ಮುಂಬೈ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಆಶ್ಲೀಲ ಚಿತ್ರ ನಿರ್ಮಾಣದ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಗೆಹನಾ ವಸಿಷ್ಟ ಇಸ್ಲಾಂಗೆ ಮತಂತಾರವಾಗಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದಾರೆ.
ʼಬೆಹೆನೆನ್ʼ ,ʼಗಂಧಿ ಬಾತ್ʼ ನಲ್ಲಿ ನಟಿಸಿರುವ ಗೆಹನಾ ವಸಿಷ್ಟ ಕಿರುತೆರೆ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಆಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿದ್ದ ಬಳಿಕ ಇದೀಗ ಮದುವೆ ವಿಚಾರದಲ್ಲಿ ನಟಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ನಟಿಯ ಪ್ರಿಯಕರ ಫೈಜಾನ್ ಅನ್ಸಾರಿ ಸಾಮಾಜಿಕ ಜಾಲತಾಣದ ಮಾಧ್ಯಮದ ಪ್ರಭಾವಿಯಾಗಿದ್ದಾರೆ. ಇತ್ತೀಚೆಗೆ ಅಮೇಜಾನ್ ಮಿನಿಯಲ್ಲಿ ಬಂದ “ದಾಟೆಬಾಜಿ” ಶೋನಲ್ಲಿ ಫೈಜಾನ್ ಅನ್ಸಾರಿ ಕಾಣಿಸಿಕೊಂಡಿದ್ದರು.
ಗೆಹನಾ ವಸಿಷ್ಟ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ತನ್ನ ಪ್ರಿಯಕನೊಂದಿಗೆ ವಿವಾಹವಾಗಿದ್ದಾರೆ. ಆತ್ಮೀಯರ ಸಮ್ಮುಖದಲ್ಲಿ ನಿಕಾಹ್ ಸಮಾರಂಭ ನಡೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆಬ್ರವರಿ 3, 2021 ರಂದು ಮಾಲ್ವಾನಿ ಪೊಲೀಸರು ಬಂಗಲೆಯೊಂದರ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಫಿಲ್ಮ್ಸ್ ಪ್ರೂಡಕ್ಷನ್ ವೊಂದರ ಬ್ಯಾನರ್ ಅಡಿಯಲ್ಲಿ ಕೆಲ ವ್ಯಕ್ತಿಗಳು ಆಶ್ಲೀಲ ಚಿತ್ರದ ನಿರ್ಮಾಣವನ್ನು ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಆ ವೇಳೆ ನಟಿ ಗೆಹನಾ ವಸಿಷ್ಟ ಇರಲಿಲ್ಲ. ಅವಳು ಆಶ್ಲೀಲ ಕಂಟೆಂಟ್ ಗಳನ್ನು ವಿವಿಧ ಪ್ರೂಡಕ್ಷನ್ ಸಂಸ್ಥೆ ಹಾಗೂ ಕೆಲ ಓಟಿಟಿ ಫ್ಲಾಟ್ ಫಾರ್ಮ್ ಗಳಿಗೆ ಮಾರಾಟ ಮಾಡುತ್ತಿದ್ದಳು ಎನ್ನುವ ಆರೋಪದ ಮೇಲೆ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಆ ಬಳಿಕ ಆಕೆಗೆ ಜಾಮೀನು ನೀಡಲಾಗಿತ್ತು.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…