BREAKING NEWS

ವಿಎಚ್‌ಪಿ ಮೆರವಣಿಗೆಯಲ್ಲಿ ದ್ವೇಷ ಭಾಷಣ ಇರದಂತೆ ನೋಡಿಕೊಳ್ಳಿ: ಸುಪ್ರೀಂಕೋರ್ಟ್

ನವದೆಹಲಿ : ವಿಶ್ವ ಹಿಂದೂ ಪರಿಷದ್‌ ಮತ್ತು ಬಜರಂಗದಳವು ದಿಲ್ಲಿ-ಎನ್‌ಸಿಆರ್‌ ನಲ್ಲಿ ಆಯೋಜಿಸುವ ಪ್ರತಿಭಟನೆಗಳ ವೇಳೆ ಯಾವುದೇ ದ್ವೇಷದ ಭಾಷಣ ಅಥವಾ ಹಿಂಸೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಇಂದು ನಿರ್ದೇಶನ ನೀಡಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್‌ ಪಡೆ ಅಥವಾ ಅರೆಸೇನಾ ಪಡೆಗಳನ್ನು ನಿಯೋಜಿಸಬೇಕು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಎಸ್‌ ವಿ ಭಟ್ಟಿ ಅವರ ಪೀಠ ಹೇಳಿದೆ.

ವಿಹಿಂಪ ಮತ್ತು ಬಜರಂಗದಳ ದಿಲ್ಲಿ ಮತ್ತು ಎನ್‌ಸಿಆರ್‌ನಲ್ಲಿ 23 ಪ್ರತಿಭಟನೆಗಳನ್ನು ಘೋಷಿಸಿವೆ ಎಂದು ಪತ್ರಕರ್ತ ಶಹೀನ್‌ ಅಬ್ದುಲ್ಲಾ ಪರ ವಾದಿಸಿದ ಹಿರಿಯ ವಕೀಲ ಸಿ ಯು ಸಿಂಗ್‌ ನ್ಯಾಯಾಲಯದ ಗಮನ ಸೆಳೆದಾಗ ಮೇಲಿನ ಆದೇಶ ಹೊರಡಿಸಲಾಗಿದೆ.

ಜುಲೈ 31ರಂದು ನೂಹ್‌ ಎಂಬಲ್ಲಿ ವಿಹಿಂಪ ಮೆರವಣಿಗೆಯನ್ನು ಗುಂಪೊಂದು ತಡೆಯಲು ಯತ್ನಿಸಿದಾಗ ಉಂಟಾದ ಮತೀಯ ಘರ್ಷಣೆಯಲ್ಲಿ ಇಬ್ಬರು ಹೋಂಗಾರ್ಡ್‌ಗಳ ಸಹಿತ ಆರು ಜನರು ಗಾಯಗೊಂಡಿದ್ದರು. ಘಟನೆ ಸಂಬಂಧ ಇಲ್ಲಿಯ ತನಕ 116 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

andolanait

Recent Posts

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ? | ಹಾಲಿನ ದರ ಏರಿಕೆ ನಡುವೆ ಕಾಫಿ,ಟೀ ಬೆಲೆ ಹೆಚ್ಚುವ ಸಾಧ್ಯತೆ

ಬೆಂಗಳೂರು : ಹಾಲಿನ ದರ ಏರಿಕೆ ಕುರಿತು ರಾಜ್ಯದಲ್ಲಿ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ…

7 hours ago

ಕೆಪಿಎಸ್‌ಸಿ ಅಕ್ರಮ | 1.52 ಕೋಟಿ ಹಣ ಪಾವತಿ ಪತ್ತೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆ ಮತ್ತಷ್ಟು ವಿಸ್ತರಿಸಿದ್ದು, ಪ್ರಶ್ನೆಪತ್ರಿಕೆ…

7 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ನೆರಳಿನಂತಿದ್ದ ಕಸ್ತೂರ ಬಾ

ಡಾ.ಪ್ರಮೀಳಾದೇವಿ ಬಿ.ಕೆ ಗಾಂಧೀಜಿಯ ನೆರಳಿ ನಂತಿದೂ ಅವರ ಚಿಂತನೆಗಳ, ಪ್ರಯೋಗ ಗಳನ್ನು ತಿದ್ದಿ ತೀಡಿದ ಪತ್ನಿ ಕಸ್ತೂರ ಬಾ. ಬಾಲ್ಯ…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗೊಂದಲಗೊಳಿಸುತಿದ್ದ ಹಲವು ಸಂದೇಹಗಳು

ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ…

9 hours ago

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

1 day ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

1 day ago