Andolana originals

ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯಾದ ಟಿಎಪಿಸಿಎಂಎಸ್ ಚುನಾವಣೆ

ಮಂಜು ಕೋಟೆ

ಕೋಟೆ: ಜು.೨೬ರಂದು ಚುನಾವಣೆ; ನಾಮಪತ್ರ ಸಲ್ಲಿಕೆ ಶುರು; ಮುಖಂಡರಿಂದ ಕಾರ್ಯತಂತ್ರ

ಎಚ್.ಡಿ.ಕೋಟೆ: ತಾಲ್ಲೂಕಿನ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ ಜು.೨೬ರಂದು ನಡೆಯಲಿದ್ದು, ಚುನಾವಣೆ ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳ ಮುಖಂಡರಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

ವಿವಿಧ ಪಕ್ಷಗಳ ಅಭ್ಯರ್ಥಿಗಳು ಭಾನುವಾರದಿಂದ ನಾಮಪತ್ರ ಸಲ್ಲಿಸಲು ಆರಂಭಿಸಿದ್ದಾರೆ. ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೧೨ ಮಂದಿ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲೇಬೇಕೆಂದು ಕಾಂಗ್ರೆಸ್ ಪಕ್ಷದ ಶಾಸಕ ಅನಿಲ್ ಚಿಕ್ಕಮಾದು, ಪಕ್ಷದ ಅಧ್ಯಕ್ಷರಾದ ಏಜಾಜ್ ಪಾಷ, ಮಾದಪ್ಪ, ನಾಗನಹಳ್ಳಿ ಪ್ರದೀಪ, ಹಿರೇಹಳ್ಳಿ ಸೋಮೇಶ್, ಜಿನ್ನಳ್ಳಿ ರಾಜ ನಾಯಕ, ಶಿವಮಲ್ಲಪ್ಪ, ಪರಶಿವ, ಬಿಜೆಪಿ ತಾಲ್ಲೂಕು ಅಧ್ಯಕ್ಷರುಗಳಾದ ಅಣ್ಣೂರು ಟಿ.ವೆಂಕಟೇಶ್, ಮುಳ್ಳೂರು ಗಿರೀಶ್, ಮೊತ್ತ ಬಸವರಾಜಪ್ಪ, ಜಾ.ದಳದ ಕೆ.ಎಂ.ಕೃಷ್ಣನಾಯಕ, ಕಾಳಿಹುಂಡಿ ಸಿದ್ದೇಗೌಡ, ಗುಂಡತ್ತೂರು ಪ್ರಕಾಶ, ಮಹೇಶ, ಬೆಳಗನಹಳ್ಳಿ ಶಿವರಾಜ್, ಕರವೇ ನಟರಾಜ್ ಅವರುಗಳು ತಮ್ಮ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರೊಡನೆ ಕಾರ್ಯತಂತ್ರ ರೂಪಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದಾರೆ.

ಎ ತರಗತಿಯ ೪ ಸ್ಥಾನಗಳಿಗೆ ಸ್ಪರ್ಧಿಸಲು ಮತ್ತು ಮತದಾನ ಮಾಡಲು ತಾಲ್ಲೂಕಿನ ೨೨ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೂರೂ ಪಕ್ಷದವರು ಪೈಪೋಟಿಯಲ್ಲಿ ಡೆಲಿಗೇಟ್ ಮೂಲಕ ನೇಮಕ ಮಾಡಿಕೊಂಡಿದ್ದಾರೆ. ಇವರಲ್ಲಿ ಯಾರು ಸ್ಪರ್ಧಿಸುತ್ತಾರೆ, ಯಾರು ಗೆಲುವು ಸಾಧಿಸುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಬಿ ತರಗತಿಯ ೮ ಸ್ಥಾನಗಳ ಪೈಕಿ ೨ ಸಾಮಾನ್ಯ ಮಹಿಳೆಯರು, ಎಸ್‌ಸಿ, ಎಸ್‌ಟಿ, ಬಿಸಿಎಂ ಎ, ಬಿಸಿಎಂ ಬಿಗೆ ಒಂದೊಂದು ಸ್ಥಾನ ಮೀಸಲಾಗಿದ್ದು, ೧,೯೧೪ ಮತದಾರರಿದ್ದಾರೆ. ಟಿಎಪಿಸಿಎಂಎಸ್‌ನ ೧೨ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ (ಜು.೧೨) ದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.

ನಾಮಪತ್ರ ಸಲ್ಲಿಸಲು ಜು.೧೮ ಕೊನೆಯ ದಿನವಾಗಿದೆ. ಜು.೨೬ರ ಭಾನುವಾರ ಸಂಘದ ಕಚೇರಿಯಲ್ಲಿ ಮತದಾನ ನಡೆಯಲಿದೆ.

ಅಭಿಪ್ರಾಯ ಸಂಗ್ರಹ: ಎಂ.ಡಿ.ಮಂಚಯ್ಯ ಮುಂದಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕೆಂದು ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳ ತಾಲ್ಲೂಕು ವರಿಷ್ಠರು, ಮುಖಂಡರು, ಕಾರ್ಯಕರ್ತರ ಸಭೆಗಳನ್ನು ಪ್ರತ್ಯೇಕವಾಗಿ ನಡೆಸಿ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ.

ಜಾ.ದಳಕ್ಕೆ ಆಘಾತ: ಎ ತರಗತಿಯಿಂದ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಾ.ದಳದ ಎಂ.ಡಿ.ಮಂಚಯ್ಯರವರ ಡೆಲಿಗೇಟ್‌ನ ನಿರ್ಣಯವನ್ನು ಸಂಘದ ಕಾರ್ಯದರ್ಶಿ ಮೋಹನ್ ಸಮರ್ಪಕವಾಗಿ ಬರೆದಿಲ್ಲ ಎಂದು ಸಹಕಾರ ಇಲಾಖೆ ಅಧಿಕಾರಿ ಎ.ಆರ್.ರೇಣುಕ ಅವರು ರದ್ದುಗೊಳಿಸಿರುವುದು ಜಾ.ದಳ ಮುಖಂಡರಿಗೆ ದೊಡ್ಡ ಆಘಾತ ಉಂಟುಮಾಡಿದೆ. ಇದನ್ನು ಪ್ರಶ್ನಿಸಿ, ನ್ಯಾಯಾಲಯದ ಮೊರೆ ಹೋಗಲು ಅಭಿಪ್ರಾಯ ಸಂಗ್ರಹ ಎಂ.ಡಿ.ಮಂಚಯ್ಯ ಮುಂದಾಗಿದ್ದಾರೆ.

 

 

ಆಂದೋಲನ ಡೆಸ್ಕ್

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

11 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

12 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

12 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

13 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

13 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

16 hours ago