ಡಾ.ನೀ.ಗೂ.ರಮೇಶ್

ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರುತ್ತದೆ. ಹೀಗಿರುವಾಗ ಯಾರ ಮಾತುಗಳೂ ಸಂಪೂರ್ಣ ವ್ಯರ್ಥವಲ್ಲ ಎಂಬ ಮಾತೊಂದು ಮಾರ್ಮಿಕವಾಗಿದೆ. ನಮ್ಮಲ್ಲಿ ಹೆಚ್ಚು ಜನರು ಮಾಡುವ ತಪ್ಪೆಂದರೆ, ನಮ್ಮೆದುರು ಮಾತನಾಡುತ್ತಿರುವ ವ್ಯಕ್ತಿ ಯಾರು? ಅವರ ಸ್ಥಾನಮಾನ ಏನು? ಎಂಬುದನ್ನು ಆಧರಿಸಿ ಅವರ ಮಾತುಗಳನ್ನು ಕೇಳಿಸಿಕೊಳ್ಳಕೋಬೇ, ಬೇಡವೋ ಎಂಬುದನ್ನು ನಿರ್ಧಾರ ಮಾಡಿಬಿಡುತ್ತಾರೆ. ಅಲ್ಲಿಂದಲೇ ನಮ್ಮ ಕೇಳಿಸಿಕೊಳ್ಳುವ ಸಾಮರ್ಥ್ಯದ ಕುಸಿತ ಪ್ರಾರಂಭವಾಗುತ್ತದೆ.

ವಾಸ್ತವವಾಗಿ ವೇದಿಕೆಯಲ್ಲಿ ಉಪನ್ಯಾಸ ಕೊಡಬೇಕೆಂದರೆ ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಒಂದು ಉತ್ತಮ ಉಪನ್ಯಾಸ ಹಲವು ಪುಸ್ತಕಗಳ ಓದಿಗೆ ಸಮ. ಆಲಿಸುವುದು, ಜೀವಿಯ ಶೈವಾವಸ್ಥೆಯಿಂದಲೂ ಅತ್ಯಂತ ಪ್ರಧಾನ ಪಾತ್ರವಹಿಸುವ ಸಾಮರ್ಥ್ಯವಾಗಿದೆ. ಮಗು ಮಾತು ಕಲಿಯುವುದೇ ಕೇಳಿಸಿಕೊಳ್ಳುವುದರಿಂದ. ಇದು ಭಾಷಾ ಕಲಿಕೆಯ ಮೊದಲ ಹಂತ. ಸರಿ ತಪ್ಪುಗಳ ವಿವೇಚನಾ ಶಕ್ತಿ ಬರುವುದೇ ಬೇರೆಯವರ ಮಾತುಗಳನ್ನು ಕೇಳಿ ಅರ್ಥ ಮಾಡಿಕೊಳ್ಳುವುದರಿಂದ. ಹಾಗಾಗಿಯೇ, ಶ್ರವಣಶಕ್ತಿ ಇಲ್ಲದ ಮಕ್ಕಳು ಮೂಕರೂ, ಬುದ್ಧಿಮಾಂದ್ಯರೂ ಆಗಿಬಿಡುವ ಅಪಾಯವಿರುತ್ತದೆ. ಅದಕ್ಕಾಗಿಯೇ ಶಾಲಾ-ಕಾಲೇಜುಗಳಲ್ಲಿ, ಮನೆಗಳಲ್ಲಿ ‘ಸರಿಯಾಗಿ ಕೇಳಿಸಿಕೊಳ್ಳಿ’ ‘ಗಮನವಿಟ್ಟು ಕೇಳಿಸಿಕೊಳ್ಳಿ’ ಎಂಬ ಮಾತುಗಳನ್ನು ಒತ್ತಿ ಒತ್ತಿ ಹೇಳಲಾಗುತ್ತದೆ.

ಇಂದಿನ ಯುವಜನರಲ್ಲಿ, ವಿದ್ಯಾರ್ಥಿಗಳಲ್ಲಿ ಆಲಿಸುವ ಸಾಮರ್ಥ್ಯ ದಿನೇ ದಿನೇ ಕುಸಿಯುತ್ತಿದೆ. ದೇಹವೊಂದೆಡೆ ಮನಸ್ಸು ಮತ್ತೊಂದೆಡೆಯಾಗಿ ಕೇಳಿಸಿಕೊಂಡಿದ್ದರಲ್ಲಿ ಬಹುಪಾಲು ಮನಸ್ಸಿನಲ್ಲಿ ದಾಖಲಾಗದೆ ಹೋಗುತ್ತಿವೆ. ಇದು ಇಂದಿನ ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಇರುವ ಅತ್ಯಂತ ದೊಡ್ಡ ತೊಡಕಾಗಿದೆ. ಹತ್ತು ನಿಮಿಷಗಳ ಹಿಂದೆ ಹೇಳಿದ ವಿಷಯದ ಕುರಿತು ಕೇಳಿದ ಅಂಶಗಳನ್ನೂ ಹೇಳಲಾಗದಷ್ಟು ಅನ್ಯಮನಸ್ಕತೆ ಇಂದಿನ ಪೀಳಿಗೆಯ ಹೆಚ್ಚು ಜನರನ್ನು ಕಾಡುತ್ತಿದೆ ಎಂಬುದು ಆತಂಕದ ಸಂಗತಿ. ಒಬ್ಬರ ಮಾತುಗಳನ್ನು ಕೇಳಿಸಿಕೊಳ್ಳಲು ಬೇಕಾದ ಸಹನೆ ಯುವಕರಲ್ಲಿ ಕಡಿಮೆಯಾಗುತ್ತಿದೆ. ಎದುರಿಗಿರುವವರು ಪೂರ್ಣ ವಾಕ್ಯ ಮುಗಿಸುವ ಮೊದಲೇ ಪ್ರತ್ಯುತ್ತರ ನೀಡುವುದು, ವಾದ, ವೈಮನಸ್ಯಗಳನ್ನು ಸೃಷ್ಟಿಸುವುದು ಸಾಮಾನ್ಯವಾಗಿಬಿಟ್ಟಿದೆ.

ಇಂದಿನ ಈ ಏಕಾಗ್ರತೆಯ ಕೊರತೆ ಹಾಗೂ ಅನ್ಯಮನಸ್ಕತೆಗೆ ಹಲವು ಕಾರಣಗಳಿವೆ

೧.ಮನರಂಜನೆಯ ವಿಷಯಗಳನ್ನೇ ಮನಸ್ಸಿನ ತುಂಬ ತುಂಬಿಕೊಂಡಿರುವುದು.

೨.ಅತಿಯಾಗಿ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ಪರದೆಗಳನ್ನು ವೀಕ್ಷಿಸುವುದು.

೩.ಮುಂದಿನ ಗುರಿಯನ್ನು ಗುರುತಿಸಿಕೊಳ್ಳದೆ ಅಸ್ಪಷ್ಟತೆಯಲ್ಲೇ ಕಾಲ ದೂಡುತ್ತಿರುವುದು.

೪.ಅತಿಯಾದ ರಾಸಾಯನಿಕಯುಕ್ತ ಆಹಾರಗಳ ಸೇವನೆ ಮಾಡುತ್ತಿರುವುದು.

೫.ಚಿಕ್ಕ ವಯಸ್ಸಿನಲ್ಲೇ ಹಣ, ವಾಹನದಂತಹ ಚಂಚಲತೆ ಸೃಷ್ಟಿಸುವ ವಸ್ತುಗಳು ಬಳಕೆಗೆ ದೊರಕಿರುವುದು.

ಇವು ಯುವ ಪೀಳಿಗೆಯಲ್ಲಿ ಕೇಳಿಸಿಕೊಳ್ಳುವ ಮತ್ತು ಏಕಾಗ್ರತೆಯ ಸಾಮರ್ಥ್ಯ ಕುಸಿಯಲು ಕಾರಣವಾಗಿದೆ.

ಅತ್ಯಂತ ಎಚ್ಚರಿಕೆಯಿಂದ ಈ ಸಮಸ್ಯೆಯಿಂದ ಹೊರಬರುವ ಬಗ್ಗೆ ಯುವಜನತೆ ಆಲೋಚಿಸಬೇಕಾಗಿದೆ. ನಿರ್ಲಕ್ಷಿಸಿದರೆ, ಮುಂದೆ ಇದೇ ಸಮಸ್ಯೆ ಎಂತಹ ಪ್ರತಿಭಾವಂತರನ್ನೂ ಮೂಲೆಗುಂಪು ಮಾಡಬಹುದಾಗಿದೆ.

‘ಕೇಳಿಸಿಕೊಳ್ಳುವುದು’ ಒಂದು ಹಿತವಾದ, ಸುಖವಾದ ಅನುಭವ. ಈ ಮನಸ್ಥಿತಿಯನ್ನು ಸಾಧಿಸಿದರೆ ನಮ್ಮ ಬೆಳವಣಿಗೆಯನ್ನು, ಆತ್ಮವಿಶ್ವಾಸವನ್ನು ಯಾರಿಂದಲೂ ಕುಗ್ಗಿಸಲಾಗದು. ಅಷ್ಟೇ ಅಲ್ಲ, ಇದರಿಂದ ನಮ್ಮ ಪಂಚೇಂದ್ರಿಯಗಳ ಸಾಮರ್ಥ್ಯವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಸರಿಯಾದ ಕ್ರಮದಲ್ಲಿ ಕೇಳಿಸಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ಮೆದುಳೂ ಕಾರ್ಯಪ್ರವೃತ್ತವಾಗುತ್ತದೆ.

ಸುಧಾರಣೆ ಕ್ರಮಗಳು

೧) ನಿಮಗೆ ಇಷ್ಟವಾದ ಹಾಡು, ವಿಷಯಗಳನ್ನು ಆಡಿಯೋ ರೂಪದಲ್ಲಿ ಕೇಳಿಸಿಕೊಳ್ಳುವುದನ್ನು ಅಭ್ಯಸಿಸುವುದು

೨) ತರಗತಿಯಲ್ಲಿ ಅಥವಾ ಹೊರಗೆ ಉಪನ್ಯಾಸಗಳನ್ನು ಕೇಳುವಾಗ ಪ್ರಜ್ಞಾಪೂರ್ವಕವಾಗಿ ಕೇಳಿಸಿಕೊಂಡು ಅಲ್ಲಿನ ಮುಖ್ಯಾಂಶಗಳನ್ನು ಪಟ್ಟಿ ಮಾಡುವುದು. ಆ ಮೂಲಕ ಪ್ರಶ್ನೆ ಕೇಳಲು ಅಥವಾ ಪ್ರತಿಕ್ರಿಯಿಸಲು ಸಿದ್ಧತೆ ಮಾಡಿಕೊಳ್ಳುವುದು

೩) ಮತ್ತೆ ಮತ್ತೆ ಮೊಬೈಲ್, ಲ್ಯಾಪ್‌ಟಾಪ್, ಟಿವಿಗಳನ್ನು ವೀಕ್ಷಿಸದಿರುವುದು. ಒಮ್ಮೆಗೆ ೧೦ ರಿಂದ ೧೫ ನಿಮಿಷಗಳ ಕಾಲ ಮಾತ್ರ ನೋಡುವುದು

೪) ಎದುರಿದ್ದವರು ಪೂರ್ಣ ಮಾತು ಮುಗಿಸಿದ ನಂತರವಷ್ಟೇ ಅವರಿಗೆ ಪ್ರತಿಕ್ರಿಯಿಸುವುದನ್ನು ಅಭ್ಯಾಸ ಮಾಡಿಕೊಳ್ಳುವುದು

೫) ಆಹಾರದಂತೆ ಆಲೋಚನೆ ಎಂಬ ಮಾತಿದೆ. ಆದಷ್ಟು ಸಹಜ, ಸರಳ ಆಹಾರ ಸೇವನೆ ಮನಸ್ಸಿನ ಶಾಂತತೆ ಮತ್ತು ಏಕಾಗ್ರತೆಯ ವೃದ್ಧಿಗೆ ಇರುವ ಮತ್ತೊಂದು ಮುಖ್ಯವಾದ ಸಂಗತಿಯಾಗಿದೆ.

ಆಂದೋಲನ ಡೆಸ್ಕ್

Recent Posts

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

49 mins ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

2 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

4 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

5 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

6 hours ago

ಸಿಎಂ ಡಿಕೆಶಿ ಹಾಗೂ ಸಚಿವ ಲಕ್ಷ್ಮಣ್ ಸವದಿ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಸಹಕಾರ ಮಹಾಮಂಡಲದ ಅಧ್ಯಕ್ಷ ಸ್ಥಾನಕ್ಕೆ ಜಿ.ಟಿ. ದೇವೇಗೌಡ ಆಯ್ಕೆಯಾಗಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

6 hours ago