ಚಾಮರಾಜನಗರ

ಮಾಂಬಳ್ಳಿಯಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ: ಜಮೀನಿಗೆ ತೆರಳಲು ರೈತರ ಆತಂಕ

ಯಳಂದೂರು: ತಾಲ್ಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.

ಗ್ರಾಮದ ಚಿಕ್ಕಣ್ಣ ಗೌಡ ಅವರ ಜಮೀನಿನಲ್ಲಿ ಪತ್ತೆಯಾದ ಹೆಜ್ಜೆ ಗುರುತುಗಳಿಂದಾಗಿ, ಈ ಭಾಗದಲ್ಲಿ ಚಿರತೆ ಸಂಚರಿಸಿರುವ ಶಂಕೆ ವ್ಯಕ್ತವಾಗಿದೆ. ಕೃಷಿ ಕೆಲಸಗಳಿಗೆ ಜಮೀನಿಗೆ ತೆರಳಲು ರೈತರು ಹಾಗೂ ಕೂಲಿ ಕಾರ್ಮಿಕರು ಭಯಪಡುತ್ತಿದ್ದು, ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಹೆಜ್ಜೆ ಗುರುತುಗಳನ್ನು ಪರಿಶೀಲಿಸಬೇಕು. ಚಿರತೆಯ ಚಲನವಲನದ ಬಗ್ಗೆ ನಿಗಾ ವಹಿಸಿ, ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗ್ರಾಮದ ಮಲ್ಲಿಕ್‌, ಆನಂದ್‌, ಚಿಕ್ಕಣ್ಣ ಗೌಡ ಸೇರಿದಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ತ್ವರಿತ ಸ್ಪಂದನೆಗೆ ಒತ್ತಾಯಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಜಂಬೂಸವಾರಿ ಯಶಸ್ವಿ: ಗಜಪಡೆಗೆ ತೂಕ ಪರೀಕ್ಷೆ: 6,105 ಕೆಜಿಯ ಸುಗ್ರೀವನೇ ನಂ.1!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದ್ದು, ಇಂದು ಬೀಳ್ಕೊಡುಗೆ ಕಾರ್ಯಕ್ರಮಕ್ಕೂ ಮುನ್ನ ದಸರಾ ಗಜಪಡೆಗೆ…

1 hour ago

ಓದುಗರ ಪತ್ರ: ಇಲ್ಲಿ ಪಾದಚಾರಿ ಮಾರ್ಗವೇ ಇಲ್ಲ!

ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿ ಎಂವಿಜಿ ಬೇಕರಿಯಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗೆ ಇರುವ ರಸ್ತೆಗೆ ಫುಟ್‌ಪಾತ್ ಅನ್ನೇ ನಿರ್ಮಿಸಿಲ್ಲ. ಈ…

2 hours ago

ಓದುಗರ ಪತ್ರ: ಡಿಜಿಟಲ್ ಸಾಕ್ಷರತೆ ಜತೆಗೆ ವಿವೇಚನೆಯೂ ಇರಲಿ

ಸಾಮಾಜಿಕ ಜಲತಾಣಗಳು ಇಂದು ವದಂತಿ ಮತ್ತು ವ್ಯಕ್ತಿ ನಿಂದನೆಯ ಅಖಾಡವಾಗಿ ಮಾರ್ಪಟ್ಟಿರುವುದು ತೀವ್ರ ಕಳವಳಕಾರಿ ಸಂಗತಿ. ಸತ್ಯಾಸತ್ಯತೆಯನ್ನು ಒರೆಗೆ ಹಚ್ಚದೆ,…

2 hours ago

ಓದುಗರ ಪತ್ರ: ಮೊಬೈಲ್ ‘ಕಿರಿಕಿರಿ’ ಜಾಗೃತಿ ಅಗತ್ಯ

ಸಹಪ್ರಯಾಣಿಕರ ಹಿತಾಸಕ್ತಿ ಕಾಪಾಡಲು ಭಾರತೀಯ ರೈಲ್ವೆ ಮೊಬೈಲ್ ಸ್ಪೀಕರ್ ಬಳಕೆ ಮತ್ತು ಜೋರಾಗಿ ಮಾತನಾಡುವುದರ ವಿರುದ್ಧ ಕಠಿಣ ನಿಯಮ ಜಾರಿಗೊಳಿಸಿರುವುದು…

3 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಭಾರತದ ಪ್ರಪ್ರಥಮ ಟ್ರಾನ್ಸ್‌ಜೆಂಡರ್ ಜಡ್ಜ್ ಜೋಯಿತಾ ಮೊಂಡಲ್

‘ದೂರ ಶಿಕ್ಷಣ’ದ ಮೂಲಕ ಕಾನೂನು ಡಿಗ್ರಿ ಪಡೆದ ಛಲಗಾರರು ಪ. ಬಂಗಾಳದ ಕೊಲ್ಕೋತ್ತಾದ ಒಂದು ಸಾಂಪ್ರದಾಯಸ್ಥ ಕುಟುಂಬದಲ್ಲಿ ಹುಡುಗನಾಗಿ ಹುಟ್ಟಿದ…

3 hours ago

ನವರಾತ್ರಿ ಸಂಭ್ರಮಕ್ಕೆ ಸಾಕ್ಷಿಯಾದ ಸಹಸ್ರಾರು ಜನರು

ಮಂಜು ಕೋಟೆ ಕೋಟೆ: ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಿಯ ಆರಾಧನೆಯೊಂದಿಗೆ ಮಿನಿ ದಸರಾ ವೈಭವ  ಎಚ್.ಡಿ.ಕೋಟೆ: ಪಟ್ಟಣದಲ್ಲಿ ಮಿನಿ ದಸರಾ ಹಾಗೂ…

3 hours ago