ಆಂದೋಲನ ಪುರವಣಿ

ಯೋಗ ಕ್ಷೇಮ : ಬಿಳಿ ಸೆರಗಿನ ಸಮಸ್ಯೆಯಿಂದ ಮುಕ್ತರಾಗಿ

ಮಹಿಳೆಯರನ್ನು ಕಾಡುವ ವೆಜೈನಲ್ ಡಿಸ್ಚಾರ್ಜ್‌ಗೆ ಕಾರಣಗಳು

– ಡಾ. ಬಿ.ಡಿ. ಸತ್ಯನಾರಾಯಣ

ಚರ್ಮ ಮತ್ತು ಲೈಂಗಿಕ ರೋಗಗಳ ತಜ್ಞರು, ಮೈಸೂರು

ಹೆಣ್ಣು ಮಕ್ಕಳು, ಮಹಿಳೆಯರು, ವೃದ್ಧೆಯರನ್ನು ಕಾಡುವ ಸಾಮಾನ್ಯವಾದ ಲೈಂಗಿಕ ಆರೋಗ್ಯ ಸಮಸ್ಯೆ ಎಂದರೆ ಅದು ಬಿಳಿ ಸೆರಗು ಅಥವಾ ಬಿಳಿಬಟ್ಟೆ. ಇಂಗ್ಲಿಷ್‌ನಲ್ಲಿ ವೆಜೈನಲ್ ಡಿಸ್ಚಾರ್ಜ್ ಎಂದು ಕರೆಯಲ್ಪಡುವ ಈ ಸೋಂಕು ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಶುಚಿತ್ವ, ಸರಿಯಾದ ಸಮಯದಲ್ಲಿ ಔಷಧೋಪಚಾರ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗಬಹುದು.

ಹೆಣ್ಣು ಮಕ್ಕಳು, ಮಹಿಳೆಯರು, ವೃದ್ಧೆಯರು ಸೇರಿದಂತೆ ಹೆಚ್ಚಿನವರು ಬಿಳಿ ಸೆರಗು ಅರ್ಥಾತ್ ಬಿಳಿ ಬಟ್ಟೆ ಅಥವಾ ವೆಜೈನಲ್ ಡಿಸ್ಚಾರ್ಜ್ ತೊಂದರೆಯಿಂದ ವೈದ್ಯರಲ್ಲಿಗೆ ಬರುವುದು ಸಾಮಾನ್ಯ. ಯೋನಿ ಮತ್ತು ಸರ್ವಿಕ್ಸ್‌ಗಳು ಬಿಳಿ ಸೆರಗಿನ ಉಗಮ ಸ್ಥಾನಗಳಾಗಿದ್ದು ಸೂಕ್ತ ಎಚ್ಚರಿಕೆ ವಹಿಸದೇ ಇದ್ದರೆ ಇದು ಪ್ರಾಣಕ್ಕೂ ಅಪಾಯ ತರಬಹುದು.

ವೆಜೈನಲ್ ಡಿಸ್ಚಾರ್ಜ್ ಅಂದರೆ ಯೋನಿಯ ಸೋರಿಕೆಯಿಂದ ಉಂಟಾಗುವ ಸಮಸ್ಯೆ. ಮುಖ್ಯವಾಗಿ ಗರ್ಭದ್ವಾರದ ಬೇನೆಗಳಾದ ಸರ್ವಿಸೈಟಸ್, ಎರೋಷನ್ ಮತ್ತು ಪಾಲೆಪ್ ಮುಂತಾದ ತೊಂದರೆಗಳಿಗೆ ಇದೇ ಕಾರಣ. ಲೋಳೆ ರೂಪದ ದ್ರವವು ಶ್ರವಿಸಿ ಯೋನಿಯ ಮೂಲಕ ಹೊರ ಬರುವುದರಿಂದ ಮಹಿಳೆಯರು ಬಿಳಿ ಸೆರಗಿನ ಸಮಸ್ಯೆಗೆ ತುತ್ತಾಗಿ ಚಿಕಿತ್ಸೆಗೆ ಬರುತ್ತಾರೆ. ಸಾಮಾನ್ಯವಾಗಿ ಇದನ್ನು ಬಿಳಿ ಸೆರಗು ಎಂದರೆ ಕರೆದರೂ ವಿವಿಧ ಸ್ವರೂಪಗಳು ಇರುತ್ತವೆ. ಇವಕ್ಕೆ ತಕ್ಕಂತೆ ಪ್ರತಿಯೊಂದಕ್ಕೂ ಅದರದ್ದೇ ಆದ ನಿರ್ದಿಷ್ಟ ಚಿಕಿತ್ಸಾ ಕ್ರಮಗಳಿವೆ.

ಯೋನಿಯ ಒಳಗೋಡೆಯಿಂದ ಮತ್ತು ಗರ್ಭದ್ವಾರ ಅಥವಾ ಸರ್ವಿಕ್ಸ್‌ನಲ್ಲಿರುವ ಗ್ರಂಥಿಗಳು ಮತ್ತು ಜೀವಕಣಗಳಿಂದ ಮ್ಯೂಕಸ್ ಎನ್ನುವ ದ್ರವ ಉತ್ಪತ್ತಿಯಾಗಿ ಸ್ರವಿಸಲ್ಪಡುತ್ತದೆ. ವಯಸ್ಕ ಮಹಿಳೆಯರು ಲೈಂಗಿಕವಾಗಿ ಪ್ರಜೋದನೆಗೊಂಡಾಗ, ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ಸಮಯದಲ್ಲಿ, ಮುಟ್ಟಿನ ಕೆಲವು ದಿನಗಳ ಮುಂಚಿನ ಸಮಯದಲ್ಲಿ ಈ ದ್ರವವರು ಹೆಚ್ಚು ಉತ್ಪತ್ತಿಯಾಗುತ್ತದೆ. ಅಲ್ಲದೇ ಗರ್ಭಿಣಿ ಮಹಿಳೆಯರಲ್ಲಿ ಈ ಪ್ರಮಾಣ ತುಸು ಹೆಚ್ಚಿರುತ್ತದೆ. ಈ ವೇಳೆಯಲ್ಲಿ ಯೋನಿಯು ತೇವದಿಂದ ಒದ್ದೆಯಾಗಿರುತ್ತದೆ. ಇಂತಹ ಸಮಯದಲ್ಲಿ ಅಶುಚಿತ್ವ, ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಮಾಡಿದರೆ ಬಿಳಿ ಸೆರಗು ಸೋಂಕು ಕಾಣಿಸಿಕೊಳ್ಳಬಹುದು.

ಈಸ್ಟೋಜನ್ ಹಾರ್ಮೋನಿನ ಮಹತ್ವ

ಪ್ರಾಯದ ಹಂತ ತಲುಪುವ ಮುಂಚೆ ಮಕ್ಕಳ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಪ್ರಮಣ ಕಡಿಮೆ ಇದ್ದು, ಯೋನಿಯಲ್ಲಿ ಆಮ್ಲತೆಯ ಕೊರತೆ ಇರುತ್ತದೆ. ಈ ವೇಳೆ ಬಿಳಿ ಸೆರಗನ್ನು ಉಂಟು ಮಾಡುವ ಟ್ರೈಕೋಮಾ, ಮೊನಿಲೆಯಾ, ಥ್ರೆಡಮರ್ಮ್‌ಗಳು ಯೋನಿಯೊಳಗೆ ಸೇರಿ ಸೋಂಕು ಉಂಟು ಮಾಡುತ್ತವೆ.
ಇದೇ ರೀತಿ ಮುಟ್ಟು ಶಾಸ್ವತವಾಗಿ ನಿಂತ ಮಹಿಳೆಯರು, ಈಸ್ಟೋಜನ್ ಹಾರ್ಮೋನು ಕಡಿಮೆ ಉತ್ಪತ್ತಿಯಾಗುವ ಮಹಿಳೆಯರಲ್ಲಿ ಈ ಸೋಂಕು ಬೇಗನೇ ವ್ಯಾಪಿಸಿಕೊಳ್ಳಬಹುದು.

ಯೋನಿಯ ರೋಗನಿರೋಧಕತೆ

ಋತುಮತಿಯಾದ ಅನಂತರದಿಂದ ಅಂತಿಮವಾಗಿ ಋತುಚಕ್ರ ಶಾಶ್ವತವಾಗಿ ನಿಲ್ಲುವವರೆಗೂ ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನ್ ಪ್ರಭಾವದಿಂದ ಯೋನಿಯಲ್ಲೇ ಡೋಡರಲೆನ್ ಬ್ಯಾಸಿಲೆಗಳು ಇರುತ್ತವೆ. ಈ ಬ್ಯಾಕ್ಟೀರಿಯಾಗಳು ನಿರಂತವಾಗಿ ಯೋನಿಯಲ್ಲೇ ಠಿಕಾಣಿ ಹೂಡಿ ಉತ್ಪತ್ತಿ ಮಾಡುವ ಲ್ಯಾಕ್ಟಿಸ್ ಆಸಿಡ್‌ನಿಂದ ಆಮ್ಲತೆ ಹೆಚ್ಚಾಗಿ ಯಾವುದೇ ಸೋಂಕು ಕಾರುವ ಬ್ಯಾಕ್ಟೀರಿಯಾಗಳು ಯೋನಿಯನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಲೈಂಗಿಕ ಆರೋಗ್ಯ ಸಮತೋಲನದಲ್ಲಿ ಇರುತ್ತದೆ. ಈಸ್ಟೋಜನ್ ಹಾರ್ಮೋನ್ ಉತ್ಪಾದನೆಯಲ್ಲಿ ವ್ಯತ್ಯಾಸ ಉಂಟಾದಾಗಲೇ ವಿವಿಧ ರೀತಿಯ ಸೋಂಕುಗಳು ಕಾಣಿಸಿಕೊಳ್ಳುವುದು.

ಮಕ್ಕಳಲ್ಲಿ, ವಯಸ್ಸಾಗಿ ಮುಟ್ಟು ನಿಂತಿರುವವರಲ್ಲೇ ಮತ್ತು ಗರ್ಭಿಣಿಯರಲ್ಲಿ ಈ ಸ್ಟ್ರೋಜನ್ ಹಾರ್ಮೋನ್ ಕಡಿಮೆ ಇರುವುದರಿಂದ ಡೋಡರಲನ್ ಬ್ಯಾಕ್ಟೀರಿಯಾಗಳ ಕೊರತೆಯಿಂದಾಗಿ ಯೋನಿಯಲ್ಲಿ ಆಮ್ಲತೆ ಕಡಿಮೆಯಾದಾಗ ವಿವಿಧ ರೀತಿಯ ಬ್ಯಾಕ್ಟೀರಿಯಾಗಳಿಂದ ಸೋಂಕು ತಗುಲುವುದು ಇತರರಿಗಿಂತ ಹೆಚ್ಚು.

ಕೀವು ಆಗದಂತೆ ನೋಡಿಕೊಳ್ಳಿ

ಮಕ್ಕಳು ತಮ್ಮ ಕೈ ಬೆರಳುಗಳು, ಉಡುವ ಮತ್ತು ಉಪಯೋಗಿಸುವ ವಸ್ತುಗಳನ್ನು ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ರೋಗಾಣುಗಳು ಸುಲಭವಾಗಿ ಯೋನಿಯ ಒಳನುಗ್ಗಿ ಸೋಂಕನ್ನು ತರುತ್ತವೆ. ಯೋನಿಯ ಸೋರುವಿಕೆಯಿಂದ ಯೋನಿಯ ಹೊರಭಾಗವಾದ ವಲ್ಟಾ ಸೋಂಕಿಗೆ ಒಳಪಡುತ್ತದೆ. ಅದುದರಿಂದ ಈ ಬೇನೆಯನ್ನು ವಲ್ಟೋ ವಜೈನೈಟಿಸ್ ಎಂದೂ ಕರೆಯುತ್ತೇವೆ. ಈ ಸೋಂಕಿನಿಂದ ವಾಸನೆಯಿಂದ ಕೂಡಿದ ಕೀವು ಮಿಶ್ರಿತ ದ್ರವ ಹೊರಬರುತ್ತದೆ. ಇದರಿಂದ ಯೋನಿಯ ಹೊರಭಾಗದ ಸುತ್ತಮುತ್ತಲಿನ ಸ್ಥಳವು (ವಲ್ಟಾ) ಘಾಸಿಗೊಂಡು ಕಡಿತ, ಉರಿ, ನೋವು ಕಾಣಿಸಿಕೊಳ್ಳಬಹುದು.

ಈಸ್ಟ್ರೋಜನ್ ಹಾರ್ಮೋನ್ ಉಪಯೋಗಿಸಿ ಯೋನಿಯ ಆಮ್ಲತೆಯನ್ನು ಹೆಚ್ಚುವಂತೆ ನೋಡಿಕೊಳ್ಳುವುದು, ಗುಪ್ತಾಂಗದ ನೈರ್ಮಲ್ಯವನ್ನು ಕಾಪಾಡುವುದು ಮುಖ್ಯವಾದ ಅಂಶಗಳು, ಜತೆಗೆ ಅವಶ್ಯಕತೆ ಇದ್ದರೆ ಸೋಂಕು ನಿವಾರಕ ಔಷಧಿಗಳನ್ನು ಉಪಯೋಗಿಸಿ ಈ ಸೋಂಕಿನಿಂದ ಪಾರಾಗಬಹುದು.

ಶುಚಿತ್ವವೇ ಮುಖ್ಯ

ಶರೀರದ ಶುಭ್ರತೆಯನ್ನು ಕಾಪಾಡಿಕೊಳ್ಳದ ಮತ್ತು ಜನನೇಂದ್ರಿಯದ ನೈರ್ಮಲ್ಯವನನ್ನು ಕಡೆಗಣಿಸಿದ ಮಹಿಳೆಯರಲ್ಲಿ ಯೋನಿ ಸಂಬಂದಿ ಸಮಸ್ಯೆಗಳು ಹೆಚ್ಚು. ಕೀವು ತರುವಂತಹ ಬ್ಯಾಕ್ಟೀರಿಯಾಗಳಾದ ಸ್ಟೆಪ್ಟೊಕಾಕೈ, ಸ್ಟೆಪೈಲಾಕಾಕೈ, ಈಕೊಲೈ ಮುಂತಾದ ರೋಗಾಣುಗಳು ಅಶುಚಿತ್ವದಿಂದ ಬರುವ ಸಾಧ್ಯತೆ ಹೆಚ್ಚು. ಇದರಿಂದ ಕೀವು ಮಿಶ್ರಿತ ಮೂತ್ರ, ಒಮ್ಮೆಮ್ಮೆ ರಕ್ತ ಶ್ರಾವವೂ ಆಗಬಹುದು. ಯೋನಿಯು ಕೆಂಪು ಬಣ್ಣಕ್ಕೆ ತಿರುಗಿ ಕೈ ಬೆರಳಿನಿಂದ ಅದುಮಿದರೆ ನೋವು ಕಾಣಿಸಿಕೊಳ್ಳಬಹುದು. ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಸೋಂಕು ಜನನೇಂದ್ರಿಯದ ಹೊರ ಭಾಗ ಮತ್ತು ಗರ್ಭಕೋಶಕ್ಕೂ ವ್ಯಾಪಿಸಬಹುದು. ಸೋಂಕು ನಿವಾರಕ ಔಷಧಗಳ ಜೊತೆಗೆ ಈಸ್ಟ್ರೋಜನ್ ಹಾರ್ಮೋನ್ ಉಪಯೋಗಿಸಿ ಆಮ್ಲತೆಯ ಸಮತೋಲನ ಕಾಪಾಡಿ, ಬೇನೆಯನ್ನು ಗುಣಪಡಿಸಬಹುದು.

ಇವುಗಳ ಬಳಕೆಯಲ್ಲಿ ಎಚ್ಚರ ಇರಲಿ

ಯೋನಿಯ ಭಾಗದಲ್ಲಿ ಉಪಯೋಗಿಸುವ ರಾಸಾಯನಿಕಗಳು, ಔಷಧಗಳು, ವಿವಿಧ ರೀತಿಯ ಗರ್ಭ ನಿರೋಧಕ ಸಾಧನಗಳು, ವೀರ್ಯನಾಶಕಗಳು, ಸ್ಯಾನಿಟರಿ ಪ್ಯಾಡ್‌ಗಳ ಆಯ್ಕೆಯಲ್ಲಿ ಎಚ್ಚರ ಇರಬೇಕು. ಕಡಿಮೆ ಗುಣಮಟ್ಟ, ಅಶುಭ್ರವಾಗಿರುವ ಸಾಧನಗಳನ್ನು ಬಳಿಸಿದಾ ರೋಗಾಣುಗಳು ಯೋನಿಯ ಒಳಗೆ ನುಸುಳಿ ಸೋಂಕನ್ನು ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.


ಪ್ರಮುಖ ಅಂಶಗಳು

* ಮಹಿಳೆಯರು ಯೋನಿ ಮತ್ತು ಸುತ್ತಲಿನ ಭಾಗವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು.

* ಪೌಷ್ಠಿಕಾಂಶಯುಕ್ತ ಆಹಾರ ಸೇವನೆ, ಲೈಂಗಿಕ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರಬೇಕು.

* ಬಿಳಿ ಸೆರಗಿನ ಸಣ್ಣ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು.

* ಲೈಂಗಿಕ ಆರೋಗ್ಯ ಸಂಬಂಧಿ ಬಳಸುವ ವಸ್ತುಗಳು ಶುಚಿಯಾಗಿ, ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳುವುದು.

andolanait

Recent Posts

ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 416ನೇ ನಾಡಹಬ್ಬ ದಸರಾ…

54 mins ago

ಓದುಗರ ಪತ್ರ: ಬಳಸಿದ ಅಡುಗೆ ಎಣ್ಣೆ: ಯೋಜನೆ ಪ್ರಶಂಸನೀಯ

ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…

2 hours ago

ಓದುಗರ ಪತ್ರ: ಇದೇನು ಪಾದಚಾರಿ ರಸ್ತೆಯೋ ಅಥವಾ…?

ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನುಪರೀಕ್ಷಿಸಲು ಪಾತ್ರೆಯ ಅನ್ನವನ್ನು ಮುಟ್ಟಿ ನೋಡಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು. ಅಂತೆಯೇ ಮೈಸೂರಿನಲ್ಲಿ ಸಂಚಾರ…

2 hours ago

ಓದುಗರ ಪತ್ರ: ನಕಲಿ ಔಷಧಿಗಳ ಜಾಲದ ತಡೆಗೆ ಕಠಿಣ ಕ್ರಮ ಕೈಗೊಳ್ಳಿ

ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳ ಮಾರಾಟ ಹೆಚ್ಚಾಗುತ್ತಿರುವುದು ಅಂತಕ ಮೂಡಿಸಿದೆ. ಬ್ರಾಂಡೆಡ್ ಹೆಸರಿನಲ್ಲಿ ಸೂಕ್ತ ಪ್ರಮಾಣದಲ್ಲಿ ರಾಸಾಯನಿಕಗಳಿಲ್ಲದ ಅಥವಾ ಹಾನಿಕಾರಕ ಘಟಕಾಂಶಗಳಿರುವ…

2 hours ago

ಹರಿಕಥೆ ಮೇಷ್ಟ್ರು ಮಾದೇಶ ಇನ್ನಿಲ್ಲ

ಗುಂಡ್ಲುಪೇಟೆ : ತಾಲ್ಲೂಕಿನ ಬಾಚಹಳ್ಳಿಗ್ರಾಮದ ನಿವಾಸಿ, ಹರಿಕಥೆ ಮೇಷ್ಟ್ರು ಮಾದೇಶ(55) ಅವರು ಶನಿವಾರ ರಾತ್ರಿ ನಿಧನರಾದರು. ಚಿಕ್ಕನಿಂದಲೇ ಕಲೆಯನ್ನು ಮೈಗೂಡಿಸಿಕೊಂಡಿದ್ದ…

2 hours ago

ಜೆನ್ ಝೀ ಶಕ್ತಿಗೆ ಹೆದರಿದ ಕೇಂದ್ರದ ಎನ್‌ಡಿಎ ಸರ್ಕಾರ

ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಜನರು ಮತ್ತು ಯುವಕರು ದಿಕ್ಕೆಟ್ಟ ಆಡಳಿತದ ವಿರುದ್ಧ ಸಿಡಿದು ಬೀದಿಗಿಳಿದಿದ್ದಾರೆ…

2 hours ago