ಚಾಮರಾಜನಗರ: ವಿಶೇಷಚೇತನ ಮಕ್ಕಳ ಜಾತ್ರೆಯನ್ನು ಮಾ 4 ರಂದು ಮಾರ್ಗದರ್ಶಿ ವಿಶೇಷಚೇತನರ ಸ್ವಯಂಸೇವಾ ಸಂಸ್ಥೆ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಯೋಜಕಿ ಲೀನಾಕುಮಾರಿ ತಿಳಿಸಿದರು.
ರಾಮಸಮುದ್ರ ಬಡಾವಣೆಯಲ್ಲಿರುವ ಸಂತ ಫ್ರಾನ್ಸಿಸ್ ಶಾಲೆ ಆವಣರದಲ್ಲಿ ಅಂದು ಬೆಳಿಗ್ಗೆ 9 ಗಂಟೆಗೆ ಜಾತ್ರೆ ನಡೆಯಲಿದ್ದು, ವಿಶೇಷಚೇತನ ಮಕ್ಕಳು ಬಂದು ಹೋಗಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಕೋವಿಡ್ ಕಾರಣದಿಂದಾಗಿ 3 ವರ್ಷಗಳಿಂದ ಜಾತ್ರೆ ನಡೆಸಲಾಗಿರಲಿಲ್ಲ. ಈ ಬಾರಿ ಜಿಲ್ಲೆಯ ಐದೂ ತಾಲ್ಲೂಕಿನ 3 ರಿಂದ 16 ವರ್ಷದ ವಿಶೇಷಚೇತನ ಮಕ್ಕಳಿಗೆ ಜಾತ್ರೆ ಆಯೋಜಿಸಲಾಗಿದೆ. ಸುವಾರು 650ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ಡಿ.ಎಸ್.ಗಿರೀಶ್ ಮಾತನಾಡಿ, ಜಾತ್ರೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಆಟದ ಸಾಮಗ್ರಿ, ತಂಪು ಪಾನೀಯ, ಕಬ್ಬಿನ ಹಾಲು, ಕುಡಿಯುವ ನೀರು ಹಾಗೂ ತಿಂಡಿ-ತಿನಿಸುಗಳ ವ್ಯವಸ್ಥೆ ಮಾಡಲಾಗುವುದು ಎಂದರು.
ತಾಲ್ಲೂಕು ಸಂಯೋಜಕಿ ಕೋಮಲ, ಮಾರ್ಗದರ್ಶಕರಾದ ಕವಿತಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…
ಮೈಸೂರು: ಮುಡಾ 50:50 ಸೈಟ್ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…
ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…
ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್ ಸೇವೆಗಳಲ್ಲಿ…
ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…