ರಾಜ್ಯ

ಲಾಲ್‌ಬಾಗ್‌ ಮೂಲಕ ಸುರಂಗ ಮಾರ್ಗ ಕೈಬಿಟ್ಟ ಸರ್ಕಾರ: ಎರಡು ಪರ್ಯಾಯ ಮಾರ್ಗಗಳ ಪರಿಶೀಲನೆ!

ಬೆಂಗಳೂರು: ಪರಿಸರವಾದಿಗಳ ವಿರೋಧದ ಬೆನ್ನಲ್ಲೇ ಲಾಲ್‌ಬಾಗ್‌ ಮೂಲಕ ಸುರಂಗ ರಸ್ತೆ ನಿರ್ಮಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದು, ಎರಡು ಪರ್ಯಾಯ ಮಾರ್ಗಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಯೋಜಿಸಿರುವ ಸುರಂಗ ಮಾರ್ಗವು ಲಾಲ್‌ಬಾಗ್‌ನ ಪ್ರಾಚೀನ ಬಂಡೆಯ ಕೆಳಗೆ ಹಾದುಹೋಗುವ ಪ್ರಸ್ತಾವನೆ ಇತ್ತು. ಸಸ್ಯೋದ್ಯಾನದಲ್ಲಿ ನಿರ್ಗಮನ ಮಾರ್ಗ ನಿರ್ಮಿಸುವ ಉದ್ದೇಶವೂ ಇತ್ತು.

ಇದರಿಂದ ಪ್ರಾಚೀನ ಬಂಡೆ, ಕೆಂಪೇಗೌಡ ಕಾವಲು ಗೋಪುರ ಹಾಗೂ ಅಂತರ್ಜಲ ವ್ಯವಸ್ಥೆಗೆ ಹಾನಿಯಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು.

ಇದೀಗ ಸಿದ್ದಾಪುರ ಅಥವಾ ವಿಲ್ಸನ್‌ ಗಾರ್ಡನ್‌ ಪ್ರದೇಶದಲ್ಲಿ ಸುರಂಗದ ನಿರ್ಗಮನ ಮಾರ್ಗ ನಿರ್ಮಿಸಲು ಚಿಂತನೆ ನಡೆದಿದೆ. ಎರಡು ಸ್ಥಳಗಳನ್ನು ವೀಕ್ಷಿಸಲಾಗಿದ್ದು, ಒಂದು ಮಾರ್ಗವನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಮಾರ್ಗ ಬದಲಾವಣೆಯಿಂದ ಯೋಜನಾ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದ್ದು, ವೆಚ್ಚ ಕಡಿತದ ಕುರಿತು ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಗುತ್ತಿಗೆದಾರರೊಂದಿಗೆ ಚರ್ಚಿಸುತ್ತಿದೆ.

ಆಂದೋಲನ ಡೆಸ್ಕ್

Recent Posts

ಚುಂಚನಕಟ್ಟೆ ಸಮೀಪ ನಾಲೆಯಲ್ಲಿ ಮೊಸಳೆ ಪ್ರತ್ಯಕ್ಷ: ಬಲೆಹಾಕಿ ಸೆರೆಹಿಡಿದ ತಂಡ!

ಕೆ.ಆರ್‌.ನಗರ: ಇಲ್ಲಿನ ಚುಂಚನಕಟ್ಟೆ ಸಮೀಪದ ಮಾಳನಾಯಕನಹಳ್ಳಿ ಬಳಿ ಚಾಮರಾಜ ಎಡದಂಡೆಯ ಕಿರು ನಾಲೆಯಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಸೆರೆಹಿಡಿಯಲಾಗಿದೆ. ಮೊಸಳೆಯನ್ನು ಗಮನಿಸಿದ…

2 hours ago

‘ಸಂವಿಧಾನದ ಹೆಸರಿನಲ್ಲಿ ಪ್ರತ್ಯೇಕ ವೇದಿಕೆ ಸೃಷ್ಟಿಸದಿರಿ’

ಸಂವಿಧಾನ ದಿನಾಚರಣೆ ಹೆಸರಲ್ಲಿ ಮೇಲಾಟಕ್ಕೆ ಪ್ರಗತಿಪರ ಚಿಂತಕರು, ಸಂಸ್ಕೃತಿ ಚಿಂತಕರು, ರೈತರು, ಕಾರ್ಮಿಕರ ಬೇಸರ  ನವೆಂಬರ್ ೨೬ರಂದು ಮೈಸೂರಿನಲ್ಲಿ ಸಂವಿಧಾನ…

3 hours ago

ವಿನಯ್‌ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ ಹಿನ್ನಡೆ: ಜಾಮೀನು ರದ್ದು, ಶರಣಾಗಲು 2 ವಾರ ಗಡುವು!

ನವದೆಹಲಿ: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ ಹಿನ್ನಡೆಯಾಗಿದೆ. ಹೈಕೋರ್ಟ್‌ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ನ್ಯಾಯಾಲಯ, ಎರಡು…

5 hours ago

ಓದುಗರ ಪತ್ರ: ಬ್ರೇಕ್ ಬೀಳಬೇಕು ಅತಿಯಾಸೆಗೆ!

ಬ್ರೇಕ್ ಬೀಳಬೇಕು ಅತಿಯಾಸೆಗೆ! ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಇನ್ನೆಲ್ಲಿಗೆ ಹೋಗಬೇಕೆಂಬುದು ತಿಳಿಯದೆ ವಿಲವಿಲ ಒzಡಿತು ಕಾಡಾನೆ ಪಡೆ!ಹೊಸದೇನಲ್ಲ ಮಾನವ-ವನ್ಯಜೀವಿಗಳ ಸಂಘರ್ಷ! ಬೆಳೆದಂತೆಲ್ಲ…

6 hours ago

ಓದುಗರ ಪತ್ರ: ಬಸ್‌ಗಳಲ್ಲಿ ಈ ಫಲಕ ಇನ್ನೂ ಇರಬೇಕೆ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಮೊದಲ ಎರಡು ಸೀಟುಗಳಲ್ಲಿ ವಿಧಾನಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರು ಹಾಗೂ…

6 hours ago

ಓದುಗರ ಪತ್ರ: ಜನಸಾಮಾನ್ಯರಿಗೂ ಸಂವಿಧಾನದ ಮಹತ್ವ ತಿಳಿಯಬೇಕು

ನವೆಂಬರ್ ೨೬ರಂದು ಆಚರಿಸಲಾಗುವ ಸಂವಿಧಾನ ದಿನಾಚರಣೆ ಕೇವಲ ಸರ್ಕಾರ, ರಾಜಕಾರಣಿಗಳು, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಿಗೆ ಸೀಮಿತವಾಗಬಾರದು. ಕಟ್ಟಕಡೆಯ…

6 hours ago