ನವದೆಹಲಿ: ನೀತಿ ಆಯೋಗ್ನ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರನ್ನು ಸರ್ಕಾರ 16 ನೇ ಹಣಕಾಸು ಆಯೋಗದ ಮುಖ್ಯಸ್ಥ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
ಫೈನಾನ್ಸ್ ಕಮಿಷನ್ ಮುಖ್ಯಸ್ಥ ಸ್ಥಾನಕ್ಕೆ ಪನಗರಿಯಾ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೊರಡಿಸಿದ್ದ ಆದೇಶವನ್ನು ಹಣಕಾಸು ಇಲಾಖೆ ಇಂದು (ಭಾನುವಾರ) ಅಧಿಸೂಚನೆ ಹೊರಡಿಸಿದೆ. ಭಾರತೀಯ ಅಮೆರಿಕನ್ ಆರ್ಥಿಕ ತಜ್ಞರಾಗಿರುವ ಅರವಿಂದ್ ಪನಗರಿಯಾ 2015ರ ಜನವರಿಯಿಂದ 2017ರ ಆಗಸ್ಟ್ ತಿಂಗಳವರೆಗೆ ನೀತಿ ಆಯೋಗ್ನಲ್ಲಿ ಸೇವೆ ಸಲ್ಲಿಸಿದ್ದರು.ಮೂಲತಃ ಅರವಿಂದ್ ಪನಗರಿಯಾ ಅವರು ರಾಜಸ್ಥಾನದವರಾಗಿದ್ದು, ಸದ್ಯ ಅಮೆರಿಕದ ವಿವಿಯೊಂದರಲ್ಲಿ ಪೊಲಿಟಿಕಲ್, ಎಕನಾಮಿಕ್ಸ್ ಭೋದಕರಾಗಿದ್ದಾರೆ.
16ನೇ ಹಣಕಾಸು ಆಯೋಗದ ಕಾರ್ಯದರ್ಶಿ ಸ್ಥಾನಕ್ಕೆ ಋತ್ವಿಕ್ ರಂಜನಮ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ. ಇವರು ಈ ಹಿಂದೆ ಕಂದಾಯ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ಹಣಕಾಸು ಆಯೋಗದ ಇತರ ಸದಸ್ಯರ ಹೆಸರನ್ನು ಪ್ರತ್ಯೇಕವಾಗಿ ಘೋಷಿಸುವ ಸಾಧ್ಯತೆಯಿದೆ.
ಹಣಕಾಸು ಆಯೋಗದ ಜವಾಬ್ದಾರಿ ಏನು?
ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಆದಾಯದ ಹಂಚಿಕೆಗೆ ಸೂತ್ರ ರೂಪಿಸುವುದು ಹಣಕಾಸು ಆಯೋಗದ ಜವಾಬ್ದಾರಿ. ಐದು ವರ್ಷಕ್ಕೆಂದು ಆಯೋಗ ತೆರಿಗೆ ಹಂಚಿಕೆ ಸೂತ್ರಗಳನ್ನು ಶಿಫಾರಸು ಮಾಡುತ್ತದೆ. ಸರ್ಕಾರ ಈ ಶಿಫಾರಸುಗಳ ಆಧಾರದ ಮೇಲೆ ತೆರಿಗೆ ಹಂಚಿಕೆ ಮಾಡುತ್ತದೆ.
16ನೇ ಹಣಕಾಸು ಆಯೋಗ ಮಾಡುವ ಶಿಫಾರಸುಗಳು 2026ರ ಏಪ್ರಿಲ್ನಿಂದ ಜಾರಿ ಆಗುತ್ತವೆ. ಈಗ ನೇಮಕ ಮಾಡಲಾಗಿರುವ ಈ ಆಯೋಗವು 2025ರ ಅಕ್ಟೋಬರ್ 31ರವರೆಗೆ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಅಷ್ಟರೊಳಗೆ ಸರ್ಕಾರಕ್ಕೆ ತೆರಿಗೆ ಹಂಚಿಕೆಯ ಸೂತ್ರಗಳನ್ನು ಶಿಫಾರಸು ಮಾಡಬೇಕಾಗುತ್ತದೆ.
ಈಗ ಆಗುತ್ತಿರುವ ತೆರಿಗೆ ಹಂಚಿಕೆ ಸೂತ್ರವನ್ನು 15ನೇ ಹಣಕಾಸು ಆಯೋಗ ರೂಪಿಸಿತ್ತು. 2017ರ ನವೆಂಬರ್ನಲ್ಲಿ ಈ ಆಯೋಗದ ರಚನೆಯಾಗಿತ್ತು. ಎನ್ ಕೆ ಸಿಂಗ್ ಮುಖ್ಯಸ್ಥರಾಗಿದ್ದರು. ಇದರ ವ್ಯಾಪ್ತಿಯನ್ನು ಐದು ವರ್ಷದ ಬದಲು ಆರು ವರ್ಷಕ್ಕೆ ಹೆಚ್ಚಿಸಲಾಗಿತ್ತು. 2025-26ರವರೆಗೆ ಇದರ ಶಿಫಾರಸುಗಳು ಜಾರಿಯಲ್ಲಿರುತ್ತವೆ.
ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.…
ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಪಾರ್ಕ್ ಆದ ಕಬ್ಬನ್ ಪಾರ್ಕ್‌ನಲ್ಲಿ ಇನ್ನು ಮುಂದೆ ಯಾವುದೇ ಸಂಘಟನೆಗಳು ತಮ್ಮ ಚಟುವಟಿಕೆ…
13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನಲ್ಲಿ 1.10 ಕೋಟಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗುವ ಮೂಲಕ ಕಿರಿಯ ವಯಸ್ಸಿಗೆ ಐಪಿಎಲ್‌ಗೆ…
ಕುವೈತ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ರಾಜ ಶೇಕ್ ಮಿಶಾಲ್…
ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…