BREAKING NEWS

ದಸರಾ ಹಬ್ಬದ ಹಿನ್ನೆಲೆಯಲ್ಲಿ ಸರಣಿ ರಜೆ: ಬಸ್ ದರ ದುಬಾರಿ

ಬೆಂಗಳೂರು : ದಸರಾ ಹಬ್ಬದ ಹಿನ್ನೆಲೆಯಲ್ಲಿ ಜನರು ಊರಿಗೆ ಪಯಣ ಬೆಳೆಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಟಿಕೆಟ್ ಬುಕ್ಕಿಂಗ್ ಟಿಕೆಟ್ ದರದಲ್ಲಿ ಗಣನೀಯ ಹೆಚ್ಚಳವಾಗಿದೆ.

ಪ್ರೀಮಿಯಂ ಬಸ್ ಸೇವೆಗಳ ಬೆಲೆಗಳು ಶೇಕಡಾ ೨೦ ರಷ್ಟು ಏರಿಕೆಯಾಗಿವೆ. ಬೆಂಗಳೂರಿನ ಮೆಜೆಸ್ಟಿಕ್, ಮೈಸೂರು ರಸ್ತೆ ಮತ್ತು ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿಯ ಬಸ್ ನಿಲ್ದಾಣಗಳು ಚಟುವಟಿಕೆಯಿಂದ ಗಿಜಿಗುಡುವಂತಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮ ಒಂದು ವಾರದವರೆಗೆ ಈ ಬಸ್ ನಿಲ್ದಾಣಗಳಿಂದ ರಾಜ್ಯದಾದ್ಯಂತ ಜನಪ್ರಿಯ ಸ್ಥಳಗಳಿಗೆ ೨,೦೦೦ ಕ್ಕೂ ಹೆಚ್ಚು ಬಸ್‌ಗಳನ್ನು ಓಡಿಸಲು ಪ್ರಾರಂಭಿಸಿದೆ.

ಅಕ್ಟೋಬರ್ ೨೪ ರಿಂದ೨೯ ರ ನಡುವೆ ಇತರ ನಗರಗಳಿಂದ ಬೆಂಗಳೂರಿಗೆ ವಿಶೇಷ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಖಾಸಗಿ ಬಸ್ ನಿರ್ವಾಹಕರೂ ಹಿಂದೆ ಬಿದ್ದಿಲ್ಲ ಮತ್ತು ಬೆಳಗ್ಗೆಯಿಂದಲೇ ನೆರೆಯ ಚೆನ್ನೈ, ಕೇರಳ ಮತ್ತು ಹೈದರಾಬಾದ್‌ಗೆ ತೆರಳುವ ಬಹುತೇಕ ಖಾಸಗಿ ಬಸ್‌ಗಳ ಟಿಕೆಟ್‌ಗಳು ಮಾರಾಟವಾಗಿವೆ. ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರವನ್ನು ೫೦೦ ರಿಂದ ೧,೦೦೦ ರೂ.ಹೆಚ್ಚಿದೆ.

ಹಬ್ಬದ ಸಮಯದಲ್ಲಿ ಮಾತ್ರ ಸಾಧ್ಯವಿರುವ ಹೆಚ್ಚುವರಿ ಹಣ ಮಾಡಲು ಪ್ರತಿ ಹಬ್ಬಗಳಿಗೆ ಟಿಕೆಟ್ ದರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಲಾಗುತ್ತದೆ, ಆದರೆ ಇದು ಜನರಿಗೆ ಹೊರೆಯಾಗುವ ಮಟ್ಟಿಗೆ ಏರಿಕೆಯಾಗದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. “ಎಂದು ಖಾಸಗಿ ಬಸ್ ನಿರ್ವಾಹಕರು ಹೇಳಿದ್ದಾರೆ.

ಖಾಸಗಿ ಬಸ್‌ನಲ್ಲಿ ಬೆಂಗಳೂರು ಮತ್ತು ಕೊಚ್ಚಿನ್ ನಡುವೆ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ೩,೫೦೦ ರೂ. ಹೈದರಾಬಾದ್ ಮತ್ತು ಬೆಂಗಳೂರಿಗೆ ೩,೦೦೦ ರೂ ಮತ್ತು ಮುಂಬೈ ಮತ್ತು ಬೆಂಗಳೂರು, ೩,೫೦೦ ರೂ.ದರ ನಿಗಧಿ ಮಾಡಲಾಗಿದೆ. ಹೆಚ್ಚಿನ ನಿರ್ವಾಹಕರು ಕೊಡಗು, ಚಿಕ್ಕಮಗಳೂರು, ಊಟಿ, ಮೈಸೂರು ಮತ್ತು ಪುದುಚೇರಿ ಪ್ರವಾಸಿಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಟೂರ್ ಏಜೆಂಟ್‌ಗಳು ಈ ಸ್ಥಳಗಳಿಗೆ ೩೦,೦೦೦ ಮತ್ತು ೫೦,೦೦೦ ರೂಪಾಯಿಗಳ ನಡುವೆ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿವೆ. ಪ್ಯಾಕೇಜ್‌ಗಳು ಸಾಮಾನ್ಯವಾಗಿ ಎರಡು ರಾತ್ರಿಗಳು ಮತ್ತು ಮೂರು ದಿನಗಳು” ಎಂದು ಟ್ರಾವೆಲ್ ಏಜೆಂಟರು ತಿಳಿಸಿದ್ದಾರೆ

ಬೆಳಗಿನ ಉಪಾಹಾರ, ದೃಶ್ಯವೀಕ್ಷಣೆಯ ಜೊತೆಗೆ ಜನಪ್ರಿಯ ಶಾಪಿಂಗ್ ಸ್ಥಳಗಳಲ್ಲಿ ನಿಲುಗಡೆ ಒಳಗೊಂಡಿರುತ್ತದೆ. ವಿನಂತಿಯ ಮೇರೆಗೆ ಚಾಲಕನೊಂದಿಗೆ ಕಾರನ್ನು ಸಹ ಒದಗಿಸಲಾಗುತ್ತದೆ, ಆದರೆ ಶುಲ್ಕಗಳು ಹೆಚ್ಚುವರಿ ಆಗುತ್ತವೆ” ಎಂದು ಹೇಳಿದ್ದಾರೆ.

andolanait

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

9 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

10 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

11 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

13 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

13 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

17 hours ago