BREAKING NEWS

ಬೆಂಗಳೂರಿಗೆ 24 ಟಿಎಂಸಿ ನೀರನ್ನು ಮೀಸಲಿಡಲು ರಾಜ್ಯ ಸರ್ಕಾರ ಆದೇಶ: ಡಿಸಿಎಂ

ನವದೆಹಲಿ :ಸಿಡಬ್ಲ್ಯೂಆರ್‌ಸಿ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹಂಚಿಕೆಯಾಗಿರುವಂತೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ 24 ಟಿಎಂಸಿ ನೀರನ್ನು ಮೀಸಲಿಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಕಾರದ ಸಭೆಯಲ್ಲಿ ನಮ್ಮ ಅಧಿಕಾರಿಗಳು ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡುವುದಾಗಿ ಪ್ರಾಧಿಕಾರದವರು ಭರವಸೆ ನೀಡಿದ್ದಾರೆ. ಬಹುಶಃ ಮುಂದಿನ ವಾರ ವಿಚಾರಣೆಗೆ ಸಮಯ ನಿಗದಿಯಾಗಬಹುದು. ನಾವು ಅದಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿದ್ದೇವೆ. ನಮಗೆ ಎಷ್ಟು ನೀರು ಬೇಕು, ಎಷ್ಟು ಉಳಿತಾಯವಾಗಲಿದೆ, ಸಮುದ್ರಕ್ಕೆ ಎಷ್ಟು ಹರಿದು ಹೋಗುತ್ತದೆ ಎಂಬ ಮಾಹಿತಿಯನ್ನು ಸಲ್ಲಿಸಲಿದ್ದೇವೆ.

ನಮಗೆ ಕುಡಿಯುವ ನೀರಿಗೆ 24 ಟಿಎಂಸಿ ಬೇಕು ಎಂದು ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಮೀಸಲಿಟ್ಟಿದ್ದೇವೆ. ಅದನ್ನು ಬಿಡಬ್ಯೂಎಸ್‍ಎಸ್‍ಬಿ ಬಳಸಿಕೊಳ್ಳಬೇಕು ಎಂದು ನಿನ್ನೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಮೊದಲು 18 ಟಿಎಂಸಿ ನಿಗದಿ ಮಾಡಲಾಗಿತ್ತು. ಉಳಿಕೆ ಆರು ಟಿಎಂಸಿಯನ್ನು ಬಳಕೆ ಮಾಡಲು ಪರಿಶೀಲನೆ ನಡೆಸಿ ಅನುಮತಿ ನೀಡಲಾಗಿದೆ. ಗರಿಷ್ಠ 24 ಟಿಎಂಸಿಗೆ ಮಿತಿಗೊಳಿಸಿ ಆದೇಶಿಸಲಾಗಿದೆ. ಇನ್ನೂ ಮುಂದೆ ಅಣೆಕಟ್ಟೆಗಳಲ್ಲಿ 24 ಟಿಎಂಸಿಯನ್ನು ಮೀಸಲಿರಿಸಿ ನಂತರ ಉಳಿದ ನೀರನ್ನು ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

ಕೆಆರ್‌ಎಸ್‍ನಲ್ಲಿ ನೀರಿದೆ ನಮಗೆ ಬಿಡಿ ಎಂದು ತಮಿಳುನಾಡಿನವರು ಕೇಳುತ್ತಾರೆ. ಇನ್ನೂ ಮುಂದೆ ಕುಡಿಯುವ ನೀರಿಗೆ 24 ಟಿಎಂಸಿಯನ್ನು ಮೀಸಲಿಡಬೇಕು. ಇದು 2018ರ ಸುಪ್ರೀಂಕೋರ್ಟ್ ಆದೇಶದಲ್ಲೇ ಉಲ್ಲೇಖವಿದೆ. ನಮ್ಮ ಹಕ್ಕನ್ನು ನಾವು ಕಳೆದುಕೊಳ್ಳುವುದಿಲ್ಲ. ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುವುದಾದರೆ ನಮ್ಮ ಅಭ್ಯಂತರ ಇಲ್ಲ. ನ್ಯಾಯಾಲಯದ ಆದೇಶದ ಪ್ರಕಾರವೇ ನಿರ್ಧಾರ ಕೈಗೊಂಡು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿ 24 ಟಿಎಂಸಿ ಬಳಸಿಕೊಳ್ಳಲು ಅನುಮತಿಸಿಸಲಾಗಿದೆ ಎಂದರು.

ಬೆಂಗಳೂರು ಸುತ್ತಮುತ್ತಾ ಆನೆಕಲ್‍ನಲ್ಲಿ ಬೆಂಗಳೂರು ಬೆಳೆದಿದೆ, ವಿಮಾನ ನಿಲ್ದಾಣಕ್ಕೆ ನೀರು ಪೂರೈಸಲೇಬೇಕು. ಹಿಂದೆ ತಾವು ನಗರಾಭಿವೃದ್ಧಿ ಸಚಿವರಾಗಿದ್ದಾಗ ಹೆಬ್ಬಾಳದ ಮುಂದಕ್ಕೆ ನೀರು ಕೊಡಬಾರದು ಎಂದು ನಿರ್ಧರಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಆದೇಶ ಬದಲಿಸಿವೆ, ಹೀಗಾಗಿ ಎಲ್ಲಾ ಕಡೆಗೂ ನೀರು ಹಂಚಿಕೆ ಮಾಡಬೇಕಿದೆ, ಬೆಂಗಳೂರು ಉತ್ತರ ಭಾಗದಲ್ಲಿ ಬೆಳೆಯುತ್ತಿದೆ ಎಂದರು.

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತಮಿಳುನಾಡಿನಲ್ಲಿ ಕೆಲ ನದಿಗಳ ಅಂತರ್ ಜೋಡಣೆಯ ಪ್ರಸ್ತಾವನೆ ಮಾಡಿರುವುದರ ಬಗ್ಗೆ ಸದ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರನ್ನು ಬಿಡುತ್ತೇವೆ ಅದರ ಬಗ್ಗೆ ಅವರಿಗೆ ಚಿಂತೆ ಬೇಡ. ನಾವು ನಮ್ಮ ರಾಜ್ಯದಲ್ಲಿ ಆಂತರಿಕವಾಗಿ ನದಿ ಜೋಡಣೆ ಮಾಡುತ್ತೇವೆಯೋ, ಅಣೆಕಟ್ಟುತ್ತೇವೆಯೋ ಅದರ ಬಗ್ಗೆ ತಮಿಳುನಾಡು ತಲೆ ಕೆಡಿಕೊಳ್ಳುವ ಅಗತ್ಯ ಇಲ್ಲ. ಮಳೆ ಇಲ್ಲದೆ ಸಂಕಷ್ಟ ಸಂದರ್ಭದಲ್ಲೂ ತಮಿಳುನಾಡಿಗೆ 2 ಸಾವಿರ ಎರಡುವರೆ ಸಾವಿರ ಬಿಡಿ ಎನ್ನುತ್ತಾರೆ, ಸಂಕಷ್ಟ ಕಾಲದಲ್ಲಿ ಇದನ್ನು ಪಾಲನೆ ಮಾಡುವುದು ಕಷ್ಟವಾಗುತ್ತದೆ. ನಿನ್ನೆ ಮೊನ್ನೆ ಮಳೆಯಾಗಿದ್ದರಿಂದ ಕೆಆರೆಸ್‍ಗೆ ಒಳ ಸ್ವಲ್ಪ ಹರಿವು ಹೆಚ್ಚಾಗಿದೆ ಎಂದರು.

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

5 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

6 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

7 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

7 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

13 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

13 hours ago