Andolana originals

ಯುಜಿ, ಎಬಿ ಕೇಬಲ್ ಅಳವಡಿಕೆಯೊಂದೇ ಪರಿಹಾರ

ನವೀನ್ ಡಿಸೋಜ

ಕೊಡಗಿನಲ್ಲಿ ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆ; ಶಾಶ್ವತ ಪರಿಹಾರಕ್ಕೆ ಬೇಕಿದೆ ಬಹುದೊಡ್ಡ ಮೊತ್ತ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಎದುರಾಗುತ್ತಿರುವ ಸಮಸ್ಯೆ ತಪ್ಪಿಸಲು ಯುಜಿ ಕೇಬಲ್ ಮತ್ತು ಎಬಿ ಕೇಬಲ್ ಅಳವಡಿಕೆಯೊಂದೇ ಶಾಶ್ವತ ಪರಿಹಾರವಾಗಿದೆ. ಆದರೆ, ಇದು ಬಹುದೊಡ್ಡ ಯೋಜನೆಯಾಗಿದ್ದು, ಹಂತ ಹಂತವಾಗಿ ವಿದ್ಯುತ್ ಮಾರ್ಗಗಳನ್ನು ಯುಜಿ ಅಥವಾ ಎಬಿ ಕೇಬಲ್ ಮಾರ್ಗಗಳಾಗಿ ಪರಿವರ್ತಿಸಬೇಕಾಗಿದೆ.

ಸದ್ಯ ನಗರದಲ್ಲಿ ಅಂಡರ್‌ಗ್ರೌಂಡ್ ಕೇಬಲ್‌ಗಳಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಶೇ.೮೦ರಷ್ಟು ವಿದ್ಯುತ್ ಮಾರ್ಗಗಳು ಕಾಫಿ ತೋಟಗಳು ಮತ್ತು ಅರಣ್ಯದೊಳಗೆ ಹಾದು ಹೋಗಿವೆ. ಇದರಿಂದ ಮಳೆ-ಗಾಳಿಗೆ ಮರದ ರೆಂಬೆಗಳು ವಿದ್ಯುತ್ ವಾಹಕಗಳ ಮೇಲೆ ಬಿದ್ದು ಕಂಬಗಳು ಮುರಿಯುವುದು, ಶಾರ್ಟ್ ಆಗಿ ಸಂಪರ್ಕ ಕಡಿತಗೊಳ್ಳುವಂತಹ ಸಮಸ್ಯೆ ಸಾಮಾನ್ಯವಾಗಿದೆ.

ತೀರಾ ಒಳಭಾಗದಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಕೆಲವೊಮ್ಮೆ ಸಮಸ್ಯೆ ಕಂಡುಹಿಡಿಯುವುದೇ ಕಷ್ಟಕರಕೆಲಸವಾಗಿದೆ. ಒಮ್ಮೆಲೇ ಸಾಲು ಸಾಲು ಕಂಬಗಳು ಧರೆಗುರುಳಿದಾಗ ಮಳೆ- ಗಾಳಿಯ ನಡುವೆ ಅದರ ಬದಲಾವಣೆಗೂ ಸಮಯ ಹಿಡಿಯುತ್ತದೆ. ಹೀಗಾಗಿ ಗ್ರಾಮೀಣ ಭಾಗಗಳು ವಿದ್ಯುತ್ ಸಮಸ್ಯೆ ಎದುರಿಸುತ್ತಿವೆ.

ಅರಣ್ಯ ಮತ್ತು ತೋಟಗಳ ನಡುವೆ ಹಾದು ಹೋಗಿರುವ ವಿದ್ಯುತ್ ಎಚ್‌ಟಿ ಮಾರ್ಗಗಳನ್ನು ಅಂಡರ್‌ಗ್ರೌಂಡ್ ಕೇಬಲ್ (ಯುಜಿ ಕೇಬಲ್) ಮಾರ್ಗಗಳಾಗಿ ಬದಲಾಯಿಸುವುದು ಮತ್ತು ಎಲ್‌ಟಿ ಲೈನ್‌ಗಳನ್ನು ಎಬಿ ಕೇಬಲ್ (ಏರಿಯಲ್ ಬಂಚ್ಡ್) ಲೈನ್‌ಗಳಾಗಿ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಆದರೆ ಇದು ದುಬಾರಿ ಯೋಜನೆಯಾಗಿದ್ದು, ಒಮ್ಮೆಲೇ ಎಲ್ಲವನ್ನೂ ಬದಲಿಸಲು ಸಾಧ್ಯವಿಲ್ಲ. ಹಾಗಾಗಿ ಹಂತ ಹಂತವಾಗಿ ಮಾರ್ಗಗಳನ್ನು ಪರಿವರ್ತಿಸುವ ಕೆಲಸ ಆಗಬೇಕಿದೆ.

ಕಳೆದ ವರ್ಷ ಜಿಲ್ಲೆಯ ವಿದ್ಯುತ್ ಮಾರ್ಗಗಳ ಬಲವರ್ಧನೆಗಾಗಿ ೨೦೦ ಕೋಟಿ ರೂ. ವಿಶೇಷ ಅನುದಾನ ನೀಡಲಾಗಿತ್ತು. ಆ ಪೈಕಿ ಒಟ್ಟು ೫೪೦ ಕಿ.ಮೀ. ವಿದ್ಯುತ್ ವಾಹಕಗಳ ಬದಲಾವಣೆ ಸೇರಿದಂತೆ ಮಾರ್ಗಗಳ ಬಲವರ್ಧನೆ ಮಾಡಲಾಗಿದ್ದು, ಶೇ.೧೦೦ರಷ್ಟು ಕಾಮಗಾರಿ ಮುಕ್ತಾಯವಾಗಿದೆ.

ಇದರಿಂದ ಕೆಲವು ಕಡೆಗಳ ಸೇವೆಯಲ್ಲಿ ಭಾರೀ ಸುಧಾರಣೆಯಾಗಿದೆ. ಅಡಚಣೆಯಿಲ್ಲದೆ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆಗಾಲದಲ್ಲಿ ವಿದ್ಯುತ್ ಸರಬರಾಜಿನ ತೊಡಕುಗಳನ್ನು ತಡೆಗಟ್ಟಲು ಸೆಸ್ಕ್ ಕಾರ್ಯ ಯೋಜನೆ ರೂಪಿಸಿದೆ. ಮಳೆಗಾಲಕ್ಕೆಂದೇ ೭೦ ಗನ್ ಮ್ಯಾನ್ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರೊಂದಿಗೆ ಹೊರ ಜಿಲ್ಲೆಗಳಿಂದ ಹೆಚ್ಚುವರಿಯಾಗಿ ೫೦ ಗ್ಯಾಂಗ್ ಮೆನ್ ನೇಮಿಸಿಕೊಳ್ಳಲಾಗುತ್ತಿದೆ ಎಂದು ಇಇ ರಾಮಚಂದ್ರ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಮಳೆಗಾಲಕ್ಕಾಗಿಯೇ ಅಗತ್ಯ ವಿರುವಷ್ಟು ವಿದ್ಯುತ್ ಕಂಬಗಳು, ಪರಿವರ್ತಕಗಳು ಹಾಗೂ ವಾಹಕಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಪ್ರತಿ ತಿಂಗಳು ಆದ್ಯತೆ ಮೇರೆಗೆ ಹೆಚ್ಚುವರಿಯಾಗಿ ಕಂಬಗಳನ್ನು ದಾಸ್ತಾನು ಮಾಡಿಕೊಳ್ಳುವ ಕಾರ್ಯವನ್ನು ಮಾಡಲಾಗುತ್ತಿದೆ. ಇದರೊಂದಿಗೆ ಮಳೆಗಾಲಕ್ಕೂ ಮುನ್ನವೇ ವಿದ್ಯುತ್ ಕಂಬಕ್ಕೆ ಹಾನಿ ಉಂಟುಮಾಡಬಹುದಾದ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

” ಕೊಡಗು ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ. ನಮ್ಮಲ್ಲಿ ಶೇ.೮೦ರಷ್ಟು ವಿದ್ಯುತ್ ಮಾರ್ಗಗಳು ಅರಣ್ಯ, ಕಾಫಿ ತೋಟಗಳ ನಡುವೆಯೇ ಹಾದು ಹೋಗಿವೆ. ಯುಜಿ ಅಥವಾ ಎಬಿ ಕೇಬಲ್ಗಳ ಅಳವಡಿಕೆ ಮೂಲಕ ಸಮಸ್ಯೆ ಪರಿಹರಿಸಬಹುದು. ಆದರೆ ಅದಕ್ಕೆ ದೊಡ್ಡ ಮಟ್ಟದ ಯೋಜನೆ, ಅನುದಾನದ ಅಗತ್ಯವಿದೆ.”

-ರಾಮಚಂದ್ರ, ಕಾರ್ಯಪಾಲಕ ಇಂಜಿನಿಯರ್, ಸೆಸ್ಕ್‌ 

ಮಡಿಕೇರಿ ಯುಜಿ ಲೈನ್‌ಗೆ ಪ್ರಸ್ತಾವನೆ: 

ಮಡಿಕೇರಿ ನಗರದಲ್ಲಿನ ವಿದ್ಯುತ್‌ಮಾರ್ಗಗಳನ್ನು ಅಂಡರ್‌ಗ್ರೌಂಡ್ ಕೇಬಲ್ಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಚಿಂತಿಸಲಾಗಿದ್ದು, ಶಾಸಕರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ೮೩ ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಯಿಂದ ನಗರದ ವಿದ್ಯುತ್ ಸಮಸ್ಯೆಗೂ ಪರಿಹಾರ ದೊರೆತಂತಾಗಲಿದೆ.

 

 

ಆಂದೋಲನ ಡೆಸ್ಕ್

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

9 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

10 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

11 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

11 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

11 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

14 hours ago