ಆಂದೋಲನ ಪುರವಣಿ

ವನಿತೆ ಮಮತೆ : ಹೊಸ ಲೇಖಕಿಯರಿಗೆ ಮಂದಾರ ಪುಷ್ಪ

೪೩ ವರ್ಷ ಇತಿಹಾಸದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಸಂದರ್ಶನ

ಚಾರ್ವಿಕಾ ಸಾನ್ವಿ, ಮೈಸೂರು

ಕರ್ನಾಟಕ ಲೇಖಕಿಯರ ಸಂಘಕ್ಕೆ ೪೩ ವರ್ಷದ ಸುಧೀರ್ಘ ಇತಿಹಾಸವಿದೆ. ಹಲವಾರು ಮಹತ್ವದ ಲೇಖಕಿಯರು ಅಧ್ಯಕ್ಷರಾಗಿ ಸಂಘವನ್ನು ಗೌರವಯುತವಾಗಿ ಕಟ್ಟಿ ಬೆಳೆಸಿದ್ದಾರೆ. ಆಯಾ ಕಾಲಘಟ್ಟದ ಸ್ಪಂದನೆಗಳಿಗೆ ಪೂರಕವಾಗಿ ಲೇಖಕಿಯರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನನಗೆ ಈ ಸಂಘದ ಅಧ್ಯಕ್ಷರಾಗುವ ಅವಕಾಶ ದೊರೆತಿದೆ. ಗಟ್ಟಿ ಅಡಿಪಾಯವನ್ನು ಇನ್ನಷ್ಟು ಬಲಗೊಳಿಸಿ ಹೊಸ ತಲೆಮಾರಿನ ಲೇಖಕಿಯರ ತಲ್ಲಣ, ಸಂವೇದನೆ, ಸ್ಪಂದನೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಈಗಿನ ಕಾಲಘಟ್ಟದ ಚಿಂತನೆ ಹಾಗೂ ಚಿಂತಕರನ್ನೂ ಒಳಗೊಳ್ಳುವ ಕ್ರಿಯೆಗೆ ಒತ್ತು ನೀಡಲೇಬೇಕಿದೆ.
ಇದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಕಳೆದ ತಿಂಗಳು ಆಯ್ಕೆಯಾದ ಡಾ.ಎಚ್.ಎಲ್.ಪುಷ್ಪ ಅವರ ಖಚಿತ ಅಭಿಪ್ರಾಯ.

ತಮ್ಮದೇ ಆದ ಚಿಂತನೆ, ಬದ್ಧತೆಯ ಬದುಕು, ಓದು, ಬರವಣಿಗೆ, ಸಂಘಟನೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ.ಪುಷ್ಪ ಅವರು ಸಂಘದ ಅಧ್ಯಕ್ಷ ಸ್ಥಾನಕ್ಕೆ ತುರುಸಿನ ಸ್ಪರ್ಧೆ ಎದುರಿಸಿದವರು. ಸಾಮಾನ್ಯ ಚುನಾವಣೆಯಂತೆೆಯೇ ಆಗುತ್ತಿದೆಯಲ್ಲಾ ಎಂಬ ಆತಂಕದ ನಡುವೆಯೂ ಲೇಖಕಿಯರ ಬೆಂಬಲದಿಂದ ಗೆದ್ದು ಸದ್ದು ಗದ್ದಲದ ಬದಲು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ನಂಬಿದವರು. ಅದನ್ನೇ ‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ಪುಷ್ಪ ವಿವರಿಸಿದ್ದಾರೆ.

ಲೇಖಕಿಯರ ಸಂಘಕ್ಕೆ ನಾಗಮಣಿ ರಾವ್ ಅವರು ಅಧ್ಯಕ್ಷರಾದ ಅವಧಿಯಿಂದ ನನ್ನ ನಂಟು ಇದೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಅಧ್ಯಕ್ಷರಾಗಬೇಕು ಎನ್ನುವ ಉದ್ದೇಶವೇನೂ ಇರಲಿಲ್ಲ. ಆದರೆ ಹಿರಿಯರು ಕಟ್ಟಿ ಬೆಳೆಸಿದ ಸಂಘದ ಆಶಯಗಳನ್ನು ಗಟ್ಟಿಗೊಳಿಸಬೇಕು ಎನ್ನುವ ಒತ್ತಾಯ ಲೇಖಕಿಯರಲ್ಲಿ ಕೇಳಿ ಬಂದಾಗ ಅನಿವಾರ್ಯವಾಗಿ ಸ್ಪರ್ಧೆ ಮಾಡಿದೆ. ಹೊಸ ತಲೆಮಾರನ್ನು ಒಳಗೊಳ್ಳುವುದು ನಮ್ಮ ಉದ್ದೇಶ. ಹಿಂದೆಲ್ಲಾ ಲೇಖಕಿಯರು ಬರೆದದ್ದು ಅಡುಗೆ ಮನೆ ಸಾಹಿತ್ಯ ಎಂದು ಕೊಂಕು ಆಡುವ ಕಾಲವಿತ್ತು. ಮಹಿಳೆಯರೂ ಗಟ್ಟಿ ಸಾಹಿತ್ಯ ರಚಿಸಬಲ್ಲರು ಎನ್ನುವುದು ಕಾಲಕ್ರಮೇಣ ಸಾಬೀತಾಗುತ್ತಾ ಹೋಗಿ ಮಹಿಳಾ ಸಾಹಿತ್ಯವನ್ನು ನಿರ್ಲಕ್ಷಿಸಲಾಗದು ಎನ್ನುವ ಹಂತಕ್ಕೂ ಬಂದಿದೆ. ಲೇಖಕಿಯರನ್ನು ಸಂಘಟಿಸಿ ಅವರ ಸಂವೇದನೆಗಳು ಅಕ್ಷರ ರೂಪ ತಾಳುವಲ್ಲಿ ಸಂಘದ ಕೊಡುಗೆಯೂ ಅಪಾರವಾಗಿದೆ. ಇಂತಹ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಸವಾಲು ನನ್ನ ಮೇಲೆ ಇದೆ. ಕೊರೊನಾ ನಂತರ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಕುಟುಂಬ, ಸಂಬಂಧ, ಸಂವೇದನೆಗಳಲ್ಲಿನ ಆಗಿರುವ ಬದಲಾವಣೆಗಳು ಬರವಣಿಗೆ ಮೇಲೂ ಖಂಡಿತಾ ಆಗಿದೆ. ಹೊಸಬರು ಭಿನ್ನವಾಗಿ ಯೋಚಿಸುತ್ತಿದ್ದಾರೆ. ಅಷ್ಟೇ ವಿಭಿನ್ನವಾಗಿ ಬರೆಯುತ್ತಿದ್ದಾರೆ ಕೂಡ. ಅವರೆಲ್ಲರನ್ನೂ ಒಳಗೊಳ್ಳುವ ಕೆಲಸ ಮೊದಲ ಆದ್ಯತೆಯಾಗಿೆಯೇ ಆಗಲಿದೆ ಎನ್ನುವುದು ಪುಷ್ಪ ಅವರ ಖಚಿತ ನಿಲುವು.

ಸದ್ಯ ಒಂದು ಪುಟ್ಟ ಮನೆಯಲ್ಲಿಯೇ ಸಂಘ ನಡೆಯುತ್ತಿದೆ. ಸಂಘಕ್ಕೆ ವಿಶಾಲವಾದ ಕಟ್ಟಡ ಬೇಕಾಗಿದೆ. ಸಂಶೋಧನೆಗೆ ಪೂರಕವಾಗುವಂತಹ ಗ್ರಂಥಾಲಯ ಅದರಲ್ಲಿಯೇ ಇದೆ. ಇದನ್ನೂ ವಿಸ್ತರಿಸಬೇಕಾಗಿದೆ. ಸಂಘದಲ್ಲಿ ೧೭ ದತ್ತಿ ನಿಧಿಗಳಿದ್ದು, ಅದರಡಿ ಆರ್ಥಿಕ ಸಂಪನ್ಮೂಲ ಬಳಸಿಯೂ ದತ್ತಿ ಕಾರ್ಯಯಕ್ರಮ, ಪ್ರಶಸ್ತಿ ನೀಡುವುದು ನಡೆದಿದೆ. ಗ್ರಾಮೀಣ ಭಾಗದ ಜತೆಗೆ ಪ್ರಾದೇಶಿಕತೆ ನೆಲೆಯಲ್ಲೂ ಸಂಘವನ್ನು ವಿಸ್ತರಿಸಿ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಇರಾದೆಯೂ ಇದೆ. ಪ್ರಾದೇಶಿಕ ಲೇಖಕಿಯರ ಸಮ್ಮೇಳನಗಳನ್ನು ಆಯೋಜಿಸುವ ಯೋಚನೆಯೂ  ಇದೆ. ಈಗಾಗಲೇ ೧೭೪ ಲೇಖಕಿಯರ ಸಾಕ್ಷ್ಯಚಿತ್ರಗಳು ಹೊರ ಬಂದಿವೆ. ಇನ್ನಷ್ಟು ಕೆಲಸ ಆಗಬೇಕಿದೆ. ಲೇಖ ಲೋಕ ಎನ್ನುವ ಶೀರ್ಷಿಕೆಯಡಿ ಆತ್ಮಕಥನಗಳ ಪ್ರಕಟಣೆ ಆಗುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ಯೋಜನೆಗಳನ್ನು ಹಾ ಕಿಕೊಂಡಿದ್ದೇನೆ? ಎನ್ನುತ್ತಾರೆ ಅವರು.

ಆರ್ಥಿಕ ಬೆಂಬಲ ಬೇಕು
ಲೇಖಕಿಯರ ಸಂಘಕ್ಕೆ ವಾರ್ಷಿಕವಾಗಿ ಬರಿ ೨ ಲಕ್ಷ ರೂ. ಅನುದಾನ ಸಿಗುತ್ತಿದೆ. ಇದನ್ನು ಕನಿಷ್ಠ ೧೦ ಲಕ್ಷ ರೂ.ಗಳಿಗಾದರೂ ಏರಿಸಬೇಕು ಎನ್ನುವ ಮನವಿಯನ್ನು ಸರ್ಕಾರಕ್ಕೆ ಸದ್ಯವೇ ಸಲ್ಲಿಸುತ್ತೇವೆ. ಆರ್ಥಿಕ ಬಲವಿಲ್ಲದೇ ಏನನ್ನೂ ಮಾಡಲಾಗದು. ಇದಕ್ಕಾಗಿ ಸರ್ಕಾರವನ್ನೇ ಮೊದಲು ಕೇಳುವುದು ನಮ್ಮ ಆದ್ಯತೆಯೂ ಹೌದು. ಲೇಖಕಿಯರ ಸಂಘದ ಬೆಳವಣಿಗೆಗೆ ಆರ್ಥಿಕವಾಗಿ ಸಹೋಂಗ ನೀಡುವವರು ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಹೇಳುತ್ತಾರೆ.

ಡಿಜಿಟಲ್ ಸ್ಪರ್ಶ

ಹೊಸ ತಲೆಮಾರಿನ ಬಹಳಷ್ಟು ಲೇಖಕರು ಡಿಜಿಟಲ್ ವ್ಯವಸ್ಥೆಯಡಿ ಸಕ್ರಿಯರಾಗಿದ್ದಾರೆ. ಇದು ಈಗಿನ ಕಾಲಮಾನದ ಅಗತ್ಯವೂ ಹೌದು. ಇದಕ್ಕೆ ತಕ್ಕಂತೆ ಸಂಘದ ವೆಬ್‌ಸೈಟ್, ಯೂಟ್ಯೂಬ್ ರೂಪಿಸಿ ಆ ಮೂಲಕ ಸದಸ್ಯರ ಚಟುವಟಿಕೆಗೆ ವೇದಿಕೆ ರೂಪಿಸುವ ಯೋಜನೆಯೂ ಇದೆ ಎನ್ನುತ್ತಾರೆ.



ಪ್ರಮುಖ ಲೇಖಕಿ ಪುಷ್ಪ

ದೊಡ್ಡಬಳ್ಳಾಪುರದವರಾದ ಡಾ.ಎಚ್.ಎಲ್.ಪುಷ್ಪ ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯದಲ್ಲಿ ಸಕ್ರಿಯರು. ಸಾಹಿತ್ಯದ ವಿದ್ಯಾರ್ಥಿನಿಯಾಗಿ, ನಂತರ ಮೂರೂವರೆ ದಶಕಗಳ ಕಾಲ ಕನ್ನಡ ಉಪನ್ಯಾಸಕಿಯಾಗಿ, ನಂತರ ಪ್ರಾಂಶುಪಾಲರಾಗಿ ಆರು ತಿಂಗಳ ಹಿಂದೆಯಷ್ಟೇ ನಿವೃತ್ತರಾದವರು. ಕನ್ನಡ ರಂಗಭೂಮಿಯ ಕುರಿತಾಗಿ ಡಾ.ಸಿಜಿಕೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದವರು. ೪ ಕವನ ಸಂಕಲನ ಸೇರಿ ೧೫ಕ್ಕೂ ಹೆಚ್ಚು ಕೃತಿಗಳನ್ನು ಪುಷ್ಪ ಪ್ರಕಟಿಸಿದ್ದಾರೆ. ೨೫ ವರ್ಷಗಳಿಂದಲೂ ಕರ್ನಾಟಕ ಲೇಖಕಿಯರ ಸಂಘದ ಒಡನಾಟ ಹೊಂದಿದ್ದವರು. ಇದೀಗ ಹಲವರು ಕಟ್ಟಿ ಬೆಳೆಸಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾರೆ.

andolanait

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

5 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

5 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

7 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

9 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

12 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

12 hours ago