುಚಿತ್ವ, ಎಣ್ಣೆ ಬಳಕೆ, ಬಗ್ಗೆ ವರದಿ ಮಾಡಿದ್ದರು. ಹೀಗೆ ಸಚಿವರೇ ಭೇಟಿ ನೀಡುವುದು, ಪರಿಶೀಲಿಸುವುದು, ದಾಳಿ ಮಾಡುವುದು ಆದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಎಪಿಎಂಸಿಯಲ್ಲಿ ೧೨ ತೂಕದ ಯಂತ್ರಗಳು ತೂಕದಲ್ಲಿ ವ್ಯತ್ಯಾಸ ತೋರಿಸುತ್ತಿದ್ದುದನ್ನು ಇಲಾಖೆಯ ಅಧಿಕಾರಿಗಳು ಈವರೆವಿಗೂ ಏಕೆ ಪರಿಶೀಲನೆ ಮಾಡಿರಲಿಲ್ಲ? ಸಚಿವರು ಸಂಬಂಧಪಟ್ಟ ಅಧಿಕಾರಿ,ನೌಕರನ್ನು ಅಮಾನತ್ತುಪಡಿಸಿ ವಿಚಾರಣೆಗೆ ಗುರಿಪಡಿಸಲಿ. ಇಲ್ಲದಿದ್ದರೆ ವ್ಯವಸ್ಥೆ ಹಾಗೆಯೇ ಮುಂದುವರಿಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.
-ಮುಳ್ಳೂರು ಪ್ರಕಾಶ್, ಮೈಸೂರು
ಬೆಂಗಳೂರಿನಿಂದ ಸುಮಾರು ೯೦ ಕಿ.ಮೀ. ದೂರದಲ್ಲಿರುವ ಕಾವೇರಿ ಮತ್ತು ಅರ್ಕಾವತಿ ಸಂಗಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೯,೦೦೦ ಕೋಟಿ ರೂ. ವೆಚ್ಚದ…
ಪುಸ್ತಕವೆಂದರೆ ಕೇವಲ ಕಾಗದದ ಮೇಲಿನ ಅಕ್ಷರಗಳಲ್ಲ; ಅದು ಬದುಕಿಗೆ ಬೆಳಕು ನೀಡುವ eನದ ಜ್ಯೋತಿ. ಇಂತಹ ಪುಸ್ತಕಗಳ ಭಂಡಾರವಾಗಿರುವ ಗ್ರಂಥಾಲಯಗಳು…
ಪ್ರಸನ್ನ ಹೆಗ್ಗೋಡು, ರಂಗಕರ್ಮಿ ಇತ್ತೀಚೆಗೆ ನಿಧನರಾದ ಹಿರಿಯ ಲೇಖಕ, ಪ್ರಗತಿಪರ ಚಿಂತಕ ಕೆ.ವಿ.ನಾರಾಯಣ ಕುರಿತು ರಂಗಕರ್ಮಿ ಪ್ರಸನ್ನ ಅವರು ತಮ್ಮ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಜಗತ್ತಿನ ಅತ್ಯಂತ ತಣ್ಣಗಿನ ಮ್ಯಾರಥಾನ್‌ನಲ್ಲಿ ಈವರೆಗೆ ಭಾಗವಹಿಸಿದ ಏಕೈಕ ಭಾರತೀಯ ರಾಮ್ ಗೋಪಾಲ್ ಕೊಟಾರಿ…
ಕೃಷ್ಣ ಸಿದ್ದಾಪುರ ಪರಿಸರ ಮಾಲಿನ್ಯ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ; ಸೂಕ್ತ ಕ್ರಮಕ್ಕೆ ಒತ್ತಾಯ ಸಿದ್ದಾಪುರ: ಸಾರ್ವಜನಿಕ ಸ್ಥಳಗಳೇ…
ಹೆಚ್.ಡಿ.ಮಣಿಕಂಠ ನಾಯಕ್ ಯಳಂದೂರು ಪಟ್ಟಣ ಪಂಚಾಯಿತಿ ಎದುರಿನ ಉದ್ಯಾನದ ಅವ್ಯವಸ್ಥೆ ಸರಿಪಡಿಸಲು ಆಗ್ರಹ ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಣ…