ಯಲಹಂಕ : ಸೆಲ್ಫ್ ಕಿಡ್ನಾಪ್ ನಾಟಕವಾಡಿದ್ದರು ಎನ್ನಲಾಗಿದ್ದ ಜೆಡಿಎಸ್ ಮುಖಂಡ ಮುನೇಗೌಡರ ಮೇಲೆ ವಂಚನೆ ಆರೋಪ ಬಿದ್ದಿದೆ ಯಲಹಂಕದ ಜೆಡಿಎಸ್ ಅಭ್ಯರ್ಥಿ ಮುನೇಗೌಡರ ಮೇಲೆ ಲಕ್ಷಾಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದ್ದು ಭಾರಿ ವಾಹನಗಳನ್ನು ಮುನೇಗೌಡ ಬಾಡಿಗೆಗೆ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.
ಲಾಜಿಸ್ಟಿಕ್ಸ್ ಸರ್ವೀಸ್ ನಡೆಸುತ್ತಿರುವ ಜೆಡಿಎಸ್ ಅಭ್ಯರ್ಥಿ ಮುನೇಗೌಡ, ಆನೇಕಲ್ ಮಂಜುನಾಥರ ಸುಮುಖ ಎಂಟರ್ ಪ್ರೈಸಸ್ ಮೂಲಕ ಭಾರಿ ವಾಹನ ಬಾಡಿಗೆ ಪಡೆದಿದ್ದರು. ಮುನೇಗೌಡರ ಎಸ್.ವಿ.ಸಿ ರೋಡ್ ಲೈನ್ಸ್ ಸಂಸ್ಥೆಗೆ ಭಾರಿ ವಾಹನ ಗುತ್ತಿಗೆಗೆ ನೀಡಲಾಗಿತ್ತು. ಈ ಹಿನ್ನೆಲೆಯೆಲ್ಲಿ 2020 ಡಿಸೆಂಬರ್ ನಿಂದ 2021ರವರೆಗೆ ಮಂಜುನಾಥ್ ಭಾರಿ ವಾಹನಗಳನ್ನು ಬಾಡಿಗೆಗೆ ಕಳುಹಿಸಿದ್ದರು ಎನ್ನಲಾಗಿದೆ. ಬಾಡಿಗೆಗೆ ಎಂದು ನೀಡಿದ್ದ ವಾಹನಕ್ಕೆ ಮಾಲೀಕ ಮಂಜುನಾಥ್, ಚಾಲಕರ ಸಂಬಳ ಡಿಸೇಲ್ ಹಾಕಿಸಿ ವ್ಯವಹಾರ ನಡೆಸಿದ್ದರು. ಆದರೆ ವ್ಯವಹಾರದ 69ಲಕ್ಷ ಬಾಕಿ ಹಣ ಕೊಡದೇ ಮುನೇಗೌಡ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನೊಂದ ವಾಹನ ಮಾಲೀಕ, ಜೆಡಿಎಸ್ ಅಭ್ಯರ್ಥಿ ಮುನೇಗೌಡರಿಗೆ ಕರೆ ಮಾಡಿ “ನನ್ನ ಹಣ ಕೊಡಿ, ಇಲ್ಲಾಂದ್ರೆ ಸಾಯಬೇಕಾದ ಸ್ಥಿತಿ ಇದೆ” ಎಂದು ಮಂಜುನಾಥ್ ಹೇಳಿದಾಗ ಅವಾಚ್ಯವಾಗಿ ನಿಂದಿಸಿ ಧಮ್ಕಿ ಹಾಕಿದ್ದಾರೆ. “ನಾನು ಹಣ ಕೊಡೋದಿಲ್ಲ” ಎಂದು ಅವಾಶ್ಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದೂ ಅಲ್ಲದೇ ಆಡಿಯೋದಲ್ಲಿ “ಬೇಕಾದ್ರೆ ಸಾಯಿ” ಎಂದು ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹೇಳಿರುವುದೂ ಕೇಳಿ ಬಂದಿದೆ.
ಇಷ್ಟೆಲ್ಲಾ ಆದ ಮೇಲೆ ನೊಂದ ಮಂಜುನಾಥ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಬೆಂಗಳೂರು ಗ್ರಾಮಾಂತರ ಎಸ್.ಪಿ.ಗೆ, ಕೇಂದ್ರ ವಲಯ ಐಜಿಪಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ನ್ಯಾಯಕ್ಕಾಗಿ ವಂಚನೆಗೊಳಗಾದ ಮಂಜುನಾಥ್ ಆಗ್ರಹಿಸಿದ್ದರು. ಇನ್ನು ಇದೇ ಜೆಡಿಎಸ್ ಅಭ್ಯರ್ಥಿ ಮೊನ್ನೆ ಕಿಡ್ನಾಪ್ ನಾಟಕವಾಡಿ, ಶಾಸಕ ಎಸ್.ಆರ್ ವಿಶ್ವನಾಥ್ ಮೇಲೆ ಆ ಆರೋಪವನ್ನು ಹಾಕಿ ಚುನಾವಣೆ ಗೆಲ್ಲಲು ಷಡ್ಯಂತ್ರ ಮಾಡಿದ್ದ ಆರೋಪ ಕೂಡ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ವಂಚನೆ ಮಾಡಿ ಧಮ್ಕಿ ಹಾಕಿರುವ ಮುನೇಗೌಡರ ಆಡಿಯೋ ವೈರಲ್ ಆಗಿದೆ ಎನ್ನಲಾಗಿದೆ.
ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…
ಮೈಸೂರು: ಮುಡಾ 50:50 ಸೈಟ್ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…
ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…
ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್ ಸೇವೆಗಳಲ್ಲಿ…
ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…