ಪಂಜುಗಂಗೊಳ್ಳಿ ಅವರ ವಾರದ ಅಂಕಣ
ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’
ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್ ಚಿತ್ಕೆಲಾರದ್ದು ಒಂದು ಬಡ ಕುಟುಂಬ. ಸಾಲದ್ದಕ್ಕೆ, ಅವರು ಹನ್ನೊಂದು ವರ್ಷದ ಬಾಲಕನಾಗಿದ್ದಾಗ ಅವರ ತಂದೆ ತೀರಿಕೊಂಡರು. ಎಳೆ ವಯಸ್ಸಾಗಿದ್ದುದರಿಂದ ರಾಕೇಶ್‌ಗೆ ತಂದೆಯ ಅಗಲಿಕೆಯ ನೋವು ಹೆಚ್ಚು ಅರಿವಿಗೆ ಬರಲಿಲ್ಲ. ಆದರೆ, ಅವರ ತಾಯಿ ಸತ್ಯಮ್ಮ ಗಂಡನ ಅಕಾಲಿಕ ಸಾವಿನಿಂದಾಗಿ ಅಸಾಧಾರಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಇದ್ದಕ್ಕಿದ್ದಂತೆ ತನ್ನ ಮೇಲೆ ಬಿದ್ದ ಕುಟುಂಬದ ಜವಾಬ್ದಾರಿ ಅವರನ್ನು ದಿಕ್ಕು ತಪ್ಪಿಸಿತು. ಒಂದೆಡೆ ಗಂಡನ ಅಗಲಿಕೆಯ ನೋವು. ಇನ್ನೊಂದೆಡೆ ಇಬ್ಬರು ಮಕ್ಕಳ ಹೊಟ್ಟೆ ಪಾಡು ಹಾಗೂ ಅವರ ವಿದ್ಯಾಭ್ಯಾಸದ ಹೊರೆ.
ಹೆಚ್ಚು ಓದದ ಸತ್ಯಮ್ಮ ಹತ್ತಿರದ ಶಾಂತಿನಗರದಲ್ಲಿರುವ ಸೇಂಟ್ ಅಂತೋನಿ ಹೈಸ್ಕೂಲಿನಲ್ಲಿ ಆಯಾ ಕೆಲಸಕ್ಕೆ ಸೇರಿದರು. ತಿಂಗಳಿಗೆ ಕೇವಲ ಆರು ಸಾವಿರ ರೂಪಾಯಿ ಸಂಬಳ. ಅದರಿಂದ ಕುಟುಂಬದ ಹೊಟ್ಟೆ ಹಸಿವನ್ನು ಇಂಗಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಹಾಗಾಗಿ, ಅವರು ಬೆಳಗಿನ ನಾಲ್ಕು ಗಂಟೆಗೆ ಎದ್ದು ಹತ್ತಿರದಲ್ಲಿರುವ ಅಗ್ನಿಶಾಮಕ ದಳದ ಕಚೇರಿಗೆ ಹೋಗಿ ಅಲ್ಲಿನ ಒಳಾಂಗಣವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿ ಮತ್ತೊಂದಷ್ಟು ಸಂಪಾದಿಸುತ್ತಿದ್ದರು. ಅದಲ್ಲದೆ, ಮತ್ತೊಂದು ಹಾಸ್ಟೆಲಿನಲ್ಲಿ ಸ್ವಚ್ಛ ಮಾಡುವುದು, ಮದುವೆ ಸಮಾರಂಭಗಳಲ್ಲಿ ಕೆಲಸ ಮಾಡುವುದು ಹೀಗೆ ಇನ್ನೂ ಏನೇನೋ ಪುಡಿಗೆಲಸಗಳನ್ನು ಮಾಡುತ್ತಿದ್ದರು. ಆದರೆ, ಆ ಕೆಲಸಗಳನ್ನು ಮಾಡುವುದು ಸತ್ಯಮ್ಮ ಒಬ್ಬರಿಂದ ಮಾತ್ರ ಸಾಧ್ಯವಾಗದ ಕಾರಣ ಬಾಲಕ ರಾಕೇಶ್ ಕೂಡಾ ಅಮ್ಮನೊಂದಿಗೆ ಹೋಗುತ್ತಿದ್ದನು. ಅದಕ್ಕಾಗಿ ಅವನೂ ಕೂಡಾ ಬೆಳಗಿನ ನಾಲ್ಕು ಗಂಟೆಗೆ ಏಳಬೇಕಾಗುತ್ತಿತ್ತು. ಅಷ್ಟು ಚಿಕ್ಕ ಪ್ರಾಯದ ಮಗ ತನ್ನೊಂದಿಗೆ ಎದ್ದು ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿಗೆ ಸತ್ಯಮ್ಮ ಮರುಗುತ್ತಿದ್ದರು. ಆದರೆ, ಅದನ್ನು ತಪ್ಪಿಸಲು ಅವರೇನೂ ಮಾಡಲು ಸಾಧ್ಯವಿರಲಿಲ್ಲ.
ಆದರೆ, ಬಾಲಕ ರಾಕೇಶ್ ಏನೂ ಬೇಸರ, ಆಲಸ್ಯ ತೋರದೆ ಅಮ್ಮನ ಕಷ್ಟ ಕಂಡು ಉತ್ಸಾಹದಿಂದಲೇ ಅವರೊಂದಿಗೆ ಆ ಎಲ್ಲ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದನು. ಬೆಳಿಗ್ಗೆ ಅಷ್ಟು ಬೇಗ ಅಮ್ಮನೊಂದಿಗೆ ಏಳುವುದಲ್ಲದೆ,ಶಾಲೆ ಮುಗಿದ ನಂತರ ಅಮ್ಮ ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಹೋಗಿ ನೆರವಾಗುತ್ತಿದ್ದನು. ಚಳಿ ಇರಲಿ, ಮಳೆ ಇರಲಿ ರಾಕೇಶ್ ತುಸುವೂ ಬೇಸರಿಸದೆ ಎದ್ದು ತಾಯಿ ಜೊತೆ ಹೋಗುತ್ತಿದ್ದನು. ಒಮ್ಮೆ ಹೀಗೆಯೇ ಒಂದು ಮದುವೆ ಸಮಾರಂಭದಲ್ಲಿ ಸ್ವಚ್ಛಮಾಡುವ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಗ ಆ ಮದುವೆಗೆ ಅವನ ತರಗತಿಯ ಕೆಲವು ಮಕ್ಕಳೂ ಬಂದಿದ್ದರು. ಆಗ ನಾಚಿಕೆಯಿಂದ ಅವನು ಅವರಿಗೆ ತನ್ನ ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಕೊಂಡನು. ಅಂತಹ ಪರಿಸ್ಥಿತಿಗೆ ಮಗನನ್ನು ತಳ್ಳಿದ ತನ್ನ ಅಸಹಾಯಕತೆಗೆ ಸತ್ಯಮ್ಮ ತನ್ನನ್ನು ತಾನು ಶಪಿಸಿಕೊಳ್ಳುತ್ತಿದ್ದರು. ಆದರೆ, ಬೇರೆ ದಾರಿಯಿಲ್ಲದ ಕಾರಣ ಮನಸ್ಸನ್ನು ಕಲ್ಲು ಮಾಡಿಕೊಳ್ಳುತ್ತಿದ್ದರು. ಆದರೆ… ಎಂತಹದೇ ಪರಿಸ್ಥಿತಿ ಎದುರಾದರೂ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರ ಏನೂ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಸತ್ಯಮ್ಮ ತನಗೆ ತಾನೇ ಪ್ರತಿಜ್ಞೆ ಮಾಡಿಕೊಂಡಿದ್ದರು. ಅಂತೆಯೇ ಅವರು ತಮ್ಮ ಇಬ್ಬರೂ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದರು. ರಾಕೇಶ್ ಅಷ್ಟು ಬೇಗ ಎದ್ದು ತಾಯಿ ಜೊತೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರೂ ಅದರಿಂದ ತನ್ನ ಕಲಿಕೆಗೆ ತೊಂದರೆಯಾಗದಂತೆ ನೋಡಿಕೊಂಡಿದ್ದನು. ಏಕೆಂದರೆ, ತಮ್ಮ ಅಂದಿನ ಪರಿಸ್ಥಿತಿಯಿಂದ ಪಾರಾಗಲು ಉತ್ತಮ ಶಿಕ್ಷಣವೊಂದೇ ದಾರಿ ಎಂಬುದನ್ನು ತಾಯಿ ಮತ್ತು ಮಗ ಇಬ್ಬರೂ ಮನಗಂಡಿದ್ದರು. ಅಂತೆಯೇ, ರಾಕೇಶ್ ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾದನು. ಮುಂದೆ, ಒಂದು ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದನು.
ಆ ನಂತರ, ಕೇರಳದ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ‘ಇಂಟರ್ ನ್ಯಾಶನಲ್ ರಿಲೇಶನ್ಸ್’ ವಿಷಯದಲ್ಲಿ ಮಾಸ್ಟರ‍್ಸ್ ಮಾಡುವ ಸಲುವಾಗಿರಾಕೇಶ್ ಮೊತ್ತ ಮೊದಲ ಬಾರಿಗೆ ತನ್ನ ಹುಟ್ಟೂರಿನಿಂದ ಹೊರಬೇಕಾಯಿತು. ಕೇರಳಂನಂತಹ ಅಪರಿಚಿತ ಸ್ಥಳ, ಭಾಷೆ ಹಾಗೂ ಸಂಸ್ಕೃತಿಯ ವಾತಾವರಣದಲ್ಲಿ ಬದುಕುವುದು ಸಹಜವಾಗಿಯೇ ಅವನಿಗೆ ಬಹು ಸವಾಲಿದಾಗಿತ್ತು. ಆದರೆ, ಆ ಸವಾಲನ್ನೇ ಒಂದು ಅವಕಾಶ ಎಂದು ಪರಿಗಣಿಸಿ, ಎದುರಿಗೆ ಬಂದ ಎಲ್ಲಅಡೆತಡೆಗಳನ್ನೂ ಪಾರು ಮಾಡಿದ್ದಲ್ಲದೆ, ತನ್ನ ಬ್ಯಾಚಿನಲ್ಲಿ ರ‍್ಯಾಂಕಿನೊಂದಿಗೆ ಪಾಸಾಗಿ, ಒಂದು ಯುಜಿಸಿ ವಿದ್ಯಾರ್ಥಿವೇತನವನ್ನು ಪಡೆ ದರು. ಅದು ಅವರಿಗೆ ಅಗಾಧ ಆತ್ಮವಿಶ್ವಾಸವನ್ನು ನೀಡಿತು. ಹಾಗೆಯೇ, ಮಗನ ಯಶಸ್ಸು ತಾವು ಪಟ್ಟ ಕಷ್ಟಕ್ಕೆ ಸಂದ ಫಲ ಎಂದು ಸತ್ಯಮ್ಮ ಹೆಮ್ಮೆಪಟ್ಟರು. ಅಲ್ಲಿಂದ ಮುಂದೆ ರಾಕೇಶ್‌ರ ಬದುಕಿನ ಗತಿ ಬೇರೆಯೇ ದಾರಿಯನ್ನು ಹಿಡಿಯಿತು.
ಮಾಸ್ಟರ‍್ಸ್ ಮುಗಿಸಿದ ನಂತರ ರಾಕೇಶ್ ಜೋಧಪುರ ಐಐಟಿಯಲ್ಲಿ ೨೦೨೨-೨೦೨೪ರ ಅವಧಿಯ ಎರಡು ವರ್ಷಗಳ ಕಾಲ ಒಬ್ಬ ‘ಯಂಗ್ ಆಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್’ (ಯುವ ಆಡಳಿತ ಸಹಾಯಕ)’ ಆಗಿ ಕೆಲಸ ಮಾಡುವ ಅವಕಾಶವನ್ನು ಪಡೆದರು. ಆ ಅವಕಾಶ ಮುಂದೆ ಅವರಿಗೆ ತಮ್ಮ ಭವಿಷ್ಯದ ಮಾರ್ಗವನ್ನು ರೂಪಿಸಲು ಅಡಿಪಾಯವಾಯಿತು. ೨೦೨೪ರಲ್ಲಿ ಅವರು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಗೆ ಸೇರಿದರು.
ಈಗ ೨೮ ವರ್ಷ ಪ್ರಾಯವಾಗಿರುವ ರಾಕೇಶ್ ಚಿತ್ಕೆಲಾ, ದೇಶದ ಶಿಕ್ಷಣ ವ್ಯವಸ್ಥೆಯ ನೀತಿ-ನಿಯಮಗಳನ್ನು ರಚಿಸುವವರಲ್ಲಿ ಒಬ್ಬರಾಗಿದ್ದಾರೆ. ಅವರ ಮುಂದಿನ ಗುರಿ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸಾಗುವುದು. ಅತ್ತ, ಅವರ ತಂಗಿಯೂ ಮಾಸ್ಟರ‍್ಸ್ ಮಾಡಿ, ತೆಲಂಗಾಣ ಸರ್ಕಾರದಲ್ಲಿ ಉದ್ಯೋಗಿಯಾಗಿದ್ದಾರೆ. ಇತ್ತ ಸತ್ಯಮ್ಮ, ತನ್ನ ಮಗ ಮತ್ತು ಮಗಳು ಅಷ್ಟು ದೊಡ್ಡ ಹುದ್ದೆಗಳಿಗೆ ಹೋದರೂ ಸೇಂಟ್ ಅಂತೋನಿ ಶಾಲೆಯಲ್ಲಿ ತನ್ನ ಆಯಾ ಕೆಲಸವನ್ನು ಬಿಟ್ಟಿಲ್ಲ. ಶಾಲೆಯಲ್ಲಿ ಶಿಕ್ಷಕರು ತನ್ನ ಮಕ್ಕಳ ಸಾಧನೆಯನ್ನು ಇತರ ಮಕ್ಕಳಿಗೆ ಹೇಳುವಾಗ ಕಡು ಕಾರ್ಪಣ್ಯದಲ್ಲೂ ಅವರಿಗೆ ಅಂತಹ ಶಿಕ್ಷಣ ಕೊಡಿಸಲು ತನಗೆ ಸಾಧ್ಯವಾದುದಕ್ಕೆ ಹೆಮ್ಮೆ ಪಡುತ್ತಾರೆ
” ಮಾಸ್ಟರ‍್ಸ್ ಮುಗಿಸಿದ ನಂತರ ರಾಕೇಶ್ ಜೋಧಪುರ ಐಐಟಿಯಲ್ಲಿ ೨೦೨೨-೨೦೨೪ರ ಅವಽಯ ಎರಡು ವರ್ಷಗಳ ಕಾಲ ಒಬ್ಬ ‘ಯಂಗ್ ಆಡ್ಮಿಸ್ಟ್ರೇಟಿವ್ ಅಸಿಸ್ಟಂಟ್’ (ಯುವ ಆಡಳಿತ ಸಹಾಯಕ)’ ಆಗಿ ಕೆಲಸ ಮಾಡುವ ಅವಕಾಶವನ್ನು ಪಡೆದನು.”
ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…
ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…
ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…
ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…
ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…
ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…