ಮಂಡ್ಯ: ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂಬ ಪ್ರಕರಣಕ್ಕೆ ಪೊಲೀಸ್ ವಿಚಾರಣೆ ವೇಳೆ ತಿರುವು ಸಿಕ್ಕಿದೆ. ಮೊಸರಿನಲ್ಲಿ ಸಿಕ್ಕಿದೆ ಎನ್ನಲಾದ ಸಿಮ್ ಕಾರ್ಡ್, ವಿಡಿಯೋ ಹಂಚಿಕೊಂಡ ವ್ಯಕ್ತಿಯ ಭಾಮೈದನ ಹೆಸರಿನಲ್ಲಿದ್ದು, ಅದನ್ನು ಅವರ ಪತ್ನಿ ಬಳಸುತ್ತಿದ್ದರು ಎಂಬ ಮಾಹಿತಿ ಹೊರಬಂದಿದೆ.
ಮಂಡ್ಯ ಜಿಲ್ಲೆ ಮದ್ದೂರಿನ ಚನ್ನಸಂದ್ರ ಬಡಾವಣೆಯ ನಿವಾಸಿ ಅರುಣ್ ಕುಮಾರ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನಂದಿನಿ ಮಾರಾಟ ಕೇಂದ್ರದಲ್ಲಿ ಮೊಸರು ಖರೀದಿಸಿದ್ದರು. ಮನೆಯಲ್ಲಿ ಪ್ಯಾಕೆಟ್ ಕತ್ತರಿಸಿ ಬಾಣಲಿಗೆ ಮೊಸರು ಹಾಕುವಾಗ ಸಿಮ್ ಕಾರ್ಡ್ ಸಿಕ್ಕಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು.
ವಿಡಿಯೋ ವೈರಲ್ ಆದ ಬೆನ್ನಲ್ಲೇ, ನಂದಿನಿ ಬ್ರ್ಯಾಂಡ್‌ಗೆ ಕಳಂಕ ತರುವ ಸುಳ್ಳು ವಿಡಿಯೋ ಎಂದು ಆರೋಪಿಸಿ ಮನ್ಮುಲ್ ಅಧಿಕಾರಿಗಳು ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಅರುಣ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ವಿಚಾರಣೆ ವೇಳೆ ಸಿಮ್ ಕಾರ್ಡ್‌ನ ವಿವರ ಬಹಿರಂಗವಾಗಿದ್ದು, ಕಣ್ತಪ್ಪಿನಿಂದ ಘಟನೆ ನಡೆದಿದೆ, ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಅರುಣ್ ಕ್ಷಮೆಯಾಚಿಸಿದ್ದಾರೆ. ನಂದಿನಿಯಿಂದ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿ, ಹಿಂದಿನ ವಿಡಿಯೋವನ್ನು ಮತ್ತೆ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.
ಮೈಸೂರು: ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ನೂತನ ಆಯುಕ್ತರಾಗಿ ವಿಷ್ಣುವರ್ಧನ್ ಅವರನ್ನು ನೇಮಕ…
ಸುಧಾ ಆಡುಕಳ ನಾಗರಿಕತೆ ಎಂದರೇನು? ನಾನೀಗ ನಿನಗೆ ಪ್ರಾಚೀನ ನಾಗರಿಕತೆಯ ಬಗ್ಗೆ ಹೇಳುತ್ತೇನೆ. ಅದಕ್ಕಿಂತ ಮೊದಲು ನಾವು ನಾಗರಿಕತೆ ಯೆಂದರೇನು…
ಅರವಿಂದ ಚೊಕ್ಕಾಡಿ ಜವಾಹರಲಾಲ್ ನೆಹರೂ ವಿಷಯದಲ್ಲಿ ನನ್ನ ತಂದೆ ಸ್ವಲ್ಪ ಭಾವುಕರಾಗಿದ್ದರು. ನನ್ನ ತಂದೆ ಕುಶಾಲನಗರದಲ್ಲಿ ಶಾಲೆಗೆ ಹೋಗುತ್ತಿದ್ದಾಗ ನೆಹರೂ…
ನವೀನ್ ಡಿಸೋಜ ರಾಜಾಸೀಟ್ ರಸ್ತೆಯ ೧೨ ಮರಗಳ ತೆರವಿಗೆ ಮುಂದಾದ ನಗರಸಭೆ; ಪರಿಸರ ಪ್ರೇಮಿಗಳ ತೀವ್ರ ವಿರೋಧ ಮಡಿಕೇರಿ: ಮಂಜಿನ…
ಎಸ್.ಎಸ್.ಭಟ್ ನಂಜನಗೂಡು: ರಾಜ್ಯದ ಧಾರ್ಮಿಕ ಹಾಗೂ ಕೈಗಾರಿಕಾ ಕ್ಷೇತ್ರವಾದ ನಂಜನಗೂಡು ಈಗ ಮಾದಕ ದ್ರವ್ಯ ಎಂಡಿಎಂಎ ವ್ಯವಹಾರದ ಕೇಂದ್ರವಾಗಲಾರಂಭಿಸಿದೆಯೇ? ಎಂಬ…