ಚೀನಾದ ಸ್ಮಾರ್ಟ್‌ಫೋನ್ ಕಂಪೆನಿ ಶಓಮಿ ಇಂಡಿಯಾ, ಜಾಗತಿಕ ಮಾರುಕಟ್ಟೆಗೆ ರೆಡ್‌ಮಿ ೧೪ ಸಿ ೫ಜಿ ಹೆಸರಿನ ಹೊಸ ಸ್ಮಾರ್ಟ್‌ಫೋನ್‌ಅನ್ನು ಬಿಡುಗಡೆ ಮಾಡಿದೆ.
ಇದೊಂದು ಬಜೆಟ್ ಸ್ನೇಹಿ ಮೊಬೈಲ್ ಆಗಿದ್ದು, ೧೭.೫ ಸೆಂ.ಮೀ. ಎಚ್‌ಡಿ ಮತ್ತುಡಾಟ್‌ಡ್ರಾಪ್ ಡಿಸ್‌ಪ್ಲೇ ಹೊಂದಿದೆ. ಗರಿಷ್ಟ ಬ್ರೈಟ್‌ನೆಸ್ ೬೦೦ ನಿಟ್ಸ್ ಆಗಿದೆ. ಹೀಗಾಗಿ ಇದು ಸ್ಟ್ರೀಮಿಂಗ್, ಗೇಮಿಂಗ್ ಹಾಗೂ ಬ್ರೌಸಿಂಗ್‌ನ ಉತ್ತಮ ವೀಕ್ಷಣೆಯ ಅನುಭವ ನೀಡುತ್ತದೆ.
ಇನ್ನು ಈ ಫೋನ್ ೫೦ ಎಂಪಿ ಎಐ ಡ್ಯುಯೆಲ್ ಕ್ಯಾಮೆರಾ, ೫೧೬೦ ಎಂಎಎಚ್ ಬ್ಯಾಟರಿ ಮತ್ತು ೧೮ ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಎರಡು ವರ್ಷಗಳ ಆಂಡ್ರಾಯ್ಡ್ ಅಪ್‌ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್ ಸೌಲಭ್ಯ ಒದಗಿಸುತ್ತದೆ. ಇನ್ನು ಈ ಫೋನ್ ಸ್ನಾ ಪ್ ಡ್ರ್ಯಾಗನ್ ೪ಜೆನ್ ೨ ೫ಜಿ ಪ್ರೊಸೆಸರ್ ಹೊಂದಿದ್ದು, ೧೨ ಜಿಬಿ ರ‍್ಯಾಮ್ (೬ಜಿಬಿ+೬ಜಿಬಿ ಎಕ್ಸ್‌ಟೆಂಡೆಡ್) ಮತ್ತು ೧೨೮ ಜಿಬಿ ಯುಎಫ್‌ಎಸ್ ೨.೨ ಸ್ಟೋರೇಜ್ ಹೊಂದಿದೆ.
ಈ ಫೋನ್ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ೪ ಜಿಬಿ + ೬೪ ಜಿಬಿ ವೇರಿಯಂಟ್‌ಗೆ ೯,೯೯೯ ರೂ., ೪ಜಿಬಿ + ೧೨೮ ಜಿಬಿಗೆ ೧೦,೯೯೯ ರೂ. ಹಾಗೂ ೬ಜಿಬಿ + ೧೨೮ ಜಿಬಿ ವೇರಿಯಂಟ್‌ನ ಬೆಲೆ ೧೧,೯೯೯ ರೂ. ನಿಗದಿಯಾಗಿದೆ.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…