Andolana originals

ಚಾಮರಾಜೇಶ್ವರ ರಥೋತ್ಸವಕ್ಕೆ ದ್ವಿಶತಮಾನದ ನವೋತ್ಸಾಹ

ಸಿ.ಎಂ.ನರಸಿಂಹಮೂರ್ತಿ 

ಚಾಮರಾಜನಗರ ವನಸಿರಿ ಪ್ರಕೃತಿ ಮಾತೆಯ ತವರೂರು. ವನ್ಯ ಸಂಪತ್ತಿನ ತಾಣ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗೂ ಶ್ರೀಮಂತ ಸಾಂಸ್ಕ ತಿಕ ಪರಂಪರೆ ಬೆನ್ನಿಗಿರುವ ಜೀವಂತ ಸಂಸ್ಕೃತಿಯ ಜಾನಪದ ಕಲೆಗಳ ಕಣಜ.

ಮೂಲತಃ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರದ ಪುರಾತನ ಹೆಸರು ಅರಿಕೊಠಾರ. ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಚಾಮರಾಜ ಒಡೆಯರ್ ಅವರ ಜನ್ಮ ಸ್ಥಳವಿದು. ಕ್ರಿ.ಶ.೧೭೭೪ರಲ್ಲಿ ಚಾಮರಾಜ ಒಡೆಯರ್ ಇಲ್ಲಿ ಜನಿಸಿದ್ದರಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆಯ ಸ್ಮರಣಾರ್ಥ ಈ ನಗರಕ್ಕೆ ಚಾಮರಾಜನಗರ ಎಂದು ನಾಮಕರಣ ಮಾಡಿದರು.

ಈ ಪ್ರದೇಶವು ತನ್ನದೇ ಆದ ಐತಿಹಾಸಿಕ ವಿಚಾರವನ್ನು ಒಳಗೊಂಡಿದೆ. ಗಂಗರು, ಕದಂಬರು, ಚಾಲುಕ್ಯರು, ಹೊಯ್ಸಳರು ಯದುವಂಶದ ರಾಜರು ಈ ರಾಜ್ಯವನ್ನಾಳಿರುವ ಬಗ್ಗೆ ಅನೇಕ ಶಾಸನಗಳಲ್ಲಿ ನಾವು ಇಂದಿಗೂ ಕಾಣಬಹುದಾಗಿರುತ್ತದೆ. ಚಾಮರಾಜನಗರ ಹೃದಯ ಭಾಗವಾದ ಚಾಮರಾಜೇಶ್ವರನೇ ಈ ಜಿಲ್ಲೆಯ ಅಧಿದೇವತೆ. ಶತಮಾನಗಳ ಇತಿಹಾಸವಿರುವ ಅರಿಕೊಠಾರ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈ ನಗರದ ನೈಋತ್ಯ ದಿಗ್ಭಾಗದಲ್ಲಿ ಕರಿವರದ ವೆಂಕಟನಾರಾಯಣ ಸ್ವಾಮಿಗೆ ಅಂದಿನ ಅರಿಕೊಠಾರದ ಪ್ರಭುವಾಗಿ ಹಿರಿ ಚೆನ್ನರಾಜ ರಾಜ್ಯಭಾರ ನಡೆಸುತ್ತಿದ್ದ. ಶಾಲಿವಾಹನ ಶಕ ೧೬೮೮ರಲ್ಲಿ ಅಲ್ಲಿನ ಪಾಕಶಾಲೆಯ ಶಾಸನ ಒಂದರಲ್ಲಿ ಅರಿಕೊಠಾರ ಎಂಬ ಸ್ಥಳದ ಬಗ್ಗೆ ಉಲ್ಲೇಖವಿದೆ. ಇಲ್ಲಿನ ವೀರಭದ್ರಸ್ವಾಮಿ ದೇವಾಲಯದಲ್ಲಿರುವ ಕ್ರಿ.ಶ.೧೫೨೭ರ ಶಾಸನವೊಂದರಲ್ಲಿ ವೀರ ವೆಂಕಟಪತಿ ಮಹದೇವರಾಯರು ಈ ಅರಿಕೊಠಾರದ ರಾಜರಾಗಿದ್ದು, ಈ ದೇವಾಲಯಕ್ಕೆ ದತ್ತಿ ನೀಡಿದ ವಿಚಾರವಿರುವ ಶಾಸನದಲ್ಲಿ ಅರಿಕೊಠಾರ ಎಂಬ ಶಬ್ದ ಉಲ್ಲೇಖವಿರುವುದನ್ನು ಗಮನಿಸಬಹುದು. ಅರಿ ಎಂದರೆ ಧಾನ್ಯಗಳೆಂದೂ, ಕೊಠಾರ ಎಂದರೆ ರಾಶಿ ಎಂದೂ ಅರ್ಥ ಇರುವುದರಿಂದ ಅರಿಕೊಠಾರ ಎಂದರೆ ಧಾನ್ಯಗಳನ್ನು ಒಕ್ಕಣೆ ಮಾಡುವ ಜಾಗ ಎಂಬ ಅರ್ಥ ಇದೆ.

ಯದುವಂಶದ ಮಹಾರಾಜರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ೧೭೯೯ರಿಂದ ೧೮೬೮ರವರೆಗಿನ ಆಡಳಿತಾವಧಿಯಲ್ಲಿ, ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿ ದೇವಾಲಯವನ್ನು ಜನನ ಮಂಟಪದ ಪೂರ್ವ ಭಾಗದಲ್ಲಿ ೫ ಎಕರೆಗೂ ಹೆಚ್ಚು ವಿಶಾಲವಾದ ಪ್ರದೇಶದಲ್ಲಿ ಶೈವಾಗಮಾನುಸಾರ ದ್ರಾವಿಡ ಶೈಲಿಯನ್ನನುಸರಿಸಿ ನವ ಬೇರಯುಕ್ತವಾದ ಶಿವ ದೇವಾಲಯವನ್ನು ನಿರ್ಮಿಸಿದರು. ಕ್ರಿ.ಶ.೧೮೨೬ರಲ್ಲಿ ಶೃಂಗೇರಿ ಮಠದಲ್ಲಿದ್ದ ಒಂದು ರಕ್ತವರ್ಣದ ಲಿಂಗವನ್ನು  ತರಿಸಿ, ಚಾಮರಾಜೇಶ್ವರ ಹೆಸರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಹೆಸರನ್ನೇ ಪ್ರಧಾನವಾಗಿ ಪರಿಗಣಿಸಿ ಅರಿಕೊಠಾರವನ್ನು ಚಾಮರಾಜನಗರ’ ಎಂದು ಪರಿವರ್ತಿಸಲಾಯಿತು.

ಸುಂದರ ವಿಶಾಲ ಪ್ರಾಂಗಣ, ನಯನ ಮನೋಹರ ೭೫ ಅಡಿಗಳ ಪಂಚ ಸ್ಪರ್ಶಾಯುಕ್ತ, ರಾಜಗೋಪುರ ವೈವಿಧ್ಯಮಯ ಕಲಾಕುಸುರಿಗಳು ಆಂತರಿಕ ಗರ್ಭಗುಡಿಗಳು ಈ ದೇವಾಲಯದ ವೈಶಿಷ್ಟ್ಯಗಳು.  ಈ ದೇವಾಲಯದಲ್ಲಿ ಪ್ರತಿವರ್ಷ ಜ್ಯೇಷ್ಠ ಆಷಾಢ ಮಾಸದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವವು ೫-೬ ದಿವಸಗಳು ವಿಶೇಷವಾಗಿ ಆಚರಿಸಲ್ಪಡುತ್ತದೆ. ಅಲ್ಲದೆ, ಹಲವಾರು ಧಾರ್ಮಿಕ ಉತ್ಸವಗಳು, ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಎಡೆಬಿಡದೆ ನಡೆದುಕೊಂಡು ಬರುತ್ತಿವೆ.

ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವವು ಪ್ರತಿ ವರ್ಷವೂ ಆಷಾಢ ಮಾಸದ ಪೂರ್ವಾಷಾಢ ನಕ್ಷತ್ರದಂದು ನಡೆಯುತ್ತದೆ. ನಾಡಿನಲ್ಲಿಯೇ ಆಷಾಢಮಾಸದಲ್ಲಿ ನಡೆಯುವ ಏಕೈಕ ಜಾತ್ರಾ ಮಹೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀ ಚಾಮರಾಜೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ, ಹೊಸದಾಗಿ ಮದುವೆಯಾದ ದಂಪತಿ ಸಹಸ್ರಾರು ಸಂಖ್ಯೆಯಲ್ಲಿ ಈ ರಥೋತ್ಸವದಲ್ಲಿ ಪಾಲ್ಗೊಡು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಣ್ಣು ಜವನವನ್ನು ರಥಕ್ಕೆ ಎಸೆದು ಪ್ರಾರ್ಥನೆ ಮಾಡುವುದು ಸಂಪ್ರದಾಯವಾಗಿದೆ. ಒಟ್ಟಿನಲ್ಲಿ ರಥೋತ್ಸವ ಸಾರ್ವತ್ರಿಕ ಜಾನಪದ ಸಾಂಸ್ಕ ತಿಕ ವಿಶಿಷ್ಟವಾದ ಸಂಪ್ರದಾಯವಾಗಿದೆ.

ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಒಳಗೆ ಇರುವ ಶಿಲಾಶಾಸನದಲ್ಲಿ ಇದರ ಉಲ್ಲೇಖವಿದೆ. ನಮ್ಮ ನಾಡಿನಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹೊರತಾಗಿ ಇಷ್ಟು ಬೃಹದಾಕಾರವುಳ್ಳ ದ್ರಾವಿಡ ಶೈಲಿಯಲ್ಲಿ ಇರುವ ಎರಡನೆಯದು ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯ ಎನ್ನಲಾಗಿದೆ.

” ಚಾಮರಾಜನಗರದಲ್ಲಿ ೨೦೨೬ ಜುಲೈ ೨೮ ರಂದು ೨೦೦ನೇ ವರ್ಷದ ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿದೆ. ನವ ದಂಪತಿ ಸೇರಿದಂತೆ ಬಹುತೇಕ ಎಲ್ಲ ವಯೋಮಾನದವರೂ ರಥೋತ್ಸವದಲ್ಲಿ ಪಾಲ್ಗೊಳ್ಳಲು ಸಂಭ್ರಮದಿಂದ ಸಿದ್ಧತೆ ನಡೆಸಿದ್ದಾರೆ.”

 

 

ಆಂದೋಲನ ಡೆಸ್ಕ್

Recent Posts

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿ ಆರೋಪ ; ಇಬ್ಬರು ಶಿಕ್ಷಕರು ಅಮಾನತ್ತು

ಬೆಂಗಳೂರು : ಸರ್ಕಾರಿ ಸೇವೆಯಲ್ಲಿದ್ದುಕೊಂಡು ನಿಯಮಗಳನ್ನು ಉಲ್ಲಂಘಿಸಿ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು…

1 hour ago

ಹುಣಸೂರಿನ ಎಂಟು ಕೆರೆಗಳಿಗೆ ನೀರು ಪೂರೈಕೆಗೆ ಸೂಚನೆ

 ಶಾಸಕ ಜಿ.ಡಿ. ಹರೀಶ್‌ ಗೌಡರ ಮನವಿಗೆ ಸರ್ಕಾರದ ಸ್ಪಂದನೆ ಬೆಂಗಳೂರು : ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ…

2 hours ago

101 ತಾಲ್ಲೂಕುಗಳು ಬರಪೀಡಿತ ; ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಘೋಷಣೆ

89 ತಾಲ್ಲೂಕುಗಳಲ್ಲಿ ತೀವ್ರ, 12 ತಾಲ್ಲೂಕುಗಳಲ್ಲಿ ತುಸು ಕಡಿಮೆ ಶೇ. 31ರಷ್ಟು ಮಳೆ ಕೊರತೆ ಶೇ.71ರಷ್ಟು ಬೆಳೆಗಳಿಗೆ ಹಾನಿ ಬೆಂಗಳೂರು…

2 hours ago

ಮೈಸೂರು | ಮಹಿಳಾ ಪೊಲೀಸ್‌ ಠಾಣೆಗೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ

ಮೈಸೂರು : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಗುರುವಾರ ಮೈಸೂರು ನಗರದ ಮಹಿಳಾ ಪೊಲೀಸ್…

3 hours ago

ಆಗಸ್ಟ್‌ 29 ರಂದು ಮೈಸೂರಿಗೆ ಮಾಜಿ ಸಿಎಂ ಆಗಮನ

ಮೈಸೂರು : ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 10;30ಕ್ಕೆ ಹೆಲಿಕಾಪ್ಟರ್‌ನಲ್ಲಿ…

3 hours ago

ಸಚಿವ ನಾಗೇಂದ್ರ ವಿರುದ್ಧ ಆರೋಪಕ್ಕೆ ಸಾಕ್ಷ್ಯಗಳಿಲ್ಲ : ಸಿಎಂ ಡಿ.ಕೆ.ಶಿವಕುಮಾರ್‌

ನವದೆಹಲಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮುಖ್ಯಮಂತ್ರಿ…

3 hours ago