ಹೊಸದಿಲ್ಲಿ : ಖಾಸಗಿ ದೂರ ಸಂಪರ್ಕ ಸಂಸ್ಥೆಗಳ ಪೈಪೋಟಿಯಲ್ಲಿ ಮುಚ್ಚುವ ಭೀತಿಯಲ್ಲಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ ಎನ್ ಎಲ್ ಪುನಶ್ಚೇತನಕ್ಕೆ ಕೇಂದ್ರ ಸರಕಾರ 89,047 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಇದರಲ್ಲಿ ಬಿಎಸ್ ಎನ್ ಎಲ್ ಗೆ 4ಜಿ/5ಜಿ ಸ್ಪೆಕ್ಟ್ರಂ ಹಂಚಿಕೆ ಕೂಡ ಸೇರಿದೆ. ಈ ಮೊತ್ತವು ಭಾರತ್ ಸಂಚಾರ್ ನಿಗಮ ಲಿ.( ಬಿಎಸ್ ಎನ್ ಎಲ್) ಪುನಶ್ಚೇತನಕ್ಕೆ ಕಳೆದ ವರ್ಷ ಘೋಷಣೆಯಾದ 1.64 ಲಕ್ಷ ಕೋಟಿ ರೂ. ಪ್ಯಾಕೇಜ್ ಭಾಗವಾಗಿದೆ. ಇದೀಗ ಬಿಎಸ್ ಎನ್ ಎಲ್ ಅಧಿಕೃತ ಬಂಡವಾಳ 1,50,000ಕೋಟಿ ರೂ.ನಿಂದ 2,10,000 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಪುನಶ್ಚೇತನ ಪ್ಯಾಕೇಜ್ ನಿಂದ ಬಿಎಸ್ ಎನ್ ಎಲ್ ಸುಭದ್ರವಾದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿ ರೂಪುಗೊಳ್ಳಲಿದ್ದು, ಭಾರತದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಗಮನ ಕೇಂದ್ರೀಕರಿಸಲಿದೆ ಎಂದು ಸರ್ಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
2023-24ನೇ ಹಣಕಾಸು ಸಾಲಿನಲ್ಲಿ ಸರ್ಕಾರ 52,937 ಕೋಟಿ ರೂ. ಬಂಡವಾಳ ನೆರವನ್ನು ಘೋಷಿಸಿತ್ತು. ಇದಕ್ಕಿಂತ ಹಿಂದಿನ ಸಾಲಿನಲ್ಲಿ 44,720 ಕೋಟಿ ರೂ. ಬಂಡವಾಳ ನೆರವು ಘೋಷಿಸಲಾಗಿತ್ತು. ಇತ್ತೀಚಿನ ಸ್ಪೆಕ್ಟ್ರಂ ಹಂಚಿಕೆಯಿಂದ ಬಿಎಸ್ ಎನ್ ಎಲ್ ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 4ಜಿ ಹಾಗೂ 5ಜಿ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ. ವಿವಿಧ ಸಂಪರ್ಕ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಹಾಗೂ ಸಂಪರ್ಕ ಹೊಂದಿರದ ಹಳ್ಳಿಗಳಿಗೆ 4ಜಿ ಕವರೇಜ್ ಅನ್ನು ಬಿಎಸ್ ಎನ್ ಎಲ್ ನೀಡಬಹುದು.
ಬಿಎಸ್ಎನ್ಎಲ್ / ಎಂಟಿಎನ್ ಎಲ್ ಗೆ 2019ರಲ್ಲಿ ಮೊದಲ ಪುನಶ್ಚೇತನ ಪ್ಯಾಕೇಜ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಇದು 69,000 ಕೋಟಿ ರೂ. ಪ್ಯಾಕೇಜ್ ಆಗಿದ್ದು, ಬಿಎಸ್ ಎನ್ ಎಲ್ /ಎಂಟಿಎನ್ ಎಲ್ ನಲ್ಲಿ ಸ್ಥಿರತೆ ತಂದಿತ್ತು. 2022ರಲ್ಲಿ ಸರ್ಕಾರ ಬಿಎಸ್ ಎನ್ ಎಲ್/ ಎಂಟಿಎನ್ ಎಲ್ ಗೆ 1.64 ಲಕ್ಷ ಕೋಟಿ ರೂ. ಮೊತ್ತದ ಎರಡನೇ ಪುನಶ್ಚೇತನ ಪ್ಯಾಕೇಜ್ ಗೆ ಅನುಮೋದನೆ ನೀಡಿತ್ತು. ಈ ಎರಡು ಪ್ಯಾಕೇಜ್ ಗಳ ಕಾರಣದಿಂದ 2021-22ನೇ ಹಣಕಾಸು ಸಾಲಿನಿಂದ ಬಿಎಸ್ ಎನ್ ಎಲ್ ಲಾಭ ಗಳಿಸಲು ಪ್ರಾರಂಭಿಸಿತ್ತು. ಬಿಎಸ್ ಎನ್ ಎಲ್ ಮೇಲಿನ ಒಟ್ಟು ಸಾಲದ ಹೊರೆ 32,944 ಕೋಟಿ ರೂ.ನಿಂದ 22,289 ಕೋಟಿ ರೂ.ಗೆ ತಗ್ಗಿತ್ತು. ಹೋಮ್ ಫೈಬರ್ ವಲಯದಲ್ಲಿ ಬಿಎಸ್ ಎನ್ ಎಲ್ ಉತ್ತಮ ಬೆಳವಣಿಗೆ ದಾಖಲಿಸಿದೆ.
ಬಿಎಸ್ ಎನ್ ಎಲ್ ಈ ಹಿಂದೆ ನಿರಂತರ ನಷ್ಟಕ್ಕೆ ತುತ್ತಾಗಿತ್ತು. 2019-20ನೇ ಸಾಲಿನಲ್ಲಿ ಬಿಎಸ್ ಎನ್ ಎಲ್ ಗೆ 15,500 ಕೋಟಿ ರೂ. ನಷ್ಟವಾಗಿತ್ತು. 2019ರಲ್ಲಿ ಪುನಶ್ಚೇತನ ಪ್ಯಾಕೇಜ್ ನೀಡಿದ ಬಳಿಕ 2020-21 ನೇ ಸಾಲಿನಲ್ಲಿ 7,441 ಕೋಟಿ ರೂ.ಗೆ ಇಳಿಕೆಯಾಗಿತ್ತು.
ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್…
ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…
ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…
ಮೈಸೂರು: ಬಹುಭಾಷಾ ನಟ ಪ್ರಭುದೇವ್ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…