BREAKING NEWS

ವಾಗ್ನರ್ ವಶಕ್ಕೆ ದಕ್ಷಿಣ ರಷ್ಯಾ ಸೇನಾ ಕೇಂದ್ರ ಕಚೇರಿ, ಸ್ಥಳೀಯರ ಬೆಂಬಲವಿದೆ: ಪ್ರಿಗೋಜಿನ್

ಮಾಸ್ಕೋ: ರಷ್ಯಾ ಅಧ್ಯಕ್ಷರ ವಿರುದ್ಧ ಬಂಡಾಯವೆದ್ದಿರುವ ಖಾಸಗಿ ಸೇನೆ ವಾಗ್ನರ್ ನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ತಮ್ಮ ಪಡೆ, ದಕ್ಷಿಣ ರಷ್ಯಾದ ಸೇನಾ ಕೇಂದ್ರ ಕಚೇರಿಯನ್ನು ವಶಕ್ಕೆ ಪಡೆದಿದ್ದಾಗಿ ಹೇಳಿದ್ದಾರೆ.

ಒಂದೇ ಒಂದು ಗುಂಡನ್ನೂ ಹಾರಿಸದೇ ದಕ್ಷಿಣ ರಷ್ಯಾದ ಸೇನಾ ಕೇಂದ್ರ ಕಚೇರಿಯನ್ನು ವಶಪಡಿಸಿಕೊಂಡಿರುವುದಾಗಿ ಹೇಳಿರುವ ವಾಗ್ನರ್, ತಮಗೆ ಸ್ಥಳೀಯರ ಬೆಂಬಲವೂ ಇದೆ ಎಂದು ತಿಳಿಸಿದ್ದಾರೆ.

ಪ್ರಿಗೋಜಿನ್ ಪಡೆಯ ಫೈಟರ್ ಗಳು ರಷ್ಯಾ ಆಕ್ರಮಿತ ಉಕ್ರೇನ್ ಗೆ ನುಗ್ಗಿದ್ದು, ದಕ್ಷಿಣದ ನಗರದಲ್ಲಿನ ಸೇನಾ ಕಚೇರಿಯನ್ನು ವಶಕ್ಕೆ ಪಡೆದಿದ್ದಾರೆ. ಇದು ಉಕ್ರೇನ್ ನಲ್ಲಿರುವ ಮಾಸ್ಕೋ ಪಡೆಗಳ ಕಾರ್ಯಾಚರಣೆಯ ಪ್ರಮುಖ ಕೇಂದ್ರವಾಗಿದೆ.

ರಾಷ್ಟ್ರ ನಮಗೇಕೆ ಬೆಂಬಲ ನೀಡುತ್ತದೆ? ಏಕೆಂದರೆ ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಪ್ರಿಗೋಜಿನ್ ಟೆಲಿಗ್ರಾಮ್ ಮೂಲಕ ಪ್ರಕಟಿಸಿರುವ ತಮ್ಮ ಇತ್ತೀಚಿನ ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ರೊಸ್ತೋವ್ ನ್ನು ಒಂದೇ ಒಂದೂ ಗುಂಡು ಹಾರಿಸದೇ ನಾವು (ಸೇನೆ) ಕೇಂದ್ರ ಕಚೇರಿಯನ್ನು ವಶಪಡಿಸಿಕೊಂಡಿದ್ದೇವೆ, ”ಎಂದು ಅವರು ಹೇಳಿದರು. ನಮ್ಮ ಪಡೆಗಳು ಒಬ್ಬನೇ ಒಬ್ಬ ಸೈನಿಕನನ್ನೂ ಮುಟ್ಟಿಲ್ಲ. ನಮ್ಮ ದಾರಿಯಲ್ಲಿ ನಾವು ಯಾರನ್ನೂ ಹತ್ಯೆ ಮಾಡಿಲ್ಲ, ಆದರೆ ನಮ್ಮ ಯೋಧರ ಮೇಲೆ ಫಿರಂಗಿ ಮತ್ತು ನಂತರ ಹೆಲಿಕಾಪ್ಟರ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಪ್ರಿಗೊಜಿನ್ ಹೇಳಿದ್ದಾರೆ.  ರೊಸ್ತೋವ್ ನಲ್ಲಿಯೂ ಸ್ಥಳೀಯರ ಬೆಂಬಲ ನಮಗೆ ಇದೆ ಎಂದು ಪುಟಿನ್ ಹೇಳಿದ್ದಾರೆ.

andolanait

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

9 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

9 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

11 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

12 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

12 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

16 hours ago