ಜಯಶಂಕರ ಬದನಗುಪ್ಪೆ
ಮೈಸೂರು: ರಾಷ್ಟ್ರಕವಿ ಕುವೆಂಪು, ಬಿಎಂಶ್ರೀ ಸೇರಿದಂತೆ ನಾಡಿನ ಲಕ್ಷಾಂತರ ಜ್ಞಾನದಾಹಿಗಳಿಗೆ ನೆಚ್ಚಿನ ತಾಣವಾಗಿದ್ದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪ್ರಪ್ರಥಮ ಗ್ರಂಥಾಲಯವೆನಿಸಿದ ಕೇಂದ್ರ ಗ್ರಂಥಾಲಯದ ಪಾರಂಪರಿಕ ಕಟ್ಟಡದ ಕೆಲ ಭಾಗಕ್ಕೆ ಹಾನಿಯಾಗಿದ್ದು, ನುರಿತ ತಜ್ಞರಿಂದ ಕಾಯಕಲ್ಪದ ಅಗತ್ಯವಿದೆ.
ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗ್ರಂಥಾಲಯ ಆರಂಭಕ್ಕೆ ಕಟ್ಟಡ ಒದಗಿಸಿ ಮೈಸೂರಿಗರ ಜ್ಞಾನ ವಿಕಾಸಕ್ಕೆ ಕಾರಣರಾದರು. ನರಸರಾಜ ಕಂಠೀರವ ಒಡೆಯರ್ ಅವರು ೧೯೧೫ ಅಕ್ಟೋಬರ್‌ನಲ್ಲಿ ಈ ಗ್ರಂಥಾಲಯವನ್ನು ಉದ್ಘಾಟಿಸಿದರು.
೧೯೬೫ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಅಸ್ತಿತ್ವಕ್ಕೆ ಬಂದ ನಂತರ ಗ್ರಂಥಾಲಯ ಇಲಾಖೆಗೆ ಈ ಗ್ರಂಥಾಲಯ ನಿರ್ವಹಣೆ ಹಸ್ತಾಂತರಗೊಂಡಿತು. ಪ್ರಸ್ತುತ ಈ ಕಟ್ಟಡದ ಕೆಲವು ಭಾಗದಲ್ಲಿ ಮಳೆಯಿಂದ ಸೋರುತ್ತಿದ್ದು, ಅಭದ್ರತೆ ಉಂಟುಮಾಡಿದೆ. ಗೋಡೆಗಳು ತೇವಾಂಶದಿಂದ ಕೂಡಿವೆ. ತಾರಸಿ ಸೋರುತ್ತದೆ. ಮಳೆಗಾಲದಲ್ಲಿ ಸೋರಿಕೆ ತೀವ್ರವಾಗಿರುತ್ತದೆ. ಅಮೂಲ್ಯ ಪುಸ್ತಕಗಳು ರಕ್ಷಣೆಯಿಲ್ಲದೆ ಹಾಳಾಗುವ ಪರಿಸ್ಥಿತಿ ಒದಗಿ ಬಂದಿದೆ. ಕಟ್ಟಡ ಗಟ್ಟಿ ಇದ್ದರೂ ನಿರ್ವಹಣೆಯಲ್ಲಿ ವೈಫಲ್ಯತೆ ಎದ್ದುಕಾಣುತ್ತಿದೆ.
ಈ ಕಟ್ಟಡ ಸಂರಕ್ಷಣೆ ಒಂದು ಸವಾಲಾಗಿದ್ದು, ಇದರ ಸಮರ್ಪಕ ನಿರ್ವಹಣೆಗಾಗಿ ಪಾರಂಪರಿಕ ಇಲಾಖೆ ಆಯುಕ್ತರಿಗೆ, ಪಿಡಬ್ಲುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸರ್ಕಾರದ ಗಮನಕ್ಕೆ ತರಲಾಗಿದೆ. ಕಿತ್ತುಹೋಗಿದ್ದ ಕಟ್ಟಡದ ಕೆಲವು ಭಾಗಗಳಿಗೆ ಸಾಮಾನ್ಯ ಗುತ್ತಿಗೆದಾರರಿಂದ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆಯಾದರೂ ಇದರಿಂದ ಪ್ರಯೋಜನವಾಗಿಲ್ಲ.
ಪ್ರತಿ ವರ್ಷ ಸಾಮಾನ್ಯ ಗುತ್ತಿಗೆದಾರರಿಂದ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ. ದುರಸ್ತಿಗೆಂದು ಕ್ರಿಯಾಯೋಜನೆ ಮಾಡಿ ಲಕ್ಷಾಂತರ ರೂ. ವ್ಯಯಿಸುವುದು ನಿರರ್ಥಕವಾಗುತ್ತಿದೆ. ಯೋಜಿತ ಕಾರ್ಯ ನಡೆಯುತ್ತಿಲ್ಲ. ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಬೋರ್ಡ್‌ಗೆ ದುರಸ್ತಿ ಕೆಲಸ ವಹಿಸಿದರೆ ಒಳಿತು. ಅಲ್ಲದೆ ಪ್ರತಿ ವರ್ಷ ದುರಸ್ತಿ ನೆಪದಲ್ಲಿ ಆಗುತ್ತಿರುವ ಲಕ್ಷಾಂತರ ರೂ. ಖರ್ಚು ಉಳಿಯುತ್ತದೆ ಎಂಬ ಮಾತು ಹಲವು ವರ್ಷಗಳಿಂದ ಗ್ರಂಥಾಲಯಕ್ಕೆ ಓದಲು ಬರುತ್ತಿರುವವರಿಂದ ಕೇಳಿಬಂತು.
ಈ ಹಿಂದೆ ಈ ಕಟ್ಟಡ ನಿರ್ವಹಣೆ ಕುರಿತು ಬರೆದಿದ್ದ ಪತ್ರಗಳಿಗೆ ಸ್ಪಂದನೆ ಸಿಕ್ಕಿದೆ. ಅನುಭವಿಗಳಿಂದ ದುರಸ್ತಿ ಮಾಡಿಸಿದರೆ ಶಾಶ್ವತ ಪರಿಹಾರ ಸಿಗಲಿದೆ ಎಂಬ ಉದ್ದೇಶದಿಂದ ಕೆಆರ್‌ಐಡಿಎಲ್‌ಗೆ ನಿರ್ವಹಣೆ ವಹಿಸಲು ಈಗಾಗಲೇ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಯವರಿಗೆ ಪತ್ರ ಬರೆಯಲಾಗಿದೆ. ಅವರಿಂದ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದೇವೆ. – ಬಿ.ಮಂಜುನಾಥ್. ಉಪನಿರ್ದೇಶಕರು. ಸಾರ್ವಜನಿಕ ಗ್ರಂಥಾಲಯ ಇಲಾಖೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 416ನೇ ನಾಡಹಬ್ಬ ದಸರಾ…
ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…
ಅನ್ನ ಬೆಂದಿದೆಯೋ ಇಲ್ಲವೋ ಎಂಬುದನ್ನುಪರೀಕ್ಷಿಸಲು ಪಾತ್ರೆಯ ಅನ್ನವನ್ನು ಮುಟ್ಟಿ ನೋಡಬೇಕಿಲ್ಲ. ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕು. ಅಂತೆಯೇ ಮೈಸೂರಿನಲ್ಲಿ ಸಂಚಾರ…
ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳ ಮಾರಾಟ ಹೆಚ್ಚಾಗುತ್ತಿರುವುದು ಅಂತಕ ಮೂಡಿಸಿದೆ. ಬ್ರಾಂಡೆಡ್ ಹೆಸರಿನಲ್ಲಿ ಸೂಕ್ತ ಪ್ರಮಾಣದಲ್ಲಿ ರಾಸಾಯನಿಕಗಳಿಲ್ಲದ ಅಥವಾ ಹಾನಿಕಾರಕ ಘಟಕಾಂಶಗಳಿರುವ…
ಗುಂಡ್ಲುಪೇಟೆ : ತಾಲ್ಲೂಕಿನ ಬಾಚಹಳ್ಳಿಗ್ರಾಮದ ನಿವಾಸಿ, ಹರಿಕಥೆ ಮೇಷ್ಟ್ರು ಮಾದೇಶ(55) ಅವರು ಶನಿವಾರ ರಾತ್ರಿ ನಿಧನರಾದರು. ಚಿಕ್ಕನಿಂದಲೇ ಕಲೆಯನ್ನು ಮೈಗೂಡಿಸಿಕೊಂಡಿದ್ದ…
ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್ ಅವರ ವಾರದ ಅಂಕಣ ಜನರು ಮತ್ತು ಯುವಕರು ದಿಕ್ಕೆಟ್ಟ ಆಡಳಿತದ ವಿರುದ್ಧ ಸಿಡಿದು ಬೀದಿಗಿಳಿದಿದ್ದಾರೆ…